Bettada Hoo Serial : ತನ್ನ ಗಂಡನನ್ನು ಬಿಟ್ಟು ಕೊಡ್ತಾಳಾ ಹೂವಿ?
ಹೆಣ್ಣು ಅದೆಷ್ಟು ಸೋಲುವುದಕ್ಕೆ ಸಾಧ್ಯ? ಆಕೆಯ ಅಸಹಾಯಕತೆ ಎಲ್ಲಿಯವರೆಗೆ ಒಂದೇ ರೀತಿ ಮುಂದುವರೆಯೋದಕ್ಕೆ ಸಾಧ್ಯ..? ಒಂದಲ್ಲ ಒಂದು ದಿನ ತನ್ನ ತಾಳ್ಮೆಯ ಕಟ್ಟೆ ಒಡೆಯದೆ ಇರದು. ಅಂತಹದ್ದೊಂದು ಸ್ಥಿತಿ ಬೇಗ ನಿರ್ಮಾಣವಾಗಲಿ ಅನ್ನೋದೆ ಹೂವಿ ಹಿತೈಷಿಗಳ ಹಾರೈಕೆಯಾಗಿದೆ.
ಈಗಾಗಲೇ ನಿಮಗೆ ನಾವೇ ಬೆಟ್ಟದ ಹೂ ಧಾರಾವಾಹಿಯ ಬಗ್ಗೆ ಸಾಕಷ್ಟು ಅಪ್ಡೇಟ್ಸ್ ಅನ್ನು ಕೊಟ್ಟಿದ್ದೇವೆ. ಹೂವಿಯ ಸ್ಥಿತಿ ಕಂಡು ಪ್ರೇಕ್ಷಕರು ಮರುಗುತ್ತಿದ್ದಾರೆ. ಆದರೆ ಕಲ್ಯಾಣ ಮಂಟಪದಲ್ಲಿ ಖಂಡಿತ ಹೂವಿಯ ಬದುಕಿಗೆ ಒಂದು ತಿರುವು ಸಿಕ್ಕಿಯೇ ಸಿಗುತ್ತೆ ಅನ್ನೋ ಭರವಸೆ ಪ್ರೇಕ್ಷಕರ ಮನಸ್ಸಲ್ಲಂತೂ ಇದ್ದೆ ಇದೆ.

ಹೂವಿ ಮನೆ ಬಿಟ್ಟು ಹೋಗ್ತಾಳಾ?
ಹೂವಿಯನ್ನು ಅನಿವಾರ್ಯತೆಯ ಕಾರಣಗಳಿಂದ ರಾಹುಲ್ ಮದುವೆಯಾಗಿದ್ದು. ಏನೇ ಆದರೂ ಆಕೆಯನ್ನ ಊರಿನವರೆಲ್ಲಾ ಸೇರಿ ಗಂಡನ ಮನೆಗೆ ಕಳುಹಿಸಿಕೊಡುವಂತೆ ಶಾಸ್ತ್ರ - ಸಂಪ್ರದಾಯಗಳನ್ನು ಆಚರಿಸಿ ರಾಹುಲ್ ಜೊತೆಗೆ ಕಳುಹಿಸಿಕೊಟ್ಟರು. ರಾಹುಲ್ ಜೊತೆ ಮಗಳು ಸಂಸಾರ ಮಾಡುತ್ತಿದ್ದಾಳೆ ಅನ್ನೋದು ಅಲ್ಲಿ ಊರಿನವರ ಭರವಸೆ. ಆದರೆ ಇಲ್ಲಿ ನಡೆಯುತ್ತಿರುವುದು, ರಾಹುಲ್ ನಡೆದುಕೊಳ್ಳುತ್ತಿರುವ ರೀತಿಯೇ ಬೇರೆ ಇದೆ. ಹೂವಿಯನ್ನು ಅಕ್ಷರಶಃ ಕೆಲಸದವಳಂತೆ ಕಾಣುವ ರಾಹುಲ್, ಮದುವೆ ಮುಗಿದ ಕೂಡಲೇ ಮನೆಯಿಂದ ಹೊರಡಲು ಹೇಳಿದ್ದಾನೆ. ಅದಕ್ಕೆ ಹೂವಿ ಕೂಡ ಆಯ್ತು ಎಂದಿದ್ದಾಳೆ.

ಹೂವಿ ಮೇಲೆ ಕನಿಕರ ಇನ್ನೂ ಬಂದಿಲ್ಲ
ಹೂವಿಯನ್ನು ರಾಹುಲ್ ಪ್ರೀತಿಸಿಲ್ಲ ಸರಿ. ಆದರೆ ಮದುವೆಯಾಗಿದ್ದಾನೆ ಅಲ್ವಾ. ಆಕೆ ಎಷ್ಟು ಮುಗ್ಧೆ, ಆಕೆಯ ಊರಿನಲ್ಲಿ ಒಮ್ಮೆ ಮದುವೆಯಾದರೆ ಏನೆಲ್ಲಾ ನಿರ್ಬಂಧಗಳಿದ್ದಾವೆ ಅನ್ನೋದು ರಾಹುಲ್ ಅರಿವಿಗಿದೆ. ಜೊತೆಗೆ ಹೂವಿಯನ್ನು ಇಲ್ಲಿಂದ ಕಳುಹಿಸಿದರೆ ಆಕೆ ಎಲ್ಲಿಗೆ ಹೋಗುತ್ತಾಳೆ ಅನ್ನೋದು ಸ್ವಲ್ಪ ಯೋಚಿಸಬೇಕು ಅಲ್ಲವಾ..? ಇಷ್ಟೆಲ್ಲಾ ಪ್ರಶ್ನೆಗಳು ಪ್ರೇಕ್ಷಕರ ಮೆದುಳಿನಲ್ಲಿ ಅತ್ತಿಂದಿತ್ತ- ಇತ್ತಿದತ್ತ ಓಡಾಡುತ್ತಿವೆ. ಆದರೆ, ರಾಹುಲ್‌ಗೆ ಮಾತ್ರ ಇದು ಅರ್ಥವೇ ಆಗುತ್ತಿಲ್ಲ. ಕೇವಲ ಆತನ ಸ್ವಾರ್ಥವಷ್ಟೇ ಇಲ್ಲಿ ಆತನಿಗೆ ಮುಖ್ಯವಾಗಿದೆ. ಹೂವಿ ಎಷ್ಟು ಬೇಗ ಮನೆಯಿಂದ ಹೊರಡುತ್ತಾಳೋ ಅಂತ ಕಾಯುತ್ತಿದ್ದಾನೆ.

ಪತಿಯ ಮತ್ತೊಂದು ಮದುವೆ ಸಿದ್ಧತೆ
ರಾಹುಲ್ ಈಗಾಗಲೇ ತನ್ನನ್ನು ಮದುವೆಯಾಗಿದ್ದಾನೆ ಅಂತ ಗೊತ್ತು. ಆದರೆ ಅದನ್ನ ಯಾರ ಮುಂದೆಯೂ ಹೇಳಿಕೊಳ್ಳಲು ಧೈರ್ಯವೂ ಇಲ್ಲ. ಅಧಿಕಾರವೂ ಇಲ್ಲ ಎಂಬಂತ ಸ್ಥಿತಿಯಲ್ಲಿ ಹೂವಿ ಇದ್ದಾಳೆ. ರಾಹುಲ್ ಈ ಎಲ್ಲಾ ಸತ್ಯಗಳಿಗೂ ಲಾಕ್ ಹಾಕಿದ್ದಾನೆ. ಆದರೆ ವಿಧಿಯಿಲ್ಲದೆ ಗಂಡನ ಮತ್ತೊಂದು ಮದುವೆಗೆ ಹೂವಿಯೇ ಓಡಾಡುತ್ತಿದ್ದಾಳೆ, ಮದುವೆ ಶಾಸ್ತ್ರದಲ್ಲಿ ಭಾಗಿಯಾಗುತ್ತಿದ್ದಾಳೆ. ಈ ಮಧ್ಯೆ ಅದೆಷ್ಟೋ ಬಾರಿ ಹೂವಿಗೂ ಕಣ್ಣೀರು ಕಾಡಿದೆ. ಯಾರ ಮುಂದೆಯೂ ತೋರಿಸಿಕೊಳ್ಳದೆ ಒಳಗೊಳಗೆ ಮರುಗಿದ್ದಾಳೆ.

ಹೂವಿ ಅಸಹಾಯಕತೆಗೆ ಕರಗುತ್ತಾನಾ ರಾಹುಲ್?
ಆಕೆಗೂ ಮನಸ್ಸಿನ ನೋವು ತುಂಬಿದೆ. ಮನಸ್ಸಲ್ಲಿ ನನ್ನ ಗಂಡ ಬೇರೆಯವರ ಪಾಲಾಗುತ್ತಿದ್ದಾನೆ ಎಂಬ ನೋವಿದೆ. ಆದರೆ, ಆ ನೋವನ್ನು ಕೇಳೋದಕ್ಕೆ ಮಾತ್ರ ಅಲ್ಲಿ ಯಾರು ಇಲ್ಲ. ಬೇರೆ ಯಾರಾದ್ರೂ ಯಾಕೆ ತನ್ನ ಗಂಡನೇ ಇಲ್ಲ. ನೀನು ಆದಷ್ಟು ಬೇಗ ಮನೆ ಬಿಟ್ಟು ಹೊರಡು ಎಂದಾಗ ನೀಡಿರುವ ಜವಾಬ್ದಾರಿಯನ್ನು ನಿಭಾಯಿಸಿಯೇ ಹೊರಡುತ್ತೇನೆ ಎಂದಿದ್ದಾಳೆ. ಆಗ ಈ ಜವಾಬ್ದಾರಿ ನಿಂಗೆ ಬೇಕಿತ್ತಾ? ಎಂದಾಗ ಬೇಡ ಅಂದರೂ ನನ್ನ ಅನುಮತಿ ಕೇಳುವವರು ಯಾರು ಎನ್ನುತ್ತಾಳೆ. ಈ ಸಾಲು ಕೇಳುಗರ ಮನಸ್ಸಿಗೆ ಘಾಸಿ ಮಾಡದೆ ಇರದು. ಇದಕ್ಕಿಂತ ಹೆಚ್ಚು ನೋವು ನೀಡುವ ಸಾಲು ಎಂದರೆ ನನ್ನ ಗಂಡನ್ನು ಬೇರೆಯವರ ಕೈಗೆ ಇಟ್ಟು ಹೊರಟಿದ್ದೇನಲ್ಲಾ ಎನ್ನುತ್ತಾಳೆ. ಇಷ್ಟೆಲ್ಲಾ ಕೇಳಿದ ಮೇಲೂ ರಾಹುಲ್ ಕರಗುತ್ತಿಲ್ಲವಲ್ಲ ಅನ್ನೋದೆ ಪ್ರೇಕ್ಷಕರ ಕೋಪಕ್ಕೆ ಕಾರಣವಾಗಿದೆ. ಈ ಮಾತು ಹೇಳಿ ಓಡಿ ಹೋದ ಹೂವಿ ಅಳುತ್ತಾ, ದೇವರ ಬಳಿ ತನ್ನ ಸಂಕಟ ಹೇಳಿಕೊಳ್ಳುತ್ತಿದ್ದಾಳೆ.


Click it and Unblock the Notifications











