ಹೂವಿ ಬಳಿ ಆ ಸೀರೆ ಕಂಡು ಮಾಲಿನಿ ಕೆಂಡಾಮಂಡಲ: ರಾಹುಲ್ ಪೇಚಾಟ!

By ಎಸ್ ಸುಮಂತ್

ಇತ್ತೀಚೆಗೆ ಹೂವಿ ಕುಟುಂಬಸ್ಥರೆಲ್ಲ ಶಾಪಿಂಗ್ ಅಂತ ಹೋಗಿದ್ದರು. ಆಗ ಒಂದಷ್ಟು ಅನಾಹುತಗಳು ಕೂಡ ನಡೆದಿತ್ತು. ಮಾಲ್‌ನಲ್ಲಿ ಹೂವಿಯನ್ನು ಕಂಡು ಮ್ಯಾನೇಜರ್ ಬೇರೆ ರೀತಿಯಾಗಿಯೇ ನಡೆದುಕೊಂಡಿದ್ದರು. ಬಳಿಕ ರಾಹುಲ್‌ನನ್ನು ಕಂಡು ಮ್ಯಾನೇಜರ್ ದಂಗಾಗಿ ಹೋಗಿದ್ದರು. ಹೂವಿಯನ್ನು ಎಳೆದುಕೊಂಡು ಹೋಗಿ ಹೊರಗೆ ಬಿಟ್ಟಿದ್ದ ವ್ಯಕ್ತಿಯೇ ಆಕೆಯನ್ನು ಕರೆದುಕೊಂಡು ಬಂದು ಉಪಚಾರ ಮಾಡಿದ್ದರು. ಅದು ಹೂವಿಯನ್ನು ಸಖತ್ ಖುಷಿ ಪಡಿಸಿತ್ತು.

ಈ ಶಾಪಿಂಗ್ ಟೈಮ್‌ನಲ್ಲಿ ಹೂವಿಗೂ ಕೂಡ ಸಾಕಷ್ಟು ಫ್ರೀಡಂ ಇತ್ತು. ಹೂವಿ ತಾನಿಷ್ಟ ಪಟ್ಟ ಬಟ್ಟೆಯನ್ನು ತೆಗೆದುಕೊಳ್ಳಬಹುದಿತ್ತು. ಆದರೆ ಹೂವಿ ಆ ರೀತಿ ಮಾಡುವುದಕ್ಕೆ ಹೋಗಲಿಲ್ಲ. ಮನೆಯವರೆಲ್ಲ ತಮಗಿಷ್ಟವಾದ ಬಟ್ಟೆಯನ್ನು ಕೊಂಡು ಕೊಂಡರು. ಆದರೆ, ಹೂವಿ ಮಾತ್ರ ತೆಗೆದುಕೊಂಡಿರಲಿಲ್ಲ. ರಾಹುಲ್‌ಗೆ ಇದು ತಿಳಿದು ಪ್ರೀತಿಯಿಂದ ಸೀರೆ ತಂದು ಕೊಟ್ಟಿದ್ದಾನೆ. ಇದರಿಂದ ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎಂಬ ಸೂಚನೆ ಸಿಗುತ್ತಿದೆ.

ಕೋಪದಲ್ಲಿ ರಾಹುಲ್ ಬಳಿ ಬಂದ ಮಾಲಿನಿ

ಕೋಪದಲ್ಲಿ ರಾಹುಲ್ ಬಳಿ ಬಂದ ಮಾಲಿನಿ

ಪಾಪ ಶಾಪಿಂಗ್ ಮುಗಿಸಿ ಬಂದಾಗಿನಿಂದ ಮಾಲಿನಿ ಖುಷಿ ಖುಷಿಯಾಗಿದ್ದಳು. ರಾಹುಲ್ ನನಗೆ ಸಪ್ರೈಸ್ ಕೊಡುತ್ತಾನೆ ಎಂದುಕೊಂಡಿದ್ದಳು. ಆದರೆ, ಸೀರೆ ಹೂವಿ ಉಟ್ಟುಕೊಂಡಿದ್ದಾಳೆ. ಸಡನ್ ಆಗಿ ನೋಡಿದ ಮಾಲಿನಿಗೆ ಒಂದು ಕ್ಷಣ ಬೇಸರ ಕೂಡ ಆಗಿದೆ. ಅದನ್ನು ಹೂವಿ ಬಳಿಯೇ ಹೋಗಿ ಇದು ಎಲ್ಲಿ ತೆಗೆದುಕೊಂಡಿದ್ದು ಎಂದು ಕೇಳಿದ್ದಾಳೆ. ಹೂವಿಗೂ ಒಂದು ಕ್ಷಣ ಏನು ಹೇಳಬೇಕು ಎಂದು ಗೊತ್ತಾಗಿಲ್ಲ. ಆದರೆ ಸುಳ್ಳು ಹೇಳಿದರೆ ಇದರಿಂದ ಮುಂದೆ ಸಮಸ್ಯೆ ಎದುರಾಗುತ್ತದೆ ಎಂದು ಅರಿತು ಸತ್ಯವನ್ನೇ ಹೇಳಿದ್ದಾಳೆ. ರಾಹುಲ್ ಮೊದಲೇ ಮಾಲಿನಿಗೆ ವಿಚಾರ ಹೇಳಿದ್ದರೆ ಇಷ್ಟು ಕಷ್ಟ ಆಗುತ್ತಿರಲಿಲ್ಲ. ಆದರೂ ಹೂವಿಯ ಪ್ರಾಮಾಣಿಕತೆಗೆ ಮಾಲಿನಿ ಸುಮ್ಮನಾಗಿದ್ದಾಳೆ. ಅದೇ ಕೋಪದಲ್ಲಿ ರಾಹುಲ್ ಕೋಣೆಗೆ ಹೋದವಳು ಶಾಂತವಾಗಿದ್ದಾಳೆ. ಆ ಕೋಪ ಮರೆತು ಕಾಂಪ್ರಮೈಸ್ ಆಗಿದ್ದಾಳೆ.

ಹೂವಿ-ರಾಹುಲ್ ಜೊತೆಯಾಗಿದ್ದಾಗ ಮಾತ್ರ ಕೋಪ

ಹೂವಿ-ರಾಹುಲ್ ಜೊತೆಯಾಗಿದ್ದಾಗ ಮಾತ್ರ ಕೋಪ

ಹೂವಿಯನ್ನು ಕಂಡರೆ ಮಾಲಿನಿ ಅಕ್ಕರೆ ತೋರುತ್ತಾಳೆ. ಹೂವಿಯನ್ನು ತಂಗಿಯಂತೆಯೇ ಕಾಣುತ್ತಾಳೆ. ಆದರೆ ಅವರ ಅಮ್ಮ ಮಂದ್ರಾ ಬಿಟ್ಟು ಹೋಗಿರುವ ಹುಳ ಇದೆಯಲ್ಲ. ಆ ಹುಳ ಆಗಾಗ ಮಾಲಿನಿ ಮನಸ್ಸನ್ನು ಕೆಣಕುತ್ತಿರುತ್ತೆ. ಆಗ ಸ್ವಲ್ಪ ಸಮಯ ಕೋಪ ಮಾಡಿಕೊಳ್ಳುತ್ತಾಳೆ. ಹಾಗಂತ ಹೂವಿ ಒಬ್ಬಳೆ ಇದ್ದಾಗ ಅಲ್ಲ ಹೂವಿ, ರಾಹುಲ್ ಜೊತೆ ಅನ್ಯೋನ್ಯವಾಗಿದ್ದಾಗ ಮಾತ್ರ. ಇಬ್ಬರು ಬೇರೆ ಬೇರೆ ಇದ್ದಾಗ ಮಾಲಿನಿ ಕೂಡ ಖುಷಿಯಾಗಿ ಇರುತ್ತಾಳೆ. ಒಂದು ವೇಳೆ ಇಬ್ಬರು ಒಟ್ಟಿಗೆ ಸೇರಿದರೆ ಮಾಲಿನಿ ಮನಸ್ಸು ಕೆಂಡಾಮಂಡಲವಾಗಿ ಬಿಡುತ್ತದೆ.

ಅಮ್ಮುಗೆ ಕೊಟ್ಟ ಮಾತು ಉಳಿಸಿಕೊಳ್ಳುತ್ತಾಳಾ ಹೂವಿ?

ಅಮ್ಮುಗೆ ಕೊಟ್ಟ ಮಾತು ಉಳಿಸಿಕೊಳ್ಳುತ್ತಾಳಾ ಹೂವಿ?

ಮನೆಯಲ್ಲಿ ವಿಶೇಷ ಪೂಜೆ ಇದೆ. ಸಂಪ್ರದಾಯ, ಪೂಜೆ, ಪುನಸ್ಕಾರಗಳಿಗೆ ಬೆಲೆ ಕೊಡುವಂತ ಕುಟುಂಬ ರಾಹುಲ್ ಅವರದ್ದು. ಹೀಗಾಗಿ ಹಬ್ಬ ಹರಿದಿನ ಎಂದರೆ ಮನೆ ಮಂದಿ ಎಲ್ಲಾ ಸೇರಿ ಆಚರಿಸುತ್ತಾರೆ. ಸಾವಿತ್ರಿ ಪೂಜೆಯನ್ನು ವಿಶೇಷವಾಗಿ ಗಂಡಂದಿರ ಪಾದ ತೊಳೆದು, ನಮಸ್ಕರಿಸಿ, ಆಶೀರ್ವಾದ ಪಡೆದು ಪೂಜೆ ಮಾಡಲಿದ್ದಾರೆ. ಆದರೆ ಇದು ಹೂವಿಗೆ ಒಂದು ರೀತಿಯ ಧರ್ಮ ಸಂಕಟಕ್ಕೆ ಸಿಲುಕಿಸಿದೆ. ಊರಿನಿಂದ ಅಮ್ಮು ಬೇರೆ ಕರೆ ಮಾಡಿ ಈ ಪೂಜೆಯನ್ನು ನೀನು ಮಾಡಲೇಬೇಕು ಎಂದಿದ್ದಾರೆ. ಅಮ್ಮುಗೆ ಮಾತು ಬೇರೆ ಕೊಟ್ಟಿರುವ ಹೂವಿ ಸಂಕಟ ಪಡುತ್ತಿದ್ದಾಳೆ.

ಹೂವಿ ಫ್ಲ್ಯಾನ್ ಸೂಪರ್, ಕೊಟ್ಟ ಮಾತು ಸಕ್ಸಸ್

ಆಗಾಗ ಯಡವಟ್ಟು ಮಾಡುವ ಹೂವಿ, ಬುದ್ದಿವಂತಿಕೆಯಿಂದ ಯೋಚಿಸಿದರೆ ಎಂತಹದ್ದೇ ಸಮಸ್ಯೆಗಾದರೂ ಪರಿಹಾರ ಸಿಗದೆ ಇರುವುದಿಲ್ಲ. ಇದೀಗ ಅಮ್ಮು ಆಸೆಯಂತೆ ಗಂಡನ ಪಾದ ಪೂಜೆ ಮಾಡುವುದಕ್ಕೆ ಮಾಸ್ಟರ್ ಫ್ಲ್ಯಾನ್ ಅನ್ನೇ ರೆಡಿ ಮಾಡಿಕೊಂಡಿದ್ದಾಳೆ. ಮಾಲಿನಿ ಗಂಡನಿಗೆ ಪೂಜೆ ಮಾಡುವಾಗ, ಅದಕ್ಕೆ ಎದುರಾಗಿ ಕನ್ನಡಿ ಇಟ್ಟು ಕಡೆಗೂ ಗಂಡನ ಪಾದ ಪೂಜೆ ಮಾಡಿದ್ದಾಳೆ. ಅದು ಗಂಡ ಕೊಡಿಸಿದ ಸೀರೆಯನ್ನೇ ಉಟ್ಟುಕೊಂಡು, ಗಂಡನಿಗೆ ಆಯಸ್ಸು ಜಾಸ್ತಿ ಮಾಡು ಶಾರದವ್ವ ಎಂದು ಬೇಡಿಕೊಂಡು ಪೂಜೆ ಮುಗಿಸಿದ್ದಾಳೆ.

More from Filmibeat

English summary
Star Suvarna Serial Bettada Hoo Written Update On May 23rd Episode. Here is the details about An Angry Malini with Hoovi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X