ಬೆಟ್ಟದ ಹೂ: ರಾಹುಲ್ ಹೂವಿಗೆ ಕೊಟ್ಟ ಸೀರೆಯಿಂದ ಮಾಲಿನಿ ಮತ್ತೊಂದು ಯುದ್ಧ ಶುರು ಮಾಡುತ್ತಾಳಾ..?

By ಎಸ್ ಸುಮಂತ್

ರಾಹುಲ್ ಈಗ ಮೊದಲಿನಂತೆ ಇಲ್ಲ. ನೋಡುಗರಿಗೆ ಅದಂತು ಖುಷಿ ಕೊಟ್ಟಿದೆ. ಹೂವಿ ಕಂಡರೆ ಯಾವಾಗಲೂ ಸಿಡುಕು ಮೂತಿ ಸಿಂಗಪ್ಪ ಆಡಿದಂತೆ ಆಡುತ್ತಿದ್ದ ರಾಹುಲ್ ಇದೀಗ ಕಂಪ್ಲೀಟ್ ಬದಲಾಗಿದ್ದಾನೆ. ಹೂವಿ ತ್ಯಾಗಕ್ಕೆ ಇಷ್ಟು ಬದಲಾಗದೆ ಇದ್ದರೆ ಹೇಗೆ. ರಾಹುಲ್‌ಗೆ ಹೂವಿ ಕಂಡರೆ ಕಾಳಜಿ, ಸಿಂಪತಿ ಹುಟ್ಟಿಕೊಂಡಿದೆ. ಈ ಕಾರಣದಿಂದಲೇ ಹೂವಿಯನ್ನು ಕಾಳಜಿ ಮಾಡಲು ಶುರು ಮಾಡಿದ್ದಾನೆ.

ರಾಹುಲ್ ಮನೆಯವರೆಲ್ಲಾ ಹೂವಿಯನ್ನು ತಮ್ಮ ಮನೆ ಮಗಳಂತೆಯೇ ನೋಡುತ್ತಿದ್ದರು. ಆದರೆ ರಾಹುಲ್ ಅದರಿಂದ ಹೊರತಾಗಿದ್ದ. ಆದರೆ ಈಗ ರಾಹುಲ್ ಕೂಡ ಹೂವಿಯನ್ನು ತಮ್ಮ ಮನೆಯಲ್ಲಿ ಒಬ್ಬಳು ಎಂಬಂತೆ ಕಾಣುತ್ತಿದ್ದಾನೆ. ಇದು ಹೂವಿಗೆ ಒಂದಷ್ಟು ಸಂತಸವನ್ನು ಹೆಚ್ಚು ಮಾಡಿದೆ. ಪ್ರೀತಿ ಇಲ್ಲದೆ ಇದ್ದರು ಕಾಳಜಿ ಕೊಡುತ್ತಿದ್ದಾರಲ್ಲ ಎಂದು ಖುಷಿ ಪಡುತ್ತಿದ್ದಾಳೆ.

ರಾಹುಲ್‌ಗೆ ಹೂವಿ ಮೇಲೆ ಕಾಳಜಿ

ರಾಹುಲ್‌ಗೆ ಹೂವಿ ಮೇಲೆ ಕಾಳಜಿ

ರಾಹುಲ್‌ಗೆ ಕ್ಲಾರಿಟಿ ಇದೆ. ನಾನು ಹೂವಿಯನ್ನು ಯಾಕೆ ಇಷ್ಟ ಪಡುತ್ತಿರಬಹುದು ಎಂಬುದು ಗೊತ್ತಿದೆ. ಅದನ್ನು ಹೂವಿಗೂ ಈಗಾಗಲೇ ಹೇಳಿದ್ದಾನೆ. ನಾನು ಗಂಡನ ಸ್ಥಾನವನ್ನು ಕೊಡಲು ಸಾಧ್ಯವಿಲ್ಲ. ಒಳ್ಳೆ ಫ್ರೆಂಡ್ ಆಗಿರುತ್ತೀನಿ ಅಂತ. ರಾಹುಲ್ ಅದೇ ರೀತಿಯಲ್ಲಿಯೇ ನಡೆದುಕೊಳ್ಳುತ್ತಿದ್ದಾನೆ. ಹೂವಿಯನ್ನು ಒಬ್ಬ ಒಳ್ಳೆ ಫ್ರೆಂಡ್ ಆಗಿಯೇ ಕಾಣುತ್ತಿದ್ದಾನೆ. ರಾಹುಲ್ ಮನಸ್ಸಲ್ಲಿ ಮಾಲಿನಿಗೆ ಬಿಟ್ಟರೆ ಬೇರೆ ಯಾರಿಗೂ ಹೆಂಡತಿಯ ಸ್ಥಾನ ಇಲ್ಲ. ಹೂವಿ ಚನ್ನವಲ್ಸೆ ಬಿಟ್ಟು ಇಲ್ಲಿಗೆ ಬರುವಾಗ ಆ ಕನಸನ್ನು ಮರೆತಿಯೇ ಬಂದಿದ್ದಾಳೆ. ಹೀಗಾಗಿ ರಾಹುಲ್ ಕೋಪ ಮಾಡಿಕೊಂಡರು ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.

ರಾಹುಲ್ ಮೇಲೆ ಹೂವಿಗೆ ಪ್ರೀತಿ ಹುಟ್ಟುತ್ತಾ?

ರಾಹುಲ್ ಮೇಲೆ ಹೂವಿಗೆ ಪ್ರೀತಿ ಹುಟ್ಟುತ್ತಾ?

ಹೂವಿಗೆ ರಾಹುಲ್ ಮಾತನಾಡಿಸುವುದಕ್ಕೂ ಭಯ ಆಗುತ್ತಿತ್ತು. ರಾಹುಲ್ ಕೂಡ ಅಷ್ಟೇ ಮಾತಿಗೆ ಮುಂಚೆ ಹೂವಿ ಕಂಡರೆ ಕೋಪವನ್ನೇ ಮಾಡಿಕೊಳ್ಳುತ್ತಿದ್ದ. ಆದರೆ ಅದೊಂದು ಘಟನೆ ಇದೀಗ ರಾಹುಲ್‌ನನ್ನು ಸಂಪೂರ್ಣವಾಗಿ ಬದಲು ಮಾಡಿದೆ. ಹೂವಿ ಬಳಿ ಸಮಾಧಾನ ಮಾತುಗಳನ್ನು ಆಡುತ್ತಾನೆ. ತಮಾಷೆ ಮಾಡುತ್ತಾನೆ, ನಗುತ್ತಾನೆ, ನಗಿಸುತ್ತಿದ್ದಾನೆ. ಇದು ಹೂವಿಗೆ ಇನ್ನಿಲ್ಲದೆ ಖುಷಿ ತಂದಿದೆ. ರಾಹುಲ್ ಕೊನೆ ತನಕ ನನ್ನ ಗಂಡ ಎಂದು ಕೊಂಡಿರುವ ಹೂವಿ ಈ ಕಾಳಜಿಯನ್ನೇ ಪ್ರೀತಿ ಎಂದುಕೊಳ್ಳುವ ಸಾಧ್ಯತೆಯೂ ಇದೆ. ಈ ಪ್ರೀತಿಗೆ ಬಿದ್ದು, ರಾಹುಲ್ ಕಡೆಯಿಂದ ಬಯಸಿದ ಪ್ರೀತಿ ಸಿಗದೆ ಹೋದರೆ ಮತ್ತೆ ನೋವು ತಿನ್ನುವ ಸಾಧ್ಯತೆ ಹೆಚ್ಚಾಗಿದೆ.

ರಾಹುಲ್ ಉಡುಗೊರೆ ಕಂಡು ಹೂವಿ ಭಾವುಕ

ರಾಹುಲ್ ಉಡುಗೊರೆ ಕಂಡು ಹೂವಿ ಭಾವುಕ

ಈ ಮೊದಲೇ ಹೇಳಿದಂತೆ ರಾಹುಲ್ ಹೂವಿಯನ್ನು ತನ್ನ ಮನೆಯಲ್ಲಿ ಒಬ್ಬಳಂತೆ ಕಾಣುತ್ತಿದ್ದಾಳೆ. ಇದೇ ಕಾರಣಕ್ಕೆ ಹೂವಿಗೆ ಸೀರೆಯೊಂದನ್ನು ಗಿಫ್ಟ್ ಆಗಿ ತಂದುಕೊಟ್ಟಿದ್ದಾನೆ. ಆ ಸೀರೆಯನ್ನು ಸರ್ಪೈಸ್ ಆಗಿ ತಂದಿದ್ದ ರಾಹುಲ್, ಈ ಸೀರೆ ನಿನಗೇನೆ ಎಂದಾಗ ಹೂವಿ ಶಾಕ್ ಆಗಿದ್ದಾಳೆ. ಒಂದು ಕ್ಷಣ ಖುಷಿ ಪಟ್ಟರೂ, ಇಷ್ಟು ದೊಡ್ಡ ಮೊತ್ತದ ಸೀರೆ ನನಗೆ ಬೇಡ ಎಂದಿದ್ದಾಳೆ. ನಮ್ಮ ಅರ್ಹತೆ ಮೀರಿ ಉಡುಗೊರೆಗೆ ಆಸೆ ಪಡುವುದು ಬೇಡ ಎಂದಿದ್ದಾಳೆ. ಆದರೆ ಆ ಕ್ಷಣ ರಾಹುಲ್ ಅದೆಷ್ಟು ಅದ್ಭುತವಾಗಿ ಹೂವಿಯ ಮನಸ್ಸಿಗೆ ನಾಟುವಂತೆ ಹೇಳಿದ್ದಾನೆ ಎಂದರೆ, ನಿನ್ನ ಯೋಗ್ಯತೆ ಈ ಮನೆಯಲ್ಲಿ ದೊಡ್ಡಮಟ್ಟದಲ್ಲಿಯೇ ಇದೆ. ನಮ್ಮ ಯೋಗ್ಯತೆಯನ್ನು ನಾವೇ ಅಳೆದುಕೊಳ್ಳಬಾರದು. ಅದನ್ನು ಅಕ್ಕ ಪಕ್ಕ ಇರುವವರು ಅಳೆಯುತ್ತಾರೆ. ನಾವು ಹಾಕುವ ಬಟ್ಟೆ ಮೇಲೆ ಅದನ್ನು ಅಳೆಯುತ್ತಾರೆ. ನನ್ನ ಮೇಲೆ ಪ್ರೀತಿ ಇದ್ದರೆ ಈ ಸೀರೆ ತೆಗೆದುಕೊಳ್ಳಬೇಕು ಎಂದಾಗ ಹೂವಿಯ ಮನಸ್ಸು ಕರಗಿ ನೀರಾಗಿತ್ತು. ಸೀರೆಯನ್ನು ತೆಗೆದುಕೊಂಡು ಅಷ್ಟೇ ಭಾವುಕಳಾದಳು. ಎಷ್ಟೇ ಆಗಲಿ ಗಂಡ ಕೊಡಿಸಿದ ಮೊದಲ ಸೀರೆಯಲ್ಲವೇ.

ತಾಯಿಯಂತೆ ಮಾಲಿನಿ ರಂಪಾ ರಾದ್ಧಾಂತ!

ಈಗಾಗಲೇ ಹೂವಿಯ ವಿಚಾರವಾಗಿಯೇ ರಾಹುಲ್ ಮನೆಯಲ್ಲಿ ದೊಡ್ಡ ಯುದ್ಧವೇ ನಡೆದು ಹೋಗಿದೆ. ಅದು ಹೂವಿಯನ್ನು ಮಾಲಿನಿ ತಂದೆ ಕಾಳಜಿ ಮಾಡಿದ್ದರ ಉದ್ದೇಶವಷ್ಟೇ. ಮಂದ್ರಾ ಹಿಂದೂ ಮುಂದು ನೋಡದೆ, ನಾನು ಯಾರ ಮನೆಯಲ್ಲಿ ಇದ್ದೀನಿ ಎಂಬ ಪರಿವೂ ಇಲ್ಲದೆ ಜಗಳ ಶುರು ಮಾಡಿಕೊಂಡಿದ್ದಳು. ಹೋಗುವಾಗ ಮಗಳು ಮಾಲಿನಿ ತೆಲೆಗೂ ಒಂದಷ್ಟು ಹುಳ ಬಿಟ್ಟು ಹೋಗಿದ್ದಾಳೆ. ರಾಹುಲ್ ಮೊದಲಿಗೆ ಹೂವಿಗೆ ಕೊಡುವ ಸೀರೆಯನ್ನು ತಂದು ಬೆಡ್ ಮೇಲೆ ಇಟ್ಟಿದ್ದ. ಆ ಸೀರೆಯನ್ನು ನೋಡಿದ್ದ ಮಾಲಿನಿ ಇದು ನನಗೋಸ್ಕರವೇ ತಂದ ಸೀರೆ ಎಂದುಕೊಂಡಿದ್ದಳು. ಆದರೆ ಈಗ ಅದು ಹೂವಿಯ ಕೈ ಸೇರಿದೆ. ಹೂವಿ ಸೀರೆಯುಟ್ಟು ಬಂದಾಗ ಮಾಲಿನಿ ಮತ್ತೊಂದು ಯುದ್ಧ ಶುರು ಮಾಡಿದರೂ ಮಾಡಬಹುದು.

More from Filmibeat

English summary
Star Suvarna Serial Bettada Hoo Written Update On May 19th Episode. Here Is The Details About Rahul Who Gave The Saree To Malini.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X