Bettada Hoo Rahul: ʻಬೆಟ್ಟದ ಹೂʼ ಹೀರೊ ರಾಹುಲ್ ಸೋಶಿಯಲ್ ಮೀಡಿಯಾ ತುಂಬೆಲ್ಲಾ ಬೈಕ್‌ಗಳದ್ದೇ ಹವಾ..!
ಸಾಮಾನ್ಯವಾಗಿ ಎಲ್ಲರಿಗೂ ಒಂದಲ್ಲ ಒಂದು ಕ್ರೇಜ್ ಇದ್ದೆ ಇರುತ್ತದೆ. ಟ್ರಿಪ್ ಹೋಗೋದು, ಲಾಂಗ್ ಡ್ರೈವ್ ಹೋಗೋದು, ಫ್ರೆಂಡ್ಸ್ ಜೊತೆ ಸುತ್ತಾಡೋ ಆಸೆಗಳಿರುತ್ತವೆ. ಇನ್ನು ಕೆಲವರಿಗೆ ಬೈಕ್ ಅಂದ್ರೆ ಇಷ್ಟ, ಕಾರು ಅಂದ್ರೆ ಇಷ್ಟ, ಸೈಕಲ್‌ಗಳ ಕ್ರೇಜ್ ಇರುತ್ತೆ. ಹೀಗೆ ಎಷ್ಟೋ ಜನ ಹಲವಾರು ವಿಚಾರದಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ. ಆ ಆಸಕ್ತಿ ಅವರವರ ಸೋಶಿಯಲ್ ಮೀಡಿಯಾದಲ್ಲಿ ಎದ್ದು ಕಾಣುವುದರಲ್ಲಿ ಡೌಟೇ ಇಲ್ಲ. ಅಂತದ್ದೊಂದು ಆಸಕ್ತಿದಾಯಕ ಪಿಕ್ಟರ್ಸ್ ನಮ್ಮ ಕಣ್ಣಿಗೆ ಬಿದ್ದಿದೆ. ಅದು ಹೂವಿಯ ಗಂಡನ ವಿಚಾರ.
ಬೆಟ್ಟದ ಹೂ ಧಾರಾವಾಹಿಯ ಹೀರೋ ರಾಹುಲ್ ಬಗ್ಗೆ ಸಾಕಷ್ಟು ಆಸಕ್ತಿದಾಯ ವಿಚಾರಗಳು ಸದ್ದು ಮಾಡುತ್ತಿವೆ. ಅದರಲ್ಲಿ ಅವರಿಗಿರುವ ಬೈಕ್ ಕ್ರೇಜ್ ಬಗ್ಗೆ. ರಾಹುಲ್ ಸೋಶಿಯಲ್ ಮೀಡಿಯಾವನ್ನೊಮ್ಮೆ ತೆಗೆದು ನೋಡಿದರೆ ಸಾಕು ಹೆಚ್ಚಾಗಿ ಕಣ್ಣಿಗೆ ಕಾಣುವುದು ಅವರು ಬೈಕ್ ಮೇಲೆ ಕುಳಿತಿರುವ ಫೋಟೊಗಳೇ. ಇದರಿಂದ ಅವರಿಗಿರುವ ಬೈಕ್ ಕ್ರೇಜ್ ಬಗ್ಗೆ ತಿಳಿಯೋದು ಕಷ್ಟವಾಗುವುದಿಲ್ಲ.

ದರ್ಶಕ್ ಬಳಿ ಇರುವ ಬೈಕ್‌ಗಳ ಬಗ್ಗೆ ನಿಮಗೆ ಗೊತ್ತಾ?
ಸ್ಟಾರ್ ಸುವರ್ಣದಲ್ಲಿ ಮೂಡಿ ಬರುತ್ತಿರುವ 'ಬೆಟ್ಟದ ಹೂ' ಧಾರಾವಾಹಿ ಸದ್ಯ ಎಲ್ಲರ ಮನಮುಟ್ಟುವ ಧಾರಾವಾಹಿ. ಹೂವಿ ಅಂದ್ರೆ ಎಲ್ಲರಿಗೂ ಎಷ್ಟು ಇಷ್ಟವೋ ರಾಹುಲ್ ಕಂಡರೆ ಅಷ್ಟೆ ನಿಗಿ ನಿಗಿ ಕೆಂಡದಂತಾಗುತ್ತಿದ್ದಾರೆ. ಆ ಮುಗ್ಧ ಹುಡುಗಿಯನ್ನು ಹಳ್ಳಿಯಿಂದ ಕರೆದುಕೊಂಡು ಬಂದು ಮೋಸ ಮಾಡುತ್ತಿದ್ದಾನೆ ಎಂಬುದು ಪ್ರೇಕ್ಷಕರ ಗೋಳಾಟ. ಆದರೆ ರಾಹುಲ್ ಪ್ರೀತಿಸಿದ ಹುಡುಗಿಯನ್ನು ಬಿಡಲು ಆಗದೆ ಹೂವಿಯ ಬಗ್ಗೆ ಸತ್ಯ ಹೇಳಲು ಸಾಧ್ಯವಾಗದೆ ಒದ್ದಾಡುತ್ತಿದ್ದಾನೆ. ಇದೇ ಪಾತ್ರದಲ್ಲಿ ಗಮನ ಸೆಳೆಯುತ್ತಿರುವುದು ದರ್ಶಕ್. ಇದು ಧಾರಾವಾಹಿಯ ರಾಹುಲ್ ಕಥೆಯಾದರೆ, ದರ್ಶಕ್ ರಿಯಲ್ ಲೈಫ್ ಸ್ಟೈಲ್ ಸಿಕ್ಕಾಪಟ್ಟೆ ಕ್ರೇಜಿಯಾಗಿದೆ. ಅವರ ಸೋಶಿಯಲ್ ಮೀಡಿಯಾ ನೋಡಿದಾಗ ಈ ವಿಷಯ ತಿಳಿಯುತ್ತೆ.
ಬೈಕ್ ಬಗ್ಗೆ ಸಾಲು ಸಾಲು ಭಾವನಾತ್ಮಕ ಸಂದೇಶ
ದರ್ಶಕ್ ಈ ಪೋಸ್ಟ್ ನೋಡಿದರೆ ಖಂಡಿತಾ ಬೈಕ್‌ಗಾಗಿ ಹಂಬಲಿಸುತ್ತಿದ್ದ ಪ್ರತಿಯೊಬ್ಬರ ಆ ದಿನಗಳನ್ನು ನೆನಪಿಸುತ್ತದೆ. ಈ ಪೋಸ್ಟ್‌ನಲ್ಲಿಯೇ ದರ್ಶಕ್‌ಗೆ ಅದೆಷ್ಟು ಬೈಕ್ ಕ್ರೇಜ್ ಇದೆ ಅನ್ನೋದು ಕನ್ಫರ್ಮ್ ಆಗುತ್ತೆ. ದರ್ಶಕ್ ಆಟೋ ಮೊಬೈಲ್ ಕಡೆಗೆ ಹೆಚ್ಚು ಒಲವು ಹೊಂದಿದ್ದವರು. 6 ವರ್ಷದವರಿದ್ದಾಗಲೇ 200 ಕಾರುಗಳ ಹೆಸರನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದವರು. ಕಾಲೇಜು ದಿನಗಳಲ್ಲಿ ಬೈಕ್‌ಗಾಗಿ ತುಂಬಾ ಹಂಬಲಿಸುತ್ತಿದ್ದವರಂತೆ. ಸಾಕಷ್ಟು ಸ್ಟುಡೆಂಟ್ಸ್ ಈ ಆಸೆಯನ್ನು ದಾಟಿ ಬಂದಿದ್ದಾರೆ. ಬೈಕ್ ಕ್ರೇಜ್ ಇದ್ದವರು ಬೈಕ್‌ಗಾಗಿ ಕಾಲೇಜು ಡೇಸ್‌ನಲ್ಲಿ ತಂದೆ ತಾಯಿಯನ್ನು ಪೀಡಿಸುವ ಉದಾಹರಣೆಗಳು ಈಗ ಅವರವರ ನೆನಪಿನಾಳದಲ್ಲಿ ಸುಳಿದು ಹೋಗಿರುತ್ತೆ.
ಇಂಜಿನಿಯರಿಂಗ್ ಓದುವಾಗ ಸಿಕ್ಕಿತ್ತು ಬೈಕ್
ದರ್ಶಕ್ ಗೆ ಕೂಡ ಬೈಕ್ ಕ್ರೇಜ್ ಇದ್ದರು ಅವರಿಗೆ ಅವರ ತಾಯಿ ಬೈಕ್ ಕೊಡಿಸಿದ್ದು ಮಾತ್ರ ಅಂತಿಮ ಹಂತದ ಇಂಜಿನಿಯರಿಂಗ್ ಓದುವಾಗ ಅಂತೆ. ಅವರ ಜೊತೆ ಇರುವ ಬೈಕ್‌ಗಳ ಜೊತೆ ಮಾನಸಿಕವಾಗಿ ಬೆರೆತು ಹೋಗಿದ್ದಾರೆ. ಯಾಕಂದ್ರೆ ಆರಾಮಾದಾಯಕ ಸ್ಥಳಗಳಿಗೆ ಕರೆದುಕೊಂಡು ಹೋಗಲು, ಜೊತೆಗೆ ತಮ್ಮೆಲ್ಲಾ ಖುಷಿಯನ್ನು ಹಂಚಿಕೊಳ್ಳಲು ಕಿವಿಯಾಗುತ್ತವೆ ಅನ್ನೋದು ದರ್ಶಕ್ ಭಾವನೆ.
Recommended Video


ಸಂದೇಶ ನೀಡುವುದನ್ನು ಮರೆತಿಲ್ಲ ದರ್ಶಕ್..!
ಬೈಕ್ ಕ್ರೇಜ್ ಇರುವವರು ಸಾಕಷ್ಟು ಬೈಕ್‌ಗಳನ್ನ ಓಡಿಸಿ ಅನುಭವ ಪಡೆದಿರುತ್ತಾರೆ. ಯಾವುದೇ ಬೈಕ್ ಆಗಲಿ, ಯಾವುದೇ ರಸ್ತೆಯಾಗಲಿ ಅಚ್ಚುಕಟ್ಟಾಗಿ ಓಡಿಸುತ್ತೇವೆಂಬ ಆತ್ಮಸ್ಥೈರ್ಯ ಅವರಲ್ಲಿರುತ್ತದೆ. ಆದರೆ ಇದರ ನಡುವೆ ತಮ್ಮ ಸೇಫ್ಟಿಯನ್ನೇ ಮರೆತಿರುತ್ತಾರೆ. ಅಂತ ಉದಾಹರಣೆಗಳು ನಮ್ಮಲ್ಲಿ ಸಾಕಷ್ಟು ಸಿಗುತ್ತವೆ. ಆದರೆ ಇಲ್ಲಿ ದರ್ಶಕ್ ಹೆಲ್ಮೆಟ್ ರಹಿತ ಚಾಲನೆ ಮಾಡುವವರಿಗೆ ಸಲಹೆಯನ್ನು ನೀಡಿದ್ದಾರೆ. ಹೆಲ್ಮೆಟ್ ಧರಿಸಿ, ಸುರಕ್ಷಿತವಾಗಿ ಗಾಡಿ ಓಡಿಸಿ ಎಂದಿದ್ದಾರೆ. ಈ ಮಧ್ಯೆ ದರ್ಶಕ್ ಸೋಶೀಯಲ್ ಮೀಡಿಯಾದಲ್ಲಿ ವೆರೈಟಿ ವೆರೈಟಿ ಬೈಕ್ ಗಳ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.


Click it and Unblock the Notifications











