ಬೆಟ್ಟದ ಹೂ: ರಾಹುಲ್ ಬೆಚ್ಚಗಿನ ಅಪ್ಪುಗೆಯಲ್ಲಿದ್ದ ಹೂವಿಗೆ ಶಾಕ್ ಕೊಡ್ತಾಳಾ ಮಾಲಿನಿ?

By ಎಸ್ ಸುಮಂತ್

ಹೂವಿಗೂ ಕೂಡ ಮನಸ್ಸು ಅನ್ನೋದು ಇದೆಯಲ್ಲ. ಆ ಮನಸ್ಸಿನೊಳಗೂ ಆಗಾಗ ಭಾವನೆಗಳು ಚಿಗುರುತ್ತವೆ ಅಲ್ಲವಾ..? ಆದರೆ ಆ ಭಾವನೆಗಳು ವ್ಯಕ್ತಪಡಿಸಲಾಗದ ಸ್ಥಿತಿಯಲ್ಲಿ ಹೂವಿ ಇದ್ದಾಳೆ. ಸಮಯ ಸಿಕ್ಕಾಗ ಮುಕ್ತವಾಗಿ ಮನಸ್ಸಿನ ಭಾವವೆಲ್ಲಾ ಮುಖದ ಮೇಲೆ ಒಂದು ಸಣ್ಣ ನಾಚಿಕೆಯ ಮೂಲಕ ಹೊರಹೊಮ್ಮುತ್ತಲಿದೆ. ಅಂತಹದ್ದೊಂದು ಸನ್ನಿವೇಶ ಇಂದಿನ ಎಪಿಸೋಡಿನಲ್ಲಿ ಅನಾವರಣವಾಗಿದೆ.

ಮಾಲಿನಿ ತಾಯಿ ಮಂದ್ರಾಳ ಕಾಲು ಪೆಟ್ಟಾಗಿದ್ದ ಕಾರಣ, ಹೂವಿಯೇ ಬಲವಂತವಾಗಿ ಅಲ್ಲಿ ಉಳಿದುಕೊಂಡಿದ್ದಳು. ಮಂದ್ರಾಗೆ ಸಹಾಯ ಮಾಡಿದ್ದಳು. ಆ ಸೇವೆ ಮುಗಿದಿದ್ದು, ರಾಹುಲ್ ಮಾಲಿನಿ ಮನೆಗೆ ಬಂದು ಹೂವಿಯನ್ನು ಕರೆದುಕೊಂಡು ಹೊರಟಿದ್ದಾನೆ. ಮಂದ್ರಾ ಎಷ್ಟೇ ಅವಮಾನ ಮಾಡಿದರೂ ಹೂವಿ ಅದನ್ನು ಹೆಚ್ಚು ನೆನಪಿನಲ್ಲಿ ಇಟ್ಟುಕೊಂಡಿಲ್ಲ. ಮನಸ್ಸಿಗೆ ನೋವಾದಗೆಲ್ಲಾ ಕಣ್ಣೀರು ಹಾಕಿ, ಏನು ಹಾಗೆ ಇಲ್ಲವೇನೋ ಎಂಬಂತೆ ಸುಮ್ಮನಾಗಿ ಬಿಟ್ಟಿದ್ದಾಳೆ. ಆದರೆ ಇದೀಗ ಮನಸ್ಸಿನ ಭಾವವೆಲ್ಲಾ ಒಟ್ಟಾಗಿ ತಾಂಡವವಾಡೋದಕ್ಕೆ ಶುರುವಾಗಿದೆ.

ರಾಹುಲ್ ಸ್ಪರ್ಶದಿಂದ ಹೂವಿಗೆ ಮನೋಲ್ಲಾಸ

ರಾಹುಲ್ ಸ್ಪರ್ಶದಿಂದ ಹೂವಿಗೆ ಮನೋಲ್ಲಾಸ

ಕೆಟ್ಟ ಸಮಯವೋ, ಅನಿವಾರ್ಯತೆಯೋ, ಅಸಂಭವವೋ, ತಪ್ಪಿಸಿಕೊಳ್ಳಲಾಗದ ಪರಿಸ್ಥಿತಿಯೋ ಮತ್ತೊಂದೋ ಒಟ್ಟಾರೆ ರಾಹುಲ್ ಮತ್ತು ಹೂವಿಯ ಮದುವೆಯಂತು ಆಗಿದೆ. ಆ ಮದುವೆಯನ್ನು ರಾಹುಲ್ ಲೆಕ್ಕಕ್ಕೆ ಇಟ್ಟಿಲ್ಲವಾದರೂ ವಿಧಿಯ ಆಟವಂತು ಪರ್ಫೆಕ್ಟ್ ಆಗಿ ಕಾಣುತ್ತಿದೆ. ಯಾಕೆಂದರೆ ಹೂವಿ ಎಷ್ಟೇ ದೂರವಾಗಬೇಕೆಂದರು ರಾಹುಲ್ ಜೊತೆಗೂಡುವಂತ ಪರಿಸ್ಥಿತಿ ನಿರ್ಮಾಣವಾಗುತ್ತಲೆ ಇದೆ. ಈಗ ಇಬ್ಬರು ವಿಧಿಯ ದನಿಗೆ ಓಗೊಟ್ಟು ಸುಮ್ಮನಾಗಿದ್ದಾರೆ. ರಾಹುಲ್ ಕೂಡ ಮೊದಲಿನಂತೆ ಇಲ್ಲ. ಹೂವಿಯನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದಾನೆ. ಆದರೆ, ಹೂವಿಯ ಮನಸ್ಸಲ್ಲಿ ಗಂಡನೆಂಬ ಹೊಸ ಭಾವನೆ ಬೆಳೆಯುತ್ತಿದೆ. ಆ ಭಾವವೇ ರಾಹುಲ್‌ನನ್ನು ತಬ್ಬಿಕೊಳ್ಳುವಂತೆ ಮಾಡಿದೆ. ಆ ಸ್ಪರ್ಶದಲ್ಲಿ ಹೂವಿಗೆ ಮನಸ್ಸು ರೋಮಾಂಚನವಾಗಿದೆ.

ಹೂವಿಯನ್ನು ಒಬ್ಬ ಫ್ರೆಂಡ್ ಆಗಿ ನೋಡಬಹುದು ಅಷ್ಟೆ

ಹೂವಿಯನ್ನು ಒಬ್ಬ ಫ್ರೆಂಡ್ ಆಗಿ ನೋಡಬಹುದು ಅಷ್ಟೆ

ಹೂವಿಗೆ ಏನೇ ಭಾವನೆ ಬಂದರೂ ಅದು ಆಕೆಯದ್ದು ಅಷ್ಟೇ. ಆದರೆ ರಾಹುಲ್, ಮಾಲಿನಿ ಬಿಟ್ಟರೆ ಹೂವಿಯನ್ನು ಹೆಂಡತಿಯ ಭಾವನೆಯಿಂದ ನೋಡುತ್ತಲೆ ಇಲ್ಲ. ರಾಹುಲ್‌ಗೆ ಕೂಡ ಆಗಾಗ ಮಾಡಿದ ತಪ್ಪಿನ ಅರಿವಾಗುತ್ತೆ. ಆದರೆ ಅದಕ್ಕೆ ನ್ಯಾಯ ಕೊಡಲು ಆತನಿಂದ ಆಗುತ್ತಿಲ್ಲ. ಹೂವಿಯ ಬಗ್ಗೆ ಕಾಳಜಿಯನ್ನಷ್ಟೇ ತೋರುತ್ತಿದ್ದಾನೆ. ಇದರಿಂದಾಗಿಯೇ ಹೂವಿ ತಬ್ಬಿಕೊಂಡರು ಯಾವುದೇ ರೀತಿಯ ಬೇರೆ ಭಾವ ರಾಹುಲ್ ಮುಖದಲ್ಲಿ ಕಾಣಲಿಲ್ಲ. ಗಾಡಿ ಓಡಿಸುವುದರಲ್ಲಿ ಬದಲಾವಣೆಯಾಗಲಿಲ್ಲ.

ಹೂವಿ ಆಸೆಗೆ ಜೊತೆಯಾದ ರಾಹುಲ್

ಹೂವಿ ಆಸೆಗೆ ಜೊತೆಯಾದ ರಾಹುಲ್

ಹೂವಿಗೆ ಬೈಕ್ ಮೇಲೆಲ್ಲ ಕುಳಿತು ಅಭ್ಯಾಸವೇ ಇಲ್ಲ. ಹೀಗಾಗಿಯೇ ರಾಹುಲ್ ಜೊತೆ ಬೈಕ್‌ನಲ್ಲಿ ಕುಳಿತಾಗ ಹೆದರಿದ್ದಾಳೆ. ಸ್ವಲ್ಪ ಹಂಪ್ಸ್ ದಾಟುವಾಗ ರಾಹುಲ್‌ನನ್ನು ಬಿಗಿದಪ್ಪುತ್ತಿದ್ದಾಳೆ. ಇದೇ ಸಮಯದಲ್ಲಿ ಇಬ್ಬರನ್ನು ರೊಮ್ಯಾಂಟಿಕ್ ಮೂಡಿಗೆ ತರುವ ಕೆಲಸ ಮಾಡಿದ್ದಾನೆ ಮಳೆರಾಯ. ಮಳೆರಾಯನ ಹನಿ ಇಬ್ಬರನ್ನು ತಂಪು ಮಾಡಿದೆ. ಹೂವಿ ಮಳೆಯ ಹನಿಯಲ್ಲಿ ನಿಂತು ನೆನೆಯುತ್ತಿದ್ದರೆ. ರಾಹುಲ್ ಕೂಡ ಆಕೆಗೆ ಸಾಥ್ ನೀಡಿದ್ದಾನೆ. ರಸ್ತೆ ಮಧ್ಯೆ ನಿಂತು ಡ್ಯಾನ್ಸ್ ಮಾಡುವ ಹೂವಿಗೆ ರಾಹುಲ್ ಕೈ ಜೊತೆಯಾಗಿದೆ. ಮನಸ್ಸಾರೆ ಕುಣಿದು ಕುಪ್ಪಳಿಸಿದ್ದಾಳೆ. ಹೂವಿ ಸಣ್ಣ ಸಣ್ಣದರಲ್ಲೇ ಖುಷಿ ಪಡುವ ಹುಡುಗಿ ಎಂಬುದು ಇದರಿಂದಲೂ ಮತ್ತೆ ಪ್ರೂವ್ ಆಗಿದೆ.

ಹೂವಿ ಕನಸಿಗೆ ಕಲ್ಲು ಹಾಕುತ್ತಾಳಾ ಮಾಲಿನಿ?

ಹೂವಿ ಕನಸಿಗೆ ಕಲ್ಲು ಹಾಕುತ್ತಾಳಾ ಮಾಲಿನಿ?

ಮಂದ್ರಾಗೆ ಕೃತಜ್ಞತೆ ಇಲ್ಲ ಎಂಬುದನ್ನು ಬಾಯಿಬಿಟ್ಟು ಹೇಳುವ ಹಾಗಿಲ್ಲ. ಹೂವಿ ಕಂಡರೆ ಕೆಂಡಕಾರುತ್ತಾಳೆ. ಇನ್ನು ಹೂವಿ ಮಾಡಿದ ಸೇವೆಯನ್ನೆಲ್ಲಿ ನೆನೆಯುತ್ತಾಳೆ. ಮಗಳ ಸಂಸಾರ ಎಂದು ನೋಡದೆ ಬೀಗರ ಮನೆಯವರನ್ನೇ ಅವಮಾನಿಸುತ್ತಾ ಇರುತ್ತಾಳೆ. ಇದೀಗ ಹೂವಿ ಮತ್ತು ರಾಹುಲ್ ಬೈಕ್‌ನಲ್ಲಿ ಒಟ್ಟಿಗೆ ಹೋಗಿದ್ದನ್ನು ವಿಡಿಯೋ ಮಾಡಿ ಮಾಲಿನಿಗೆ ಕಳುಹಿಸಿದ್ದಾಳೆ. ಇದನ್ನು ನೋಡಿದ ಮಾಲಿನಿಗೆ ಸಹಜವಾಗಿಯೇ ಬೇಸರವಾಗಿದೆ. ಇದರ ಜೊತೆಗೆ ರಸ್ತೆ ಮಧ್ಯೆ ಇಬ್ಬರು ಮಳೆಯಲಿ ಜೊತೆಯಲಿ ಕೈ ಕೈ ಹಿಡಿದುಕೊಂಡು ಕುಣಿಯುತ್ತಿರುವುದು ಕಂಡು ಮಾಲಿನಿ ಕುಪಿತಳಾಗಿದ್ದಾಳೆ.

More from Filmibeat

English summary
Star Suvarna Serial Bettada Hoo Written Update On June 6th Episode. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X