ಬೆಟ್ಟದ ಹೂ: ಸಾವಿತ್ರಿ ವ್ರತ ಮಾಡಿ ಬಚಾವ್ ಆದ ಹೂವಿ, ರಾಹುಲ್ ಎಂಜಲು ತಿಂದು ತಗಲಾಕಿಕೊಳ್ತಾಳಾ..?

By ಎಸ್ ಸುಮಂತ್

ರಾಹುಲ್ ಮನೆಯಲ್ಲಿ ಎಲ್ಲಾ ಮುತ್ತೈದೆಯರು ಸೇರಿ ಸಾವಿತ್ರಿ ವ್ರತ ಮಾಡಿದ್ದಾರೆ. ಗಂಡನಿಗೆ ಪೂಜೆ ಮಾಡಿ, ಆಶೀರ್ವಾದ ಪಡೆದಿದ್ದಾರೆ. ಈ ವೇಳೆ ಹೂವಿ ಕೂಡ ಫ್ಲ್ಯಾನ್ ಮಾಡಿ ಸಾವಿತ್ರಿ ವ್ರತ ಮಾಡಿದ್ದಾಳೆ. ಮಾಲಿನಿ ರಾಹುಲ್ ಪಾದಕ್ಕೆ ಪೂಜೆ ಮಾಡುತ್ತಾ ಇದ್ದರೆ, ಅದಕ್ಕೆ ನೇರವಾಗಿ ಕನ್ನಡಿ ಇಟ್ಟು ರಾಹುಲ್ ಪಾದ ಪೂಜೆಯನ್ನೇನೋ ಮಾಡಿದ್ದಾಳೆ. ಆದರೆ ಹೂವಿಯ ಎಡವಟ್ಟಿನಿಂದಾಗಿ ಮನೆಯವರ ಮುಂದೆ ಸಿಕ್ಕಿ ಬೀಳುವ ಸಾಧ್ಯತೆ ಇದೆ.

ಸಾವಿತ್ರಿ ವ್ರತದಲ್ಲಿಯೇ ಹೂವಿ ಎಲ್ಲರೆದುರು ತಪ್ಪಿತಸ್ಥಳಾಗಿ ನಿಂತಿದ್ದಳು. ಆದರೆ ರಾಹುಲ್ ಮನೆಯವರ ಬೆಂಬಲದಿಂದ ಬಚಾವ್ ಆಗಿದ್ದಾಳೆ. ಆದರೆ ಗಂಡನ ಮೇಲಿನ ಪ್ರೀತಿ, ಗೌರವದಿಂದ ರಾಹುಲ್ ತಿಂದ ತಟ್ಟೆಯ ಎಂಜಲನ್ನು ತಿಂದು ಸಿಕ್ಕಿಬಿಳುವ ಹಂತ ತಲುಪಿದ್ದಾಳೆ. ಸಾವಿತ್ರಿ ವ್ರತದಲ್ಲಿ ಮಂದ್ರಾಯಿಂದ ಬಚಾವ್ ಮಾಡಿದ ಮಾಲಿನಿಯೇ ಈ ವಿಚಾರದಲ್ಲಿ ಲಾಕ್ ಮಾಡುತ್ತಾಳಾ..?

ಮಂದ್ರಾಳಿಂದ ರಾಹುಲ್ ಮನೆ ನೆಮ್ಮದಿ ಹಾಳು

ಮಂದ್ರಾಳಿಂದ ರಾಹುಲ್ ಮನೆ ನೆಮ್ಮದಿ ಹಾಳು

ನಿನ್ನೆ ಮನೆ ಮಂದಿಯ ಮುಖದಲ್ಲಿ ಸಂತಸ ಮನೆ ಮಾಡಿತ್ತು. ಗಂಡಂದಿರ ಪೂಜೆ ಮಾಡಿ ಖುಷಿಯಲ್ಲಿದ್ದರು. ಆದರೆ ಮಂದ್ರಾ ಕಣ್ಣಿಗೆ ಬಹಳ ಬೇಗ ಕಂಡಿದ್ದು ಹೂವಿ ಇಟ್ಟ ಸಿಂಧೂರ. ಆ ಸಿಂಧೂರದಿಂದಾಗಿ ರಂಪ ರಾಮಾಯಣ ಮಾಡಿಬಿಟ್ಟಳು. ಇವ್ಳು ಮುತ್ತೈದೆ ರೀತಿ ಸಿಂಧೂರ ಹಚ್ಚಿಕೊಳ್ಳುವುದು ಇಷ್ಟವಿಲ್ಲ. ಅದನ್ನು ಅಳಿಸಿ ಎಂದಾಗ ಮನೆಯವರೆಲ್ಲ ಹೂವಿ ಕಡೆಗೆ ಸಪೋರ್ಟ್ ಮಾಡಿದರು. ಆದರೆ ಮಂದ್ರಾ ಸಿಂಧೂರವನ್ನು ತಾನೇ ಅಳಿಸುವುದಕ್ಕೆ ಮುಂದಾಗಿದ್ದಳು. ಈ ನಡೆಗೆ ಮನೆಯವರೆಲ್ಲ ವಿರೋಧ ಮಾಡಿದರು. ಆದರೂ ಹಠ ಬಿಡದ ಮಂದ್ರಾಗೆ ಕೊನೆಗೆ ಮಾಲಿನಿ ಕ್ಲಾಸ್ ತೆಗೆದುಕೊಂಡ ಮೇಲೆ ಸುಮ್ಮನಾದಳು. ಅಲ್ಲಿ ನಿಲ್ಲದೆ ಸೀದಾ ಮನೆಗೆ ನಡೆದಳು. ಅದಕ್ಕೂ ಮುನ್ನ ಮಗಳಿಗೊಂದಿಷ್ಟು ಬುದ್ಧಿ ಹೇಳಿ ನಡೆದಳು.

ಹೂವಿಯ ಸಿಂಧೂರದಿಂದ ಸತ್ಯ ಬಯಲು

ಹೂವಿಯ ಸಿಂಧೂರದಿಂದ ಸತ್ಯ ಬಯಲು

ಹೂವಿ ಗಂಡನ ಮೇಲಿನ ಪ್ರೀತಿಯಿಂದ ಹೀಗೆ ಮಾಡಿದ್ದಾಳೆ ಎಂಬುದು ರಾಹುಲ್‌ಗೆ ಕೂಡ ಗೊತ್ತಿತ್ತು. ನೀನು ನನ್ನ ಪಡೆಯುವುದಕ್ಕಾಗಿಯೇ ಈ ರೀತಿಯ ದಾರಿಗಳನ್ನು ಹುಡುಕುತ್ತಿದ್ದೀಯಾ ಅಂತ ರಾಹುಲ್ ಅದೇ ಹಳೇ ರಾಗ ತೆಗೆದಿದ್ದ. ಆದರೆ ಹೂವಿಯ ಮುಗ್ಧತೆಗೆ ಮತ್ತೆ ಸುಮ್ಮನಾದ. ಮತ್ತೆ ಈ ರೀತಿ ಮಾಡಬೇಡ ಎಂದ. ಹೂವಿ ಬಳಿ ಇದಕ್ಕೂ ಮೊದಲು ತಾಳಿ, ಬಳೆ ಎಲ್ಲಾ ಸಿಕ್ಕಿತ್ತು. ಆಗ ಮನೆಯವರು ಹೂವಿಗೆ ಮದುವೆಯಾಗಿದೆಯಾ ಎಂಬ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಆಗಲೂ ಏನನ್ನೋ ಹೇಳಿ ತಪ್ಪಿಸಿಕೊಂಡಿದ್ದಳು ಹೂವಿ. ಮಂದ್ರಾ ಕೂಡ ಮನೆಯಲ್ಲಿ ಅದೇ ರಾಗ ತೆಗೆದಿದ್ದಳು. ಹೂವಿಗೆ ಈಗಾಗಲೇ ಮದುವೆಯಾಗಿದೆ ಎನಿಸುತ್ತದೆ. ಅದಕ್ಕೆ ಅವಳು ಸಾವಿತ್ರಿ ವ್ರತ ಮಾಡಿದ್ದಾಳೆ ಎಂದಾಗ ಯಾರ ಗಮನವೂ ಆ ಕಡೆ ವಾಲಲಿಲ್ಲ. ಹೀಗಾಗಿ ಹೂವಿ ಬಚಾವ್ ಆದಳು.

ಅಪ್ಪನ ಚಾಕೊಲೇಟ್ ನೋಡಿ ಹೂವಿಗೆ ಖುಷಿ

ಅಪ್ಪನ ಚಾಕೊಲೇಟ್ ನೋಡಿ ಹೂವಿಗೆ ಖುಷಿ

ಮಂದ್ರಾ ಮನೆಯವರೆಲ್ಲರಿಗೂ ಹೊಸ ಬಟ್ಟೆ ತಂದುಕೊಟ್ಟರು. ಆದರೆ ಈ ವೇಳೆ ಮಾಲಿನಿ ಉಪಯೋಗಿಸಿದ ಹಳೇ ಬಟ್ಟೆಯನ್ನು ಹೂವಿಗೆ ಗಿಫ್ಟ್ ಆಗಿ ಕೊಟ್ಟಳು. ಇದು ಮನೆಯವರ ಕೋಪಕ್ಕೆ ಕಾರಣವಾಗಿತ್ತು. ಆದರೂ ಮಂದ್ರಾಗೆ ನೋವಾಗಬಾರದು, ಮಾಲಿನಿಗೆ ಬೇಸರ ಮಾಡಬಾರದು ಎಂದು ಹೂವಿ ಅದನ್ನು ಪ್ರೀತಿಯಿಂದಲೇ ತೆಗೆದುಕೊಂಡಳು. ಆದರೆ ಅಡುಗೆ ಮನೆಯೊಳಗೆ ಹೋಗಿ‌ ಕಣ್ಣೀರು ಹಾಕಿದಳು. ಇದನ್ನು ಅವಳ ತಂದೆ ನೋಡಿದರು. ಆದರೆ ಆಕೆಗೆ ಗೌತಮ್ ನಿಜವಾದ ತಂದೆ ಎಂಬುದು ಗೊತ್ತಿಲ್ಲ. ಅದನ್ನು ಹೇಳುವುದಕ್ಕೂ ಆಗುತ್ತಿಲ್ಲ. ಆಳುತ್ತಿದ್ದ ಮಗಳಿಗೆ ಚಾಕೊಲೇಟ್ ಕೊಟ್ಟು ಸಮಾಧಾನ ಮಾಡಿದ. ಇದನ್ನು ನೋಡಿದ ಮಾಲಿನಿ, ಅಮ್ಮನ ಮುಂದೆ ಕೊಟ್ಟರೆ ಮತ್ತೆ ಜಗಳ ಮಾಡುತ್ತಾರೆ ಎಂಬ ಕಾರಣಕ್ಕೆ ಕೊಟ್ಟಿಲ್ಲವೇನೊ ಎಂದುಕೊಂಡು ಸುಮ್ಮನಾದಳು.

ಗಂಡನ ಎಂಜಲನ್ನು ಪ್ರಸಾದ ಎಂದು ತಿಂದ ಹೂವಿ

ಗಂಡನ ಎಂಜಲನ್ನು ಪ್ರಸಾದ ಎಂದು ತಿಂದ ಹೂವಿ

ಹಾಗೋ ಹೀಗೋ ಸಾವಿತ್ರಿ ವ್ರತವನ್ನು ಮಾಡಿ ಮುಗಿಸಿದಳು ಹೂವಿ. ಗಂಡ ಬಿಟ್ಟ ತಟ್ಟೆಯಲ್ಲಿ ತಿನ್ನುವುದು ಒಳ್ಳೆಯದು ಎಂಬುದನ್ನು ನಂಬಿರುವಳು ಹೂವಿ. ಹೀಗಾಗಿಯೇ ರಾಹುಲ್‌ಗೆ ಊಟ ಬಡಿಸುವಾಗ ಕೊಂಚ ಜಾಸ್ತಿಯೇ ಬಡಿಸಿದಳು. ಆ ಬಳಿಕ ರಾಹುಲ್ ಸಾಕು ಎಂದು ಬಿಟ್ಟಾಗ ಆಕೆಯೇ ತಿನ್ನುತ್ತಾ ಕುಳಿತಿದ್ದಳು. ಇದನ್ನು ಮನೆಯವರು ಯಾರಾದರೂ ಗಮನಿಸಿದರೆ ಹೂವಿ ಅದೇನು ಉತ್ತರ ನೀಡುವಳೋ ಏನೋ.

More from Filmibeat

English summary
Star Suvarna Serial Bettada Hoo Written Update On May 25th Episode. Here is the details about Mandra makes non senece In Rahul home.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X