twitter
    For Quick Alerts
    ALLOW NOTIFICATIONS  
    For Daily Alerts

    ಜೇನುಗೂಡಿನಲ್ಲಿ ಅಮೆರಿಕ ಅಮ್ಮನದ್ದೇ ಕಾಟ!

    By ಎಸ್ ಸುಮಂತ್
    |

    ಸ್ಟಾರ್ ಸುವರ್ಣದ ' ಜೇನುಗೂಡು' ಧಾರಾವಾಹಿಯಲ್ಲಿ ಮದುವೆಯ ಸಂಭ್ರಮ ಮನೆ ಮಾಡಿದೆ. ಉತ್ತರ ಕರ್ನಾಟಕದ ಶೈಲಿಯಲ್ಲಿ ದಿಯಾ ಮತ್ತು ಶಶಾಂಕ್ ಮದುವೆ ನಡೆಯುತ್ತಿದೆ. ಈ ಹಿಂದೆಯೆಲ್ಲಾ ಏಳೇಳು ದಿನಗಳ ಕಾಲ ಮದುವೆ ನಡೆಯುತ್ತಿತ್ತು. ಆದರೆ ಈಗ ಕನಿಷ್ಠ ಒಂದೂವರೆ ದಿನಗಳಿಗೆ ಮದುವೆ ಮುಗಿದು ಬಿಡುತ್ತದೆ. ಬಟ್ ಜೇನುಗೂಡಿನಲ್ಲಿ ಗೊತ್ತಿಲ್ಲದ ಶಾಸ್ತ್ರಗಳು, ಮದುವೆಯ ಸಂಭ್ರಮ ಹೇಗಿರುತ್ತೆ ಎಂಬುದನ್ನೆಲ್ಲಾ ಗ್ರ್ಯಾಂಡ್ ಆಗಿ ತೋರಿಸುತ್ತಿದ್ದಾರೆ.

    ಹಿಂದಿನ ಕಾಲದಲ್ಲೆಲ್ಲಾ ಮದುವೆಯೆಂದರೆ ಮನೆಯಲ್ಲಿ ಮಾಡುತ್ತಿದ್ದರು. ಮನೆಯ ಮುಂದೆ ಚಪ್ಪರ ಹಾಕಿ, ಅಕ್ಕ ಪಕ್ಕದ ಅಂಗಳವನ್ನೆಲ್ಲಾ ಸ್ವಚ್ಛ ಮಾಡಿ, ಬಂದ ನೆಂಟರಿಷ್ಟರಿಗೆಲ್ಲಾ ಇರಲು ಅವಕಾಶ ಮಾಡಿಕೊಟ್ಟು, ಮದುವೆ ಖುಷಿಯನ್ನು ಕುಟುಂಬಸ್ಥರೆಲ್ಲಾ ಫೀಲ್ ಮಾಡುತ್ತಿದ್ದರು. ಹಾಡು, ಹರಟೆ, ಜೀವನ, ಸಮಸ್ಯೆ, ಒಂದಷ್ಟು ಗಾಸಿಪ್ ಗಳನ್ನು ಮಾತಾಡುತ್ತಾ ಏಳು ದಿನಗಳ ಖುಷಿಯನ್ನ ಮತ್ತೊಂದು ಮದುವೆವರೆಗೂ ಉಳಿಸಿಕೊಳ್ಳುತ್ತಿದ್ದರು.

    ಪುಟ್ಟಕ್ಕನ ಮಕ್ಕಳು: ರಾಜೇಶ್ವರಿಗೆ ಸ್ನೇಹಾ ಕೊಟ್ಟ ಗೌರವಕ್ಕೆ ಗೋಪಾಲನ ಮುಖದಲ್ಲಿ ನಗು..!ಪುಟ್ಟಕ್ಕನ ಮಕ್ಕಳು: ರಾಜೇಶ್ವರಿಗೆ ಸ್ನೇಹಾ ಕೊಟ್ಟ ಗೌರವಕ್ಕೆ ಗೋಪಾಲನ ಮುಖದಲ್ಲಿ ನಗು..!

    ನಗುವಿನ ಅಲೆಯಲ್ಲಿ ತೇಲುತ್ತಿದೆ ಜೇನುಗೂಡು

    ನಗುವಿನ ಅಲೆಯಲ್ಲಿ ತೇಲುತ್ತಿದೆ ಜೇನುಗೂಡು

    ಮದುವೆ ಒಮ್ಮೆ ನಿಶ್ಚಯವಾದರೆ ವಧು-ವರನ ಮನೆಗೆ ಬರಬಾರದು ಎಂಬ ನಿಯಮವಿದೆ. ಆದರೆ ದಿಯಾ ವಿಚಾರದಲ್ಲಿ ಇದೆಲ್ಲವನ್ನು ಬ್ರೇಕ್ ಮಾಡಿದ್ದಾರೆ. ನಡುಕೋಟೆ ಮನೆಗೆ ಸೊಸೆಯಾಗುವುದಕ್ಕೂ ಮುನ್ನ ಮಗಳಾಗಿಯೇ ದಿಯಾ ಎಲ್ಲರ ಮನಸ್ಸಲ್ಲೂ ಉಳಿದುಬಿಟ್ಟಿದ್ದಾಳೆ. ಹೀಗಾಗಿ ದಿಯಾಳ ಪಾಲಿಗೆ ನೀತಿ ನಿಯಮಗಳನ್ನೆ ಮರೆತು ಬಿಟ್ಟಿದ್ದಾರೆ. ದಿಯಾಗೆ ಮದುವೆಯಾಗುತ್ತಿದ್ದೇನೆ ಎಂಬ ಖುಷಿಗಿಂತ ಆ ಮನೆಯಲ್ಲಿ ಸಂಭ್ರಮ ನಡೆಯುತ್ತಿರುವುದೇ ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ. ಇನ್ನು ದಿಯಾ ನತ್ತು ಶಶಾಂಕ್ ನಡುವೆ ನಡೆಯುವ ಕುಚೇಷ್ಠೆಗಳೇ ಹೆಚ್ಚು. ಪ್ರತಿಯೊಂದು ಸಂಭಾಷಣೆಯಲ್ಲೂ ನಗುವಿನ ಅರಮನೆಯನ್ನೇ ಕಟ್ಟಿದ್ದಾರೆ.

    ಜೊತೆ ಜೊತೆಯಲಿ ಸೀರಿಯಲ್ ಹಾಡು ಮಾಡಿತು ಮತ್ತೊಂದು ದಾಖಲೆ!ಜೊತೆ ಜೊತೆಯಲಿ ಸೀರಿಯಲ್ ಹಾಡು ಮಾಡಿತು ಮತ್ತೊಂದು ದಾಖಲೆ!

    ನಡುಕೋಟೆ ಮನೆಯ ಅಲಂಕಾರಕ್ಕೆ ಫಿದಾ

    ನಡುಕೋಟೆ ಮನೆಯ ಅಲಂಕಾರಕ್ಕೆ ಫಿದಾ

    ಮೊದಲೇ ಹೇಳಿದಂತೆ ಈ ಹಿಂದೆಯೆಲ್ಲಾ ಮದುವೆಯನ್ನು ಮನೆಯಲ್ಲಿಯೇ ಮಾಡುತ್ತಿದ್ದರು. ಇತ್ತೀಚೆಗೆ ಮನೆಗಳಲ್ಲಿ ಸಾಕಾಗುವುದಿಲ್ಲ. ಅಲಂಕಾರ ಮಾಡಲು ಆಗುವುದಿಲ್ಲ ಎಂಬ ಕಾರಣಕ್ಕೆ ಎಲ್ಲರು ಮದುವೆ ಮಾಡಲು ಛತ್ರಗಳ ಮೊರೆ ಹೋಗುತ್ತಾರೆ. ಆದರೆ ಇರುವ ಪುಟ್ಟ ಮನೆಯಲ್ಲಿಯೇ ಮದುವೆಯನ್ನು ಗ್ರ್ಯಾಂಡ್ ಆಗಿ ಹೇಗೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಮನೆಯನ್ನು ಕಲರ್ ಫುಲ್ ಆಗಿ ಅಲಂಕಾರ ಮಾಡಿದ್ದಾರೆ. ಎಲ್ಲಿ ನೋಡಿದರೂ ಬಣ್ಣ ಬಣ್ಣದ ಜಗತ್ತು ಕಣ್ಣಿಗೆ ರಾಚುವಂತಿದೆ. ಮನೆಯೇ ಒಂದು ಸಣ್ಣ ಸ್ವರ್ಗದಂತೆ ಕಾಣುತ್ತಿದೆ.

    ಶುಭಾಂಗಿಯಿಂದ ನಡುಕೋಟೆ ಮನೆಗೆ ಅವಮಾನ

    ಶುಭಾಂಗಿಯಿಂದ ನಡುಕೋಟೆ ಮನೆಗೆ ಅವಮಾನ

    ಶುಭಾಂಗಿ ಅದ್ಯಾವಾಗ ಅಮೆರಿಕದಿಂದ ಬಂದಳೋ, ಅಲ್ಲಿಂದ ಇಲ್ಲಿಯವರೆಗೂ ಏನಾದರೊಂದು ಕಿತಾಪತಿ ಮಾಡುತ್ತಲೇ ಇದ್ದಾಳೆ. ತನ್ನ ಹಣದ ದರ್ಪದಿಂಲೇ ಬೇರೆಯವರ ಮನಸ್ಸಿಗೆ ನೋವು ಮಾಡುತ್ತಿದ್ದಾಳೆ. ಆದರೂ ದಿಯಾಳ ತಾಯಿ ಎಂದು ಎಲ್ಲರೂ ಸಹಿಸಿಕೊಳ್ಳುತ್ತಿದ್ದಾರೆ. ಶ್ರೀಧರ್ ಕೂಡ ಮದುವೆಯೊಂದು ಮುಗಿಯಲಿ ಎಂದು ಕಾಯುತ್ತಿದ್ದಾರೆ. ಜವಳಿ ತೆಗೆಯುವುದರಿಂದ ಹಿಡಿದು, ಮದುವೆ ಲಗ್ನ ಪತ್ರಿಕೆಯ ವಿಚಾರದವರೆಗೂ ಕಿತಾಪತಿ‌ತೆಗೆಯುತ್ತಲೆ ಇದ್ದಾಳೆ. ಮೊದಲು ಮದುವೆಯಾಗಲಿ ಎಂಬ ಕಾರಣಕ್ಕೆ ಸುಮ್ಮನೆ ಆಗಿಬಿಟ್ಟಿದ್ದಾರೆ, ಎಲ್ಲದನ್ನು ಸಹಿಸಿಕೊಳ್ಳುತ್ತಿದ್ದಾರೆ.

    ಹಣದ ಮುಂದೆ ಶುಭಾಂಗಿಗೆ ಪ್ರೀತಿಯೇ ಕಾಣುತ್ತಿಲ್ಲ

    ಹಣದ ಮುಂದೆ ಶುಭಾಂಗಿಗೆ ಪ್ರೀತಿಯೇ ಕಾಣುತ್ತಿಲ್ಲ

    ಸದ್ಯ ಲಗ್ನಪತ್ರಿಕೆಯ ಪೂಜೆ ನಡೆಯುತ್ತಿದೆ. ಈ ವೇಳೆ ನಡುಕೋಟೆ ಮನೆಯಲ್ಲಿ ನೆಂಟರಿಷ್ಟರಿಲ್ಲ ಬಂದಿದ್ದಾರೆ. ಮುಖ್ಯಮಂತ್ರಿ ಚಂದ್ರು, ದಕ್ಷಿಣ ಮೂರ್ತಿ ಸೇರಿದಂತೆ ಹಲವರು ಬಂದಿದ್ದಾರೆ. ಹೀಗಾಗಿ‌ ಮನೆ ತುಂಬೆಲ್ಲಾ ಸಂತಸ ಮನೆ ಮಾಡಿದೆ. ಇದೇ ವೇಳೆ ಶುಭಾಂಗಿ ತನ್ನ ಹಣದ ದರ್ಪವನ್ನೇ ತೋರಿಸಿದ್ದಾಳೆ. ಆಗ ಬಂದಿದ್ದ ಹಿರಿಯರೆಲ್ಲಾ ಹಣಕ್ಕೂ, ಪ್ರೀತಿಗೂ ಇರುವ ವ್ಯತ್ಯಾಸವನ್ನ ಸಾರಿ ಸಾರಿ ಹೇಳಿದರು, ಶುಭಾಂಗಿ ಮಾತ್ರ ಬದಲಾಗುವಂತ ಕಾಣುತ್ತಿಲ್ಲ. ಹಣದ ಅಹಂಕಾರವನ್ನ ತುಂಬಿಕೊಂಡಿಯೇ ಇದ್ದಾಳೆ. ಬದಲಾಗುವುದು ತುಂಬಾ ಕಷ್ಟವೆನಿಸುತ್ತಿದೆ.

    English summary
    Star suvarna serial Jenugoodu Written Update on July 6th episode. Here is the details on Nadukote family make realize that love is valuable then money.
    Wednesday, July 6, 2022, 18:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X