Bettada Hoo Serial: ಹೂವಿ ಬದುಕು ಅಲ್ಲೋಲ-ಕಲ್ಲೋಲ : ಈಗಲಾದರೂ ಹೆಂಡತಿ ಪರ ನಿಲ್ತಾನಾ ರಾಹುಲ್?

By ಎಸ್ ಸುಮಂತ್

ಹಳ್ಳಿಯಲ್ಲಿ ಹುಟ್ಟಿದ ತನ್ನ ಮನೆಯವರು. ತನ್ನ ಊರಿನವರೇ ನನ್ನ ಪ್ರಪಂಚ ಅಂತ ನಂಬಿದ್ದ ಹೂವಿ ಇದೀಗ ಪಟ್ಟಣ ಸೇರಿದ್ದಾಳೆ. ಎಲ್ಲರ ಎದುರು ತಾಳಿ ಕಟ್ಟಿ ಹೆಂಡತಿಯೆಂದು ಸ್ವೀಕರಿಸಿದವನ ಮನೆಗೆ ಕೆಲಸದಾಕೆಯಾಗಿ ಬಂದಿದ್ದಾಳೆ. ಇದ್ಯಾವುದೂ ಆಕೆಗೆ ಮ್ಯಾಟರೇ ಅಲ್ಲ. ಆದರೆ ಆಕೆಗೆ ಆಗಬಾರದ ಅನ್ಯಾಯ ಗಂಡನಿಂದಲೇ ಆಗುತ್ತಿದೆ.

ಹೂವಿಯನ್ನು ಹಳ್ಳಿಯಿಂದ ಊರಿನವರ ಬಲವಂತಕ್ಕೆ ಹೆದರಿ ಕರೆದುಕೊಂಡು ಬಂದ ರಾಹುಲ್ ಆಕೆಯನ್ನು ಮನೆಯ ಕೆಲಸಕ್ಕೆಂದು ಕರೆತಂದಿರುವುದಾಗಿ ಹೇಳಿದ್ದಾನೆ. ಅವರಿಬ್ಬರು ಮದುವೆಯಾಗಿರುವುದು ಯಾರಿಗೂ ಗೊತ್ತಿಲ್ಲ. ರಾಹುಲ್ ಹೂವಿಗೂ ಅದೇ ಕಂಡೀಷನ್ ಹಾಕಿದ್ದಾನೆ. ಹೀಗಾಗಿ ಹೂವಿ ಕೂಡ ಎಲ್ಲಿಯೂ ಬಾಯಿ ಬಿಟ್ಟಿಲ್ಲ. ಎಲ್ಲಾ ನೋವನ್ನು ಸಹಿಸಿಕೊಂಡು ಬದುಕುತ್ತಿದ್ದಾಳೆ.

ಮದುವೆ ಮಂಟಪದಲ್ಲಿ ಬಯಲಾಗುತ್ತಾ ಹೂವಿ ಕಲ್ಯಾಣ?

ರಾಹುಲ್ ಈ ಮೊದಲಿನಿಂದಲೂ ಪ್ರೀತಿ ಮಾಡುತ್ತಿದ್ದ ಮಾಲಿನಿಗೆ ಸತ್ಯ ಹೇಳದೆ ಮುಚ್ಚಿಟ್ಟಿದ್ದಾನೆ. ತನ್ನ ಪ್ರೀತಿಯನ್ನು ಉಳಿಸಿಕೊಳ್ಳುವ ಸಲುವಾಗಿ ಸತ್ಯವನ್ನು ಮುಚ್ಚಿಟ್ಟು, ಮಾಲಿನಿ ಜೊತೆ ಹೊಸ ಜೀವನಕ್ಕೆ ಸಿದ್ದವಾಗಿದ್ದಾನೆ. ಅದೀಗ ಮದುವೆ ಮಂಟಪದವರೆಗೂ ಬಂದು ನಿಂತಿದೆ. ಈ ಎಲ್ಲವನ್ನೂ ಹೂವಿ ನೋಡುತ್ತಲೇ, ನೋವನ್ನು ನುಂಗುತ್ತಿದ್ದಾಳೆ.

Star Suvarna Serial Bettada Hoo Writtern Update

ಆದರೆ, ಈ ಮಧ್ಯೆ ಮದುವೆ ಮಂಟಪದಲ್ಲಿ ಹೂವಿಯ ಮೇಲೆ ಒಬ್ಬ ಕೆಟ್ಟ ಮನುಷ್ಯನ ಕಣ್ಣು ಬಿದ್ದಿದೆ. ಅದರ ಸಲುವಾಗಿಯೇ ಹೂವಿಗೆ ಮದ್ಯ ಕುಡಿಸಿದ್ದಾನೆ. ಅವನ ಉದ್ದೇಶ ಬೇರೆಯದ್ದೇ ಆಗಿತ್ತು. ಹೀಗಾಗಿ ಹೂವಿ ಬೀಳುವ ಸಮಯಕ್ಕೆ ಬಂದು ಕಾಪಾಡುವವನಂತೆ ನಾಟಕವಾಡಿದ್ದಾನೆ.

ಕುಡಿದ ಮತ್ತಿನಲ್ಲಿ ಹೂವಿಯ ರಾದ್ದಾಂತ ಮನೆಯವರ ತಲೆ ಕೆಡಿಸಿದೆ!

ನಾವೂ ಹೆಣ್ಣಿನ ಕಡೆಯವರು. ಹೀಗಾಗಿ ಗಂಡಿನ ಕಡೆಯವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅಂತ ಯಾಮಾರಿಸಿ, ಕುಡಿಯುವ ಜ್ಯೂಸ್‌ನಲ್ಲಿ ಹೂವಿಗೆ ಮದ್ಯವನ್ನುಬರೆಸಿ ಕೊಟ್ಟಿದ್ದಾನೆ. ಇದನ್ನು ಕುಡಿದ ಹೂವಿಗೆ ನೂರು ಲೋಕ ಕಂಡಿದೆ. ಮನಸ್ಸಲ್ಲಿ ಅದುಮಿಟ್ಟುಕೊಂಡಿದ್ದ ನೋವೆಲ್ಲಾ ನಗುವಾಗಿ ಹೊರ ಬಂದಿದೆ. ಎಲ್ಲೆಂದರಲ್ಲಿ ತೂರಾಡಿಕೊಂಡು, ಹಾರಾಡಿಕೊಂಡು ಜೋರು ಗಲಾಟೆ ಮಾಡುತ್ತಾ ಹೂವಿ ಮದುವೆ ಮಂಟಪದಲ್ಲಿ ಹೊಸ ರಾದ್ಧಾಂತವನ್ನೇ ಸೃಷ್ಟಿ ಮಾಡಿದ್ದಾಳೆ.

ಆದರೆ, ಹೂವಿಗೆ ತಾನ್ಯಾಕೆ ಈ ರೀತಿ ಮಾಡುತ್ತಿದ್ದೀನಿ ಅನ್ನೋ ಅರಿವೆ ಇಲ್ಲ. ಅಷ್ಟರಲ್ಲೇ ರಾಹುಲ್ ಎದುರಿಗೆ ಬಂದಾಗ ನಮ್ಮ ಮದುವೆ ವಿಚಾರವನ್ನು ಎಲ್ಲರಿಗೂ ಹೇಳಿದೆಯಾ ಅಂತ ವಾರ್ನಿಂಗ್ ಕೊಟ್ಟಿದ್ದಾಳೆ. ಮಾಲಿನಿಗೋಸ್ಕರ ಹೂವಿ ಮನೆಯಿಂದಾಚೆ ಹಾಕೋ ನಿರ್ಧಾರ ಮಾಡ್ತಾರಾ ಮನೆಯವರು..?

Star Suvarna Serial Bettada Hoo Writtern Update

ಸದ್ಯ ಮದುವೆ ಮಂಟಪದಲ್ಲಿ ಜೋಡಿ ಮದುವೆಗೆ ತಯಾರಿ ಆಗಿದೆ. ಒಂದು ಕಡೆ ಪ್ರೀತಿಸಿದ ಹುಡುಗಿಯ ಜೊತೆ ಹೊಸ ಜೀವನಕ್ಕೆ ಕಾಲಿಡುತ್ತಿರುವ ಸಂತೋಷ. ಮತ್ತೊಂದು ಕಡೆ ಅನಿವಾರ್ಯತೆಗೆ ಸಿಲುಕಿ ಮದುವೆಯಾದ ಮುಗ್ಧ ಹುಡುಗಿ. ರಾಹುಲ್ ಹೆಚ್ಚು ಗಮನ ಕೊಟ್ಟಿದ್ದು ಮಾಲಿನಿ ಕಡೆಗೆ ಆದರೂ, ಕೊಂಚವಾದರೂ ನಾನು ತಪ್ಪು ಮಾಡ್ತಿದ್ದೀನಿ ಅನ್ನೋ ಗಿಲ್ಟಿ ಅವನಲ್ಲಿ ಕಾಡುತ್ತಿದೆ.

ಹೂವಿ ಕುಡಿದು ಆ ರೀತಿಯ ಅವಾಂತರ ಸೃಷ್ಟಿಸಿದ್ದು, ಮಾಲಿನಿ ಅಮ್ಮನಿಗೆ ಇಡಿಸಿಲ್ಲ. ಹೀಗಾಗಿಯೇ ಮದುವೆಗೂ ಹೂವಿಯನ್ನು ಮನೆಯಿಂದ ಹೊರ ಹಾಕೋದಕ್ಕೆ ಸೂಚಿಸಿದ್ದಾಳೆ. ಈ ಮದುವೆ ನಡೆಯಬೇಕು ಅಂದರೆ, ನಿಮಗೆ ಈ ಹೂವಿ ಬೇಕೋ ಅಥವಾ ನಮ್ಮ ಮಗಳು ಮಾಲಿನಿ ಬೇಕೋ ಎಂದು ಡಿಸೈಡ್ ಮಾಡಿ ಎಂದಿದ್ದಾರೆ.

ರಾಹುಲ್‌ಗೆ ಹೂವಿ ಇಷ್ಟ ಇಲ್ಲದೆ ಇದ್ದರು, ಆಕೆಯ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾನೆ. ಆಕೆಯ ಮನೆಯವರಿಗೆ ಉತ್ತರ ಕೊಡಬೇಕಾಗುತ್ತದೆ. ಇದ್ಯಾವುದು ಆತನ ತಲೆಯಲ್ಲಿ ಇಲ್ಲದೆ ಹೋದರೂ, ಹೂವಿ ಮನೆಯವರಿಗೆಲ್ಲ ಮಗಳೆ ಆಗಿದ್ದಾಳೆ. ಹೀಗಾಗಿ ಯಾರಿಗೂ ಆಕೆಯನ್ನು ಕಳುಹಿಸುವುದು ಇಷ್ಟವಿಲ್ಲ. ಮನೆಯಿಂದ ಹೂವಿ ಹೋಗ್ತಾಳಾ? ಅಥವಾ ಸತ್ಯಾಂಶ ತಿಳಿದು ಸೊಸೆಯಾಗಿ ಸೇರು ಒದ್ದು ಬರ್ತಾಳಾ ಅನ್ನೋ ಕುತೂಹಲ ಪ್ರೇಕ್ಷಕನ ಮನಸ್ಸಲ್ಲಿ ಉಳಿದುಕೊಂಡಿದೆ.

More from Filmibeat

English summary
Star Suvarna serial Bettada hoo writtern update on March 24th. Here is more information What is Rahul's next move.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X