Jenugoodu Serial: ಹಾವು ಮುಂಗಸಿಯಂತಿರೋ ದಿಯಾ-ಶಶಾಂಕ್ ನನ್ನು ಒಂದು ಮಾಡ್ತಾರಾ ಆದಿ-ರಾಗ ?
ಸ್ಟಾರ್ ಸುವರ್ಣದಲ್ಲಿ ಮೂಡಿ ಬರುತ್ತಿರುವ 'ಜೇನುಗೂಡು' ಧಾರಾವಾಹಿ ದಿನದಿಂದ ದಿನಕ್ಕೆ ತನ್ನ ಪ್ರೇಕ್ಷಕ ವರ್ಗವನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ಯಾಕಂದ್ರೆ ಆ ಧಾರಾವಾಹಿಯಲ್ಲಿ ಬರುತ್ತಿರುವ ಒಬ್ಬೊಬ್ಬರ ಮಾತುಗಾರಿಕೆ ಅಷ್ಟು ಮುದ್ದು ಮುದ್ದಾಗಿದೆ. ಹೀಗಾಗಿ ಧಾರಾವಾಹಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈಗ ಧಾರಾವಾಹಿಯಲ್ಲಿ ಮಜವೋ ಮಜಾ ಎನಿಸುವ ಸನ್ನಿವೇಶಗಳು ಹೆಚ್ಚಾಗಿ ಪ್ರೇಕ್ಷಕರಿಗೆ ಸಿಗುತ್ತಿದೆ.
ಹಾವು ಮುಂಗುಸಿಯಂತಿದ್ದರು ಮನೆಯವರ ಬಲವಂತಕ್ಕೆ ದಿಯಾ ಮತ್ತು ಶಶಾಂಕಿ ಮದುವೆಗೆ ಒಪ್ಪಿದ್ದಾರೆ. ಆದರೆ ಇದು ಇಬ್ಬರಿಗೂ ಇಷ್ಟವೇ ಇಲ್ಲ. ಮದುವೆಗೆ ಇನ್ನೂ ಸಾಕಷ್ಟು ಸಮಯವಿದೆ. ಅಷ್ಟರಲ್ಲಿ ಮದುವೆ ಮುರಿದುಕೊಳ್ಳಬಹುದು ಎಂಬ ಕಾರಣಕ್ಕೆ ಇರೋ ಬರೋ ಪ್ರಯತ್ನಗಳನ್ನೆಲ್ಲಾ ಇಬ್ಬರೂ ಸೇರಿ ಮಾಡುತ್ತಿದ್ದಾರೆ.

ದಾದಾ ಮಾತಿಗೆ ಕಟ್ಟು ಬಿದ್ದಿರೋ ಶಶಾಂಕ್
ಈ ಮೊದಲೇ ಹೇಳಿದಂತೆ ಶಶಾಂಕ್ ಇರುವುದು ಕೂಡು ಕುಟಂಬದಲ್ಲಿ. ದೊಡ್ಡಪ್ಪ-ದೊಡ್ಡಮ್ಮ, ಚಿಕ್ಕಪ್ಪ-ಚಿಕ್ಕಮ್ಮ, ಅಣ್ಣ ಅತ್ತಿಗೆ, ಅಕ್ಕ-ತಂಗಿಯಂದಿರು ಹೀಗೆ ಎಲ್ಲರೂ ಸೇರಿರುವ ಕುಟುಂಬವದು. ಸದಾ ನಗು ಮೊಗದಲ್ಲಿ ಎಲ್ಲರೂ ಸಮಯ ಕಳೆಯುತ್ತಾರೆ. ಅಷ್ಟೇ ಅಲ್ಲ ಕಷ್ಟ ಎಂದಾಗ ಎಲ್ಲರೂ ಕೈ ಜೋಡಿಸುತ್ತಾರೆ. ಹೀಗಿರುವಾಗ ಯಾರು ಯಾರ ಮನಸ್ಸನ್ನು ನೋಯಿಸಲು ಇಷ್ಟ ಪಡುವುದಿಲ್ಲ. ಶಶಾಂಕ್ ಮದುವೆ ವಿಚಾರ ಬಂದಾಗಲೂ ಇಲ್ಲಿ ನಡೆದಿರುವುದು ಅದೇ ವಿಚಾರ. ಒಮ್ಮೆ ದಾದಾನ ಮಾತು ತಿರಸ್ಕರಿಸಿದ ಶಶಾಂಕ್ ಬಳಿ ದಾದಾನ ಬೇಸರ ನೋಡಿ ಮಾತು ಬದಲಾಯಿಸಿದ. ಇಲ್ಲ ನಾನು ಈ ಮದುವೆ ಆಗುತ್ತೀನಿ ಎಂದ. ಒಂದು ಕಂಡೀಷನ್ ಹಾಕಿ ಒಪ್ಪಿದ. ದಿಯಾ ಮನಸಾರೆ ಒಪ್ಪಿದರೆ ಮಾತ್ರ ಎಂದು ಹೇಳಿದ. ಮನೆಯವರಿಗೂ ಅದಕ್ಕೆ ಸಂಪೂರ್ಣ ಒಪ್ಪಿಗೆ ಇದ್ದ ಕಾರಣ ಅಸ್ತು ಎಂದಿದ್ದಾಗಿತ್ತು.

ಪಾಸಾದ್ರೆ ಡಿವೋರ್ಸ್ ಕಂಡೀಷನ್ ಹಾಕಿದ ದಿಯಾ
ಅತ್ತ ಶಶಾಂಕ್ ಮನೆಯವರ ಮಾತಿಗೆ ಕಟ್ಟು ಬಿದ್ದು ಮದುವೆಗೆ ಒಪ್ಪಿದರೆ, ಇತ್ತ ದಿಯಾ ತಾನೂ ಫೇಲಾಗಿರುವುದಕ್ಕೆ ತಂದೆಯ ಮಾತನ್ನು ಕೇಳಿದ್ದಾಳೆ. ದಿಯಾ ತೀರಾ ಮುಗ್ಧೆ. ಆದರೆ ಶಶಾಂಕ್ ವಿಚಾರದಲ್ಲಿ ರಣಚಂಡಿ. ಮಗುವಿನಂತೆ ಆಡುವ ದಿಯಾಳನ್ನು ಕಂಡರೆ ನಡುಕೋಟೆ ಮನೆಯವರಿಗೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ಡಾಕ್ಟರ್ ಕೂಡ ಮಗಳು ಆ ಮನೆಗೆ ಹೋದರೆ ಸುಖವಾಗಿ ಇರುತ್ತಾಳೆ ಅನ್ನೋದನ್ನು ಅರಿತಿದ್ದಾರೆ. ಮಗಳು ಏನೇ ಕಂಡೀಷನ್ ಹಾಕಿದರು ಅದನ್ನು ಒಪ್ಪಿ ಮದುವೆಗೆ ಧೈರ್ಯ ಮಾಡಿದ್ದಾರೆ. ಈ ಬಾರಿ ಡಿಗ್ರಿಯಲ್ಲಿ ಫಸ್ಟ್ ಕ್ಲಾಸ್ ಪಾಸಾದರೆ ಡಿವೋರ್ಸ್ ಕೊಟ್ಟು ಬರುತ್ತೇನೆ ಎಂದು ದಿಯಾ ಕಂಡೀಷನ್ ಹಾಕಿದ್ದಾಳೆ.

ಶಶಾಂಕ್-ದಿಯಾಳನ್ನು ಸೇರಿಸುತ್ತಾರಾ?
ದಿಯಾ ಹಾಕಿರುವ ಕಂಡಿಷನ್ ಶಶಾಂಕ್ ಸಿಕ್ಕಾಪಟ್ಟೆ ಇಷ್ಟವಾಗಿದೆ. ಹೀಗಾಗಿಯೇ ಅಗ್ರಿಮೆಂಟ್ ಪೇಪರ್‌ಗೆ ಸಹಿಯನ್ನು ಹಾಕಿದ್ದಾನೆ. ಆದರೆ ಇದು ನಡುಕೋಟೆ ಕುಟುಂಬಕ್ಕಾಗಲೀ, ಡಾಕ್ಟರ್ ಕುಟುಂಬಕ್ಕಾಗಲೀ ಇಷ್ಟವಿಲ್ಲ. ಈಗಾಗಲೇ ಇಬ್ಬರ ಮದುವೆಗೆ ತಯಾರಿ ಶುರುವಾಗಿದೆ. ಅವಳು ಪಾಸಾಗಲ್ಲ ಅನ್ನೋ ನಂಬಿಕೆ ಡಾಕ್ಟರ್‌ದು, ನಾವೂ ತೋರಿಸುವ ಪ್ರೀತಿ ಮುಂದೆ ಅವಳು ಪಾಸಾದರೂ ಹೋಗಲ್ಲ ಅನ್ನೋ ಗಟ್ಟಿ ನಂಬಿಕೆ ನಡುಕೋಟೆ ಮನೆಯವರದ್ದು. ಈ ಮಧ್ಯೆ ಅವರಿಬ್ಬರು ಒಂದಾಗಲಿ ಅನ್ನೋದು ಪ್ರೇಕ್ಷಕರ ಆಸೆ. ಅದಕ್ಕಾಗಿಯೇ ಅವರಿಬ್ಬರನ್ನು ಒಂದು ಮಾಡಲು ಇದೀಗ ರಾಗಾ-ಆದಿ ಬರುತ್ತಿದ್ದಾರೆ.

ಮಹಾ ಸಂಚಿಕೆಯಲ್ಲೇನು ಬದಲಾವಣೆ?
'ಮನಸ್ಸೆಲ್ಲಾ ನೀನೆ' ಧಾರಾವಾಹಿಯಲ್ಲಿ ರಾಗಾ ಮತ್ತು ಆದಿಯ ಪಾತ್ರ ಕೂಡ ಎಲ್ಲರನ್ನು ಆಕರ್ಷಿಸಿದೆ. ಮೊದ ಮೊದಲಿಗೆ ಇವ್ರಿಬ್ಬರು ಕೂಡ ಕಿತ್ತಾಡುತ್ತಿದ್ದರು. ಇದೀಗ ಲೈಲಾ-ಮಜ್ನು ರೀತಿಯಂತಾಗಿದ್ದಾರೆ. ಹೀಗಾಗಿ ಹಾವು ಮುಂಗುಸಿಯಂತಿರುವ ಏಲಿಯನ್ ಮತ್ತು ಮೂಲಂಗಿ ಮಾದವ್ವನನ್ನು ಒಂದು ಮಾಡಲು ಬಂದಿದ್ದಾರೆ. ಮಹಾ ಸಂಚಿಕೆಯಲ್ಲಿ ಏನೆಲ್ಲಾ ಬದಲಾವಣೆ


Click it and Unblock the Notifications











