ಬೆಟ್ಟದ ಹೂ: ಹೂವಿಯನ್ನು ರಾಹುಲ್ ಮದುವೆಯಾಗಿದ್ದು ಮಾಲಿನಿಗೆ ತಿಳಿದೇ ಹೋಯ್ತು: ಮುಂದೇನು?

By ಎಸ್ ಸುಮಂತ್

'ಬೆಟ್ಟದ ಹೂ' ಧಾರಾವಾಹಿ ಬೇರೆಯದ್ದೇ ತಿರುವು ಪಡೆದುಕೊಂಡಿದೆ. ರಾಹುಲ್ ಇದ್ದಕ್ಕಿದ್ದ ಹಾಗೇ ಬದಲಾಗಿದ್ದಾನೆ. ನಿರೀಕ್ಷೆಗೂ ಮೀರಿ ಪ್ರೀತಿ ತೋರುತ್ತಿದ್ದಾನೆ. ಇದನ್ನು ಸ್ಚತಃ ಹೂವಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ರಾಹುಲ್ ಬದಲಾಗಿರುವುದು ಸತ್ಯವೇ. ಹೂವಿಗಾಗಿ ಎಲ್ಲಾ ಸಮಯವನ್ನು ಮೀಸಲಿಟ್ಟಿದ್ದಾನೆ. ಹೂವಿಯ ಭವಿಷ್ಯದ ಬಗ್ಗೆ ಕಾಳಜಿ ತೋರುತ್ತಾನೆ. ಹೂವಿಯನ್ನು ಅತೀವವಾಗಿ ಪ್ರೀತಿಸುತ್ತಾನೆ.

ಸದ್ಯ ಚನ್ನವಲ್ಸೆಯಲ್ಲಿಯೇ ಇರುವ ರಾಹುಲ್ ಮನೆಯಲ್ಲಿ ಯಾರಿಗೂ ಒಂದು ಮಾತು ಕೂಡ ಹೇಳಿಲ್ಲ. ಹೀಗಾಗಿ ಮನೆ ಮಂದಿಯೆಲ್ಲಾ ಆತಂಕದಲ್ಲಿದ್ದಾರೆ. ಆದರೆ ಮಾಲಿನಿ ತನಿಖೆ ಶುರು ಮಾಡಿದ್ದಾಳೆ. ರಾಹುಲ್ ಎಲ್ಲಿದ್ದಾನೆ ಎಂಬುದನ್ನು ಹುಡುಕಲು ಹೊರಟಿದ್ದಾಳೆ. ಈ ಹುಡುಕಾಟದಲ್ಲಿ ಮಾಲಿನಿಗೆ ಸತ್ಯ ತಿಳಿದರೆ, ಅಕ್ಷರಶಃ ಮೌನಿಯಾಗಿ ಬಿಡುತ್ತಾಳೆ ಎನಿಸುತ್ತದೆ.

 ಹೂವಿಯನ್ನು ಒಪ್ಪಿಯೇ ಬಿಟ್ಟ

ಹೂವಿಯನ್ನು ಒಪ್ಪಿಯೇ ಬಿಟ್ಟ

ಹೂವಿಗೆ ಓದಬೇಕು ಎಂಬುದು ದೊಡ್ಡ ಆಸೆ. ಅದರಂತೆಯೇ ರಾಹುಲ್ ಮೇಲಿನ ಮುನಿಸಿಗೆ ಊರಿಗೆ ಬಂದಾಕೆ ಓದಲು ಶುರು ಮಾಡಿದ್ದಾಳೆ. ಇದೆ ವೇಳೆ ರಾಹುಲ್ ಕೂಡ ಚನ್ನವಲ್ಸೆಗೆ ಬಂದಿದ್ದಾನೆ. ಹೂವಿಯ ಓದಿಗೆ ಸಂಪೂರ್ಣ ನೆರವು ನೀಡುತ್ತಿದ್ದಾನೆ.‌ ಅವಳ ಪಕ್ಕದಲ್ಲಿಯೇ ಕುಳಿತು ಧೈರ್ಯ ತುಂಬುತ್ತಿದ್ದಾನೆ. ಹೂವಿಗೆ ಇದೆಲ್ಲವೂ ಒಮ್ಮೊಮ್ಮೆ ಆಶ್ಚರ್ಯ ಎನಿಸುತ್ತಿದೆ. ಆದರೆ ರಾಹುಲ್ ಮನಸ್ಸಾರೆ ಪ್ರೀತಿ ತೋರುತ್ತಿದ್ದಾನೆ.

 ಹೂವಿಗಾಗಿ ತ್ಯಾಗ

ಹೂವಿಗಾಗಿ ತ್ಯಾಗ

ಮನೆಯ ಅಂಗಳದಲ್ಲಿ ನಿಂತಿದ್ದಾಗ ರಾಹುಲ್‌ಗೆ ಹಾವು ಕಚ್ಚಿತು. ಹೇಗೋ ಶಾರದವ್ವನ ಆಶೀರ್ವಾದ, ಡಾ.ಭಾವನಾ ಅವರ ಚಿಕಿತ್ಸೆ, ಹೂವಿಯ ಮನವಿ ಎಲ್ಲವೂ ಒಟ್ಟುಗೂಡಿ ರಾಹುಲ್ ದೇಹದ ವಿಷ ಇಳಿದು, ಕಣ್ಣು ತೆರೆದ. ಆದರೆ ಆತನಿಗೆ ವಿಶ್ರಾಂನತಿಯ ಅಗತ್ಯವಿತ್ತು. ಈ ಗಾಬರಿಯಲ್ಲಿ ಹೂವಿ ಪರೀಕ್ಷೆ ಬರೆಯುವುದನ್ನೇ ನಿಲ್ಲಿಸಿ ಬಂದಿದ್ದಳು. ಇದನ್ನು ಕಂಡು ಗಾಬರಿಯಾದ ರಾಹುಲ್, ಹೂವಿಯನ್ನು ತಾನೇ ಬೈಕ್‌ನಲ್ಲಿ ಕೂರಿಸಿಕೊಂಡು ಪರೀಕ್ಷೆಯ ಕೊಠಡಿಗೆ ಕರೆತಂದ. ಕಣ್ಣು ಬಿಡುವುದಕ್ಕೂ ಆಗದೆ ಇರುವಂತ ಸ್ಥಿತಿಯದು. ಆದರೆ ಹೂವಿ ಮೇಲಿನ ಕಾಳಜಿಯಿಂದ ಪರೀಕ್ಷಾ ಕೊಠಡಿಗೆ ಕರೆತಂದಿದ್ದ. ಅಲ್ಲಿ ತನ್ನೆಲ್ಲಾ ಮಾತುಗಾರಿಕೆ, ಮನವಿ ಉಪಯೋಗಿಸಿ ಹೂವಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಸಿದ. ಪರೀಕ್ಷೆಯೆಲ್ಲಾ ಮುಗಿದ ಮೇಲೆ ಪರೀಕ್ಷಾಧಿಕಾರಿ, ಆಕೆ ನಿಮಗೇನು ಆಗಬೇಕು ಎಂದರೆ ಧೈರ್ಯವಾಗಿ ಆಕೆ ನನ್ನ ಹೆಂಡತಿ ಎಂದ. ಇದನ್ನು ಕೇಳಿದ ಹೂವಿಗೆ ಮನದಲ್ಲಿಯೇ ಹೆಮ್ಮೆ ಎನಿಸುವುದಕ್ಕೆ ಶುರುವಾಯ್ತು.

 ಹುಡುಕಾಟ ಶುರು ಮಾಡಿದ ಮಾಲಿನಿ

ಹುಡುಕಾಟ ಶುರು ಮಾಡಿದ ಮಾಲಿನಿ

ಆಫೀಸ್ ಕೆಲಸದ ಮೇಲೆ ಚೆನ್ನೈಗೆ ಹೋಗುತ್ತೇನೆಂದು ಹೋದ ರಾಹುಲ್ ಕಡೆಯಿಂದ ಒಂದು ಫೋನ್ ಕಾಲ್ ಇಲ್ಲ, ಮೆಸೇಜ್ ಇಲ್ಲ. ಮನೆಯವರೆಲ್ಲಾ ಸಹಜವಾಗಿಯೆ ಗಾಬರಿಯಾಗಿದ್ದಾರೆ. ತುಂಬಾ ಪ್ರೀತಿಸುತ್ತಿದ್ದ ಮಾಲಿನಿ ಮನಸ್ಸು ಕಳವಳಗೊಂಡಿದೆ. ಹೀಗಾಗಿ ಮಾಲಿನಿ ತನಿಖೆ ಶುರು ಮಾಡಿದ್ದಾಳೆ. ರಾಹುಲ್ ಕೆಲಸ ಮಾಡುತ್ತಿದ್ದ ಪತ್ರಿಕಾ ಕಚೇರಿಗೆ ಕರೆ ಮಾಡಿ, ರಾಹುಲ್ ಬಗ್ಗೆ ವಿಚಾರಿಸಿದ್ದಾಳೆ. ಆದರೆ ಪರ್ಸನಲ್ ಕೆಲಸಕ್ಕಾಗಿ ರಜೆ ತೆಗೆದುಕೊಂಡು ಹೋಗಿರುವುದಾಗಿ, ‌ನಮಗೂ ಕೂಡ ಯಾವುದೇ ವಿಚಾರ ಗೊತ್ತಿಲ್ಲ ಎಂಬುದನ್ನು ಮುಖ್ಯ ಸಂಪಾದಕರೇ ತಿಳಿಸಿದ್ದಾರೆ. ಇದು ಒಂದಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

 ಹೂವಿ-ರಾಹುಲ್ ಮದುವೆ ವಿಚಾರ ಮಾಲಿನಿಗೆ ಗೊತ್ತಾಗುತ್ತಾ?

ಹೂವಿ-ರಾಹುಲ್ ಮದುವೆ ವಿಚಾರ ಮಾಲಿನಿಗೆ ಗೊತ್ತಾಗುತ್ತಾ?

ಮಾಲಿನಿಗೆ ರಾಹುಲ್ ಬಗ್ಗೆ ಚಿಂತೆಯಾಗಿದೆ. ಹೀಗಾಗಿ ರಾಹುಲ್ ಕೆಲಸ ಮಾಡುತ್ತಿದ್ದ ಆಫೀಸ್‌ಗೆ ಹೋದರೆ ಎಲ್ಲವೂ ತಿಳಿಯುತ್ತೆ ಎಂಬ ಕಾರಣಕ್ಕೆ ಹೊರಟಿದ್ದಾಳೆ. ಈಗಾಗಲೇ ಆಫೀಸ್‌ನಲ್ಲಿ ರಾಹುಲ್‌ಗೆ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿಗೆ ರಾಹುಲ್ ಬಗ್ಗೆ ತಿಳಿದಿದೆ. ಅದನ್ನು ಬಾಸ್ ಬಳಿ ಹೇಳಿದ್ದಾನೆ. ರಾಹುಲ್ ಸರ್ ಗೆ ಬಲವಂತವಾಗಿ ಹೂವಿ ಎಂಬ ಹುಡುಗಿಯ ಜೊತೆಗೆ ಮದುವೆ ಮಾಡಿಬಿಟ್ಟಿದ್ದಾರಂತೆ ಸರ್ ಎಂದಿದ್ದಾರೆ. ಇದನ್ನು ಮಾಲಿನಿ ಕೇಳಿಸಿಕೊಂಡರೆ ಮುಂದಿನ ದಾರಿ ಬಹಳ ಕ್ಲಿಷ್ಟಕರವಾಗಬಹುದು.

More from Filmibeat

English summary
Star Suvarna Serial Bettada Hoo Written Update On July 13th Episode. Here Is The Details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X