Bettada Hoo Serial: ಹೂವಿ ಬೆಂಬಲಕ್ಕೆ ನಿಂತಿದ್ದ ವೀಕ್ಷಕರ ಕನಸು ನುಚ್ಚು ನೂರು!

By ಎಸ್ ಸುಮಂತ್

'ಬೆಟ್ಟದ ಹೂ' ಧಾರಾವಾಹಿ ರೆಗ್ಯೂಲರ್ ನೋಡುಗರಾಗಿದ್ದರೆ ನೀವೂ ಕೂಡ ಆ ಘಟನೆಯಿಂದ ಇನ್ನು ಹೊರ ಬಂದಿರೋದಿಲ್ಲ. ಅಷ್ಡು ಭಾವನಾತ್ಮಕ ಸನ್ನಿವೇಶವನ್ನು ನಿರ್ಮಿಸಿತ್ತು. ರಾಹುಲ್ ಮದುವೆ ಸನ್ನಿವೇಶ. ಹೂವಿ ಕಂಡ ಎರಡು ನಿಮಿಷದ ಕನಸು ಧಾರಾವಾಹಿ ಫಾಲೋವರ್‌ಗಳ ಊಹೆಯನ್ನೇ ತಲೆಕೆಳಗೆ ಮಾಡಿತ್ತು, ಖುಷಿಯ ಪರ್ವತಕ್ಕೆ ಹತ್ತಿಸಿತ್ತು. ರಾಹುಲ್ ಬದಲಾಗಿಬಿಟ್ಟನಲ್ಲ ಅಷ್ಟೆ ಸಾಕು ಅಂತ ಕ್ಷಮಿಸಿ ಬಿಟ್ಟಿದ್ದರು. ಆದರೆ ಅದು ಹೂವಿ ಕಂಡ ಕನಸು ಎಂದು ಗೊತ್ತಾದ ಮೇಲೆ ಎಲ್ಲರ ನಿರೀಕ್ಷೆಯ ಗೋಪುರ ಕಳಚಿ ಬಿದ್ದಿತ್ತು. ಮುಂದೇನಾಗಬಹುದು ಎಂಬ ಪ್ರಶ್ನೆ ಕಾಡಿತ್ತು.

ಹೂವಿಯ ಜೀವನದ ಬಗ್ಗೆ ಯೋಚಿಸುತ್ತಾ, ರಾಹುಲ್ ಅದನ್ನು ಸತ್ಯ ಮಾಡುತ್ತಾನಾ ಎನ್ನುವಾಗಲೇ ಮಂಟಪದಲ್ಲಿ ಯಾವುದು ನಡೆಯಬಾರದು ಎಂದುಕೊಂಡಿದ್ದೆವೋ ಅದು ನಡೆದು ಹೋಯಿತು. ರಾಹುಲ್ ಮಾಲಿನಿಗೆ ತಾಳಿ ಕಟ್ಟಿಯೇ ಬಿಟ್ಟ, ಹೂವಿ ಏನೂ ಆಗಿಲ್ಲದವಳಂತೆ ತ್ಯಾಗ ಮಾಡಿ ಮಂಕಾಗಿ ನಿಂತಿದ್ದಳು. ಇದನ್ನು ನೋಡಿದ ವೀಕ್ಷಕನ ಗಂಟಲು ಕಟ್ಡಿದ್ದಂತು ಸುಳ್ಳಲ್ಲ.

ಹೂವಿ ಬಿಟ್ಟು ಮಾಲಿನಿಯನ್ನೇ ಮದುವೆಯಾದ ರಾಹುಲ್

ಹೂವಿ ಬಿಟ್ಟು ಮಾಲಿನಿಯನ್ನೇ ಮದುವೆಯಾದ ರಾಹುಲ್

ಯಾರಿಗೆ ಆಗಲಿ ಮನುಷ್ಯತ್ವ, ಮಾನವೀಯತೆ ಇದ್ದೆ ಇರುತ್ತದೆ. ಪರಿಸ್ಥಿತಿಗೆ ಕಟ್ಟು ಬಿದ್ದಿದ್ದರು ಸಹ ಅದು ಹೊರಗೆ ಬರುವಂತ ಸ್ಥಿತಿ ಬಂದಾಗ ಹೊರ ಬರಲೇಬೇಕು ಎಂಬ ಆಶಾ ಭಾವನೆ ಇಲ್ಲಿ ವರ್ಕೌಟ್ ಆಗಲೇ ಇಲ್ಲ. ಹೂವಿ ಎಂಬ ಮುಗ್ಧ ಹುಡುಗಿಯ ಮುಖ ನೋಡಿ ರಾಹುಲ್ ಬದಲಾಗುತ್ತಾನೆ ಎಂಬ ಅಪಾರವಾದ ನಂಬಿಕೆ ಸುಳ್ಳಾಗಿ ಹೋಯಿತು. ಮಾನವೀಯತೆಗಿಂತ ತಾನಿಷ್ಟಪಟ್ಟ ಜೀವನವೇ ಬೆಸ್ಟ್ ಅಂತ ರಾಹುಲ್, ಮಾಲಿನಿ ಮದುವೆಯಾಗುವ ವಿಚಾರವನ್ನೇ ಆಯ್ಕೆ ಮಾಡಿಕೊಂಡಿದ್ದಾಗಿದೆ. ಸೋಫಾದ ತುದಿಗೆ ಬಂದು ಕೂತು ನೋಡಿದರು, ಕುಂತವರು ಎದ್ದು ನಿಂತು ನೋಡಿದರು 'ಬೆಟ್ಟದ ಹೂ' ಧಾರಾವಾಹಿಯಲ್ಲಿ ಮದುವೆ ನಡೆದು ಹೋಯ್ತು. ಈಗ ಹೂವಿಯ ಜೀವನ ಏನು ಎಂಬ ಪ್ರಶ್ನೆ ಕಾಡುವುದಕ್ಕೆ ಶುರುವಾಯ್ತು.

ಊರಿಗೆ ಹೊರಟು ನಿಂತ ಹೂವಿಯ ಗತಿಯೇನು?

ಊರಿಗೆ ಹೊರಟು ನಿಂತ ಹೂವಿಯ ಗತಿಯೇನು?

ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಅನ್ನೋ ಮಾತಿದೆ. ಏನೇ ಕಷ್ಟ ಬಂದರೂ ಸಹಿಸಿಕೊಂಡು ಗಂಡನ ಮನೆಯಲ್ಲಿಯೆ ಇರಬೇಕು. ತವರಿಗೆ ಗಂಡನನ್ನು ಬಿಟ್ಟು ಬಂದರೆ ಬೆಲೆ ಇರಲ್ಲ. ಅದನ್ನೇ ಕೆಲವೊಂದು ಹಳ್ಳಿಗಳು ಈಗಲೂ ನಂಬಿವೆ. ಈ ಧಾರಾವಾಹಿಯಲ್ಲಿ ಬರುವ ಚಲ್ವಲ್ಸೆ ಎಂಬ ಹಳ್ಳಿಯಲ್ಲೂ ಇದೇ ಸಂಪ್ರದಾಯ ಮುಂದುವರೆದಿದೆ. ಇತ್ತ ರಾಹುಲ್ ಬೇರೊಂದು ಮದುವೆಯಾಗಿದ್ದಾನೆ. ಹೂವಿಯನ್ನು ಮನೆ ಬಿಟ್ಟು ಹೋಗುವಂತೆ ಹೇಳಿದ್ದ. ಆದರೆ ಅದೇನು ಮನವರಿಕೆ ಆಯಿತೋ ಏನೋ ಬೇಡ ನೀನು ಶಾಶ್ವತವಾಗಿ ನಮ್ಮ ಜೊತೆಗೆ ಇರು ಅಂತ ಹೇಳಿದ್ದಾನೆ. ಇದು ಹೂವಿಗೆ ತೀರಾ ಸಂತೋಷವಾಗದೆ ಇದ್ದರು ನೆಮ್ಮದಿಯ ನಿಟ್ಟುಸಿರು ಬಿಡಲು ಕಾರಣವಾಗಿದೆ. ಹಳ್ಳಿಗಂತು ಹೋಗಲಾರದೆ ಮುಂದಿನ ದಾರಿ ಯಾವುದು ಎಂದುಕೊಳ್ಳುತ್ತಿರುವಾಗ ಒಂದು ಭರವಸೆ ಸಿಕ್ಕಂತಾಗಿದೆ.

ಹೂವಿಯ ನೋವು ಲೆಕ್ಕಕ್ಕೆ ಇಲ್ವಾ?

ಹೂವಿಯ ನೋವು ಲೆಕ್ಕಕ್ಕೆ ಇಲ್ವಾ?

ಮಾಲಿನಿ ಮತ್ತು ರಾಹುಲ್ ಮದುವೆಯಾಗಿದೆ. ಇತ್ತೀಚೆಗೆ ಧಾರಾವಾಹಿಗಳಲ್ಲಿ ಅದ್ಧೂರಿ ಮದುವೆ ಜೊತೆಗೆ ಏನೆಲ್ಲಾ ಶಾಸ್ತ್ರಗಳನ್ನು ಮಾಡಬೇಕೋ ಅದೆಲ್ಲವನ್ನೂ ಅಚ್ಚುಕಟ್ಟಾಗಿ ಮಾಡುತ್ತಾರೆ. ಧಾರಾವಾಹಿ ಎಂಬ ಫೀಲ್ ಕೊಡದೆ ಆ ಅದ್ಧೂರಿತನಕ್ಕೆ ಶಬ್ಬಾಶ್‌ಗಿರಿ ಸಿಗುವ ರೀತಿ ರಿಚ್ ಆಗಿ ಧಾರಾವಾಹಿ ಮಾಡುತ್ತಿದ್ದಾರೆ. ಅದರಂತೆ 'ಬೆಟ್ಟದ ಹೂ' ಧಾರಾವಾಹಿ ಕೂಡ. ಮದುವೆಯೆಲ್ಲಾ ಮುಗಿದ ಮೇಲೆ ಮಗಳನ್ನು ಗಂಡನ ಮನೆಗೆ ಕಳುಹಿಸಿಕೊಡುವ ಶಾಸ್ತ್ರವನ್ನು ಮುಂದುವರೆಸಿದ್ದರು. ಈ ದೃಶ್ಯ ಆಲ್ ಮೋಸ್ಟ್ ಎಲ್ಲಾ ಪ್ರೇಕ್ಷಕರಿಗೂ ಕನೆಕ್ಟ್ ಆಗುತ್ತೆ. ತಮ್ಮ ಮಕ್ಕಳ ಮದುವೆ ಸಂದರ್ಭವನ್ನು ನೆನಪಿಸುತ್ತದೆ.

ಇಬ್ಬರು ಪತ್ನಿಯರ ಕಥೆಯೇನು?

ಇಬ್ಬರು ಪತ್ನಿಯರ ಕಥೆಯೇನು?

ಕಲಾವಿದರು ಕಣ್ಣೀರು ಹಾಕಿದರೆ ಸಹಜವಾಗಿ ನೋಡುಗರ ಕಣ್ಣಲ್ಲೂ ನೀರು ಬರುತ್ತದೆ. ನಿಜಕ್ಕೂ 'ಬೆಟ್ಟದ ಹೂ' ಧಾರಾವಾಹಿಯ ಈ ಎಪಿಸೋಡ್ ನೋಡುವಾಗ ಪ್ರತಿಯೊಬ್ಬರ ಕಣ್ಣಲ್ಲಿಯೂ ಕಣ್ಣೀರು ಬಂದಿದೆ. ಆದರೆ ಅದು ಬಂದಿದ್ದು ಹೂವಿಗೋಸ್ಕರ. ಆ ಮುಗ್ಧತೆ ಆಕೆಯ ಜೀವನವನ್ನು ಮುಂದೇನು ಮಾಡುತ್ತೆ ಎಂಬ ಪ್ರಶ್ನೆ ಬಂದಿದೆ. ಒಟ್ಟಾರೆ ರಾಹುಲ್ ಇಬ್ಬರು ಹೆಂಡತಿಯರನ್ನು ಮನೆಯಲ್ಲಿಯೇ ಇಟ್ಟುಕೊಂಡಿದ್ದಾನೆ ಮುಂದೇನಾಗುತ್ತೆ ನೋಡೋಣಾ.

More from Filmibeat

English summary
Star Suvarna serial Bettada Hoo Written Update on April 5th episode. Here is the details about when rahul weds malini Hoovi feels heart broken
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X