400 ಸಂಚಿಕೆ ಪೂರೈಸಿದ ಸಂಭ್ರಮದಲ್ಲಿ 'ಜೇನುಗೂಡು': ಕುಟುಂಬದ ಮಹತ್ವವನ್ನು ಸಾರುವ ಧಾರಾವಾಹಿ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಜೇನುಗೂಡು' ಎಂಬ ಧಾರಾವಾಹಿ ಇತ್ತೀಚೆಗೆ ಕನ್ನಡ ಕಿರುತೆರೆ ಪ್ರಿಯರೆ ಬಹಳ ಮೆಚ್ಚಿನ ಧಾರವಾಹಿಯಾಗಿ ಮೂಡಿ ಬರುತ್ತಿರುದೆ. ಕುಟುಂಬದ ಮಹತ್ವವನ್ನು ಸಾರುವ ಧಾರಾವಾಹಿಯನ್ನು ವೀಕ್ಷಕರು ಮೆಚ್ಚಿದ್ದಾರೆ.
400 ಯಶಸ್ವಿ ಎಪಿಸೋಡ್ ಗಳನ್ನು ಮುಟ್ಟಿರುವ ಇವರು ಇನ್ನು ಅಷ್ಟೇ ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾರೆ. 'ಜೇನುಗೂಡು' ಧಾರಾವಾಹಿಯ ಶೀರ್ಷಿಕೆಯೇ ಹೇಳುವಂತೆ ಕೂಡು ಕುಟುಂಬದ ಕಥೆ ಇದಾಗಿದ್ದು, ಉತ್ತರ ಕರ್ನಾಟಕದ ಭಾಷೆ ಹಾಗೂ ಶೈಲಿಯಲ್ಲಿ ಕಥೆ ಮೂಡಿಬರುತ್ತಿದೆ.

ಶಶಾಂಕ್ ಹಾಗು ದಿಯಾ ಎಂಬ ಎರಡು ಮುಖ್ಯ ಪಾತ್ರಗಳ ನಡುವಿನ ಪ್ರೀತಿ ಹಾಗೂ ಸಂಬಂಧದ ಕಥೆ ಇದು. ಕುಟುಂಬಸ್ಥರ ಒತ್ತಾಯದ ಮೇರೆಗೆ ಶಶಾಂಕ್ ಹಾಗೂ ದಿಯಾ ಮದುವೆಯಾಗುತ್ತಾರೆ. ಪರಸ್ಪರ ಇಷ್ಟಪಡೆದ ಈ ಜೋಡಿ ಆದಷ್ಟು ದೂರವಿರಲಿ ಎಂದು ಹಪಹಪಿಸುತ್ತಾರೆ. ಆದರೂ ವಿಧಿ ಅವರನ್ನು ಹೆಚ್ಚೆಚ್ಚು ಹತ್ತಿರಕ್ಕೆ ತರುವಂತಹ ಕಥಾಹಂದರವನ್ನು ಈ ಧಾರಾವಾಹಿ ಹೊಂದಿದ್ದು ಕನ್ನಡದ ಕಿರುತೆರೆ ಪ್ರೇಕ್ಷಕರಿಗೆ ಇದು ಬಹಳ ಹಿಡಿಸಿದೆ.
ಇತ್ತೀಚೆಗಷ್ಟೇ ದಿಯಾ ಪಾತ್ರವನ್ನು ಮಾಡುತ್ತಿದ್ದ ಈ ಧಾರಾವಾಹಿಯ ಮುಖ್ಯ ಪಾತ್ರಧಾರಿ ನಿತ್ಯ ಗೌಡ ಧಾರಾವಾಹಿಯನ್ನು ಮಧ್ಯದಲ್ಲಿಯೇ ಬಿಟ್ಟು ಹೊರಬಂದಿದ್ದು ಹೆಚ್ಚು ಸುದ್ದಿಯಾಗಿತ್ತು. ಆದರೆ ಈಗ ಅವರ ಜಾಗಕ್ಕೆ ನಟಿ ಅಮೃತಮೂರ್ತಿ ಬಂದಿದ್ದಾರೆ. ತಮ್ಮ ಹೊಸ ಧಾರಾವಾಹಿ ಬಗೆಗಿನ ಅನುಭವವನ್ನು ಕೂಡ ಆಕೆ ಹಂಚಿಕೊಂಡಿದ್ದರು.
ಜೇನುಗೂಡು ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವುದು ನನ್ನ ಅದೃಷ್ಟವೆಂದೇ ಹೇಳಬಹುದು ಎಂದು ಹೇಳುತ್ತಾರೆ ಅಮೃತಮೂರ್ತಿ. 'ಜೊತೆ ಜೊತೆಯಲಿ' ಧಾರಾವಾಹಿ ನಂತರ ಬೇರೆ ಯಾವುದೇ ಪ್ರಾಜೆಕ್ಟ್ ಅನ್ನು ಅಮೃತಾಮೂರ್ತಿ ಒಪ್ಪಿಕೊಂಡಿರಲಿಲ್ಲ.

ಈ ಧಾರಾವಾಹಿ, ಇದರಲ್ಲಿ ಅಭಿನಯಿಸುತ್ತಿರುವ ಬೇರೆ ನಟರು, ಇದರ ಕಥೆ ಎಲ್ಲವೂ ಅಮೃತಾ ಮೂರ್ತಿ ಅವರಿಗೆ ಬಹಳಷ್ಟು ಹಿಡಿಸಿದೆ. ಹಾಗಾಗಿ ದಿಯಾ ಪಾತ್ರದಲ್ಲಿ ನಟಿಸುತ್ತಿರುವುದಕ್ಕೆ ಅಮೃತಾಮೂರ್ತಿ ಒಪ್ಪಿಗೆ ನೀಡಿದ್ದಾರೆ.


Click it and Unblock the Notifications











