ಬೆಟ್ಟದ ಹೂ: ಮಾಲಿನಿ ಮೇಲಿನ ಕೋಪಕ್ಕೆ ಹೂವಿನಾ ಒಪ್ಪಿಕೊಂಡನಾ ರಾಹುಲ್?
ಚನ್ನವಲ್ಸೆಯ ಹೂವಿ ಚಕ್ರವರ್ತಿ ಫ್ಯಾಮಿಲಿಗೆ ಬಂದು ಸೇರಿಕೊಂಡು ಬಹಳ ದಿನಗಳೇ ಕಳೆದಿದೆ. ಗಂಡ ಹಂಡತಿ ಅಂತ ಹೇಳಿಕೊಳ್ಳಲಾಗದೆ ಇದ್ದರು, ಹೆಂಡತಿಯಾಗಿ ಗಂಡನ ಆಯಸ್ಸು, ಆರೋಗ್ಯಕ್ಕಾಗಿ ಪೂಜೆ ಪುನಸ್ಕಾರ ಮಾಡುತ್ತಾ ಇದ್ದಾಳೆ ಹೂವಿ. ಮನೆಯಲ್ಲಿ ಸಾವಿತ್ರಿ ವ್ರತದ ವೇಳೆಯೂ ಹಾಗೋ ಹೀಗೋ ಕಷ್ಟ ಪಟ್ಟು ಪೂಜೆಯನ್ನು ಮಾಡಿದಳು, ಗಂಡನ ತಟ್ಟೆಯಲ್ಲಿ ಊಟವನ್ನು ಮಾಡಿದಳು. ಒಟ್ಟಾರೆ ಯಶಸ್ವಿಯಾಗಿ ಹೂವಿಯ ಗಂಡನ ಪೂಜೆ ಮುಗಿಯಿತು.
ಇದೇ ಪೂಜೆ ಬಳಿಕ ಮಾಲಿನಿ ಮತ್ತು ರಾಹುಲ್ ನಡುವೆ ಸಣ್ಣ ವೈಮನಸ್ಸು ಮೂಡಿದೆ. ಮಾಲಿನಿ ಶ್ರೀಮಂತ ಮನೆಯ ಮಗಳು. ರಾಹುಲ್ ಅನುಕೂಲಸ್ಥರು, ತುಂಬು ಕುಟುಂಬದಲ್ಲಿ ಇರುವವನು. ರಾಹುಲ್ ಬಳಿ ಮಾಲಿನಿ ಯಾವತ್ತು ತನ್ನ ಅಂತಸ್ತಿನ ಬಗ್ಗೆ ತೋರಿಕೆ ಮಾಡಿಕೊಂಡಿರಲಿಲ್ಲ. ಆದರೆ ಪೂಜೆಯ ಬಳಿಕ ಆಫೀಸ್‌ಗೆ ಹೊರಟ ಮಾಲಿನಿಯನ್ನು ಬೈಕ್‌ನಲ್ಲಿ ಕರೆದುಕೊಂಡು ಹೊರಟ ರಾಹುಲ್‌ಗೆ ಬೇಸರ ಮಾಡಿದ್ದಾಳೆ. ರಾಹುಲ್ ಬೈಕ್ ಬಿಟ್ಟು ಅಮ್ಮ ಕಳುಹಿಸಿದ ಕಾರಿನಲ್ಲಿ ಹೊರಟಿದ್ದಾಳೆ. ಇದು ರಾಹುಲ್ ಮುನಿಸಿಗೆ ಕಾರಣವಾಗಿದೆ.

ಈ ಕೋಪದಿಂದ ಹೂವಿ ಮನಸ್ಸಿಗೆ ಹತ್ತಿರವಾಗುತ್ತಾನಾ?
ಈ ಒಂದು ಸನ್ನಿವೇಶವನ್ನು ರಾಹುಲ್ ತೀರಾ ಮನಸ್ಸಿಗೆ ಹಚ್ಚಿಕೊಂಡಿದ್ದಾನೆ. ಆಫೀಸಿಗೆ ಹೋದರು ಮಾಲಿನಿಯ ನಡವಳಿಕೆ ಬಗ್ಗೆ ಯೋಚಿಸುತ್ತಿದ್ದಾನೆ. ನಮ್ಮ ಅಂತಸ್ತಿನ ಬಗ್ಗೆ ಪರೋಕ್ಷವಾಗಿ ತಿರುಗೇಟು ನೀಡಿದಳಾ. ಪ್ರೀತಿಸುವಾಗ ಹೊರಗಡೆ ಭೇಟಿಯಾಗುತ್ತಿದ್ದೆವು. ಆದರೆ ಈಗ ಮನೆಯಲ್ಲಿಯೇ ಇರಬೇಕು. ಹೀಗಾಗಿ ಮಾಲಿನಿಗೆ ಸರಿ ಹೋಗುತ್ತಿಲ್ಲವಾ..? ಅದನ್ನು ಅಮ್ಮ ಕಳುಹಿಸಿದ ಕಾರಿನಲ್ಲಿ ಹೋಗುವ ಮೂಲಕ ಹೇಳಿದಳಾ ಎಂಬ ರೀತಿಯಲ್ಲಿ ಯೋಚಿಸುತ್ತಿದ್ದಾನೆ. ಅತ್ತ ಕಡೆ ಮಾಲಿನಿ ಇದಕ್ಕೆ ವಿರುದ್ಧವಾಗಿ ಯೋಚಿಸುತ್ತಿದ್ದಾಳೆ. ಚಕ್ರವರ್ತಿ ಕುಟುಂಬದಲ್ಲಿ ಒಬ್ಬಳಾಗಿರಬೇಕು ಎಂಬುದೇ ನನ್ನ ಆಸೆ. ಅದಕ್ಕೆ ಎಲ್ಲದಕ್ಕೂ ಅಡ್ಜೆಸ್ಟ್ ಆಗುತ್ತಿರುವುದು. ನನ್ನ ತಪ್ಪಾಗಿ ತಿಳಿದುಕೊಳ್ಳುತ್ತಾ ಇದ್ದೀಯಾ ಅಂತ ಸಂಜೆ ರಾಹುಲ್ ಬಂದು ಪಿಕಪ್ ಮಾಡ್ತಾನೆ ಅಂತಾನೆ ಕಾಯುತ್ತಿದ್ದಳು. ಆದರೆ ರಾಹುಲ್ ಬೇಸರವೇ ಬೇರೆಯಾಗಿದೆ.

ಪದಗಳಿಂದಲೇ ಗಂಡನನ್ನು ಹೊಗಳಿದ ಹೂವಿ
ಆ ಕಡೆ ಮಾಲಿನಿ ಮತ್ತು ರಾಹುಲ್ ಸಣ್ಣದಾಗಿ ಜಗಳ ಆಡಿಕೊಂಡು ಕೂತಿದ್ದಾರೆ. ಈ ಕಡೆ ಸಿಗದ ಗಂಡನ ಬಗ್ಗೆ ಕನಸು ಕಾಣುತ್ತಾ ಕೂತಿದ್ದಾಳೆ. ಪದ್ಯದ ಸಾಲಿನಲ್ಲಿ ಗಂಡನ ಮೇಲಿನ ಪ್ರೀತಿಯನ್ನು ಪದಗಳಲ್ಲಿ ಪೋಣಿಸಿಟ್ಟಿದ್ದಳು ಹೂವಿ. ಇದನ್ನು ಕೇಳಿದ ರಾಹುಲ್ ಮನಸ್ಸು ಕರಗಿ, ನಮ್ಮ ಮಧ್ಯೆ ಇನ್ನು ಯಾರು ಬರಲ್ಲ ಎಂದೇಳಿ, ಹೂವಿಯನ್ನು ಆಲಂಗಿಸಿದ. ಇದನ್ನು ಕಂಡಿರೋ ಪ್ರೇಕ್ಷಕ ವರ್ಗ ಕನಸಿನ್ನಲಾದರೂ ಹೂವಿಯ ಆಸೆ ಈಡೇರಿಸಿದಿರಿ ಎಂದು ಕಮೆಂಟ್ ಹಾಕುತ್ತಿದ್ದಾರೆ. ಇದು ಹೂವಿಯ ನಿಜ ಜೀವನವಲ್ಲ ಕನಸೆಂಬುದು ನೋಡುಗರಿಗೂ ಬಹಳ ಬೇಗ ಅರ್ಥವಾದಂತಿದೆ.

ಮಂದ್ರಾಳಿಂದಲೇ ರಾಹುಲ್ ಸಂಸಾರಕ್ಕೆ ಕುತ್ತು?
ಮಗಳ ಮೇಲಿನ ಪ್ರೀತಿ, ಗಂಡ ಮಾಡಿದ ಆ ಒಂದು ಯಡವಟ್ಟಿನಿಂದಾಗಿ ಮಂದ್ರಾ ಮಹಾಕಾಳಿಯಾಗಿದ್ದಾಳೆ. ಅದರಲ್ಲೂ ರಾಹುಲ್ ಆಗಾಗ ಚನ್ನವಲ್ಸೆಗೆ ಹೋಗುತ್ತಿರುವ ಕಾರಣ ಮಂದ್ರಾಳಿಗೆ ಅನುಮಾನ ಮೂಡಿದ್ದು, ಭಯ ಕಾಡುತ್ತಿದೆ. ಅಷ್ಟೇ ಅಲ್ಲ ಮಾಲಿನಿ ಗಂಡನ ಮನೆಯಲ್ಲಿ ಅಷ್ಟೊಂದು ಸೌಲಭ್ಯವಿಲ್ಲದ ಕಾರಣ ತನ್ನ ಶ್ರೀಮಂತಿಕೆಯ ದರ್ಪವನ್ನು ಅಲ್ಲಿ ಬಳಸಲು ಯತ್ನಿಸುತ್ತಿದ್ದಾಳೆ. ಇದನ್ನು ಮಾಲಿನಿಯೇ ತಡೆದರೆ ಸಂಸಾರ ಸರಿಯಾಗಿರುತ್ತದೆ. ಇಲ್ಲದೆ ಹೋದರು ಇಂದಿನ ಮನಸ್ತಾಪ ಮುಂದೆಯೂ ಮುಂದುವರೆಯುವ ಸಾಧ್ಯತೆ ಇದೆ.
ಚಕ್ರವರ್ತಿ ಮನೆಯಲ್ಲಿ ಹೇಗಿದೆ ಸೆಲೆಬ್ರೆಷನ್
'ಬೆಟ್ಟದ ಹೂ' ಧಾರಾವಾಹಿ ಶುರುವಾಗಿ ಇಂದಿಗೆ 108 ಸಂಚಿಕೆಯನ್ನು ಪೂರ್ಣಗೊಳಿಸಿದೆ. ಈ ಸಂಭ್ರಮದ ಖುಷಿಯನ್ನು ಇಡೀ ಚಕ್ರವರ್ತಿ ಮನೆಯವರು ಸೇರಿ, ಆಚರಿಸುತ್ತಿದ್ದಾರೆ. ಅವರ ಜೊತೆಗೆ ಚನ್ನವಲ್ಸೆಯಿಂದ ಗೌರ ಕೂಡ ಬಂದಿದ್ದಾಳೆ. ಮನೆ ಮಂದಿಯೆಲ್ಲಾ ಇಷ್ಟು ದಿನದ ಸಂಚಿಕೆ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದು, ತೆರೆ ಮೇಲೆ ಮಾತ್ರವಲ್ಲ ಗ್ಯಾಪ್ ಸಿಕ್ಕಾಗ ಶೂಟಿಂಗ್ ಇಲ್ಲದೆ ಇದ್ದಾಗಲೂ ಕುಟುಂಬಸ್ಥರಂತೆಯೇ ಇದ್ದೀವಿ ಎಂದಿದ್ದಾರೆ.


Click it and Unblock the Notifications











