ಬೆಟ್ಟದ ಹೂ: ಗೌತಮ್ ಬಿಡಿಸಿದ್ದ ಗೌರ ಚಿತ್ರ ಕಂಡು ಹೂವಿ ಮನಸ್ಸಲ್ಲಿ ನೂರೆಂಟು ಪ್ರಶ್ನೆ..!
ಹೂವಿಗೆ ಹುಟ್ಟಿದಾಗಿನಿಂದ ತಂದೆ ಯಾರು ಎಂಬುದೇ ತಿಳಿದಿಲ್ಲ. ಅಮ್ಮು ಸಾಕಿದ ರೀತಿಗೆ ಹೂವಿ ತಂದೆ ಬಗ್ಗೆ ಕೇಳುವುದನ್ನೇ ಬಿಟ್ಟಿದ್ದಾಳೆ. ಆದರೆ ಹೂವಿಗೂ ತಂದೆ ಬೇಕು ಎನ್ನಿಸಿದೆ ಎಂಬುದು ಆಗಾಗ ಪ್ರೂವ್ ಆಗಿದೆ. ಮಕ್ಕಳನ್ನು ಮುದ್ದು ಮಾಡುವ ತಂದೆಯನ್ನು ಕಂಡಾಗ ಹೂವಿ ಮನಸ್ಸು ಸಾಕಷ್ಟು ಬಾರಿ ಕೊರಗಿದೆ. ನನಗೂ ತಂದೆ ಇರಬೇಕಿತ್ತು, ತಂದೆ ಪ್ರೀತಿಯನ್ನು ನೋಡಿಯೇ ಇಲ್ಲ ಎಂಬ ಬೇಸರ ಹೊರ ಹಾಕಿದ್ದಾಳೆ. ಆದರೆ ಹೂವಿಗೆ ಸದ್ಯ ತಂದೆಯ ಪ್ರೀತಿ ಸಿಗುತ್ತಿದೆ. ಅದು ಮಾಲಿನಿ ಅಪ್ಪನಿಂದ.
ಗೌರ ತನ್ನ ಪ್ರೀತಿಗೆ ಪ್ರತೀಕವಾಗಿ ಹೂವಿಯನ್ನು ಪಡೆದಳು. ಆದರೆ ಹೂವಿಗೆ ತಂದೆ ಯಾರು ಎಂಬುದನ್ನು ಹೇಳಿಯೇ ಇಲ್ಲ. ತಂದೆಯ ಬಗ್ಗೆ ಅಮ್ಮು ಏನು ಹೇಳಿದ್ದಾಳೆ ಎಂಬುದು ಕೂಡ ನೋಡುಗರಿಗೂ ಪ್ರಶ್ನೆಯಾಗಿಯೇ ಉಳಿದಿದೆ. ಆ ಪ್ರಶ್ನೆಗೆ ಅದ್ಯಾವಾಗ ಉತ್ತರ ಸಿಗುತ್ತೆ ಎಂಬುದು ಮಾತ್ರ ಗೊತ್ತಿಲ್ಲ. ಆದರೆ ಇದೀಗ ಮಹಾ ಟ್ವಿಸ್ಟ್ ಒಂದು ಸಿಕ್ಕಿದೆ. ಇಷ್ಟು ದಿನ ಅಪ್ಪನಂತೆ ಅಂತ ಹೇಳುತ್ತಿದ್ದ ಗೌತಮ್ ನಿಜವಾದ ತಂದೆ ಯಾರು ಎಂಬ ಸತ್ಯ ಗೊತ್ತಾಗುವ ಸಮಯ ಬಂದಿದೆ.

ಮಂದ್ರಾಳ ಕೆಂಗಣ್ಣಿಗೆ ಗುರಿಯಾಗಿದ್ದಾಳಾ ಹೂವಿ
ರಾಹುಲ್ ಚನ್ನವಲ್ಸೆಯಿಂದ ಕರೆದುಕೊಂಡು ಬಂದಿರುವ ಹುಡುಗಿ ಹೂವಿ. ಆಕೆಯನ್ನು ಮನೆಯ ಕೆಲಸದವಳು ಎಂದು ಹೇಳಿದ್ದರು ಕೂಡ ಯಾರು ಅವಳನ್ನು ಮನೆ ಕೆಲಸದವಳಂತೆ ಕಾಣುವುದಿಲ್ಲ. ಮನೆ ಮಂದಿಯಲ್ಲಿ ಆಕೆಯೂ ಒಬ್ಬಳು ಎಂದುಕೊಂಡಿದ್ದಾರೆ. ಆದರೆ ಮಂದ್ರಾಗೆ ಕೋಪ ತರಿಸುವುದು ಇದೇ ಕಾರಣಕ್ಕೆ. ತನ್ನ ಗಂಡನಿಗೂ ಹೂವಿ ಕಂಡರೆ ಇನ್ನಿಲ್ಲದ ಪ್ರೀತಿ. ಮಗಳಂತೆಯೇ ಟ್ರೀಟ್ ಮಾಡುತ್ತಾನೆ ಎಂದು ಆಕೆಯನ್ನು ಅವಮಾನಿಸುತ್ತಾನೆ ಇರುತ್ತಾಳೆ. ಇದೀಗ ಮಾಲಿನಿ ಬಳಿ ಸುಳ್ಳು ಹೇಳಿ, ಕ್ಷಮೆ ಕೇಳುವ ನಾಟಕವಾಡಿ ಹೂವಿಯನ್ನು ಮನೆಗೆ ಕರೆಸಿಕೊಂಡು ಅವಮಾನ ಮಾಡಿದ್ದಾಳೆ. ಗೌತಮ್ ಪ್ರತಿಕ್ರಿಯೆ ಏನು ಬರುತ್ತೆ ಎಂಬುದನ್ನು ನೋಡುವುದಕ್ಕಾಗಿ ಇಷ್ಟೊಂದು ಸೀನ್ ಕ್ರಿಯೇಟ್ ಮಾಡಿದ್ದಾಳೆ. ಇನ್ನೇನು ಗೌತಮ್ ಮಾತನಾಡಬೇಕು ಅಷ್ಟರಲ್ಲಿ ರಾಹುಲ್ ಬಂದು ಮಂದ್ರಾಗೆ ಕ್ಲಾಸ್ ತೆಗೆದುಕೊಂಡ. ಮಂದ್ರಾ ಮಾಡಿದ ಕೆಲಸಕ್ಕೆ ರಾಹುಲ್ ಮತ್ತು ಮಾಲಿನಿ ನಡುವೆ ಜಗಳವಾಗಿದೆ. ಆ ಇಬ್ಬರನ್ನು ಒಂದು ಮಾಡಲು ಹೂವಿ ಮನೆಗೆ ಹೋಗದೆ ಮಂದ್ರಾ ಮನೆಯಲ್ಲಿಯೇ ಉಳಿದುಕೊಂಡಿದ್ದಾಳೆ. ಹೂವಿಗೆ ಮತ್ತಷ್ಟು ಅವಮಾನ ಮಾಡಲು ಮಂದ್ರಾ ಫ್ಲ್ಯಾನ್ ಮಾಡಿಕೊಂಡಿದ್ದಾಳೆ.

ಹೂವಿಯ ಮನವಿಗೆ ಕರಗಿದ ಗೌತಮ್
ಮಂದ್ರಾ ಕಾಲು ಉಣುಕಿಸಿಕೊಂಡ ಪರಿಣಾಮ ಮಾಲಿನಿ ನಾನಿಲ್ಲಿಯೇ ಉಳಿದುಕೊಳ್ಳುತ್ತೀನಿ ಎಂದು ಹಠ ಮಾಡುತ್ತಿದ್ದಳು. ಆದರೆ ಈಗಾಗಲೇ ಗಂಡ-ಹೆಂಡತಿ ನಡುವೆ ಸಣ್ಣ ಬಿರುಕು ಮೂಡಿದೆ. ಹೀಗೆ ಬಿಟ್ಟರೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿದ ಹೂವಿ ಇಬ್ಬರನ್ನು ಒಂದು ಮಾಡುವುದಕ್ಕಾಗಿ. ನಾನೇ ಮಂದ್ರಾ ಅಮ್ಮನನ್ನು ಮನೆಯಲ್ಲಿದ್ದು ನೋಡಿಕೊಳ್ಳುತ್ತೇನೆಂದಳು. ಅದಕ್ಕೆ ಗೌತಮ್, ರಾಹುಲ್, ಮಾಲಿನಿ ಮೂರು ಜನ ಕೂಡ ಸುತರಾಂ ಒಪ್ಪಲಿಲ್ಲ. ಬಳಿಕ ಅಪ್ಪನನ್ನು ಹೊರಗೆ ಕರೆದುಕೊಂಡು ಹೋದ ಹೂವಿ ತಿಳಿಸಿ ಹೇಳಿದ್ದಳು. ಚಿಕ್ಕ ಮಗಳು ಹೇಳಿದ ಮಾತು ತಂದೆಗೆ ಹೌದು ಎನಿಸಿತು. ಬಳಿಕ ರಾಹುಲ್ ಮತ್ತು ಮಾಲಿನಿಗೆ ಹೂವಿಯ ಜವಾಬ್ದಾರಿ ನನ್ನದು ಅಂತೇಳಿ ಕಳುಹಿಸಿದ. ಈ ವೇಳೆ ರಾಹುಲ್ ಕೂಡ ಭಯಪಟ್ಟ. ಆದರೆ ಹೂವಿ ಇದೆಲ್ಲಾ ನಂಗೆ ನೋವು ಎನ್ನಿಸಲ್ಲ ಎಂಬ ಭಾವನಾತ್ಮಕತ ಮಾತುಗಳನ್ನಾಡಿ ರಾಹುಲ್ ಮತ್ತು ಮಾಲಿನಿಯನ್ನು ಕಳುಹಿಸಿಕೊಟ್ಟಳು.

ಸತ್ಯಕ್ಕಾಗಿ ಹೂವಿ ಟಾರ್ಗೆಟ್ ಮಾಡಿದ ಮಂದ್ರಾ?
ಮಂದ್ರಾಗೆ ಹೂವಿ ಮೇಲಿರುವ ಕೋಪ ಅಷ್ಟಿಷ್ಟಲ್ಕ. ಯಾಕೆಂದರೆ ಚನ್ನವಲ್ಸೆಯಿಂದ ಬಂದಿದ್ದಾಳೆ ಎಂಬುದನ್ನೇ ಮಂದ್ರಾಗೆ ಅರಗಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ಗೌತಮ್ ಕೂಡ ಚನ್ನವಲ್ಸೆಯ ಸತ್ಯವನ್ನು ಬಾಯಿ ಬಿಡುತ್ತಿಲ್ಲ. ಆದರೆ ಹೂವಿಗೆ ಬೈದರೆ ಮಾತ್ರ ಗೌತಮ್ ಸುಮ್ಮನೆ ಇರುವುದಿಲ್ಲ. ಹೀಗಾಗಿ ಗೌತಮ್‌ನಿಂದ ಸತ್ಯ ತಿಳಿದುಕೊಳ್ಳಲು ಮಂದ್ರಾ ಹೂವಿಯನ್ನು ದಾಳವಾಗಿ ಬಳಸಿಕೊಳ್ಳುತ್ತಿದ್ದಾಳೆ. ಅವಳಿಗೆ ಅವಮಾನ ಮಾಡುತ್ತಿದ್ದಾಳೆ. ಇದೀಗ ಸತ್ಯ ತಿಳಿದುಕೊಳ್ಳುವ ಕೊನೆ ಹಂತಕ್ಕೆ ಬಂದಿದ್ದಾಳೆ. ಹೂವಿಯನ್ನು ಪೇಂಟಿಂಗ್ ರೂಮಿಗೆ ಹೋಗುವಂತೆ ಮಾಡಿದ್ದಾಳೆ.
ಗೌತಮ್ ಈಗ ಸತ್ಯ ಒಪ್ಪಿಕೊಳ್ಳಲೇಬೇಕು
ಗೌತಮ್ ಆ ಸತ್ಯವನ್ನು ಸಾಕಷ್ಟು ವರ್ಷದಿಂದ ಮುಚ್ಚಿಟ್ಟಿದ್ದ. ಹೂವಿ ಗೌರನ ಮಗಳು ಎಂದಾಕ್ಷಣಾ ಗೌತಮ್‌ಗೆ ಆದ ಸಂತಸ ಅಷ್ಟಿಷ್ಟಲ್ಲ. ಆದರೆ ಅದನ್ನು ಎಲ್ಲಿಯೂ ವ್ಯಕ್ತಪಡಿಸಲಿಲ್ಲ. ಮಗಳಿಗೆ ಪ್ರೀತಿ ಕೊಡಲು ಯತ್ನಿಸುತ್ತಿದ್ದಾನೆ. ತನ್ನ ಪ್ರೀತಿಯ ದೇವತೆಯ ಪೇಂಟಿಂಗ್ ಅನ್ನು ಮಾಡಿ, ಜೋಪಾನವಾಗಿ ಇಟ್ಟಿದ್ದಾನೆ. ಆದರೆ ಇಂದು ಗೌರಳ ಫೋಟೋ, ಮಂದ್ರಾ ಕಿತಾಪತಿಯಿಂದ ಹೂವಿ ಕೈ ಸೇರಿದೆ. ಹೂವಿ ಗೌರಳ ಫೋಟೋ ನೋಡಿದ್ದು ಗೌತಮ್‌ಗೂ ಗೊತ್ತಾಗಿದೆ. ಮುಂದೆ ಸುಳ್ಳು ಹೇಳಲು ಯಾವುದೇ ದಾರಿ ಇಲ್ಲ. ಮಂದ್ರಾ ಮುಂದೆ ಹೂವಿ ಇದು ನನ್ನ ಅಮ್ಮು ಫೋಟೋ ಎಂದು ಒಪ್ಪಿಕೊಳ್ಳುತ್ತಾಳೆ. ಗೌತಮ್‌ಗೆ ಸತ್ಯ ಹೇಳದೆ ವಿಧಿ ಇಲ್ಲ. ಹೂವಿಗೆ ನಿಜವಾದ ಅಪ್ಪನ ದರ್ಶನವಾಗುವ ಸಾಧ್ಯತೆ ಇದೆ.


Click it and Unblock the Notifications











