Bettada Hoo: ಮೇಕಿಂಗ್ ವಿಡಿಯೋದಲ್ಲಿ ʻಬೆಟ್ಟದ ಹೂʼ ಮದುವೆ ಸಂಭ್ರಮದ ಝಲಕ್

By ಎಸ್ ಸುಮಂತ್

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬರುತ್ತಿರುವ 'ಬೆಟ್ಟದ ಹೂ' ಧಾರಾವಾಹಿ ಸದ್ಯ ಎಲ್ಲರ ಅಚ್ಚುಮೆಚ್ಚು ಎನಿಸಿಕೊಂಡಿದೆ. ಆದರೆ ಅದ್ಯಾಕೋ ಇತ್ತೀಚೆಗೆ ಸಿಕ್ಕಾಪಟ್ಟೆ ಮನಸ್ಸಿಗೆ ಬೇಸರ ಎನಿಸುವಂತ ದೃಶ್ಯಗಳು ಕಾಡುತ್ತಿವೆ. ಯಾವುದು ಆಗಬಾರದು ಅಂತ ಪ್ರೇಕ್ಷಕರು ಅಂದುಕೊಳ್ಳುತ್ತಿದ್ದಾರೋ ಅದೇ ಘಟನೆ ನಡೆಯುತ್ತಿದೆ. ರಾಹುಲ್ ಸಂಪೂರ್ಣವಾಗಿ ಬದಲಾಗಿದ್ದಾನೆ. ಹೂವಿ ಬಿಟ್ಟು ಮಾಲಿನಿಯನ್ನು ಮದುವೆಯಾಗುತ್ತಿದ್ದಾನೆ. ಇದನ್ನು ತಡೆಯೋದಕ್ಕೆ ಹೂವಿಯಿಂದಲೂ ಸಾಧ್ಯವಾಗುತ್ತಿಲ್ಲ.

ಬರೀ ದುಃಖವನ್ನು ನುಂಗಿಕೊಂಡು ನಗು ನಗುತ್ತಾ ಓಡಾಡುತ್ತಿದ್ದಾಳೆ. ಇದು ಪ್ರೇಕ್ಷಕರಿಗೆ ಖಂಡಿತ ಬೇಕಾಗಿಲ್ಲ. ಮನಸ್ಸಲ್ಲೇ ಹಿಡಿ ಶಾಪ ಹಾಕುತ್ತಾ ಆ ಸಂಕಷ್ಟವನ್ನೆಲ್ಲಾ ನೋಡಿಕೊಂಡು ಕುಳಿತಿದ್ದಾರೆ. ಹೂವಿಗೆ ಇಂದಾದರೂ ನ್ಯಾಯ ಸಿಗುತ್ತಾ ಅನ್ನುವ ಭರವಸೆಯಲ್ಲಿ ಪ್ರತಿ ದಿನ ಟಿವಿ ಮುಂದೆ ಕುಳಿತು 'ಬೆಟ್ಟದ ಹೂ' ನೋಡುತ್ತಿದ್ದಾರೆ.

ರಾಹುಲ್-ಮಾಲಿನಿ ಮದುವೆ ಸಂಭ್ರಮ

ರಾಹುಲ್-ಮಾಲಿನಿ ಮದುವೆ ಸಂಭ್ರಮ

ಈಗಾಗಲೇ ಮದುವೆ ನಿಶ್ಚಯವಾಗಿ ರಾಹುಲ್ ಮತ್ತು ಮಾಲಿನಿ ಮಂಟಪದವರೆಗೂ ಬಂದು ನಿಂತಿದ್ದಾರೆ. ಮದುವೆಯ ತಯಾರಿ ಮಾತ್ರ ಸಿಕ್ಕಾಪಟ್ಟೆ ಸೂಪರ್ ಆಗಿದೆ. ಇದೀಗ ಸ್ಟಾರ್ ಸುವರ್ಣ ವಾಹಿನಿಯ ಅಧಿಕೃತ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಈ ಮದುವೆ ಮಂಟಪದ ಮೇಕಿಂಗ್ ವಿಡಿಯೋ ರಿಲೀಸ್ ಮಾಡಿದ್ದಾರೆ. ವೈಭವದ ಮದುವೆಗೆ ಅದ್ಧೂರಿ ಮಂಟಪ ರೆಡಿಯಾಗಿದೆ. ರಾಹುಲ್ ಮತ್ತು ಮಾಲಿನಿ ಮಧು ಮಕ್ಕಳು ಫುಲ್ ಮಿಂಚುತ್ತಿದ್ದಾರೆ.

ಹೇಗಿದೆ ಮದುವೆ ಮಂಟಪ?

ಹೇಗಿದೆ ಮದುವೆ ಮಂಟಪ?

ನಿಮಗೆಲ್ಲಾ ಗೊತ್ತಿರುವ ಹಾಗೆ ಇತ್ತೀಚೆಗೆ ಧಾರಾವಾಹಿಗಳಲ್ಲಿ ಮದುವೆ ಕಾರ್ಯಗಳನ್ನೆಲ್ಲಾ ಬಹಳ ಅದ್ದೂರಿಯಾಗಿ ಮಾಡುತ್ತಾರೆ. ಪ್ರತಿಯೊಂದು ಶಾಸ್ತ್ರಗಳನ್ನು ಅಷ್ಟೇ ಅಚ್ಚುಕಟ್ಟಾಗಿ ಮಾಡುತ್ತಾರೆ. ಆದರೆ ಅದರ ಹಿಂದಿನ ರಿಸ್ಕ್ ಎಷ್ಟಿರುತ್ತೆ ಅನ್ನೋದು ನಮಗೆ ತೆರೆ ಮೇಲೆ ಗೊತ್ತಾಗುವುದಿಲ್ಲ. ಸ್ಥಳದಲ್ಲಿ ನಿಂತು ನೋಡಿದಾಗ ಎಲ್ಲವೂ ಗೊತ್ತಾಗುತ್ತೆ. ಆದರೆ ಆ ಅವಕಾಶ ಪಡೆಯೋದು ಅಷ್ಟು ಸುಲಭವೂ ಅಲ್ಲ, ಸಮಯವೂ ಇರುವುದಿಲ್ಲ. ಹಾಗಾದ್ರೆ ಅದು ಗೊತ್ತಾಗೋದಾದರೂ ಹೇಗೆ ಅನ್ನೋ ಪ್ರಶ್ನೆ ಮೂಡಿದಾಗ ಅದರ ಮೇಕಿಂಗ್ ವಿಡಿಯೋ ಈ ಎಲ್ಲಾ ಕಷ್ಟಗಳನ್ನು ತಿಳಿಸಿಕೊಡುತ್ತದೆ.

ತೆರೆ ಹಿಂದಿನ ಕಸರತ್ತು ಇಲ್ಲಿದೆ

ರಾಹುಲ್ ಮತ್ತು ಮಾಲಿನಿ ಮದುವೆಗೆ ದೊಡ್ಡ ಜಾಗದಲ್ಲಿ ಮಂಟಪ ರೆಡಿಯಾಗಿದೆ. ಸಂಪೂರ್ಣವಾಗಿ ಕಲರ್ ಕಲರ್ ಹೂಗಳಿಂದ ಮಂಟಪವನ್ನು ಅಲಂಕಾರ ಮಾಡಲಾಗಿದೆ. ಸ್ವಾಗತದ ಬೋರ್ಡ್, ಕುಟುಂಬಸ್ಥರ ಬೋರ್ಡ್, ಧಾರೆಯ ಮಂಟಪ, ರಿಸೆಪ್ಶನ್ ಜಾಗದ ಅಲಂಕಾರ ಅಬ್ಬ ಒಂದಾ - ಎರಡಾ ಎಲ್ಲವೂ ಬಹಳ ಅದ್ಧೂರಿ ಎನಿಸಿದೆ. ನೋಡುವುದಕ್ಕಂತು ಎರಡು ಕಣ್ಣುಗಳು ಸಾಲುವುದಿಲ್ಲ. ಅಷ್ಟು ವೈಭವ, ಅದ್ಧೂರಿತನ ಕಂಡಿದೆ.

ಬಿಸಿಲಲ್ಲೂ ಮದುವೆ ಸಂಭ್ರಮ

ಬಿಸಿಲಲ್ಲೂ ಮದುವೆ ಸಂಭ್ರಮ

ಕಳೆದ ಕೆಲವು ದಿನದಿಂದಲೂ ʻಬೆಟ್ಟದ ಹೂʼ ಧಾರಾವಾಹಿಯಲ್ಲಿ ಮದುವೆಯ ಕೆಲಸಗಳು ನಡೆಯುತ್ತಿವೆ. ಎಲ್ಲರೂ ಮದುವೆಗೆ ರಿಚ್ ಆಗಿ ರೆಡಿಯಾಗಿದ್ದಾರೆ. ರೇಷ್ಮೆಯಂತಹ ಸೀರೆ, ದೊಡ್ಡ ದೊಡ್ಡ ಒಡವೆಗಳನ್ನು ಹಾಕಿಕೊಂಡು ಅತ್ತಿಂದಿತ್ತ, ಇತ್ತಿಂದತ್ತ ಓಡಾಡುತ್ತಿದ್ದಾರೆ. ಆದರೆ ಇಲ್ಲಿ ಗಮನಿಸಬೇಕಾದದ್ದು ಈಗ ಬೇಸಿಗೆ ಕಾಲ. ಬೇಸಿಗೆಯಲ್ಲಿ ಅರ್ಧ ತಾಸು ನಿಲ್ಲೋದಕ್ಕೂ ಕಷ್ಟ ಆದರೆ, ದಿನಗಟ್ಟಲೇ ಮೇಕಪ್‌ನಲ್ಲಿ ನಿಂತು ಮದುವೆಯ ಸಂಭ್ರಮವನ್ನು ಕಳೆಗಟ್ಟುವಂತೆ ಮಾಡಿದ್ದಾರೆ. ಮೇಕಿಂಗ್ ವಿಡಿಯೋದಲ್ಲಿ ತೆರೆ ಹಿಂದೆ ಎಷ್ಟೆಲ್ಲಾ ಕಷ್ಟಗಳು ನಡೆದಿದೆ ಅನ್ನೋದು ಕಾಣುತ್ತಿದೆ. ಎಷ್ಟೇ ಸಮಸ್ಯೆಯಾದರೂ, ಸುಸ್ತಾದರೂ ನಟ-ನಟಿಮಣಿಯರು ಮಾತ್ರ ತಮ್ಮ ಆಯಾಸವನ್ನು ತೋರಿಸಿಲ್ಲ. ಆದರೆ ನೋಡಿದವರಿಗೆ ಅಷ್ಟೆಲ್ಲ ಅರೆಂಜ್ಮೆಂಟ್ ಮಾಡಿರುವ ರೀತಿ, ಶಾಸ್ತ್ರಗಳನ್ನು ಚಾಚು ತಪ್ಪದೆರ ಮಾಡುತ್ತಿರುವ ರೀತಿ ಖುಷಿ ಕೊಟ್ಟಿದೆ.

More from Filmibeat

English summary
Star Suvarna serial Bettada Hoo Written Update on making videos. Here are the details about marriage arrangements.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X