ಬೆಟ್ಟದ ಹೂ: ಹೂವಿಗೆ ಅವಮಾನ ಮಾಡಿದರೆ ರಾಹುಲ್ ಸುಮ್ಮನೆ ಇರುತ್ತಾನಾ..?

By ಎಸ್ ಸುಮಂತ್

ಮಂದ್ರಾಗೆ ಚನ್ನವಲ್ಸೆ ಹೆಸರೆತ್ತಿದರೇನೆ ಆಗುವುದಿಲ್ಲ. ಅದಕ್ಕೆ ಕಾರಣ 18 ವರ್ಷಗಳ ಹಿಂದೆ ಗೌತಮ್ ಚನ್ನವಲ್ಸೆಯಲ್ಲಿ ಗೌರನ ಪ್ರೀತಿಯಲ್ಲಿ ಬಿದ್ದಿದ್ದ ವಿಚಾರಕ್ಕೆ. ಗೌರಗೆ ಮಗಳಿರುವುದು ಗೊತ್ತಿಲ್ಲ. ಹಾಗಂತ ಗೌತಮ್ ಮತ್ತು ಗೌರ ನಡುವಿನ ಪ್ರೀತಿಯೂ ಮಂದ್ರಾಗೆ ಅಷ್ಟಾಗಿ ಗೊತ್ತಿಲ್ಲ ಅನ್ಸುತ್ತೆ. ಆದರೆ ಚನ್ನವಲ್ಸೆಯಿಂದ ಬಂದಾಗಿನಿಂದ ಒಂದು ರೀತಿ ವಿಚಿತ್ರವಾಗಿ ಆಡುತ್ತಾನೆ ಅನ್ನೋದು ಬೇಸರ. ಸಮಯ ನೀಡುತ್ತಿಲ್ಲ ಎಂಬುದೇ ನೋವು. ಹೀಗಾಗಿ ಗೌತಮ್ ಮೇಲೆ ಕಿಡಿಕಾರುವುದಲ್ಲದೆ ಚನ್ನವಲ್ಸೆಯಿಂದ ಬಂದಿದ್ದೀವಿ ಎಂದವರ ಮೇಲೂ ಕೆಂಡಕಾರುತ್ತಿದ್ದಾಳೆ. ಅದಕ್ಕೆ ಹೂವಿಯ ಜೊತೆ ನಡೆದುಕೊಳ್ಳುವ ರೀತಿಯೇ ಸಾಕ್ಷಿ.

ಗೌತಮ್ ತಾಯಿ ಮಂದ್ರಾಳ ಮನಸ್ಸನ್ನು ಸರಿ ಮಾಡಿದ್ದರು. ತೀರಾ ಹಳೆಯ ವಿಚಾರವನ್ನು ಹಿಡಿದು ಎಳೆದಾಡಬೇಡ. ಮೊದಲು ಸಂಸಾರ ಸರಿ ಮಾಡಿಕೋ ಎಂದು ಹೇಳಿದ್ದರು. ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಮಂದ್ರಾ, ಗೌತಮ್ ಜೊತೆ ಮೊದಲಿನಂತೆ ಇರುವುದಕ್ಕೆ ಪ್ರಯತ್ನ ಕೂಡ ಪಟ್ಟಿದ್ದಳು. ಆದರೆ ಅದೇ ಕ್ಷಣ ಮಂದ್ರಾಳ ಕಿವಿಗೆ ಮತ್ತೆ ಚನ್ನವಲ್ಸೆ ಹೆಸರು ಬಿದ್ದಿದ್ದೆ ತಡ, ಮತ್ತೆ ತನ್ನ ಹಗೆ ಸಾಧಿಸಲು ಶುರು ಮಾಡಿದ್ದಾಳೆ.

ಗೌತಮ್ ನಿಂದ ಮಂದ್ರಾ ಬಯಸುತ್ತಿರುವುದೇನು?

ಗೌತಮ್ ನಿಂದ ಮಂದ್ರಾ ಬಯಸುತ್ತಿರುವುದೇನು?

ಅತ್ತೆ ಮಾತಿಗೆ ಬೆಲೆ ಕೊಟ್ಟ ಮಂದ್ರಾ ಬದಲಾಗಲು ಯತ್ನಿಸಿದ್ದಾಳೆ. ಇದೇ ವೇಳೆ ಚನ್ನವಲ್ಸೆ ಹೆಸರು ಕೇಳಿ ತಲೆ ತಿರುಗಿ ಬಿದ್ದಿದ್ದಾಳೆ. ಬಳಿಕ ಅತ್ತೆ ನೀರು ತರಲು ಹೋದಾಗ ಗೌತಮ್ ಬಳಿ ಮನವಿ ಮಾಡಿದ್ದಾಳೆ. ಆ ಚನ್ನವಲ್ಸೆಯಿಂದಲೇ ನಮ್ಮ ಸಂಸಾರ ಹಾಳಾಗಿದ್ದು. ನೀವೂ ನನ್ನ ಜೊತೆ ಇರ್ತೀರಾ ಅಲ್ವಾ ಎಂದಾಗ ಗೌತಮ್ ಹೌದು ಎನ್ನುತ್ತಾನೆ. ಆದರೆ ಚನ್ನವಲ್ಸೆ ವಿಚಾರದಲ್ಲಿ ನೋ ಕಾಂಪ್ರಮೈಸ್. ಯಾಕೆಂದರೆ, ಗೌತಮ್ ಪ್ರೀತಿಗಾಗಿ ಅಲ್ಲಿ ಗೌರ ಕಾಯುತ್ತಾ ಕೂತಿದ್ದಾಳೆ. ಅವಳಿಗೆ ನ್ಯಾಯ ಕೊಡಲು ಗೌತಮ್ ಮನಸ್ಸು ಮಾಡಿದ್ದಾನೆ. ಇದೇ ಕಾರಣಕ್ಕೆ ಚನ್ನವಲ್ಸೆಗೆ ಯಾಕೆ ಹೋಗುತ್ತಿಯಾ ಎಂದಿದ್ದಕ್ಕೆ, ಕೆಲಸ ಇದೆ ಅಷ್ಟೇ ಅಂತ ಹೇಳಿ ಮುಂದೆ ಸಾಗಿದ್ದಾನೆ. ಆದರೆ ಈ ಮಧ್ಯೆನೇ ಮಂದ್ರಾ ಮಾಸ್ಟರ್ ಫ್ಲ್ಯಾನ್ ಮಾಡಿದ್ದಾಳೆ.

ಚನ್ನವಲ್ಸೆ ಸತ್ಯ ತಿಳಿಯಲು ಹೂವಿಗೆ ಆಹ್ವಾನ?

ಚನ್ನವಲ್ಸೆ ಸತ್ಯ ತಿಳಿಯಲು ಹೂವಿಗೆ ಆಹ್ವಾನ?

ಚನ್ನವಲ್ಸೆಯಲ್ಲಿ ಅಂತದ್ದೇನು ಇದೆ, ಹೂವಿಯನ್ನು ಕಂಡರೆ ಗೌತಮ್ ಯಾಕೆ ಹಾಗೇ ಆಡುವುದು ಎಂಬುದು ಮಂದ್ರಾಗೆ ಇರುವ ಅನುಮಾನ. ಹೀಗಾಗಿ ಆ ಸತ್ಯ ತಿಳಿದುಕೊಳ್ಳಲು ಮಾಸ್ಟರ್ ಫ್ಲ್ಯಾನ್ ಮಾಡಿದ್ದಾಳೆ. ಅದಕ್ಕಾಗಿ ಮಗಳನ್ನು ನೋಡಬೇಕೆಂಬ ನಾಟಕವಾಡುತ್ತಿದ್ದಾಳೆ. ಮಾಲಿನಿಗೆ ಫೋನ್ ಮಾಡಿ ಮನೆಗೆ ಬರುವುದಕ್ಕೆ ಹೇಳಿದ್ದಾಳೆ. ಅಷ್ಟೇ ಅಲ್ಲ, ಹೂವಿಯನ್ನು ಕರೆದುಕೊಂಡು ಬರಲು ಹೇಳಿದ್ದಾಳೆ. ಈ ಮಾತು ಕೇಳಿ ಮಾಲಿನಿ ಕೂಡ ಶಾಕ್ ಆಗಿದ್ದಾಳೆ. ಆಗ ಮಂದ್ರಾ ಒಂದಷ್ಟು ನಾಟಕವಾಡಿದ್ದಾಳೆ. ತುಂಬಾ ಕೆಟ್ಟದಾಗಿ ನಡೆದುಕೊಂಡು ಬಿಟ್ಟಿದ್ದೀನಿ ಅದಕ್ಕೆ ಕ್ಷಮೆ ಕೇಳುವುಕ್ಕೆ ಎಂದು ಮನಸ್ಸು ಬದಲಾಯಿಸಿದ್ದಾಳೆ. ಅದನ್ನೇ ಮನೆಯವರ ಮುಂದೆ ಹೇಳಿದ ಮಾಲಿನಿ, ಹಾಗೋ ಹೀಗೋ ಒಪ್ಪಿಸಿ ಹೂವಿಯನ್ನು ಕರೆದುಕೊಂಡು ತವರು ಮನೆಗೆ ಹೊರಟಿದ್ದಾಳೆ. ಆದರೆ ಇಲ್ಲಿಯೂ ಮಂದ್ರಾ ಕಿಲಾಡಿ ಫ್ಲ್ಯಾನ್ ಮಾಡಿದ್ದಾಳೆ.

ಹೂವಿಗೆ ಅವಮಾನ ಮಾಡಿ ಸತ್ಯ ತಿಳಿಯಲು ಹೊರಟ ಮಂದ್ರಾ

ಹೂವಿ ಮೂಲತಃ ಚನ್ನವಲ್ಸೆಯವಳು. ಹೂವಿಯನ್ನು ಕಂಡರೆ ಗೌತಮ್ ಇನ್ನಿಲ್ಲದ ಕನಿಕರ, ಕಾಳಜಿ, ಸ್ವಂತ ಮಗಳಂತೆ ಟ್ರೀಟ್ ಮಾಡುತ್ತಾನೆ. ಇದು ಮಂದ್ರಾಳಾ ತಲೆ ಕೆಡಿಸಿದೆ. ಅದಕ್ಕೆ ಕ್ಷಮೆ ಕೇಳುವ ನಾಟಕ ಮಾಡಿ ಹೂವಿಯನ್ನು ಮನೆಗೆ ಕರೆಸಿರುವ ಮಂದ್ರಾ, ಮಾಲಿನಿಯನ್ನು ಹೊರಗೆ ಕಳುಹಿಸಿದ್ದಾಳೆ. ಮನೆಯಲ್ಲಿ ಸಣ್ಣದೊಂದು ಪಾರ್ಟಿ ಅರೆಂಜ್ ಮಾಡಿ, ಅದರಲ್ಲಿ ಒಬ್ಬ ಗೆಳತಿಯನ್ನು ರೆಡಿ ಮಾಡಿದ್ದಾಳೆ. ಹೂವಿಗೆ ಅವಮಾನ ಮಾಡುವುದೇ ಆಕೆಯ ಕೆಲಸ. ಹೀಗೆ ಅವಮಾನ ಮಾಡುವಾಗ ಗೌತಮ್‌ನನ್ನು ಮುಂದೆಯೇ ಕೂರಿಸಿಕೊಂಡು ಮುಖದ ಭಾವನೆಯನ್ನು ನೋಡುತ್ತಿದ್ದಾಳೆ ಮಂದ್ರಾ. ಆಕೆಯ ಸ್ನೇಹಿತೆಯ ಕಾಲಿನ ಚಪ್ಪಲಿ ತೆಗೆದು ಬದಲಾಯಿಸಿದಾಗ, ರಾಹುಲ್ ಎಂಟ್ರಿಯಾಗಿದೆ. ಇದೆನಾ ನೀವೂ ಕ್ಷಮೆ ಕೇಳುವ ರೀತಿ ಅಂತ ಮಂದ್ರಾಗೆ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾನೆ. ಅಸಹಾಯಕ ಸ್ಥಿತಿಯಲ್ಲಿದ್ದ ತಂದೆಯ ಮನಸ್ಸಿಗೆ ರಾಹುಲ್ ಮಾತು ನೆಮ್ಮದಿ ತಂದಿದೆ.

More from Filmibeat

English summary
Star suvarna serial Bettada Hoo Written Update on may 31th episode. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X