ಬೆಟ್ಟದ ಹೂ: ಮಂದಾರ ಮಾತಿನಿಂದ ಹೂವಿ ಮೇಲೆ ಅನುಮಾನ ಶುರು ಮಾಡಿದಳಾ ಮಾಲಿನಿ?

By ಎಸ್ ಸುಮಂತ್

ಹಾಗೇ ನೋಡಿದರೆ ಮಾಲಿನಿಗೆ ಈಗ ಸಿಗುತ್ತಿರುವ ಸ್ಥಾನಮಾನ ಹೂವಿ ಮುಗ್ಧತೆಯಿಂದ ಸಿಕ್ಕಿರುವ ಉಡುಗೊರೆಯಾಗಿದೆ. ತನಗೇನೆ ಕಷ್ಟ ಬಂದರೂ ಯಾರಿಗೂ ಸತ್ಯವನ್ನು ಹೇಳದೆ ಹೂವಿ ಮುಚ್ಚಿಡುತ್ತಿದ್ದಾಳೆ. ರಾಹುಲ್‌ಗೆ ಸದ್ಯ ಕಣ್ಣು ತೆರೆದಿದೆ. ಹೂವಿಯನ್ನು ಅರ್ಥ ಮಾಡಿಕೊಳ್ಳುತ್ತಿದ್ದಾನೆ. ಆಕೆಯ ಮುಗ್ಧತೆ, ಆಕೆಯ ಪ್ರೀತಿಗೆ ತಲೆಬಾಗಿದ್ದಾನೆ. ಮೊದಲಿನಂತೆ ರೇಗುವುದಿಲ್ಲ, ಬೈಯ್ಯುವುದು ಇಲ್ಲ. ನಗುತ್ತಾನೆ, ನಗಿಸುತ್ತಿದ್ದಾನೆ. ಆದರೆ ಗಂಡನಾಗಿ ಹೆಂಡತಿ ಸ್ಥಾನ ಕೊಡಲು ಸಾಧ್ಯವಿಲ್ಲ ಎಂಬ ಸ್ಪಷ್ಟತೆಯನ್ನು ನೀಡಿದ್ದಾನೆ. ಇದರಿಂದ ಹೂವಿಗೇನು ಬೇಸರ ಇಲ್ಲ. ಅಷ್ಟೇ ಸಲೀಸಾಗಿ ಹೂವಿ ಕೂಡ ಸ್ಪಷ್ಟನೆ ನೀಡಿದ್ದಾಳೆ. ಕೊನೆ ತನಕ ನೀವೆ ನನ್ನ ಗಂಡ ಎಂದಿದ್ದಾಳೆ

ಹೂವಿ ತನ್ನ ಪ್ರಾಣ ಒತ್ತೆ ಇಟ್ಟು ತನ್ನನ್ನು ಕಾಪಾಡಿದ್ದಕ್ಕೆ ಆಕೆಯನ್ನು ಕಣ್ಣಲ್ಲಿ ಕಣ್ಣಿಟ್ಟು, ಆರೈಕೆ ಮಾಡಿ ಮನೆಗೆ ಕರೆದುಕೊಂಡು ಬಂದಿದ್ದಾಳೆ. ಹೂವಿ ಮನೆಗೆಲಸದವಳೇ ಆದರೂ ಮನೆಯವರು ಆಕೆಗೆ ವಿಶೇಷ ಪ್ರೀತಿ ತೋರಿಸುತ್ತಾರೆ. ವಿಶೇಷ ಸ್ವಾಗತ ಮಾಡಿದ್ದಾರೆ. ಎಷ್ಟೇ ಆಗಲಿ ರಾಹುಲ್ ಹೇಳುವಂತೆ ಆಕೆ ಹಳ್ಳಿ ಗಮಾಡ್ ಅಲ್ಲವೇ. ಅದಕ್ಕೆ ಮನೆಯನ್ನೆಲ್ಲಾ ಹಳ್ಳಿಯಂತೆ ಸಿಂಗಾರ ಮಾಡಿ ಬರಮಾಡಿಕೊಂಡಿದ್ದಾರೆ.

ಹೂವಿಯ ಹುಟ್ಟಿನ ಸತ್ಯ ಹೇಳಿತಾ ಆ ಟಿಫನ್ ಬಾಕ್ಸ್

ಹೂವಿಯ ಹುಟ್ಟಿನ ಸತ್ಯ ಹೇಳಿತಾ ಆ ಟಿಫನ್ ಬಾಕ್ಸ್

ಹೂವಿ ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದಳು. ಅದು ರಾಹುಲ್ ಪ್ರಾಣ ಕಾಪಾಡಲು ಹೋಗಿ ಬಂದೂಕಿನಿಂದ ಗುಂಡು ಎದೆಯೊಳಗೆ ಇಳಿದಿತ್ತು. ಮಳೆಯಲ್ಲೂ ರಾಹುಲ್ ಹೂವಿ ಪ್ರಾಣ ಕಾಪಾಡಿಕೊಳ್ಳಲು ಸಿನಿಮಾ ಸ್ಟೈಲ್‌ನಲ್ಲಿ ಹರಸಾಹಸ ಪಟ್ಟು, ಕಡೆಗೂ ಆಸ್ಪತ್ರೆಗೆ ಕರೆತಂದು ಹೂವಿಗೆ ಆಪರೇಷನ್‌ ಮಾಡಿಸಿದ. ಈ ವೇಳೆ ಹೂವಿಯನ್ನು ನೋಡಲು ಬಂದ ಗೌತಮ್‌ಗೆ, ತಾನೂ ಅತಿಯಾಗಿ ಪ್ರೀತಿಸಿದ ಗೌರನ ಸುಳಿವು ಸಿಕ್ಕಿತ್ತು. ಜೊತೆಗೆ ಮಗಳ ದರ್ಶನವೂ ಆಗಿತ್ತು. ಚನ್ನವಲ್ಸೆ ಎಂದಾಕ್ಷಣ ಗೌತಮ್‌ಗೆ ನೆನಪಾಗುವುದು ಗೌರ ಮತ್ತು ಆಕೆಯ ಪ್ರೀತಿ. ಹೂವಿ ಬಳಿ ಸಾಕಷ್ಟು ಬಾರಿ ಗೌರನ ವಿಚಾರ ಕೇಳಲು ಯತ್ನಿಸಿ, ಫೇಲ್ ಆಗಿದ್ದ. ಆದರೆ ಹೂವಿ ತನ್ನ ತಾಯಿಗೆ ಪತ್ರ ಬರೆಸುವಾಗ ಗೌರನ ಹೆಸರೇಳಿದಳು. ಗೌತಮನ ಖುಷಿಗೆ ಪಾರವೇ ಇಲ್ಲ. ಮಗಳು ಸಿಕ್ಕಳಲ್ಲ ಎಂಬ ಖುಷಿಗೆ ಮಂದ್ರಾಗೆ ಏನನ್ನು ಹೇಳದೆ ಮನೆಯಿಂದ ಊಟ ತಂದುಬಿಟ್ಟ. ಈ ಊಟದ ಬಾಕ್ಸ್‌ನಿಂದ ರಾಹುಲ್ ಮನೆಯಲ್ಲಿ ಯುದ್ಧವೇ ನಡೆದು ಹೋಯಿತು. ಎಲ್ಲರೂ ಖುಷಿಯಿಂದ ಡ್ಯಾನ್ಸ್ ಮಾಡುವಾಗ ಮಂದ್ರಾ ಆ ಬಾಕ್ಸ್ ಎಸೆದು ಹೂವಿಗೂ ನಿಮಗೂ ಯಾವ ಸಂಬಂಧ ಎಂಬುದನ್ನು ಜೋರು ಧ್ವನಿಯಲ್ಲಿ ಕೇಳಿ, ಮನೆಯಲ್ಲಿ ರಂಪ ರಾದ್ಧಾಂತ ನಿರ್ಮಿಸಿದ್ದಾಳೆ.

ಹೂವಿ ಎಂಟ್ರಿಯಿಂದ ತಂದೆಯ ಪ್ರಾಣ ಉಳಿದಿದೆ

ಹೂವಿ ಎಂಟ್ರಿಯಿಂದ ತಂದೆಯ ಪ್ರಾಣ ಉಳಿದಿದೆ

ಮಂದ್ರಾಳ ಗಲಾಟೆಗೆ ಗೌತಮ್ ತುಂಬಾ ಬೇಸರ ಮಾಡಿಕೊಂಡ. ಮಂದ್ರಾಳ ಅತಿಯಾದ ಮಾತಿಗೆ ಕೈ ಎತ್ತಿದ್ದ ಗೌತಮ್‌ನನ್ನು ಮಾಲಿನಿ ಪ್ರಶ್ನಿಸಿದಳು. ಅಮ್ಮನ ಮೇಲೆ ಕೈ ಮಾಡಲು ಹೊರಟಿದ್ದಕ್ಕೆ ಬೇಸರ ವ್ಯಕ್ತಪಡಿಸಿದಳು. ಈ ಕಾರಣದಿಂದ ಗೌತಮ್ ರಾಹುಲ್ ಮನೆಯಿಂದ ಹೊರ ನಡೆದ. ಮಾಲಿನಿಗೆ ಸತ್ಯ ಗೊತ್ತಾದರೆ ನನ್ನನ್ನು ಕ್ಷಮಿಸಲ್ಲ. ರಾಹುಲ್‌ ಮನೆಯವರು ಬೇರೆ ರೀತಿಯಲ್ಲಿಯೇ ನೋಡುತ್ತಾರೆ. ಇಬ್ಬರು ಮಕ್ಕಳಿಗೆ ನ್ಯಾಯ ಕೊಡಲು ಸಾಧ್ಯವಾಗಿಲ್ಲ. ನಾನು ಸಾಯುವುದೇ ಉತ್ತಮ ಎಂದು ತೀರ್ಮಾನಿಸಿ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ, ಇನ್ನೇನು ಅಪಘಾತವಾಗಬೇಕಿತ್ತು, ಅಷ್ಟರಲ್ಲಿ ಹೂವಿ ಬಂದು ತಂದೆಯ ಪ್ರಾಣ ಉಳಿಸಿದ್ದಾಳೆ.

ಹೂವಿ ಮೇಲೆ ಅನುಮಾನ ಪಡುತ್ತಿದ್ದಾಳಾ ಮಾಲಿನಿ?

ಮಂದ್ರಾ ಗಲಾಟೆ ನಡುವೆ ಒಂದು ಮಾತು ಹೇಳಿದಳು. ಹೀಗೆ ಬಿಟ್ಟರೆ ಹೂವಿಯನ್ನು ದತ್ತು ಪಡೆದು, ಸ್ಥಾನ ಕೊಡುತ್ತೀರಾ ಅಲ್ವಾ ಅಂತ. ಇದು ಲೈಟ್ ಆಗಿ ಮಾಲಿನಿ ಮೆದುಳಿಗೆ ಹೋಗಿದೆ. ಹೀಗಾಗಿ ಹೂವಿ ಮತ್ತು ರಾಹುಲ್ ಇಬ್ಬರು ಕ್ಲೋಸ್ ಆಗಿ ಇದ್ದರೆ ಅದನ್ನು ಅನುಮಾನದ ದೃಷ್ಟಿಯಲ್ಲಿ ನೋಡುತ್ತಿದ್ದಾಳೆ. ಮಾಲಿನಿಗೆ ಹೂವಿ ಎಂದರೆ ತುಂಬಾ ಪ್ರೀತಿಯಿತ್ತು. ಮನೆಯವರಂತೆ ಪ್ರೀತಿ ಮಾಡುತ್ತಿದ್ದಳು. ಆದರೆ ಅಮ್ಮ ಬಿಟ್ಟ ವಿಷ ಬೀಜ ಮೊಳಕೆಯೊಡೆದಂತೆ ಕಾಣುತ್ತಿದೆ. ರಾಹುಲ್ ಮತ್ತು ಹೂವಿ ನಗುತ್ತಾ ಮಾತನಾಡುತ್ತಿರವಾಗ ಇಬ್ಬರನ್ನು ಕಂಡ ಮಾಲಿನಿ, ಅನುಮಾನದ ನೋಟದಿಂದ ನೋಡುತ್ತಿದ್ದಾಳೆ.

More from Filmibeat

English summary
Star Suvarna Serial Bettada Hoo Written Update On May 17th Episode. Here Is The Details About Malini's Suspects Over Rahul and Hoovi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X