Bettada Hoo Serial: ರಾಹುಲ್ ಏನೇ ಮಾಡೋದಕ್ಕೆ ಹೊರಟ್ರು ವಿಧಿ ಬಿಡ್ತಿಲ್ಲ: ಅರಿಶಿನ ಶಾಸ್ತ್ರದಲ್ಲಿ ಆಗಿದ್ದೇನು?
ವಿಧಿ ಆಟ ಅನ್ನೋದು ಇದೆ ಅಲ್ವಾ. ಆ ವಿಧಿ ಆಟವನ್ನ ಎಲ್ಲರೂ ನಂಬುತ್ತಾರೆ. ಮದುವೆ ಅನ್ನೋದು ಸ್ವರ್ಗದಲ್ಲೇ ನಿಶ್ಚಯ ಆಗಿರುತ್ತೆ. ಯಾರು ಯಾರನ್ನು ಮದುವೆ ಆಗಬೇಕು ಅನ್ನೋದು ಹಣೆಬರಹದಲ್ಲಿ ಮುದ್ರಿತವಾಗಿರುತ್ತೆ. ಇಷ್ಟವೋ ಕಷ್ಟವೋ ವಿಧಿಯ ನಿರ್ಧಾರವನ್ನು ಬದಲಿಸೋದಕ್ಕೆ ಆಗುತ್ತಾ.. ಇಷ್ಟೆಲ್ಲಾ ಹೇಳೋದಕ್ಕೆ ಇವತ್ತಿನ ಹೂವಿಯ ಪರಿಸ್ಥಿತಿ.
ಈ ಹೂವಿ ಯಾರು ಅಂದ್ಕೊಂಡಿದ್ದೀರಾ ಸ್ಟಾರ್ ಸುವರ್ಣದಲ್ಲಿ ಬರಲ್ವಾ ಬೆಟ್ಟದ ಹೂವು ಧಾರಾವಾಹಿ ಅದರ ಮೈನ್ ಪಿಲ್ಲರ್. ಆದರೆ, ಆಕೆಗೆ ಆಗುತ್ತಿರುವ ಅನ್ಯಾಯವನ್ನು ತಡೆಯೋದು ಯಾರು? ಸಿನಿಮಾದಲ್ಲಿ ಬಂದಂತೆ ಇಲ್ಲಿಯೂ ಹೀರೊ ಬಂದು ಕಾಪಾಡೋದಕ್ಕೆ ಆಗಲ್ಲ. ಯಾಕಂದ್ರೆ ಆ ಹೀರೊನೇ ಇಲ್ಲಿ ಅನ್ಯಾಯ ಮಾಡೋದಕ್ಕೆ ಹೊರಟಿರೋದು. ಏನ್ ಗುರು ಏನೇನೋ ಹೇಳಿ ಇಷ್ಟೊಂದು ಗೊಂದಲ ಮಾಡ್ತಾ ಇದ್ದಾರೆ ಅಂದುಕೊಂಡಿದ್ದೀರಾ? ಹೂವಿ ಕಂಡು ವೀಕ್ಷಕರ ಮನಸ್ಸಿಗೆ ಅಷ್ಟು ನೋವಾಗಿದೆ.
ಅರಿಶಿನ ಶಾಸ್ತ್ರದಲ್ಲಿ ಮಹಾ ಎಡವಟ್ಟು..!
'ಬೆಟ್ಟದ ಹೂ' ಧಾರಾವಾಹಿ ನೋಡುಗರಿಗೆ ಈಗಾಗಲೇ ಹೂವಿಯ ಪರಿಚಯ ಆಗಿರುತ್ತೆ. ಆಕೆಯ ಮುಗ್ಧತೆ, ಆಕೆಗಾಗುತ್ತಿರುವ ನೋವು ಎಲ್ಲವನ್ನು ಕಣ್ಣಾರೆ ಕಂಡು, ನೀವೂ ಕೂಡ ಮಮ್ಮಲ ಮರುಗಿರುತ್ತೀರಿ. ಆದರೆ ಈಗ ಆ ನೋವು ಹೆಚ್ಚಾಗುವ ಹಂತ ತಲುಪಿದೆ. ರಾಹುಲ್ ಇಷ್ಟು ದಿನ ಹೂವಿಗೆ ಕೊಡುತ್ತಿದ್ದ ನೋವು ದುಪ್ಪಟ್ಟಾಗುತ್ತಿದೆ.

ಪರಿಸ್ಥಿತಿಗೆ ಕಟ್ಟು ಬಿದ್ದು ಮದುವೆ ಏನೋ ಆದ. ಆದರೆ, ಆಕೆಗೂ ಒಂದು ಮನಸ್ಸಿದೆ ಅನ್ನೋದನ್ನು ರಾಹುಲ್ ಮರೆತು ಜೀವಿಸುತ್ತಿದ್ದಾನೆ, ನಡೆದುಕೊಳ್ಳುತ್ತಿದ್ದಾನೆ. ಇದು ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ. ಏನು ಆಗಬಾರದು ಅಂತ ಹೂವಿ ಹಿತೈಶಿಗಳು ಬಯಸಿದ್ರೋ ಈಗ ಅದೇ ಹಂತ ತಲುಪಿದೆ. ರಾಹುಲ್ ಮತ್ತು ಮಾಲಿನಿ ಮದುವೆ ಸಂಭ್ರಮ ಜೋರಾಗಿ ನಡೆಯುತ್ತಿದೆ. ಅರಿಶಿನ ಶಾಸ್ತ್ರದವರೆಗೂ ಬಂದು ನಿಂತಿದೆ.
ರಾಹುಲ್ ಮನಸ್ಸು ಗಲಿಬಿಲಿ ಆಗಿದ್ದೇಕೆ..?
ರಾಹುಲ್ ತಾನು ಪ್ರೀತಿಸಿದ್ದ ಮಾಲಿನಿಯನ್ನು ವರಿಸುವ ಸಮಯ ಹತ್ತಿರ ಬಂದಿದೆ. ಯಾವಾಗ ಮಾಲಿನಿಯನ್ನು ಮದುವೆಯಾಗ್ತೀನಿ ಅಂತ ಕಾಯುತ್ತಿರುವ ರಾಹುಲ್, ಇದೇ ವೇಳೆ ಹೂವಿಯನ್ನು ಮನೆಯಿಂದ ಹೊರಗೆ ಕಳುಹಿಸೋದಕ್ಕೂ ಸ್ಕೆಚ್ ಹಾಕುತ್ತಿದ್ದಾನೆ. ರಾಹುಲ್ ಏನೇ ಮಾಡಿದ್ರು, ಹೂವಿನೇ ನಿನ್ನ ಕೊನೆವರೆಗಿನ ಬಾಳ ಸಂಗಾತಿ ಅನ್ನೋದನ್ನು ವಿಧಿ ಆಗಾಗ ಪ್ರೂವ್ ಮಾಡ್ತಾ ಇದೆ.
ಅರಿಶಿನ ಶಾಸ್ತ್ರದಲ್ಲೂ ಅದು ಪ್ರೂವ್ ಆಗಿದೆ. ರಾಹುಲ್ ಅರಿಶಿನ ಶಾಸ್ತ್ರಕ್ಕೆ ಬಂದಿದ್ದಾನೆ. ಈ ವೇಳೆ ಮನೆಯವರೆಲ್ಲಾ ಸೇರಿ ಅರಿಶಿನ ಶಾಸ್ತ್ರ ಮಾಡಲು ತಯಾರಿ ನಡೆಸಿದ್ದಾರೆ. ಹೂವಿ ಇದೆಲ್ಲಾ ಸಂಭ್ರಮದಿಂದ ಸ್ವಲ್ಪವೇ ದೂರವೇ ನಿಂತಿದ್ದಾಳೆ. ಆಕೆಗೆ ಆಗುತ್ತಿರುವ ನೋವನ್ನು ಯಾರ ಬಳಿಯೂ ಹೇಳಿಕೊಳ್ಳೋದಕ್ಕೂ ಆಗ್ತಿಲ್ಲ. ನನಗೆ ತಾಳಿ ಕಟ್ಟಿದವ ಅಂತ ಹೇಳಿಕೊಳ್ಳೋದು ಅಷ್ಟು ಸುಲಭವಾಗಿಲ್ಲ.
ಆದರೆ, ಹೂವಿಯನ್ನು ರಾಹುಲ್ ಮನೆಯವರು ಕೆಲಸದಾಕೆ ಎಂದು ಯಾವತ್ತು ಟ್ರೀಟ್ ಮಾಡಿಲ್ಲ. ಹೀಗಾಗಿಯೇ ಶಾಸ್ತ್ರದಲ್ಲಿ ಭಾಗಿಯಾಗಲೂ ಮುಂದೆ ಎಳೆದು ತಂದಿದ್ದಾರೆ. ಇಲ್ಲೇ ವಿಧಿಯಾಟ ಪ್ರೂವ್ ಆಗಿದೆ.
ಹೂವಿಗೆ ಸಲ್ಲುತ್ತೆ ಮದುವೆ ಶಾಸ್ತ್ರಗಳು..!
ನಾವೂ ಮೊದಲೇ ಹೇಳಿದ್ವಲ್ಲ ವಿಧಿಯಾಟ ಅಂತ ಅದು ಮೊದಲ ಶಾಸ್ತ್ರದಿಂದಲೇ ಶುರುವಾಗಿದೆ. ಉಂಗುರ ಬದಲಾಯಿಸುವಾಗಲೂ ಆ ಉಂಗುರ ಹೂವಿ ಬಳಿಯೇ ಬಂದು ಬಿದ್ದಿತ್ತು ಈ ಘಟನೆ ನಿಮ್ಗೆಲ್ಲಾ ಮರೆಯೋದಕ್ಕೆ ಹೇಗೆ ಸಾಧ್ಯ ಅಲ್ವಾ. ಈಗ ಒಂದು ಹೆಜ್ಜೆ ಮುಂದೆ ಹೋಗಿದೆ. ಅರಿಶಿನ ಶಾಸ್ತ್ರದಲ್ಲಿ ಮೊದಲ ಅರಿಶಿನ ರಾಹುಲ್ ಹಾಗೂ ಹೂವಿಗೆ ಮೆತ್ತಿಕೊಂಡಿದೆ.
ಅರಿಶಿನ ತರುವಾಗ ಹೂವಿಯವಿಧಿಯಾನ್ನು ಮನೆಯವರು ಈ ಕಡೆ ಬಾ ಅಂತ ಬಲವಂತವಾಗಿ ಎಳೆಯುತ್ತಾರೆ. ಅರಿಶಿನದ ತಟ್ಟೆ ಮೇಲಿಂದ ಚೆಲ್ಲುತ್ತೆ. ರಾಹುಲ್ ಹಾಗೂ ಹೂವಿ ಮೈಮೇಲೆಲ್ಲಾ ಅರಿಶಿಣ. ಅರೆ ಕ್ಷಣ ರಾಹುಲ್‌ಗೆ ಹಳೆಯದೆಲ್ಲಾ ನೆನಪಾಗುತ್ತೆ. ರಾಹುಲ್ ಕಣ್ಣ ಮುಂದೆ ತಾಳಿ ಕಟ್ಟಿದ ಘಟನೆ, ಕುಂಕುಮವಿಟ್ಟ ಸನ್ನಿವೇಶವೆಲ್ಲಾ ಕಣ್ಣೆದುರು ಬರುತ್ತೆ. ಈ ಘಟನೆಯಿಂದ ಪ್ರೇಕ್ಷಕರ ಮನಸ್ಸಿಗೆ ತಂಪೆರೆದಂತೆ ಆಗಿದ್ದಂತು ಸುಳ್ಳಲ್ಲ. ರಾಹುಲ್ ಬದಲಾದರೇ ಸಾಕಪ್ಪ ಅಂತ ಕಾಯ್ತಿರೋರಿಗೆ ಮಾತ್ರ ಈ ಎಪಿಸೋಡ್ ಮಜಾ ಅನ್ನಿಸಿದೆ.


Click it and Unblock the Notifications











