ಜೇನುಗೂಡು: ಪ್ರೇಕ್ಷಕರಿಗೆ ಫುಲ್ ಮನರಂಜನೆ ಕೊಟ್ಟ ದಿಯಾಗೆ ಜ್ವರ ಬಂದ ಆ ದಿನಗಳು !

By ಎಸ್ ಸುಮಂತ್

ಹೆಡ್ ಲೈನ್ ನೋಡಿ ಒಂದು ಕ್ಷಣ ಗಲಿಬಿಲಿ ಆಗಿರುತ್ತೀರಿ ಅಲ್ಲವಾ. ಆದರೆ ಅಷ್ಟೂ ಎಪಿಸೋಡನ್ನು ಮನದಲ್ಲಿಯೇ ನೆನಪು ಮಾಡಿಕೊಂಡಾಗ ನಿಮಗೂ ಇದು ಸತ್ಯ ಎನಿಸದೆ ಇರದು. ದಿಯಾಗೆ ಜ್ವರ ಬಂದಿತ್ತು ಎಂಬ ಬೇಸರಕ್ಕಿಂತ ಹೆಚ್ಚಾಗಿ ಶಶಾಂಕ್ ಹಲವು ಅವತಾರಗಳು ಪ್ರದರ್ಶನವಾಗಿದ್ದಂತು ಸತ್ಯ. ದಿಯಾಗೆ ಜ್ವರ ಬಾರದೆ ಹೋಗಿದ್ದಲ್ಲಿ, ಶಶಾಂಕನ ಮನಸ್ಸಲ್ಲಿ ಇಷ್ಟೆಲ್ಲಾ ಆಸೆಗಳಿದೆಯಾ ಎಂಬುದು ಗೊತ್ತಾಗುತ್ತಿರಲಿಲ್ಲ. ಶಶಾಂಕ್‌ನಲ್ಲೂ ಒಬ್ಬ ರೋಮಿಯೊ ಇದ್ದಾನೆ ಅನ್ನೋದು ಗೊತ್ತಾಗುತ್ತಿರಲಿಲ್ಲ.

Recommended Video

Yash | KGF 2 ಸಿನಿಮಾ ಬಗ್ಗೆ ನಮ್ಮೊಂದಿಗೆ ನಿಮ್ಮ ವಿಮರ್ಶೆ ಹಂಚಿಕೊಳ್ಳಿ | Filmibeat Kannada

ಒಂದು ವಾರದಿಂದ ಪ್ರಸಾರವಾದ ಎಪಿಸೋಡ್‌ಗಳಲ್ಲಿ ಕಳೆದ ಮೂರು ದಿನದ ಎಪಿಸೋಡುಗಳು ಎಲ್ಲರನ್ನೂ ಕಾಡಿದೆ. ಶಶಾಂಕ್ ದಿಯಾಗಾಗಿ ಅದೆಷ್ಟು ಕೇರ್ ಮಾಡಿದ. ಅದೆಷ್ಟು ಪ್ರೀತಿ ತೋರಿಸಿದ. ಮದುವೆಯಾಗದ ಹುಡುಗಿಯರ ಮನಸ್ಸಲ್ಲಿ ವಾವ್ ಶಶಾಂಕ್‌ನಂತ ಸೈಂಟಿಸ್ಟ್ ನಮಗೂ ಸಿಗಬಾರದಾ ಎಂಬ ಪ್ರಶ್ನೆಗಳನ್ನು ಹುಟ್ಟು ಹಾಕುವಷ್ಟು ಪ್ರೀತಿ ತೋರಿಸಿದ್ದಾನೆ.

ಕಿತ್ತಾಟದಲ್ಲೂ ಪ್ರೀತಿ ಮಾತು

ಕಿತ್ತಾಟದಲ್ಲೂ ಪ್ರೀತಿ ಮಾತು

ಮೂಲಂಗಿ ಮಾದವ್ವನಿಗೂ ಏಲಿಯನ್‌ಗೂ ಸುಮ್ಮನೆ ಇರು ಎಂದರೆ ಅದು ಸಾಧ್ಯವೇ?. ಇಬ್ಬರನ್ನು ಎದುರು ಬದುರು ಕೂರಿಸಿ, ಒಂದರ್ಧ ಗಂಟೆ, ಬೇಡಪ್ಪ ಒಂದು ಹತ್ತು ನಿಮಿಷ ಸುಮ್ಮನೆ ಗಪ್ ಚುಪ್ ಆಗಿರಿ ನೋಡೋಣಾ ಅಂತ ಯಾರಾದರೂ ಹೇಳಿದರೆ ಹತ್ತು ನಿಮಿಷ ಅದೇ ವಿಚಾರಕ್ಕೆ ಜಗಳವಾಡಿರುತ್ತಾರೆ. ಹಾಗೆ ಹಾವು ಮುಂಗುಸಿಯಂತಿದ್ದವರನ್ನು ಮನೆಯವರೇನೋ ಮದುವೆ ಮಾಡಲು ಹೊರಟಿದ್ದಾರೆ. ಮದುವೆಯಾದ ಮೇಲು ಬರೀ ಕಿತ್ತಾಟವೇ ಮನರಂಜನೆ ನೀಡುತ್ತದೆ ಎಂಬಂತ ಊಹೆಗಳು ಪ್ರೇಕ್ಷಕರ ತಲೆಯಲ್ಲಿ ಹೊಕ್ಕಿದ್ದವು. ಆದರೆ ಇತ್ತೀಚಿನ ಎಪಿಸೋಡ್ ಎಲ್ಲವನ್ನೂ ಉಲ್ಟಾ ಮಾಡಿ, ಮನಸ್ಪೂರ್ತಿಯಾಗಿ ಖುಷಿ ಪಡುವಂತೆ ಮಾಡಿದೆ.

ಶಶಾಂಕ್ ಮನಸ್ಸು ಅರ್ಥ ಆಗಿದೆಯಾ?

ಶಶಾಂಕ್ ಮನಸ್ಸು ಅರ್ಥ ಆಗಿದೆಯಾ?

ದಿಯಾಳಿಗೆ ಜ್ವರ ಬಂದಿದೆ ಎಂದಾಕ್ಷಣ ಶಶಾಂಕ್ ಮನಸ್ಸು ತಳಮಳದಿಂದ ಒದ್ದಾಡಿದೆ. ಹೇಗಾದರೂ ಮಾಡಿ ದಿಯಾಳನ್ನು ನೋಡಬೇಕು ಎಂದೆನಿಸಿ, ಮಾವನಿಗೆ ಕರೆ ಮಾಡಿ ಮನೆಗೆ ಹೋಗಿದ್ದಾನೆ. ದಿಯಾ ಸುಸ್ತಾಗಿ ಮಲಗಿದ್ದನ್ನು ನೋಡಿ, ಮಾತಾಡಿಸಿ, ಚಾಕಲೇಟ್ ಗಿಫ್ಟ್ ನೀಡಿದ್ದಾನೆ. ಶಶಾಂಕ್ ಬಂದ ಕೂಡಲೇ ದಿಯಾಳಿಗೆ ಮನಸ್ಸಲ್ಲೇ ಸಿಕ್ಕಾಪಟ್ಟೆ ಖುಷಿಯಾಗಿದೆ. ಆದರೂ ಜಗಳ ಮಾಡುವುದನ್ನು ಬಿಟ್ಟಿಲ್ಲ. ನಿನ್ನಂಥ ಮಾರಿ ನೋಡುವುದಕ್ಕೆ ಇಷ್ಟವಿಲ್ಲ ಎಂದಿದ್ದರೆ ನಾನ್ಯಾಕೆ ಬರುತ್ತಿದ್ದೆ ಅಂತ ಶಶಾಂಕ್ ಹೇಳಿದ ಮಾತಿಗೆ ದಿಯಾ ಖುಷಿ ಪಟ್ಟಿದ್ದಾಳೆ. ಚಾಕಲೇಟ್ ತಿನ್ನಿಸಿ, ನೀರು ಕುಡಿಸಿ, ಶಕ್ತಿ ಬರಲೆಂದು ಸೂಪ್ ಕೂಡ ಕುಡಿಸಿದ್ದಾನೆ. ಈ ಪ್ರೀತಿ ದಿಯಾಳಿಗೆ ಅರ್ಥವಾಗಬೇಕಿದೆ. ಅರ್ಥವಾದರೂ ಆಗಾಗ ಅರ್ಥವಾಗದವಳಂತೆ ಕಾಡಿಸುತ್ತಿದ್ದಾಳೆ.

ಮನೆಯವರ ಮುಂದೆ ಲಾಕ್ ಆದ ಶಶಾಂಕ್

ದಿಯಾಳನ್ನು ನೋಡುವುದಕ್ಕೆ ಬಂದಿರುವ ವಿಚಾರವನ್ನು ಶಶಾಂಕ್ ಮನೆಯವರಿಗೆ ಯಾರಿಗೂ ಹೇಳಿರಲಿಲ್ಲ. ಕುಕ್ಕಿ ಕಾಲ್ ಮಾಡಿದಾಗ ನಾನು ಯಾವುದೋ ರಿಸರ್ಚ್‌ನಲ್ಲಿದ್ದೀನಿ ಅಂತ ಸುಳ್ಳು ಹೇಳಿದ್ದಾನೆ. ಆದರೆ ಈ ಸತ್ಯ ಡಾಕ್ಟರ್ ಶ್ರೀಧರಿಂದ ಬಟಾ ಬಯಲಾಗಿದೆ. ಸಸ್ಪೆನ್ಸ್ ಅಂತ ಕುಕ್ಕಿ ಮನೆಯವರಿಗೂ ವಿಚಾರ ತಿಳಿಸದೆ ಕಳ್ಳ ಬೆಕ್ಕನ್ನು ಹಿಡಿಯಲು, ಮನೆಯವರನ್ನೆಲ್ಲಾ ಕರೆದುಕೊಂಡು ದಿಯಾಳ ಕೊಣೆಗೆ ಹೋಗಿದ್ದಾರೆ. ಅಲ್ಲಿ ಕಂಡದ್ದು ಪ್ರೀತಿಯಷ್ಟೇ. ದಿಯಾಳಿಗೆ ತುಂಬಾ ಪ್ರೀತಿಯಿಂದ ಶಶಾಂಕ್ ಆರೈಕೆ ಮಾಡುತ್ತಿದ್ದ. ಇದನ್ನು ಕಂಡು ಮನೆ ಮಂದಿಗೆಲ್ಲಾ ಆಶ್ಚರ್ಯದ ಜೊತೆಗೆ, ಖುಷಿ ತಡೆದುಕೊಳ್ಳಲು ಆಗಲಿಲ್ಲ. ಕುಕ್ಕಿ ಅಂತ ಹೆಚ್ಚು ಕಾಡಿಸಿದ್ದಾನೆ. ಏನು ಆಗಬಾರದು ಅಂತ ಶಶಾಂಕ್ ಸುಳ್ಳನ್ನು ಹೇಳಿದ್ದನೋ ಅದರ ಡಬ್ಬಲ್ ರಾದ್ಧಾಂತ ನಡೆದಿದೆ. ಮನೆಯವರೆಲ್ಲರ ಮುಂದೆ ಕದ್ದು ಮುಚ್ಚಿ ಮಾಡುತ್ತಿದ್ದ ಪ್ರೀತಿ ಎಲ್ಲರಿಗೂ ಗೊತ್ತಾಗಿದೆ.

ದಿಯಾ ಫುಲ್ ಖುಷ್

ದಿಯಾಳಿಗೆ ಜ್ವರ ಎಂದಾಕ್ಷಣ ನಡುಕೋಟೆ ಮನೆಯವರೆಲ್ಲಾ ಗಾಬರಿಯಾಗಿದ್ದಾರೆ. ಅದಕ್ಕಾಗಿಯೇ ದಿಯಾಳಿಗಾಗಿ ಕಷಾಯ ಮಾಡಿಕೊಂಡು, ಹಣ್ಣು ಹಂಪಲು ತೆಗೆದುಕೊಂಡು ಮನೆ ಮಂದಿಯೆಲ್ಲಾ ಹೊರಟಿದ್ದಾರೆ. ಎಲ್ಲರನ್ನೂ ನೋಡಿದ ದಿಯಾಳಿಗೆ ಖುಷಿಯಾಗಿದೆ. ನೀವೆಲ್ಲಾ ನನ್ನನ್ನೇ ನೋಡುವುದಕ್ಕೆ ಬಂದಿದ್ದಾ ಅಂತ ಆಶ್ಚರ್ಯವಾಗಿ ನೋಡಿದ್ದಾಳೆ. ಇಷ್ಟೆಲ್ಲಾ ಪ್ರೀತಿ, ಆರೈಕೆಗೆ ದಿಯಾ ಅಪ್ಪ, ಅತ್ತೆಯ ಕಣ್ಣುಗಳಲ್ಲಿ ನೀರು ತುಂಬಿದೆ. ದಿಯಾಳಿಗೆ ಹಣ್ಣು ತಿನ್ನಿಸಿ, ಜ್ಯೂಸ್ ಕುಡಿಸಿ, ಆಕೆಗೆ ಶಕ್ತಿ ಬರುವಂತೆ ಮಾಡಿದ್ದಾರೆ. ರೂಮು ಬಿಟ್ಟು ಹೊರಗೆ ಬಾರದೆ ಮಲಗಿದ್ದಲ್ಲೆ ಮಲಗಿದ್ದ ದಿಯಾ, ನಡುಕೋಟೆ ಮನೆಯವರ ಆರೈಕೆಯಿಂದ ಒಬ್ಬಳೆ ಎದ್ದು ಬಂದಿದ್ದಾಳೆ.

More from Filmibeat

English summary
Star Suvarna Serial Jenugoodu Written Update on April 20th Episode. Here is the details about Shashank care on Diya
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X