For Quick Alerts
  ALLOW NOTIFICATIONS  
  For Daily Alerts

  ಜೇನುಗೂಡು: ವಧು-ವರನಿಗೆ ಮಾಡುವ ಮಾತೃ ಭೋಜನದ ಬಗ್ಗೆ ನಿಮಗೆ ಗೊತ್ತಾ..?

  By ಎಸ್ ಸುಮಂತ್
  |

  ಭಾರತ ಸಂಸ್ಕೃತಿಯ ನಾಡು ಅಂತ ಸುಮ್ಮನೆ ಹೇಳುವುದಿಲ್ಲ. ಒಂದೊಂದು ರಾಜ್ಯ, ಒಂದೊಂದು ಜಿಲ್ಲೆಯಲ್ಲೂ ವಿಭಿನ್ನವಾದ ಸಂಸ್ಕೃತಿಯನ್ನು ನೋಡುತ್ತೇವೆ. ಆದರೆ ಇತ್ತೀಚಿನ ದಿನದಲ್ಲಿ ನಮ್ಮ ಸುತ್ತಮುತ್ತಲಿನಲ್ಲಿದ್ದ ಸಂಸ್ಕೃತಿಗಳೇ ನಮಗೆ ಗೊತ್ತಿಲ್ಲ. ಜೀವನದ ಜಂಜಾಟ, ಬ್ಯುಸಿ ಶೆಡ್ಯೂಲ್‌ನಿಂದ ಪದ್ಧತಿಗಳಿಂದ ದೂರವೇ ಉಳಿದಿದ್ದಾರೆ. ಹೀಗಾಗಿ ಹಲವು ಪದ್ಧತಿಗಳು ನಮಗೆ ತಿಳಿದಿರುವುದೇ ಇಲ್ಲ.

  ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಇರುವ ವಿಭಿನ್ನವಾದ ಪದ್ಧತಿಗಳ ಬಗ್ಗೆ 'ಜೇನುಗೂಡು' ಧಾರಾವಾಹಿ ಮೂಲಕ ಪರಿಚಯ ಮಾಡಿಕೊಡಲು ಹೊರಟಿದ್ದಾರೆ. ಕಳೆದ ವಾರದಿಂದ ನಡುಕೋಟೆಯಲ್ಲಿ ಮದುವೆ ತಯಾರಿ ಶುರುವಾಗಿದ್ದು, ಪ್ರತಿದಿನ ಕೂಡ ಒಂದೊಂದು ಸಂಸ್ಕೃತಿ ಬಗ್ಗೆ ತಿಳಿಸಿಕೊಡುತ್ತಿದ್ದಾರೆ.

  ನಡುಕೋಟೆ ಮನೆಯಲ್ಲಿ ಮಾತೃ ಭೋಜನಾ!

  ನಡುಕೋಟೆ ಮನೆಯಲ್ಲಿ ಮಾತೃ ಭೋಜನಾ!

  ಮದುವೆ ಎಂದರೆ ಒಂದಷ್ಟು ಶಾಸ್ತ್ರಗಳು ಇರುತ್ತವೆ. ಸಾಮಾನ್ಯವಾಗಿ ಮೆಹಂದಿ ಶಾಸ್ತ್ರ, ಹಳದಿ ಶಾಸ್ತ್ರ, ಬಳೆ ಶಾಸ್ತ್ರ ತೀರಾ ತಿಳಿದುಕೊಂಡಿದ್ದರೆ ಚಪ್ಪರ ಶಾಸ್ತ್ರವೊಂದು ಗೊತ್ತಿರುತ್ತೆ. ಆದರೆ ಈ ಮಾತೃ ಭೋಜನ ಎಂಬುದು ಸ್ವಲ್ಪ ಹೊಸದೇ ಇದೆ. ಅದನ್ನ ಹೇಗೆಲ್ಲಾ ಆಚರಿಸಿತ್ತಾರೆ ಎಂಬ ಕ್ಯೂರಿಯಾಸಿಟಿ ಎಲ್ಲರದ್ದು. ನಡುಕೋಟೆ ಮನೆಯಲ್ಲಿ ಸೋಮವಾರ ಆ ಭೋಜನ ನಡೆಯಲಿದೆ. ಅದಕ್ಕೂ ಮುನ್ನ ಕೊಂಚ ಮಾಹಿತಿಯನ್ನು ನೀಡಿದ್ದಾರೆ. ಮಾತೃ ಭೋಜನವೆಂದರೆ ಮನೆಯಲ್ಲಿರುವ ತಾಯಂದಿರೆಲ್ಲಾ ಸೇರಿ, ವರನಿಗೆ ಏನೆಲ್ಲಾ ಇಷ್ಟವೋ ಅದೆಲ್ಲವನ್ನು ಮಾಡಿ, ತಿನ್ನಿಸುವುದು. ಹೆಂಡತಿ ಬಂದ ಮೇಲೆ ಗಂಡನಿಗೆ ತಾಯಂದಿರ ಕೈಯಲ್ಲಿ ಊಟ ತಿನ್ನುವ ಸಮಯ ಕಡಿಮೆ ಅಂತ.

  ದಿಯಾ ಕೂಡ ಮಾತೃ ಭೋಜನದಲ್ಲಿ ಭಾಗಿ

  ದಿಯಾ ಕೂಡ ಮಾತೃ ಭೋಜನದಲ್ಲಿ ಭಾಗಿ

  ದಿಯಾಗೆ ಮೊದಲಿನಿಂದಲೂ ತಾಯಿ ಪ್ರೀತಿ ಸಿಕ್ಕಿಲ್ಲ ಎಂಬ ಬೇಸರ ಇದೆ. ಅದನ್ನು ಆಕೆ ಯಾವಾಗಲೂ ಹೇಳಿಕೊಂಡಿದ್ದಾಳೆ. ಆದರೆ ದಿಯಾಗೆ ಮಾತೃ ಭೋಜನ ಎಂದ ಕೂಡಲೆ ಮನಸ್ಸು ಭಾರವಾಗಿದೆ. ನನ್ನ ಹೆತ್ತವಳಿಗೆ ನನಗೇನು ಇಷ್ಟ ಎಂಬುದೇ ತಿಳಿದಿಲ್ಲ ಎಂಬ ಬೇಸರ ಹೊರ ಹಾಕಿದ್ದಾಳೆ. ಆದರೆ ನಡುಕೋಟೆ ಮನೆಯ ಕುಕ್ಕಿ ಅಂಡ್ ಗ್ಯಾಂಗ್ ಇರುವಾಗ ಇದಕ್ಕೆಲ್ಲಾ ಎಲ್ಲಿಯ ಅವಕಾಶ. ದಿಯಾಳನ್ನು ಸಹ ತಮ್ಮ ಮನೆಯಲ್ಲಿಯೆ ಮಾಡುವ ಮಾತೃ ಭೋಜನಕ್ಕೆ ಕರೆದಿದ್ದಾರೆ. ವರನ ಜೊತೆಗೆ ವಧುವಿಗೂ ತಮ್ಮ‌ ಮನೆಯಲ್ಲಿಯೇ ಮಾತೃ ಭೋಜನ ಅರೆಂಜ್ ಮಾಡಿದ್ದಾರೆ.

  ದಿಯಾ-ಶಶಾಂಕ್ ನಡುವೆ ಮಾಯಾ

  ದಿಯಾ-ಶಶಾಂಕ್ ನಡುವೆ ಮಾಯಾ

  ದಿಯಾ ಮತ್ತು ಶಶಾಂಕ್ ನಡುವೆ ಪ್ರೀತಿ ಇದೆ. ಆದರೆ ಅದು ಜಗಳದ ನಡುವೆ ಕಳೆದು ಹೋಗುತ್ತಿದೆ. ಇದರ ಜೊತೆಗೆ ಮಾಯಾ ಬೇರೆ ಮಧ್ಯಪ್ರವೇಶ ಮಾಡಿ ಜಗಳ ಬರಿಸುತ್ತಲೇ ಇದ್ದಾಳೆ. ಸಾರಿಕ ಬಳಿ ಹೋಗಿ ನಿನ್ನನ್ನು ತಾಯಿ ಆಗಿ ಸ್ವೀಕರಿಸಬೇಕೆಂದರೆ ದಿಯಾ ಶಶಾಂಕ್ ಮದುವೆ ನಿಲ್ಲಿಸಬೇಕೆಂದು ಹೇಳಿದ್ದಾಳೆ. ಆದರೆ ಸಾರಿಕಾ ಇದೆಲ್ಲದಕ್ಕು ಸೊಪ್ಪಿ ಕೂಡ ಹಾಕಿಲ್ಲ. ಆದರೆ ಇದೀಗ ಮದುವೆಯ ಮನೆಗೆ ಎಂಟ್ರಿ ಕೊಟ್ಟಿದ್ದಾಳೆ‌ ಶಶಾಂಕ್‌ಗೆ ಅಕ್ಷರಶಃ ಮಾಯಾ ಬರುವುದು ಇಷ್ಟವಿರಲಿಲ್ಲ. ಬಾಯಲ್ಲಿ ಅಷ್ಟೇ ಅವನ ಕರೆಯುವಿಕೆಯಾಗಿತ್ತು. ಇದೀಗ ಮದುವೆ ಮನೆಗೆ ಎಂಟ್ರಿ ಕೊಟ್ಟಾಗಿದೆ.

  ಯಾರಿಗೆಲ್ಲಾ ಆಮಂತ್ರಣ ಇದೆ

  ಸೋಮವಾರದಿಂದ ಶುಕ್ರವಾರದವರೆಗೆ ನಡೆಯುವ ಶಾಸ್ತ್ರಗಳ ಪೈಕಿ ಈ ವಾರದಲ್ಲಿಯೇ ಮದುವೆಯೂ ನಡೆಯಲಿದೆ. ಹೀಗಾಗಿ ದಿಯಾ ಮತ್ತು ಶಶಾಂಕ್ ಮದುವೆಯ ಆಮಂತ್ರಣ ನೀಡುವಲ್ಲಿ ಬ್ಯುಸಿಯಾಗಿದ್ದಾರೆ. ಬಾವಿ ಪತಿ ಪತ್ನಿ ಸೇರಿಯೇ ಎಲ್ಲರಿಗೂ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ಆಂಕರ್, ನಟಿ ಸೇರಿದಂತೆ ಇದೀಗ ಮದುವೆಯ ಆಮಂತ್ರಣ ಪತ್ರಿಕೆ ಕೊಡಲು ಓಡಾಡುತ್ತಿದ್ದಾರೆ.

  English summary
  Star Suvarna Serial Jenugoodu Written Update on July 11th Episode. Here is the details.
  Saturday, July 9, 2022, 21:59
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X