ಜೇನುಗೂಡು: ಮಾಯಾಳ ಡಬ್ಬಾ ಫ್ಲ್ಯಾನ್‌ನಿಂದ ದಿಯಾ-ಶಶಾಂಕ್ ಇನ್ನೂ ಹತ್ತಿರ ಆಗ್ತಾರಾ?

By ಎಸ್ ಸುಮಂತ್

ಶತ್ರುವಿನ ಶತ್ರು ಮಿತ್ರ ಎಂಬ ಮಾತಿದೆ. ಸದ್ಯ 'ಜೇನುಗೂಡು' ಧಾರಾವಾಹಿಯಲ್ಲಿ ಮಾಯಾ-ಕ್ರಿಶ್ ಜೊತೆಯಾಗಿದ್ದಾರೆ. ಇಬ್ಬರ ಗುರಿ ಒಂದೇ ದಿಯಾ - ಶಶಾಂಕ್ ಮದುವೆ ಮುರಿಯುವುದು. ಹಣದ ಆಸೆಗೆ ದಿಯಾಳನ್ನು ಪಡೆಯಬೇಕೆಂಬ ಗುರಿ ಕ್ರಿಶ್‌ಗಿದೆ. ಪ್ರೀತಿ ಹುಟ್ಟಿರುವ ಕಾರಣ ಶಶಾಂಕ್‌ನ ಪಡೆಯಬೇಕೆಂಬ ಹಠ ಮಾಯಾಗಿದೆ. ಹೀಗಾಗಿಯೇ ಇದೀಗ ಇಬ್ಬರೂ ಒಂದಾಗಿದ್ದಾರೆ. ಒಮ್ಮೆ ಫೇಲ್ ಆಗಿರುವ ಫ್ಲ್ಯಾನ್ ಮಾಡಿದ್ದಾರೆ.

ದಿಯಾಳ ಬಗ್ಗೆ ಹೇಗಾದರೂ ಮಾಡಿ ಶಶಾಂಕ್ ಮನೆಯವರಿಗೆ ಕೆಟ್ಟವಳೆಂದು ಪ್ರೂವ್ ಮಾಡಬೇಕೆಂಬುದು ಮಾಯಾ ಆಲೋಚನೆ.‌ ಕೆಟ್ಟವಳೆಂದು ಗೊತ್ತಾದರೆ ದಿಯಾಳಿಂದ ದೂರಾಗುತ್ತಾರೆ ಎಂಬುದಾಗಿ ನಂಬಿದ್ದಾಳೆ. ಆದರೆ ದಿಯಾಳ ಮುಗ್ಧ ಮನಸ್ಸನ್ನು ಎಲ್ಲರೂ ಅರ್ಥ ಮಾಡಿಕೊಂಡಾಗಿದೆ. ಹೀಗಾಗಿ ದಿಯಾಳ ಮೇಲೆ ಅದು ಮಾಯಾ ಹೇಳುವ ಯಾವೊಂದು ವಿಚಾರವೂ ನಡುಕೋಟೆ ಮನೆಯವರಿಗೆ ತಾಗುವುದಿಲ್ಲ.

ಎಲ್ಲರನ್ನೂ ಆಹ್ವಾನಿಸಿದ ಸ್ಟಾರ್ ಸುವರ್ಣ

ಎಲ್ಲರನ್ನೂ ಆಹ್ವಾನಿಸಿದ ಸ್ಟಾರ್ ಸುವರ್ಣ

ಕೋಳಿ ಜಗಳ ಆಡುವಷ್ಟು ಆಡಲಿ. ಮೂರು ಗಂಟು ಬಿದ್ದ ಮೇಲೆ ಪ್ರೀತಿ ತಾನಾಗಿಯೇ ಹುಟ್ಟುತ್ತದೆ ಎಂದು ನಡುಕೋಟೆ ಮನೆಯವರು‌ ಮತ್ತು ಡಾ.ಶ್ರೀಧರ್ ಫ್ಯಾಮಿಲಿ ಮದುವೆಯ ತಯಾರಿ ನಡೆಸಿದ್ದಾರೆ. ದಿಯಾ ಮದುವೆಯಾಗಿ ಗಂಡನ ಮನೆ ಸೇರುತ್ತಾಳೆ. ಆದರೆ ಆಕೆ ಬ್ಯಾಚುಲರ್ ಪಾರ್ಟಿ ಕೊಡಲ್ವಾ ಎಂದು ಯೋಚಿಸುತ್ತಿರುವಾಗಲೇ ಬ್ಯಾಚುಲರ್ ಪಾರ್ಟಿ ಅರೆಂಜ್ ಆಗಿದೆ. ಆ ಬ್ಯಾಚುಲರ್ ಪಾರ್ಟಿಗೆ ಸ್ಟಾರ್ ಸುವರ್ಣ ಎಲ್ಲರನ್ನೂ ಆಹ್ವಾನಿಸಿದೆ. ದಿಯಾ ಬ್ಯಾಚುಲರ್ ಪಾರ್ಟಿಯಲ್ಲಿ ನೀವೂ ಕೂಡ ಇರಬಹುದು. ಹೇಗೆ ಎಂದರೆ, ಇಂದು ರಾತ್ರಿ ಹತ್ತು ಗಂಟೆಗೆ ನಿಮ್ಮ ನಿಮ್ಮ ಮನೆಯಲ್ಲಿ ಸ್ಟಾರ್ ಸುವರ್ಣ ಹಾಕೊಂಡು, ಪಾರ್ಟಿ ಎಂಜಾಯ್ ಮಾಡಬಹುದು.

ದಿಯಾಳಿಗೆ ಮದ್ಯ ಕುಡಿಸಿ ಮಜಾ ನೋಡುತ್ತಿರುವ ಕ್ರಿಶ್

ದಿಯಾಳಿಗೆ ಮದ್ಯ ಕುಡಿಸಿ ಮಜಾ ನೋಡುತ್ತಿರುವ ಕ್ರಿಶ್

ದಿಯಾ ಮುಗ್ಧ ಹುಡುಗಿ ಎಂಬುದು ಆಗಾಗ ಪ್ರೂವ್ ಆಗುತ್ತಾನೆ ಇದೆ. ಈ ಬಾರಿಯೂ ಪ್ರೂವ್ ಆಗಿದೆ. ಫ್ರೆಂಡ್ ಅಂತ ನಂಬಿ ಅವಳು ಕರೆದ ಜಾಗಕ್ಕೆ ಹೋಗಿದ್ದಾಳೆ ದಿಯಾ. ಅಲ್ಲಿ ದಿಯಾಗೆ ಖುಷಿಯಾಗುವಂತಹ ಪಾರ್ಟಿಯನ್ನೇನೋ ಅರೆಂಜ್ ಮಾಡಿದ್ದಾರೆ. ಆದರೆ ಕ್ರಿಶ್ ತನ್ನ ಕೆಟ್ಟ ಬುದ್ಧಿಯನ್ನು ಬಿಟ್ಟಿಲ್ಲ. ಮತ್ತೆ ಜ್ಯೂಸ್‌ನಲ್ಲಿ ಮದ್ಯ ಮಿಕ್ಸ್ ಮಾಡಿಕೊಟ್ಟಿದ್ದಾನೆ. ಡ್ರಿಂಕ್ಸ್ ಮಾಡಲ್ಲ ಎಂದು ಗೊತ್ತಿದ್ದರು ಕ್ರಿಶ್ ತನ್ನ ಸ್ವಾರ್ಥಕ್ಕಾಗಿ ಈ ರೀತಿ ನಡೆದುಕೊಂಡಿದ್ದಾನೆ. ಸ್ನೇಹಿತರು ಎಂದು ನಂಬಿದ ದಿಯಾಗೆ ಗೊತ್ತಿಲ್ಲದೆ ಮೋಸ ಹೋಗಿದ್ದಾಳೆ.

ದಿಯಾಳನ್ನು ಕೆಟ್ಟವಳು ಮಾಡಲು ಹೊರಟ ಮಾಯಾ!

ದಿಯಾಳನ್ನು ಕೆಟ್ಟವಳು ಮಾಡಲು ಹೊರಟ ಮಾಯಾ!

ಮಾಯಾಗೆ ಈಗಿರುವ ಟಾರ್ಗೆಟ್ ಅಂದರೆ ಅದು ಶಶಾಂಕ್‌ನನ್ನು ಪಡೆಯುವುದು. ನಡುಕೋಟೆ ಮನೆಯವರಿಗೆ ಹೆಣ್ಣುಮಕ್ಕಳ ಕುಡಿಯುವುದೆಂದರೆ ಆಗುವುದಿಲ್ಲ. ಕಳೆದ ಬಾರಿ ಚಿಕ್ಕಮಗಳೂರಿನಲ್ಲಿ ಕ್ರಿಶ್ ಮಾಡಿದ ಫ್ಲ್ಯಾನ್‌ಗೆ ಬಲಿಯಾಗಿದ್ದು ಮಾಯಾ. ಇದೀಗ ಅದೇ ಪ್ಲ್ಯಾನ್ ಮಾಡಿ ದಿಯಾಳನ್ನು ಕೆಟ್ಟವಳಾಗಿ ಮಾಡಲು ಹೊರಟಿದ್ದಾಳೆ. ಆದರೆ ಇದು ಎಷ್ಟರಮಟ್ಟಿಗೆ ವರ್ಕೌಟ್ ಆಗುತ್ತೆ ಎಂಬ ಸಣ್ಣಮಟ್ಟದ ಥಿಂಕಿಂಗ್ ಕೂಡ ಮಾಯಾಳಿಗಿಲ್ಲ. ಯಾಕೆಂದರೆ ದಿಯಾ ಕುಡಿಯುವುದಿಲ್ಲ ಎಂಬುದು ಮನೆಯವರಿಗೆಲ್ಲಾ ಗೊತ್ತಾಗಿದೆ. ಈಗ ಮಾಯಾ ಜ್ಯೂಸ್‌ನಲ್ಲಿ ಮದ್ಯ ಬೆರೆಸಿ ದಿಯಾಳಿಗೆ ಕೊಟ್ಟು, ಡ್ಯಾನ್ಸ್ ಮಾಡುವಂತೆ ಮಾಡಿದ್ದಾಳೆ. ಅದನ್ನು ವಿಡಿಯೋ ಮಾಡಿಕೊಂಡಿರುವ ಮಾಯಾ, ನಡುಕೋಟೆ ಮನೆಯವರಿಗೆ ತೋರಿಸಲು ಹೊರಟಿದ್ದಾಳೆ.

ದಿಯಾಳ ಮೇಲೆ ಕೋಪವಲ್ಲ ಕಾಳಜಿ ಹುಟ್ಟಿದೆ

ದಿಯಾಳ ಮೇಲೆ ಕೋಪವಲ್ಲ ಕಾಳಜಿ ಹುಟ್ಟಿದೆ

ದಿಯಾ ಬ್ಯಾಚುಲರ್ ಪಾರ್ಟಿ ಮಾಡುತ್ತಿರುವುದನ್ನು ತಿಳಿದ ಶಶಾಂಕ್ ಆ ಸ್ಥಳಕ್ಕೆ ಹೋಗಿದ್ದಾನೆ. ಯಾವುದೋ ಅಪಾಯದ ಮುನ್ಸೂಚನೆ ಸಿಕ್ಕಿನೇ ಆ ಸ್ಥಳಕ್ಕೆ ಹೋಗಿದ್ದಾನೆ. ಅದು ನಿರೀಕ್ಷಿಸಿದಂತೆಯೇ ಆಗಿದೆ. ದಿಯಾಳಿಗೆ ಮದ್ಯ ಕುಡಿಸಿದ್ದಾರೆ. ಆ ಸ್ಥಿತಿಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ ದಿಯಾಳನ್ನು ನೋಡಿದ ಶಶಾಂಕ್, ಅಲ್ಲಿನ ಕೋತಿ ಫ್ರೆಂಡ್ಸ್‌ಗೆ ಗ್ರಹಚಾರ ಬಿಡಿಸಿ, ದಿಯಾಳನ್ನು ಕರೆದುಕೊಂಡು ಹೊರಟಿದ್ದಾನೆ. ತನ್ನ ಗಾಡಿಯಲ್ಲಿ, ಎರಡು ಕೈಗಳಿಗೆ ಬಟ್ಟೆ ಕಟ್ಟಿ, ಗಟ್ಟಿಯಾಗಿ ಕುಳಿತುಕೊಳ್ಳುವಂತೆ ನೋಡಿಕೊಂಡು, ಜೋಪಾನವಾಗಿ ಕರೆದೊಯ್ದಿದ್ದಾನೆ. ಮಾಯಾ ಅದೃಷ್ಟ ಚೆನ್ನಾಗಿತ್ತು ಎನ್ನಿಸುತ್ತದೆ ಶಶಾಂಕ್‌ನನ್ನು ನೋಡಿ ಮರೆಯಾಗಿ ನಿಂತಿದ್ದಾಳೆ.

More from Filmibeat

English summary
Star Suvarna Serial Jeenugoodu Written Update On June 16th Episode. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X