ಶಶಾಂಕ್ ಆರೈಕೆಗೆ ಮನಸೋಲುತ್ತಿದ್ದಾಳೆ ದಿಯಾ..!

By ಎಸ್ ಸುಮಂತ್

ದಿಯಾ-ಶಶಾಂಕ್ ನಡುವಿನ ರೊಮ್ಯಾಂಟಿಕ್ ದೃಶ್ಯವನ್ನು ಅದೆಷ್ಟು ಬಾರಿ ನೋಡಿದರು ಸಾಕಾಗುತ್ತಿಲ್ಲ. ಅಷ್ಟು ಮನಸ್ಸಿಗೆ ಮುದ ನೀಡುತ್ತಿದೆ. ಇಷ್ಟು ದಿನ ಬರೀ ಹಾವು ಮುಂಗುಸಿಯಂತೆ ಕಿತ್ತಾಡುತ್ತಿದ್ದ ದಿಯಾ ಶಶಾಂಕ್ ನಡುವೆ ಈಗೀಗ ಯಾರಿಗೂ ಗೊತ್ತಾಗದಂತೆ ಪ್ರೀತಿ ಎಂಬ ಮೊಳಕೆ ಒಡೆಯುತ್ತಿದೆ. ಆದರೆ ಅದನ್ನು ಯಾರ ಮುಂದೆಯೂ ಹೇಳಿಕೊಳ್ಳುವ ಹಾಗಿಲ್ಲ. ಮನಸ್ಸಲ್ಲಿ ಅದುಮಿಡುವ ಹಾಗೂ ಇಲ್ಲ. ಅಂತಹ ಪರಿಸ್ಥಿತಿ ಇಬ್ಬರಲ್ಲೂ ಇದೆ.

ಯಾರೇ ಇರಲಿ ಯಾರೇ ಬರಲಿ ದಿಯಾ-ಶಶಾಂಕ್ ನಡುವಿನ ಕೋಳಿ ಜಗಳವನ್ನೂ ಎಂದಿಗೂ ಬಿಡಿಸಲು ಸಾಧ್ಯವೇ ಇಲ್ಲ ಎಂಬಂತಹ ಸ್ಥಿತಿ ಮನೆಯವರಲ್ಲಿದೆ. ಇಬ್ಬರ ಮಧ್ಯೆ ಪ್ರೀತಿ ಹುಟ್ಟು ಹಾಕಲು ಮನೆಯವರು ಹೋರಾಟ ಮಾಡುತ್ತಿದ್ದಾರೆ. ಇತ್ತ ಎದುರು ಬದುರಾದರೆ ಸಾಕು ಜಗಳ ಶುರು ಮಾಡಿ ಬಿಡುತ್ತಾರೆ. ಆದರೆ ಇತ್ತೀಚಿನ ಸ್ಥಿತಿ ಬೇರೆಯದ್ದೆ ರೂಪ ಪಡೆದುಕೊಂಡಿದೆ.

ದಿಯಾ ಪ್ರೀತಿ ಕಡೆಗೆ ವಾಲಿದ ಶಶಾಂಕ್

ದಿಯಾ ಪ್ರೀತಿ ಕಡೆಗೆ ವಾಲಿದ ಶಶಾಂಕ್

ಶಶಾಂಕ್ ದೊಡ್ಡ ಸೈಂಟಿಸ್ಟ್ ಆಗಿದ್ದಾನೆ. ಆದರೆ ದಿಯಾ ಡಿಗ್ರಿಯನ್ನು ಪಾಸು ಮಾಡದ ಹುಡುಗಿ. ಇಬ್ಬರ ಕುಟುಂಬದ ಮಧ್ಯೆ ತುಂಬಾ ಅಂದರೆ ತುಂಬಾನೇ ವ್ಯತ್ಯಾಸವಿದೆ. ದಿಯಾ ರಾಯಲ್ ಆಗಿ ಬೆಳೆದ ಹುಡುಗಿ. ಕಷ್ಟ ಗೊತ್ತಿಲ್ಲದೆ, ಸಂಬಂಧಗಳ ಬೆಲೆ ಗೊತ್ತಿಲ್ಲದೆ, ಸಂಪ್ರದಾಯಗಳಿಗೆ ತಲೆ ಕೆಡಿಸಿಕೊಳ್ಳದೆ ಬೆಳೆದ ಹುಡುಗಿ. ಈಗ ಕಟ್ಟಾ ಸಾಂಪ್ರದಾಯಿಕ ಕುಟುಂಬಕ್ಕೆ ಸೊಸೆಯಾಗಲು ಹೊರಟಿದ್ದಾಳೆ. ಆಕೆಗೂ ಏನು ಇಷ್ಟವರಲಿಲ್ಲ. ಇಬ್ಬರು ಮನೆಯವರ ಪ್ರೀತಿಗೆ ಕಟ್ಟು ಬಿದ್ದು, ಬೆಳೆಯದೆ ಇರುವ ಪ್ರೀತಿಯನ್ನು ಮುಂದೊಂದು ದಿನ ಅಧಿಕೃತವಾಗಿ ಚಿವುಟಿ ಹಾಕಬೇಕೆಂದೇ ನಿರ್ಧರಿಸಿ ಹೊರಟಿದ್ದಾರೆ. ಆದರೆ ಒಲ್ಲೆ ಎನ್ನುತ್ತಿದ್ದ ಶಶಾಂಕ್‌ ಮನಸ್ಸುಇತ್ತೀಚಿಗೆ ಕೊಂಚ ಬದಲಾದಂತೆ ಕಾಣುತ್ತಿದೆ.

ಶಶಾಂಕ್‌ಗೆ ಮನಸೋತ ದಿಯಾ

ಶಶಾಂಕ್‌ಗೆ ಮನಸೋತ ದಿಯಾ

ಶಶಾಂಕ್ ಬಹಳ ಶಾಣೆ ಇದ್ದರು ಕೂಡ ತನಗೆ ಅನ್ನಿಸಿದ್ದನ್ನು ಮುಚ್ಚು ಮರೆಯಿಲ್ಲದೆ ಹೇಳುತ್ತಾನೆ. ಹೊಗಳಬೇಕು ಎನಿಸಿದಾಗ ಮುಕ್ತವಾಗಿ ಹೊಗಳುವ ಗುಣದವನು. ಈ ಗುಣ ಇತ್ತೀಚೆಗೆ ಆಗಾಗ ದಿಯಾಳ ಮನಸ್ಸನ್ನು ಕದಡುತ್ತಿರುವುದಂತು ಸುಳ್ಳಲ್ಲ. ಶಶಾಂಕ್ ಮನೆಗೆ ಬಂದಾಗ ದಿಯಾನೇ ಸ್ಯಾಂಡಿವಿಚ್ ಮಾಡಿಕೊಟ್ಟಿದ್ದಳು. ಮೊದ ಮೊದಲಿಗೆ ಓಕೆ ಎಂದು ಸುಮ್ಮನೆ ತಿಂದು ಬಂದ ಶಶಾಂಕ್ ಕರೆ ಮಾಡಿ ಮಾವನ ಬಳಿ ಹೇಳಿದ್ದಾನೆ. ಇದು ದಿವ್ಯಾಳ ಕ್ಯಾರೆಕ್ಟರ್ ಅನ್ನೇ ಬದಲಾಯಿಸಿದ್ದಂತು ಸತ್ಯ. ಪಾರ್ಟಿ ಪಬ್ ಅಂತ ಹೊರಡುತ್ತಿದ್ದ ದಿಯಾ. ಅವತ್ತು ಶಶಾಂಕ್ ಹೇಳಿದ ಒಂದೇ ಒಂದು ಮಾತಿನಿಂದ ಪಾರ್ಟಿಯನ್ನೇ ಕ್ಯಾನ್ಸಲ್ ಮಾಡಿಕೊಂಡಿದ್ದಳು.

ಕಣ್ಣು.. ಕಣ್ಣು ಕಲೆತಾಯ್ತು

ಕಣ್ಣು.. ಕಣ್ಣು ಕಲೆತಾಯ್ತು

ದಿಯಾ ಪಾರ್ಟಿಯನ್ನೇನೋ ಕ್ಯಾನ್ಸಲ್ ಮಾಡಿಕೊಂಡಳು. ಆದರೆ ಆಕೆಗೆ ಒಂದು ಕಡೆ ನಿಲ್ಲುವ ಗುಣ ಮೊದಲೇ ಇಲ್ಲ. ಹೀಗಾಗಿ ಮದುವೆಗೂ ಮೊದಲೇ ಶಶಾಂಕ್ ಮನೆಗೆ ಹೋಗಿ ಬರುತ್ತೀನಿ ಅಂತ ಅತ್ತೆ ಪರ್ಮೀಷನ್ ಕೇಳಿ, ಸಮಾಧಾನ ಮಾಡಿ, ಕೈನಲ್ಲೊಂದು ಕೇಕ್ ಹಿಡಿದು ಬಾವಿ ಅತ್ತೆ ಮನೆಗೆ ಹೊರಟೆ ಬಿಟ್ಟಳು. ಏಲಿಯನ್ ಇರಲ್ಲ ಎಂದುಕೊಂಡು ಬಂದಿದ್ದ ದಿಯಾಗೆ ಎದುರುಗಡೆಯೇ ಕೂತಿದ್ದ ಏಲಿಯನ್ ಕಂಡು ಮತ್ತೆ ಜಗಳ ಶುರು ಮಾಡಿದಳು. ಮನೆಯವರೆಲ್ಲಾ ಸೊಸೆ ಕಡೆಗೆ, ಆದರೆ ಶಶಾಂಕ್ ಒಬ್ಬಂಟಿ ಹೋರಾಟ. ಕಡೆಗೆ ಎಲ್ಲಾ ಮುಗಿದು ದಿಯಾ ಕೇಕ್ ಕಟ್ ಮಾಡಲು ಹೋಗಿ ಚಾಕುವಿನಲ್ಲಿ ಕೈಕುಯ್ದುಕೊಂಡಳು. ರಕ್ತಕ್ಕೆ ಹೆದರಿ ಮನೆಯೆಲ್ಲಾ ಓಡಾಡುವಾಗ ಶಶಾಂಕ್ ಪ್ರೀತಿಯಿಂದ ಗದರಿ, ಕೂರಿಸಿಕೊಂಡು ಕೈಗೆ ಚಿಕಿತ್ಸೆ ಮಾಡಿದ. ಆಹಾ ಆ ಒಂದು ಕ್ಷಣ ಇದೆಯಲ್ಲ ನಡುಕೋಟೆ ಮನೆಯವರು ಮಾತ್ರವಲ್ಲ ಪ್ರೇಕ್ಷಕರು ಕೂಡ ಇಷ್ಟ ಪಟ್ಟಿದ್ದರು. ಅಷ್ಟು ಅದ್ಭುತವಾಗಿತ್ತು ಆ ಸೀನ್.

ಸ್ಯಾಭಿಮಾನ ಅಡ್ಡಿ ಬಂತು

ಸ್ಯಾಭಿಮಾನ ಅಡ್ಡಿ ಬಂತು

ದಿಯಾ ಶಶಾಂಕ್ ನಡುವೆ ಈಗೀಗ ಪ್ರೀತಿ ಅಂತು ಚಿಗುರುತ್ತಿದೆ. ದಿಯಾ ಮೇಲೆ ಏನೇ ಕೋಪ ಇದ್ದರು ಆಕೆಯ ಮುಗ್ಧತೆಗೆ ಶಶಾಂಕ್ ಆಗಾಗ ಯೋಚಿಸಿ ಮನಸ್ಸು ಬದಲಾಯಿಸುತ್ತಿರುತ್ತಾನೆ. ಆದರೆ ಇಬ್ಬರಿಗೂ ಸ್ವಾಭಿಮಾನ ಅಡ್ಡ ಬರುತ್ತಿದೆ. ನಂಗೆ ಏಲಿಯನ್ ಎಂದರೆ ಆಗಲ್ಲ. ಆಕೆ ನಂಗೆ ಇಷ್ಟನೇ ಇಲ್ಲ ಎಂದು ವಾದಿಸುತ್ತಿರುವ ವಾಕ್ಯವೇ ಇಬ್ಬರ ನಡುವೆ ಪ್ರೀತಿ ಚಿಗುರಿದರೂ ಒಪ್ಪಿಕೊಳ್ಳಲು ಆಗುತ್ತಿಲ್ಲ.

ದಿಯಾ ಆಸೆ ಅರ್ಥ ಆಯ್ತು

ದಿಯಾ ಆಸೆ ಅರ್ಥ ಆಯ್ತು

ಚಾಕುವಿನಿಂದ ಕೈ ಕುಯ್ದುಕೊಂಡ ದಿಯಾ ಜ್ವರದಿಂದ ಕೊರಗುತ್ತಿದ್ದಾಳೆ. ದಿಯಾ ತಂದೆ ಈ ವಿಚಾರವನ್ನು ಶಶಾಂಕ್‌ಗೆ ಹೇಳಿದಾಗ ಅವನೇನು ನೋಡೋದಕ್ಕೆ ಬಂದು ಬಿಟ್ಟನಾ ಅನ್ನೋ ಮನಸ್ಸಿನ ಆಸೆಯನ್ನು ಹೇಳಿಕೊಂಡಿದ್ದಾಳೆ. ಇತ್ತ ದಿಯಾಗೆ ಜ್ವರ ಎಂದು ಗೊತ್ತಾದ ಕೂಡಲೇ ಶಶಾಂಕ್ ಮನಸ್ಸು ಕೂಡ ವಿಲವಿಲ ಅಂತ ಒದ್ದಾಡಿದೆ. ದಿಯಾಗೆ ಇಷ್ಟವಾದ ಚಾಕಲೇಟ್ ಬಾಕ್ಸ್ ಹಿಡಿದು ದಿಯಾ ಮನೆ ಕಡೆ ಹೊರಟಿದ್ದಾನೆ. ದಿಯಾಳಿಗೆ ಚಾಕಲೇಟ್ ಕೊಟ್ಟು, ನೀರು ಕುಡಿಸಿ ಮಾತನಾಡಿಸಿದ್ದಾನೆ. ಈ ಪ್ರೋಮೋ ನೋಡಿನೇ ಪ್ರೇಕ್ಷಕರ ಮನಸ್ಸು ಪುಳಕಿತಗೊಂಡಿರೋದಂತು ಸತ್ಯ.

More from Filmibeat

English summary
Star Suvarna Serial Jenugoodu Written Update on April 18th episode. Here is the details about Shashank taking care of Diya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X