ಜೇನುಗೂಡು: ಭಾಸ್ಕರ, ವೀಣಾ ಪ್ರೀತಿ ಬಯಸುತ್ತಿದ್ದಾನಾ.. ಆಕೆ ಹೆಂಡತಿಯಲ್ಲವಾ.. ಏನಾಗ್ತಿದೆ ನಡುಕೋಟೆಯಲ್ಲಿ..?

By ಎಸ್ ಸುಮಂತ್

ಮುದ್ದಿನ ಮಗನ ಮದುವೆಯೆಂದು ನಡುಕೋಟೆ ಮನೆಯಲ್ಲಿ ಸಂತಸ, ಸಂಭ್ರಮ ತುಂಬಿ ತುಳುಕುತ್ತಿತ್ತು. ಮದುವೆಯ ಕಾರ್ಯಗಳನ್ನೆಲ್ಲಾ ಅಚ್ಚುಕಟ್ಟಾಗಿ ಮಾಡಿಕೊಳ್ಳುತ್ತಾ, ಆಗಾಗ ತುಂಬಿದ ಕುಟುಂಬದಲ್ಲೂ ತಮಾಷೆಯ ಜಗಳಗಳು ಕಾಣಿಸುತ್ತಿದ್ದವು. ಆದರೆ ಇತ್ತೀಚೆಗೆ ಒಂದಷ್ಟು ಮನಸ್ತಾಪಕ್ಕೆ ಕಾರಣವಾಗುವಂತಹ ಘಟನೆಗಳು ನಡೆಯುತ್ತಿವೆ. ಅದು ಮನಸ್ಸಿಗೆ ಹಿತವೆನಿಸದ ವ್ಯಕ್ತಿಗಳಿಂದ.

ಸದ್ಯ ಎಲ್ಲಾ ಆ ಖುಷಿಯಲ್ಲಿ ತೇಲುತ್ತಿರುವಾಗ ಭಾಸ್ಕರನ ಆಗಮನ ಬೇಸರವಾಗಿದೆ. ವೀಣಾ ಇಷ್ಟು ವರ್ಷಗಳ ಕಾಲ ಆ ಪ್ರೀತಿಯನ್ನು ಮರೆಯಲು ಸಾಧ್ಯವಾಗದೆ ಒಬ್ಬಂಟಿಯಾಗಿಯೇ ಜೀವನ ಸಾಗಿಸಿದ್ದಾರೆ. ಆದರೆ ಈಗ ವೀಣಾ ಮುಂದೆಯೇ ಬಂದರೆ ಹೇಗೆ ಸಹಿಸಿಕೊಳ್ಳುವುದು. ಭಾಸ್ಕರನ ಹೆಸರು ಕೇಳಿನೇ ವೀಣಾ ಒಂದು ವಾರ ಊಟ ಬಿಟ್ಟು, ಕೋಣೆಯಲ್ಲಿ ಒಬ್ಬಂಟಿಯಾಗಿ ಕುಳಿತಿದ್ದಳು. ಆದರೆ ಈಗ ಆತನೇ ಕಣ್ಣ ಮುಂದೆ ಬಂದರೆ ಏನು ಮಾಡುತ್ತಾಳೆ.

ಕಣ್ಣೀರು ಬಂದರೂ ತೋರಿಸಿಕೊಳ್ಳದ ವೀಣಾ

ಕಣ್ಣೀರು ಬಂದರೂ ತೋರಿಸಿಕೊಳ್ಳದ ವೀಣಾ

ಭಾಸ್ಕರನಿಗಾಗಿ ವೀಣಾ ತನ್ನೆಲ್ಲಾ ಜೀವನದ ಅಮೂಲ್ಯವಾದ ಅಂಶವನ್ನು ತ್ಯಾಗ ಮಾಡಿದ್ದಾಳೆ. ಆತನ ಓದಿಗಾಗಿ ತನ್ನ ಒಡವೆಯನ್ನು ಕಳೆದುಕೊಂಡಿದ್ದಾಳೆ. ಆದರೆ ಅದ್ಯಾವುದನ್ನು ನೆನಪಿಟ್ಟುಕೊಳ್ಳದ ಭಾಸ್ಕರ ವಿದೇಶಕ್ಕೆ ಹೋಗಿದ್ದು ಅಲ್ಲದೆ, ಅಲ್ಲಿಯೇ ಬೇರೊಂದು ಹುಡುಗಿಯನ್ನು ಮದುವೆಯಾದರೆ ಆ ಪ್ರೀತಿಗೆ, ತ್ಯಾಗಕ್ಕೆ ಬೆಲೆಯಾದರೂ ಎಲ್ಲಿಂದ ಬರಬೇಕು. ಆತ ಮಾಡಿದ ಎಂದು ಎಲ್ಲವನ್ನೂ ಮರೆತು ವೀಣಾ ಮದುವೆಯಾಗಲಿಲ್ಲ. ಆಕೆಯ ಮನಸ್ಸಲ್ಲಿ ಹುಟ್ಟಿದ್ದ ನಿಶ್ಕಲ್ಮಶ ಪ್ರೀತಿಗೆ ಬೆಲೆ ಕೊಟ್ಟಳು. ಆದರೆ, ಆತನಿಂದ ದೂರ ಉಳಿದು ಬದುಕಿಬಿಟ್ಟಿದ್ದಾಳೆ. ಆದರೆ ಹೆಂಡತಿ, ಮಗಳ ಜೊತೆ ಬರುತ್ತಿದ್ದಾನೆ ಎಂದಾಗ ಸಿಕ್ಕಾಪಟ್ಟೆ ಕಣ್ಣೀರು ಹಾಕಿದ್ದಳು. ಅದೃಷ್ಟವಶಾತ್ ದಿಯಾಳ ನೋವಿನ ಮುಂದೆ ಈ ನೋವು ಏನು ಅಲ್ಲ ಎಂಬುದನ್ನು ಅರಿತು ಖುಷಿಯಲ್ಲಿರುವುದಕ್ಕೆ ಪ್ರಯತ್ನಿಸುತ್ತಿದ್ದಾಳೆ. ಆದರೆ ಭಾಸ್ಕರನ ಮುಂದೆ ನಾನು ಯಾವುದನ್ನು ನೆನಪಲ್ಲಿಟ್ಟುಕೊಂಡಿಲ್ಲ, ನಿನ್ನ ಬಗ್ಗೆಯೂ ಪ್ರೀತಿ ಉಳಿದಿಲ್ಲ ಎಂಬುದನ್ನು ಒತ್ತಿ ಒತ್ತಿ ಹೇಳುತ್ತಿದ್ದಾಳೆ. ಆದರೆ ಭಾಸ್ಕರ್ ಆಕೆಯ ಮಾತನ್ನು ಕೇಳುವುದಕ್ಕೆ ಸಿದ್ಧವಿಲ್ಲ. ಬೇರೆ ಏನನ್ನೋ ವೀಣಾಗೆ ಹೇಳಲು ಯತ್ನಿಸುತ್ತಿದ್ದು, ದೇವಸ್ಥಾನದ ಹಿಂದೆ ಸುತ್ತಿದ್ದಾನೆ.

ಹೆಂಡತಿ, ಮಗಳ ಜೊತೆಗೆ ಮನೆಗೆ ಬಂದ ಭಾಸ್ಕರ

ಹೆಂಡತಿ, ಮಗಳ ಜೊತೆಗೆ ಮನೆಗೆ ಬಂದ ಭಾಸ್ಕರ

ವೀಣಾ ಅದಾಗಲೇ ದೇವಸ್ಥಾನದಲ್ಲಿಯೇ ಎಲ್ಲದನ್ನು ಬಿಡಿಸಿ ಹೇಳಿದ್ದಳು. ಆದರೂ ಭಾಸ್ಕರ, ನಡುಕೋಟೆ ಮನೆಗೆ ಹೆಂಡತಿ ಮತ್ತು ಮಗಳ ಸಮೇತ ಬಂದಿದ್ದಾನೆ. ಎಲ್ಲರೂ ಸಂಗೀತ್ ಪ್ರೋಗ್ರಾಂಗಾಗಿ ಡ್ಯಾನ್ಸ್ ಪ್ರಾಕ್ಟೀಸ್ ಮಾಡುತ್ತಿದ್ದರು. ಈ ವೇಳೆ ಎಂಟ್ರಿಕೊಟ್ಟ ಭಾಸ್ಕರನನ್ನು ನೋಡಿ, ಮನೆಯವರಿಗೆಲ್ಲಾ ಸಂತೋಷ ಅಲ್ಲಿಯೇ ನಿಂತಂಗಾಯ್ತು. ಕರೆಯದೆ ಮೂರು ಜನ ಮನೆಯೊಳಗೆ ಬಂದರು. ಭಾಸ್ಕರನ ಜೊತೆ ಬಂದ ಹೆಣ್ಣು ಮಗಳು ಎಲ್ಲರನ್ನು ಆತ್ಮೀಯವಾಗಿ ಮಾತನಾಡಿಸಿದಳು. ಆದರೆ ಅದು ಮನೆಯವರಿಗೆ ಕೊಂಚವೂ ಇಷ್ಟವಾಗಲಿಲ್ಲ. ವೀಣಾಳನ್ನು ಮಾತನಾಡಿಸಲು ಹೊರಟಾಗ, ಅಲ್ಲಿಂದ ವೀಣಾ ಹೊರನಡೆಯುವುದಕ್ಕೆ ಪ್ರಯತ್ನಿಸಿದಳು. ಮಗು ತಡೆದು ನಿಲ್ಲಿಸಿತ್ತು. ಇದು ಮನೆಯವರಿಗೆಲ್ಲಾ ಶಾಕ್ ಎನಿಸಿತು. ಅಷ್ಟೇ ಅಲ್ಲ ವೀಣಾ ಬಗ್ಗೆ ಭಾಸ್ಕರ್ ಸಾಕಷ್ಟು ವಿಚಾರಗಳನ್ನು ಹೇಳಿಕೊಟ್ಟಿದ್ದ. ಇದು ವೀಣಾಳ ಕೋಪಕ್ಕೆ ಕಾರಣವಾಗಿತ್ತು.

ಆ ಮಗು ಯಾರದ್ದು, ಆ ಮಹಿಳೆ ಯಾರು..?

ಆ ಮಗು ಯಾರದ್ದು, ಆ ಮಹಿಳೆ ಯಾರು..?

ಭಾಸ್ಕರ ಬಂದಾಗಿನಿಂದ ಏನನ್ನೋ ಹೇಳುವುದಕ್ಕೇ ಪ್ರಯತ್ನಿಸುತ್ತಿದ್ದಾನೆ. ಇದಕ್ಕೆ ಮನೆಯವರು ಅವಕಾಶವನ್ನೇ ಕೊಡುತ್ತಿಲ್ಲ. ಆತನ ಮೇಲಿನ ಬೇಸರ, ವೀಣಾ ಮೇಲಿನ ಪ್ರೀತಿ ಅದನ್ನು ಮರೆಮಾಚುತ್ತಿದೆ. ವೀಣಾ ಕೂಡ ಭಾಸ್ಕರನಿಗೆ ಸಮಯ ಕೊಡುತ್ತಿಲ್ಲ. ಹೀಗಾಗಿ ಆ ಹೆಣ್ಣು ಮಗಳು ಮತ್ತು ಮಗುವನ್ನು ನಡುಕೋಟೆ ಮನೆಗೆ ಕರೆದುಕೊಂಡು ಬಿಟ್ಟಿದ್ದಾನೆ. ಭಾಸ್ಕರ ಏನನ್ನೋ ಹೇಳುವುದಕ್ಕೆ ಪ್ರಯತ್ನಿಸುತ್ತಿದ್ದಾನೆ ಎಂಬುದು ಶಶಾಂಕ್‌ಗೆ ಗೊತ್ತಾಗಿದೆ. ಒಳ ನಡೆಯುತ್ತಿದ್ದ ವೀಣಾಳನ್ನು ಭಾಸ್ಕರನ ಜೊತೆ ಬಂದ ಮಹಿಳೆ ನಿಮ್ಮ ಬಳಿ ಏನೋ ಮಾತನಾಡಬೇಕೆಂದು ತಡೆದು ನಿಲ್ಲಿಸಿದ್ದಾಳೆ. ವೀಣಾಳಂತೆ ಭಾಸ್ಕರ ಕೂಡ ಒಬ್ಬಂಟಿಯಾಗಿಯೇ ಬದುಕುತ್ತಿದ್ದಾನಾ..? ಆ ಮಹಿಳೆ ಸಂಬಂಧಿಕಳಾ? ಹೀಗೆ ನೂರೆಂಟು ಪ್ರಶ್ನೆ ಕಾಡುತ್ತಿದೆ.

ನಡುಕೋಟೆ ಕುಟುಂಬಕ್ಕೆ ಸೇರುತ್ತಾನಾ ಭಾಸ್ಕರ?

ನಡುಕೋಟೆ ಕುಟುಂಬಕ್ಕೆ ಸೇರುತ್ತಾನಾ ಭಾಸ್ಕರ?

ಇತ್ತೀಚೆಗೆ ಭಾಸ್ಕರನ ಎಂಟ್ರಿಯಾದಾಗಲೇ ಸ್ಟಾರ್ ಸುವರ್ಣದ ಅಧಿಕೃತ ಸೋಶಿಯಲ್ ಮೀಡಿಯಾದಲ್ಲಿ ಇದಕ್ಕೊಂದು ಉತ್ತರ ಸಿಕ್ಕಿದೆ. ನಡುಕೋಟೆ ಮನೆಯಲ್ಲಿ ಒಬ್ಬನಾಗುತ್ತಾನಾ ಭಾಸ್ಕರ್ ಎಂಬ ಪ್ರಶ್ನೆಯನ್ನಿಟ್ಟು, ಕುಟುಂಬಸ್ಥರ ಜೊತೆಗೆ ಭಾಸ್ಕರ ನಿಂತಿರುವ ಫೋಟೋ ಹಾಕಿದ್ದರು. ಅದು ಪ್ರಶ್ನಾರ್ಥಕ ಚಿಹ್ನೆಯೇ ಆಗಿದ್ದರೂ, ಅದು ಸತ್ಯವೇ ಎಂಬುದು ಲೈಟ್ ಆಗಿ ಈಗ ಅರ್ಥವಾಗುತ್ತಿದೆ. ಭಾಸ್ಕರ ವೀಣಾ ಬಳಿ ಕ್ಷಮೆ ಕೇಳಿ ಮತ್ತೆ ಒಂದಾಗುವ ಸಾಧ್ಯತೆ ಇದೆ.

More from Filmibeat

English summary
Star Suvarna Serial Jeenugoodu Written Update On June 9th Episode. Here Is The Details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X