ಜೇನುಗೂಡು: ಬಿಯರ್ ಕೊಟ್ಟು ನಡುಕೋಟೆ ಮನೆಗೆ ಶುಭಾಂಗಿಯಿಂದ ಅವಮಾನ!

By ಎಸ್ ಸುಮಂತ್

ನಡುಕೋಟೆ ಮನೆಯಲ್ಲಿ ಈಗ ಮದುವೆಯ ಸಂಭ್ರಮ ಮನೆ ಮಾಡಿದೆ. ಎಲ್ಲಾ ತಯಾರಿಗಳು ಮುಗಿದು ಈಗ ಶಾಸ್ತ್ರಗಳು ಆರಂಭವಾಗಿದೆ. ಉತ್ತರ ಕರ್ನಾಟಕದ ಶೈಲಿಯಲ್ಲಿಯೇ ಶಾಸ್ತ್ರಗಳು ನಡೆಯುತ್ತಿದೆ. ಇಷ್ಡು ದಿನ ಮಿಸ್ ಮಾಡಿಕೊಂಡ ವಿಭಿನ್ನ ಶಾಸ್ತ್ರಗಳನ್ನು 'ಜೇನುಗೂಡು' ಧಾರಾವಾಹಿ ಮೂಲಕ ಕಣ್ತುಂಬಿಕೊಳ್ಳುವಂತೆ ಮಾಡುತ್ತಿದೆ. ಇದರಿಂದಾಗಿಯೇ ಪ್ರೇಕ್ಷಕ ವರ್ಗ ಕೂಡ ಕೌತುಕತೆಯಿಂದ ನೋಡುತ್ತಿದೆ.

ಶಾಸ್ತ್ರ-ಸಂಪ್ರದಾಯದ ಜೊತೆಗೆ ಮನೆ ಮಂದಿಯೆಲ್ಲಾ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಈ ಖುಷಿಯ ನಡುವೆ ಹುಳಿ ಹಿಂಡುವ ಕೆಲಸ ಮಾಡುತ್ತಿರುವುದು ಶುಭಾಂಗಿ. ಮಗಳು ಮಗುವಾಗಿದ್ದಾಗ ತಲೆ ಕೆಡಿಸಿಕೊಳ್ಳದ ಶುಭಾಂಗಿ ಮದುವೆಯಾಗುವಾಗ ಬಂದು ಕಿರಿಕ್ ಮಾಡುತ್ತಿದ್ದಾಳೆ. ಪ್ರತಿಯೊಂದರಲ್ಲೂ ಮೂಗು ತೂರಿಸಿ, ಬೇರೆಯವರಿಗೆ ನೋವು ಮಾಡುತ್ತಿದ್ದಾಳೆ. ಇದು ಹಲವು ಬಾರಿ ಜಗಳ, ಮನಸ್ತಾಪಕ್ಕೂ ಕಾರಣವಾಗಿದೆ.

ಶುಭಾಂಗಿ ತೆಗೆದುಕೊಂಡ ಸೀರೆ ಬೆಲೆ ಇಲ್ಲಿದೆ

ಶುಭಾಂಗಿ ತೆಗೆದುಕೊಂಡ ಸೀರೆ ಬೆಲೆ ಇಲ್ಲಿದೆ

ಸದ್ಯ ಮದುವೆ ಶಾಸ್ತ್ರಗಳಲ್ಲಿ ಮೊದಲ ಶಾಸ್ತ್ರ ಜವಳಿ ಖರೀದಿ. ನಡುಕೋಟೆ ಮನೆಯಲ್ಲಿ ಆ ಶಾಸ್ತ್ರವು ಶುರುವಾಗಿದೆ. ನಡುಕೋಟೆ ಮನೆಗೆ ಜವಳಿ ಹೊತ್ತು ತಮ್ಮಣ್ಣನ ಪಾತ್ರದಲ್ಲಿ ಉಮೇಶ್ ಬಂದಿದ್ದಾರೆ. ಈ ಶಾಸ್ತ್ರದಲ್ಲಿ ಗಂಡಿನ ಕಡೆಯವರು ಹೆಣ್ಣಿನ ಕಡೆಯವರಿಗೆ, ಹೆಣ್ಸಿನ ಮನೆಯವರು ಗಂಡಿನ ಕಡೆಯವರಿಗೆ ಬಟ್ಟೆ ಕೊಡಿಸಬೇಕಾಗುತ್ತದೆ. ಆದರೆ ಯಾವಾಗಲೂ ಅಂತಸ್ತು, ಬ್ರ್ಯಾಂಡೆಡ್ ಅಂತ ನೋಡುವ ಶುಭಾಂಗಿ, ಕೋಟೆ ಮನೆಯವರು ಕೊಡುವ ಬಟ್ಟೆಗಳನ್ನು ಒಪ್ಪುವುದಾದರೂ ಹೇಗೆ? ಆದರೆ ಅಲ್ಲಿ ಒಪ್ಪದೆ ಇರಲು ಅವಕಾಶವೇ ಇಲ್ಲ. ಡಾ.ಶ್ರೀಧರ್ ಹಾಗೋ ಹೀಗೋ ಮಾಡಿ ಒಪ್ಪಿಸಿ ಆಗಿದೆ. ಹೀಗಾಗಿಯೇ ಶುಭಾಂಗಿ ಎರಡು ಸಾವಿರದ ಸೀರೆಯನ್ನೆ ಇಟ್ಟುಕೊಂಡಿದ್ದಾಳೆ.

ದಿಯಾಳ ಕಾಳಜಿಗೆ ಶಶಾಂಕ್ ಫಿದಾ

ದಿಯಾಳ ಕಾಳಜಿಗೆ ಶಶಾಂಕ್ ಫಿದಾ

ಮಾತೆತ್ತಿದ್ದರೆ ದಿಯಾ ಮತ್ತು ಶಶಾಂಕ್ ಜಗಳವಾಡುತ್ತಾ ನಿಲ್ಲುತ್ತಾರೆ. ಪ್ರೀತಿ ಇದ್ದರೂ ಆ ಪ್ರೀತಿಗೆ ಜಾಗವೇ ಸಿಗಬಾರದು ಆ ರೀತಿ ಜಗಳವಾಡುತ್ತಿರುತ್ತಾರೆ. ಆದರೆ ದಿಯಾ ಈ ಜಗಳದ ನಡುವೆಯೂ ಶಶಾಂಕ್‌ನನ್ನು ಗಮನಿಸುತ್ತಿದ್ದಾಳೆ. ಜವಳಿ ಖರೀದಿ ವೇಳೆ ಆಕೆಯ ಮಮ್ಮಿ ಮಾಡಿದ ಅವಮಾನ ಶಶಾಂಕ್ ಮನಸ್ಸನ್ನು ಕದಡಿದ್ದು ದಿಯಾಳ ಗಮನಕ್ಕೂ ಬಂದಿದೆ‌. ಹೀಗಾಗಿ ಅವರ ಮನೆಯ ಜವಳಿ ಖರೀದಿಗೆ ಬರುವುದಿಲ್ಲ ಎಂದಿದ್ದ ಶಶಾಂಕ್‌ನನ್ನು ದಿಯಾಳೇ ಸಮಾಧಾನ ಮಾಡಿದ್ದಾನೆ. ಆಕೆಯ ಮಾತು ರಫ್ ಇರಬಹುದು, ತುಂಟಾಟವೂ ಇರಬಹುದು. ಆದರೆ ಆಕೆಯ ನಿಜವಾದ ಕಾಳಜಿ ಶಶಾಂಕ್ ಮನಸ್ಸಿಗೆ ನಾಟಿದೆ. ಕೂತು ಅವಳ ಬಗ್ಗೆಯೇ ಯೋಚನೆ ಮಾಡುತ್ತಿದ್ದಾನೆ.

ಶುಭಾಂಗಿ ವರ್ತನೆ ಮಿತಿ ಮೀರಿದೆ

ಶುಭಾಂಗಿ ವರ್ತನೆ ಮಿತಿ ಮೀರಿದೆ

ನಡುಕೋಟೆ ಮನೆಯಲ್ಲಿ ಜವಳಿ ಶಾಸ್ತ್ರ ಮಾಡಬೇಕಾದ್ದು ಪದ್ಧತಿ. ಆದರೆ ಶುಭಾಂಗಿಗೆ ಇದು ಸ್ಟೇಟಸ್ ಪ್ರಶ್ನೆಯಾಗಿ ಕನ್ವರ್ಟ್ ಆಗಿತ್ತು. ಇದಕ್ಕಾಗಿಯೇ ನಮ್ಮ ಮನೆಯಲ್ಲಿಯೂ ಜವಳಿ ಖರೀದಿ ಇಟ್ಟುಕೊಳ್ಳುತ್ತೇವೆ ಎಂದು ಎಲ್ಲರೂ ಬರಲೇಬೇಕು ಎಂದು ಶುಭಾಂಗಿ ಹೇಳಿದಳು. ಈ ಮಾತಿಗೆ ಗೌರವ ನೀಡಿದ ವಿನಾಯಕ್ ದಾದಾ ಎಲ್ಲರನ್ನು ಕರೆದುಕೊಂಡು ಡಾಕ್ಟರ್ ಮನೆಗೆ ಹೊರಟಿದ್ದಾರೆ. ಆದರೆ ಶುಭಾಂಗಿಯ ವರ್ತನೆ ಅಲ್ಲಿಯೂ ದುರ್ವರ್ತನೆಯಾಗಿ ಬದಲಾಗಿದೆ. ಹೇಳಿ ಕೇಳಿ ಸುಮ್ಮನಿರುವಾಗಲೇ ಆಕೆಯ ಮಾತುಗಳು ಎಲ್ಲರನ್ನು ಕೆಣಕುತ್ತೆ. ಇನ್ನು ತಾನೇ ಅರೆಂಜ್ ಮಾಡಿದ ಕಾರ್ಯಕ್ರಮಗಳಲ್ಲಿ ಕೇಳಬೇಕಾ..?

ಕುಡಿಯಲು ಚಿಲ್ಡ್ ಬಿಯರ್ ಕೊಟ್ಟ ಶುಭಾಂಗಿ

ಕೊಟ್ಟ ಮಾತಿಗೆ ತಪ್ಪ ಬಾರದು ಎಂದು ನಡುಕೋಟೆ ಮನೆಯವರು ಶ್ರೀಧರ್ ಮನೆಗೆ ಬಂದಿದ್ದಾರೆ. ಆದರೆ ಇಲ್ಲಿ ಜವಳಿ ಶಾಸ್ತ್ರಕ್ಕೆ ಶುಭಾಂಗಿ ಮಾಡೆಲ್‌ಗಳನ್ನ ಕರೆಸಿದ್ದಳು. ಅವರು ಡ್ರೆಸ್ ಹಾಕಿಕೊಂಡು ನಡುಕೋಟೆ ಮನೆಯವರೆದುರು ಓಡಾಡಿದರು. ಅಷ್ಟೇ ಅಲ್ಲ ಸಂಪ್ರದಾಯಸ್ಥ ಕುಟುಂಬ ಎಂದು ಗೊತ್ತಿದ್ದರು, ಜ್ಯೂಸ್ ಬದಲಿಗೆ ಶುಭಾಂಗಿ ಚಿಲ್ಡ್ ಬಿಯರ್ ಕೊಟ್ಟು ಅವಮಾನ ಮಾಡಿದ್ದಾಳೆ. ಅಷ್ಟು ಪಾಷ್ ಆಗಿ ಬೆಳೆದ, ಪಬ್ಬು ಪಾರ್ಟಿ ಅಂತ ಓಡಾಡುವ ದಿಯಾನೇ ಡ್ರಿಂಕ್ಸ್ ಮುಟ್ಟುವವಳಲ್ಲ. ಇನ್ನು ನಡುಕೋಟೆ ಮನೆಯವರಿಗೆ ಅದನ್ನು ಕೊಟ್ಟರೆ ಶಶಾಂಕ್ ಸುಮ್ಮನಿರುತ್ತಾನಾ..? ಅದಕ್ಕೂ ಮುನ್ನ ದಿಯಾ ಸುಮ್ಮನೆ ಇರುತ್ತಾಳಾ..? ನೋವೇ ಚಾನ್ಸೆ ಇಲ್ಲ. ಆದರೆ ಈ ಥ್ರಿಲ್ಲಿಂಗ್ ಎಪಿಸೋಡಿನಲ್ಲಿ ಏನೆಲ್ಲಾ ಆಗುತ್ತೆ ನೋಡಬೇಕಿದೆ.

More from Filmibeat

English summary
Star Suvarna Serial Jeenugoodu Written Update On June 24th Episode. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X