ಬೆಟ್ಟದ ಹೂ: ಮಾಲಿನಿ ಮನೆ ಬಿಟ್ಟು ಹೋಗಿರುವ ವಿಚಾರ ಕೇಳಿ ರಾಹುಲ್ ಕಂಗಾಲು..!
ಚಕ್ರವರ್ತಿ ಗೂಡಿನಲ್ಲಿ ಎಲ್ಲರೂ ಜೇನುಗೂಡಿನಂತೆಯೇ ಇತ್ತು. ಮನೆಯ ವಾತಾವರಣವೂ ಅಷ್ಟೇ ಹೊಂದಾಣಿಕೆಯ ವಾತಾವರಣವಾಗಿತ್ತು. ಪ್ರೀತಿ, ಬಾಂಧವ್ಯಕ್ಕೇನು ಕಡಿಮೆ ಇರಲಿಲ್ಲ. ಆದರೆ ಇತ್ತೀಚಿನ ಬೆಳವಣಿಗೆ ಚಕ್ರವರ್ತಿ ಕುಟುಂಬದಲ್ಲೂ ಸಂತಸವನ್ನು ಕಡಿಮೆ ಮಾಡಿದೆ. ಎಲ್ಲರ ಮನದಲ್ಲೂ ಗೊಂದಲ, ಟೆನ್ಶನ್ ಕಾಡುತ್ತಾ ಇದೆ. ಯಾರಿಗೂ ಹೇಳದೆ ಮನೆ ಬಿಟ್ಟು ಹೋದ ಮನೆ ಮಗ ಮನೆಗೆ ಬಂದರೂ ಯಾರಿಗೂ ಮಾತನಾಡವ ಮನಸ್ಸು ಇಲ್ಲ.
ರಾಹುಲ್ ಕಡೆಗೂ ಚನ್ನವಲ್ಸೆಯಿಂದ ಭಾರದ ಮನಸ್ಸಿನಲ್ಲಿಯೇ ಬೆಂಗಳೂರು ತಲುಪಿದ್ದಾನೆ. ಆದರೆ ಮನೆಗೆ ಬಂದಾಗ ಅಂದುಕೊಂಡಂತೆ ಯಾವುದು ಇಲ್ಲ. ಯಾರಂದ್ರೆ ಯಾರು ಕೂಡ ರಾಹುಲ್ ಕಡೆಗೆ ಗಮನ ಕೊಡುತ್ತಿಲ್ಲ. ಇದೆಲ್ಲವನ್ನು ತಿಳಿದುಕೊಳ್ಳುವುದಕ್ಕೂ ರಾಹುಲ್ ಗೆ ಆಗುತ್ತಿಲ್ಲ. ಇಷ್ಟು ದಿನ ರಾಹುಲ್ ಎಲ್ಲಿದ್ದಾನೆ ಎಂದು ಒದ್ದಾಡುತಚತಿದ್ದ ಮನೆಯವರು ಇಂದು ಕಣ್ಣೆದುರಿಗೆ ಬಂದರೂ ತುಟಿಕ್ ಪಿಟಿಕ್ ಎನ್ನದಷ್ಟು ದುಃಖಪಟ್ಟಿದ್ದಾರೆ.

ರಾಹುಲ್ ನನ್ನು ಕಂಡರು ಕಾಣದಂತಿದ್ದಾರೆ
ರಾಹುಲ್ ಆಫೀಸ್ ಕೆಲಸ ಎಂದು ಹೇಳಿ ಹೋದವ, ಎಲ್ಲಿದ್ದೀನಿ, ಏನು ಮಾಡುತ್ತಿದ್ದೀನಿ ಎಂಬ ಸುಳಿವನ್ನೇ ಬಿಟ್ಟು ಕೊಟ್ಟಿರಲಿಲ್ಲ. ಅದನ್ನೇ ಯೋಚಿಸಿ ಯೋಚಿಸಿ ಮನೆ ಮಂದಿ ಆತಂಕದಲ್ಲಿದ್ದರು. ಈ ಮಧ್ಯೆ ಮನೆಯಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಮಾಲಿನಿ ಮುಗಿಸಿಕೊಂಡು ತವರು ಸೇರಿದ್ದಾಳೆ. ಇದ್ಯಾವುದನ್ನು ತಡೆಯಲು ಮನೆಯವರ ಕೈಲಿ ಆಗಲೇ ಇಲ್ಲ. ಇದೀಗ ರಾಹುಲ್ ಮನೆಗೆ ವಾಪಾಸ್ ಆಗುದ್ದಾನೆ. ಮಗನ ದಾರಿಯನ್ನೇ ಕಾಯುತ್ತುದ್ದವರು, ಅವನನ್ನು ಕಣ್ಣೆತ್ತಿ ಸಹ ನೋಡುತ್ತಿಲ್ಲ. ಅಷ್ಟು ಮನೆಯವರ ಮನಸ್ಸು ಭಾರವಾಗಿದೆ.

ಮಾಲಿನಿ ಇಲ್ಲದ್ದನ್ನು ಕೇಳಿ ಶಾಕ್ ಆದ ರಾಹುಲ್
ರಾಹುಲ್ ಮನೆಗೆ ಬಂದಾಗ ಇಂಥದ್ದೊಂದು ವಾತಾವರಣ ಇರುತ್ತೆ ಎಂದು ನಿರೀಕ್ಷಿಸಿರಲಿಲ್ಲ ಎನಿಸುತ್ತದೆ. ಯಾರನ್ನೇ ಮಾತನಾಡಿಸಿದರು ಅವನ ಕಡರ ಗಮನವನ್ನೇ ಕೊಡುತ್ತಿಲ್ಲ. ಇಷ್ಟು ದಿನ ಬಿಟ್ಟಿರುವವನಿಗೆ ಇನ್ಮೇಲೂ ಬಿಟ್ಟಿರು ಎಂಬ ಸೂಚನೆಗಳನ್ನು ಕೊಟ್ಟಂತಿದೆ. ಆದರೆ ರಾಹುಲ್ ಮಾತಾಡಿಸಲು ಯತ್ನಿಸಿದ್ದಾದರೂ ಫೇಲ್ ಆಗಿದ್ದಾನೆ. ಕಡೆಗೆ ಮಾಲಿನಿಯನ್ನಾದರೂ ಮಾತನಾಡಿಸೋಣ ಎಂದು ಹೋದರೆ ಅಲ್ಲಿ ಮಾಲಿನಿಯೂ ಕಾಣಲಿಲ್ಲ. ಕಡೆಗೆ ಮನೆ ಕೆಲಸದವನ ಬಳಿ ಕೇಳಿದಾಗ ಮಾಲಿನಿ ಮನೆ ಬಿಟ್ಟು ಹೋಗಿರುವ ವಿಚಾರ ತಿಳಿದಿದೆ. ಒಂದು ಕ್ಷಣ ರಾಹುಲ್ ಗೊಂದಲಮಯವಾಗಿದ್ದಾನೆ.

ವಾಪಾಸ್ ಬರುತ್ತಾಳ ಮಾಲಿನಿ
ಮಾಲಿನಿ ತುಂಬಾ ಸಹನೆಯಿಂದ ಕಾದಳು. ಆದರೆ ರಾಹುಲ್ ಕಡೆಯಿಂದ ಯಾವ ಸುಳಿವು ಸಿಗಲಿಲ್ಲ. ಮನೆಯವರಿಗೂ ಏನು ಗೊತ್ತಾಗುತ್ತಿಲ್ಲ. ಕಡೆಗೆ ಸಾಕಷ್ಟು ನೊಂದು ಮನೆ ಬಿಟ್ಟು ಹೋಗುವ ನಿರ್ಧಾರ ಮಾಡಿದಳು. ಲಗೇಜ್ ಪ್ಯಾಕ್ ಮಾಡಿಕೊಂಡು ತವರಿನ ಕಡೆಗೆ ಹೊರಟರ ಬಿಟ್ಟಳು. ಮನೆಯವರು ಎಷ್ಟೇ ಹೇಳಿದರೂ ಅದ್ಯಾವುದನ್ನು ಕೇಳಿಸಿಕೊಳ್ಳುವುದಕ್ಕೂ ಸಿದ್ಧವಿರಲಿಲ್ಲ. ಈಗ ರಾಹುಲ್, ಮಾಲಿನಿಯ ಮನಸ್ಸನ್ನು ಸರಿ ಮಾಡುತ್ತಾನಾ ಎಂಬುದನ್ನು ನೋಡಬೇಕಿದೆ.

ಸತ್ಯ ಹೇಳಿ ಸುಧಾರಿಸಿಕೊಳ್ಳುತ್ತಾನಾ
ರಾಹುಲ್ ತುಂಬಾ ಗೊಂದಲದಲ್ಲಿದ್ದಾನೆ. ಮಾಲಿನಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಆ ಕಡೆ ಹೂವಿಯ ಕಡೆಗೆ ಮನಸ್ಸು ಸಂಪೂರ್ಣವಾಗಿ ಸೋತು ಹೋಗಿದೆ. ಈಗಂತೂ ಹೂವಿಯನ್ನು ಬಿಡುವ ಮಾತೇ ಇಲ್ಲ. ಹೂವಿಗೆ ಅನ್ಯಾಯವಾಗುವುದನ್ನು ರಾಹುಲ್ ಸಹಿಸುವುದಿಲ್ಲ. ಆದರೆ ಮಾಲಿನಿ ಇಷ್ಟು ದಿನ ಎಲ್ಲಿ ಹೋಗಿದ್ದೆ ಎಂದರೆ ಸತ್ಯ ಹೇಳುತ್ತಾನಾ ಎಂಬ ಕುತೂಹಲ. ಸತ್ಯ ಹೇಳಿದರೆ ಅರಗಿಸಿಕೊಳ್ಳುವ ಶಕ್ತಿ ಮಾಲಿನಿಗೂ ಇಲ್ಲ. ಸತ್ಯ ಹೇಳುವ ಧೈರ್ಯ ರಾಹುಲ್ ಗೆ ಕೂಡ ಇಲ್ಲ.


Click it and Unblock the Notifications











