ಬೆಟ್ಟದ ಹೂ: ಅಯ್ಯೋ.. ಹೂವಿಗೆ ಮತ್ತೊಂದು ಮದುವೆ ಮಾಡಲು ಹೊರಟಿದ್ದಾನೆ ರಾಹುಲ್..!

By ಎಸ್ ಸುಮಂತ್

ಏನೋ ಮಾಡಲು ಹೋಗಿ ಇನ್ನೇನೋ ಆಯಿತು ಎಂಬಂತಾಗಿತ್ತು ಹೂವಿ ಮತ್ತು ರಾಹುಲ್ ಜೀವನ. ಡಾಕ್ಯೂಮೆಂಟರಿ ಮಾಡಲು ಹೋದವ ಹೂವಿಯನ್ನು ಮದುವೆಯಾಗಿ ಕರೆತಂದ. ಅಂದಿನಿಂದ ಇಂದಿನವರೆಗೆ ನಾನಾ ಸಮಸ್ಯೆಗಳು ಇಬ್ಬರ ನಡುವೆ ಬಂದು ಹೋಯ್ತು. ಮೊದ ಮೊದಲಿಗೆ ಹೂವಿಯನ್ನು ಕಂಡರೆ ಸಿಡಿಮಿಗೊಳ್ಳುತ್ತಿದ್ದ ರಾಹುಲ್, ಇತ್ತೀಚೆಗೆ ಸಹಜವಾಗಿಯೇ ಇದ್ದ. ಆದರೆ ಹೂವಿಯ ಮನಸ್ಸನ್ನು ಮತ್ತೊಮ್ಮೆ ಹಾಳುಗೆಡವಲು ಹೊರಟಿದ್ದಾನೆ. ಅವಳ ಆಸೆ-ಆಕಾಂಕ್ಷೆಗಳಿಗೆ ಬೆಂಕಿ ಹಚ್ಚಲು ಸಿದ್ಧವಾಗಿದ್ದಾನೆ.

ಹೂವಿ ಸತ್ಯವನ್ನು ಹೇಳಲಾಗದೆ, ಗಂಡನಿಗೆ ಸದಾ ಒಳಿತನ್ನೇ ಬಯಸುತ್ತಾ ಇದ್ದಾಳೆ. ಮಾಲಿನಿ ಮತ್ತು ರಾಹುಲ್ ನಗು ನಗುತ್ತಾ ಇರುವುದನ್ನು ನೋಡಿಯೇ ನೋವಲ್ಲೂ ಖುಷಿ ಪಡುತ್ತಿದ್ದಾಳೆ. ಆದರೆ ರಾಹುಲ್ ಹೂವಿಯ ಎದೆಯಲ್ಲಿ ಪ್ರಳಯವಾಗುವಂತೆ ಮಾತನಾಡಿದ್ದಾನೆ. ಇದು ಹೂವಿಗೆ ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗದೆ ಇರುವ ಮಾತಾಗಿದೆ.

ಮರು ಮದುವೆ ಬಗ್ಗೆ ರಾಹುಲ್ ಮಾತಿನಿಂದ ನೊಂದ ಹೂವಿ

ಮರು ಮದುವೆ ಬಗ್ಗೆ ರಾಹುಲ್ ಮಾತಿನಿಂದ ನೊಂದ ಹೂವಿ

ಆ ಕಡೆ ಚನ್ನವಲ್ಸೆಯಲ್ಲಿರುವ ತನ್ನ ತಾಯಿಗೆ ಯಾವುದೇ ಸತ್ಯ ತಿಳಿಯಬಾರದು. ಮಗಳು ಗಂಡನ ಮನೆಯಲ್ಲಿ ಆರಾಮಾಗಿ ಇದ್ದಾಳೆ, ಖುಷಿಯಿಂದ ಸಂಸಾರ ನಡೆಸುತ್ತಿದ್ದಾಳೆ ಎಂಬುದಷ್ಟೇ ತಿಳಿದಿರಬೇಕು. ಇಲ್ಲಿನ ಯಾವುದೇ ಸಮಸ್ಯೆ ತಿಳಿಯಬಾರದೆಂದು ಹೂವಿ ಬಯಸುತ್ತಾಳೆ. ನಿನಗೆ ಗಂಡನ ಸ್ಥಾನ ಕೊಡುವುದಕ್ಕೆ ಆಗಲ್ಲ ಎಂದಾಗಲೂ ರಾಹುಲ್ ಬಗ್ಗೆ ಬೇಸರ ಮಾಡಿಕೊಳ್ಳಲಿಲ್ಲ. ಎಲ್ಲವೂ ಅರ್ಥ ಮಾಡಿಕೊಂಡ ಹೂವಿ, ಮನೆಕೆಲಸದವಳಾಗಿ ಎಲ್ಲರ ಮನಸ್ಸನ್ನು ಗೆದ್ದಿದ್ದಾಳೆ. ಗಂಡ ಯಾವತ್ತಿದ್ದರೂ ದೇವರ ಸಮಾನವೆಂದು ಪೂಜಿಸುತ್ತಾ, ಹಾರೈಸುತ್ತಾ ಇದ್ದಾಳೆ. ಈ ಮಧ್ಯೆ ಗಂಡನೇ ಬಂದು ಮತ್ತೊಂದು ಮದುವೆಯಾಗು ಎಂದರೆ ಆ ಹೃದಯಕ್ಕೆ ಎಷ್ಟು ಆಘಾತವಾಗಬೇಡ. ಹೂವಿಯ ಸ್ಥಿತಿಯೂ ಹಾಗೇ ಆಗಿದೆ. ನಮ್ಮಿಬ್ಬರ ನಡುವೆ ಆದ ತಪ್ಪನ್ನು ಸರಿ ಮಾಡಿಕೊಳ್ಳುವ ಸಮಯವಿದು. ನೀನು ಒಳ್ಳೆ ಹುಡುಗನನ್ನು ಮದುವೆಯಾಗಬೇಕು ಎಂದು ಕೇಳಿಕೊಂಡಿದ್ದಾನೆ.

ರಾಹುಲ್-ಮಾಲಿನಿ ಗುರಿ ಒಂದೇ.. ಹೂವಿ ಮದುವೆ

ರಾಹುಲ್-ಮಾಲಿನಿ ಗುರಿ ಒಂದೇ.. ಹೂವಿ ಮದುವೆ

ಇತ್ತೀಚೆಗೆ ಮಾಲಿನಿ ತಲೆಯಲ್ಲಿಯೂ ಹೂವಿ ಬಗ್ಗೆ ಇರುವ ವಿಚಾರ ಮದುವೆಯದ್ದೇ. ಅದಕ್ಕೆ ಸಕಲಕಲಾವಲ್ಲಭನಿಗೆ ಗಂಟು ಹಾಕುವ ಮಾತುಗಳನ್ನು ಆಗಾಗ ಆಡುತ್ತಿರುತ್ತಾಳೆ. ರಾಹುಲ್ ಕೊಡಿಸಿದ ಬಟ್ಟೆಯನ್ನು ನಾನು ಕೊಡಿಸಿದೆ ಎಂದು ಮಾಲಿನಿ ಮುಂದೆ ಹೇಳಿದಾಗ, ಅದನ್ನೇ ಪ್ರೀತಿ ಎಂದೇ ಭಾವಿಸಿದ್ದಾಳೆ. ಹೂವಿಗೂ ಕೂಡ ಅವ್ನಿಗೆ ನಿನ್ನ ಮೇಲೆ ಪ್ರೀತಿಯಾಗಿರಬೇಕು ನೋಡು. ಇಲ್ಲವಾದರೆ ಇಷ್ಟು ದುಬಾರಿ ಡ್ರೆಸ್‌ ಅನ್ನು ತಂದುಕೊಡುತ್ತಿರಲಿಲ್ಲ ಎಂದಿದ್ದಾಳೆ. ಇತ್ತ ಸರ್ವಸ್ವವೇ ರಾಹುಲ್ ಎಂದು ತಿಳಿದುಕೊಂಡಿದ್ದ ಹೂವಿಗೆ ತಾಳಿ ಕಟ್ಟಿದ ಗಂಡನು ಮದುವೆ ಬಗ್ಗೆ ಹೇಳಲು ಶುರು ಮಾಡಿದ್ದಾನೆ. ಹೀಗಾಗಿ ಹೂವಿಗೆ ಮಾಲಿನಿ ಮತ್ತು ರಾಹುಲ್ ಸೇರಿ‌ ಮದುವೆಯ ತಲೆ ಕೆಡಿಸಲು ಶುರು ಮಾಡಿದ್ದಾರೆ.

ಸತ್ಯ ಹೇಳದೆ ಇನ್ನೊಂದು ಮದುವೆಗೆ ಒಪ್ತಾಳಾ ಹೂವಿ?

ಸತ್ಯ ಹೇಳದೆ ಇನ್ನೊಂದು ಮದುವೆಗೆ ಒಪ್ತಾಳಾ ಹೂವಿ?

ಮನೆಯವರಿಗೆಲ್ಲಾ ಹೂವಿ ಮಗಳಿದ್ದಂತೆಯೆ ಸರಿ. ಅವಳ ಜೀವನ ಸರಿಯಾಗುತ್ತೆ ಎಂದರೆ ಮದುವೆ ಮಾಡಲು ಎಲ್ಲರೂ ಒಪ್ಪಿಗೆ ನೀಡಿಯೇ ನೀಡುತ್ತಾರೆ. ಈ ವಿಚಾರದಲ್ಲಿ ಹೂವಿ ಪರ ನಿಲ್ಲಬೇಕಾದ ರಾಹುಲ್, ಮದುವೆ ಮಾಡಿಕೊಳ್ಳಲು ಹೇಳುತ್ತಿದ್ದಾನೆ. ಹೀಗಾಗಿ ಮನೆಯವರೆಲ್ಲಾ ಹೂವಿಗೆ ಬಲವಂತ ಮಾಡಿದರೆ ಹೂವಿ ಮರು ಮದುವೆಗೆ ಒಪ್ಪದೆ ಇರಲು ಯಾವ ಕಾರಣವೂ ಇರುವುದಿಲ್ಲ. ಯಾಕೆಂದರೆ ರಾಹುಲ್ ಮತ್ತು ಹೂವಿ ಇಬ್ಬರು ಈ ವಿಚಾರವನ್ನು ಮುಚ್ವಿಟ್ಟಿದ್ದಾರೆ. ಜೊತೆಗೆ ಮಾಲಿನಿಯನ್ನು ರಾಹುಲ್ ಮದುವೆ ಕೂಡ ಆಗಿದ್ದಾನೆ. ಹೀಗಿರುವಾಗ ಹೂವಿ ಸದ್ಯಕ್ಕೆ ಯಾವ ಸತ್ಯವನ್ನು ಹೇಳುವ ಸ್ಥಿತಿಯಲ್ಲೂ ಇಲ್ಲ. ಹೇಳಿದರೆ ಮಾಲಿನಿ‌ ಜೀವನ ಹಾಳಾಗುತ್ತೆ. ಹೇಳದೆ ಹೋದರೆ ಹೂವಿ ಮತ್ತೊಂದು ಮದುವೆಯಾಗಬೇಕಾಗುತ್ತದೆ. ಒಂದು ರೀತಿಯಲ್ಲಿ ಅಡ್ಡಕತ್ತರಿಯಲ್ಲಿ ಸಿಲುಕಿದ್ದಾಳೆ ಹೂವಿ.

ಮನಸ್ಸಿಗೆ ಸಂತಸ ಕೊಟ್ಟವನಿಂದಲೇ ನೋವು

ರಾಹುಲ್ ಇತ್ತೀಚೆಗೆ ಅದೆಷ್ಟು ಬದಲಾಗಿದ್ದ ಎಂದರೆ. ಹೂವಿಯ ಮೇಲೆ ಎಲ್ಲಾ ರೀತಿಯ ಪ್ರೀತಿಯನ್ನು ತೋರಿಸುತ್ತಿದ್ದ. ಅವಳಿಗಾಗಿ ಹುಟ್ಟುಹಬ್ಬ ಆಚರಿಸಿದ್ದ, ಗಿಫ್ಟ್ ಕೊಟ್ಟಿದ್ದ. ಅವಳ ಜೋಡಿ ಕೂತು ನಕ್ಕು, ನಗಿಸುತ್ತಿದ್ದ. ರಾಹುಲ್ ಹಾಡು ಹೇಳುತ್ತಿದ್ದ, ಪಾಠ ಮಾಡುತ್ತಿದ್ದ, ಹೂವಿಗೆ ಇಷ್ಟು ಸಾಕಾಗಿತ್ತು. ನೆಮ್ಮದಿಯಾಗಿ ಆ ಖುಷಿಯಲ್ಲಿ ತೇಲಿ ಹೋಗಿದ್ದಳು. ಆದರೆ ಮಾಲಿನಿಯನ್ನು ಮುದ್ದು ಮಾಡುತ್ತಿದ್ದ ರೀತಿಗೆ ಮನಸ್ಸಲ್ಲಿಯೇ ನೋವು ನುಂಗುತ್ತಿದ್ದಳು. ಇಷ್ಟೆಲ್ಲಾ ಖುಷಿ ಕೊಟ್ಟ ರಾಹುಲ್ ಈಗ ಹೂವಿಗೆ ಮದುವೆಯ ಪ್ರಪೋಸಲ್ ಇಡುತ್ತಿದ್ದಾನೆ. ಇದರಿಂದ ಹೂವಿ ಯಾವ ರೀತಿಯ ಉತ್ತರ ಕೊಡುತ್ತಾಳೆ ಎಂಬುದನ್ನು ನೋಡಬೇಕಿದೆ.

More from Filmibeat

English summary
Star Suvarna Serial Bettada Hoo Written Update on June 24th episode. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X