India
  For Quick Alerts
  ALLOW NOTIFICATIONS  
  For Daily Alerts

  ಜೇನುಗೂಡು: ನಗುವಿನ ಅಲೆಯಲ್ಲಿ ತೇಲಿಸುತ್ತಿದೆ ದಿಯಾ-ಶಶಾಂಕ್ ಫೋಟೋಶೂಟ್..!

  By ಎಸ್ ಸುಮಂತ್
  |

  ನಡುಕೋಟೆ ಮನೆಯಲ್ಲಿ ಮದುವೆ ಕಾರ್ಯಗಳು ಭರ್ಜರಿಯಾಗಿ ನಡೆಯುತ್ತಿವೆ. ವಿನಾಯಕ್ ದಾದಾ ಎಲ್ಲವನ್ನು ಲೆಕ್ಕ ಹಾಕಿ, ಒಂದಷ್ಟನ್ನು ಅಳಿಸಿ, ಒಂದಷ್ಟನ್ನು ಉಳಿಸಲು ಯತ್ನಿಸುತ್ತಿದ್ದಾರೆ. ಸುಮಿ ಮದುವೆಯಲ್ಲಿ ಎಷ್ಟೆಲ್ಲಾ ಖರ್ಚಾಗಿತ್ತೋ ಅಷ್ಟೆ ರೊಕ್ಕದಲ್ಲಿ ಶಶಾಂಕ್ ಮದುವೆ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ. ಆದರೆ ವಿನಾಯಕ್ ದಾದಾ ಲೆಕ್ಕವನ್ನು ಮೀರಿ ಎಲ್ಲವೂ ಹನುಮಂತನ ಬಾಲ ಬೆಳೆದಂತೆ ಬೆಳಯುತ್ತಿದೆ.

  ನಡುಕೋಟೆ ಮನೆ ಎಂದರೇನೆ ಅಲ್ಲಿ ನಗುವಿನ ಅಲೆ ತೇಲುತ್ತಿರುತ್ತದೆ. ಕುಕ್ಕಿ ಗ್ಯಾಂಗ್ ಇದ್ದ ಕಡೆ ಕಾಮಿಡಿಯ ಮಹಾ ಪೂರ ಹರಿದಾಡುತ್ತಿರುತ್ತದೆ. ಇದೀಗ ಮದುವೆಗೂ ಮುನ್ನ ಹುಡುಗ ಹುಡುಗಿ ಫೋಟೋಶೂಟ್ ಮಾಡಿಸಲು ಹೋಗಿ, ನೋಡುಗರಿಗೆ ನಗುವನ್ನೇ ತುಂಬಿ ತುಂಬಿ ಕೊಡುತ್ತಿದೆ. ಫೋಟೋಶೂಟ್ ಗೇನೆ ಇಷ್ಟು ನಗು ಅಂದ್ರೆ ಇನ್ನು ಮದುವೆ ಮನೆಯಲ್ಲಿ ಇನ್ನು ಎಷ್ಟೆಲ್ಲಾ ನಗುವಿರಬೇಡ.

  ಜೇನುಗೂಡು: ದಿಯಾಗೆ ಲವ್ ಆಗೋಗಿದೆ: ಡಿವೋರ್ಸ್ ಒಪ್ಪಂದ ಏನಾಗುತ್ತೆ? ಜೇನುಗೂಡು: ದಿಯಾಗೆ ಲವ್ ಆಗೋಗಿದೆ: ಡಿವೋರ್ಸ್ ಒಪ್ಪಂದ ಏನಾಗುತ್ತೆ?

  ನಡುಕೋಟೆ ಮನೆ ಮದುವೆಯೇ ಚಂದ

  ನಡುಕೋಟೆ ಮನೆ ಮದುವೆಯೇ ಚಂದ

  ಇತ್ತಿಚೆಗೆ ಧಾರಾವಾಹಿಗಳಲ್ಲಿ ಮದುವೆ, ಸಭೆ, ಸಮಾರಂಭವೆಲ್ಲಾ ಅದ್ದೂರಿಯಾಗಿಯೇ ಸಾಗುತ್ತದೆ. ಇಷ್ಟು ದಿನ ಎಲ್ಲಾ ಮದುವೆಯಲ್ಲೂ ಒಂದು ರೀತಿಯಾದಂತ ಮದುವೆ ನೋಡಿದ್ದರೆ, ಇದೀಗ ಉತ್ತರ ಕರ್ನಾಟಕದ ಮದುವೆ ನೋಡುವ ಭಾಗ್ಯ ವೀಕ್ಷಕರದ್ದು. ಉತ್ತರ ಕರ್ನಾಟಕದಲ್ಲಿ ಮಾಡುವಂತೆ ಲಗ್ನ ಪತ್ರಿಕೆ ಕಟ್ಟೋ ಶಾಸ್ತ್ರ, ಚಪ್ಪರ ಶಾಸ್ತ್ರ, ಆಲ್ಗಂಬ, ಚತ್ ಬಡಿಯೋ, ಒಳಕಲ್ಲು ಪೂಜೆ, ಬೀಸೋಕಲ್ಲು ಪೂಜೆ, ಜವಳಿ ಖರೀದಿ, ಬಳೆ ಶಾಸ್ತ್ರ ಹೀಗೆ ನಾನಾ ಶಾಸ್ತ್ರಗಳ ಜೊತೆಗೆ ವಾರಾನುಗಟ್ಟಲೇ ಮದುವೆಯ ಸಂಭ್ರಮ ನಡೆಯಲಿದೆ.

  ಉತ್ತರ ಕರ್ನಾಟಕ ಶೈಲಿಯಲ್ಲಿ ಫೋಟೋಶೂಟ್

  ಉತ್ತರ ಕರ್ನಾಟಕ ಶೈಲಿಯಲ್ಲಿ ಫೋಟೋಶೂಟ್

  ಹೇಳಿಕೇಳಿ ನಡುಕೋಟೆ ಕುಟುಂಬ ಉತ್ತರ ಕರ್ನಾಟಕದ ಮನೆತನದವರು. ಹೀಗಾಗಿ ಅವರ ಉಡುಗೆ ತೊಡುಗೆಯೂ ವಿಭಿನ್ನವಾಗಿರುತ್ತದೆ. ಇದೀಗ ದಿಯ ಮತ್ತು ಶಶಾಂಕ್ ಫೋಟೋ ಶೂಟ ನಡುವೆ ಉತ್ತರ ಕರ್ನಾಟಕದ ಸ್ಟೈಲ್ ನಲ್ಲಿಯೇ ಫೋಟೋಶೂಟ್ ಮಾಡಿಸಲಾಗಿದೆ. ದಿಯಾ ಸೀರೆಯ ಸ್ಟೈಲ್ ಗೆ ನೋಡುಗರು ಫುಲ್ ಫಿದಾ ಆಗೋಗಿದ್ದಾರೆ. ಮಾಡ್ರನ್ ಲುಕ್ ಹಾಗೂ ಉತ್ತರ ಕರ್ನಾಕದ ಸ್ಟೈಲ್ ನಲ್ಲಿ ಇಬ್ಬರು ಸಖತ್ರಾಗಿಯೇ ಮಿಂಚಿದ್ದಾರೆ.

  ದಿಯಾ-ಶಶಾಂಕ್ ಫೋಟೋ ಕ್ಲಿಕ್ಕಿಸುವಷ್ಟರಲ್ಲಿ ಸುಸ್ತು

  ದಿಯಾ-ಶಶಾಂಕ್ ಫೋಟೋ ಕ್ಲಿಕ್ಕಿಸುವಷ್ಟರಲ್ಲಿ ಸುಸ್ತು

  ದಿಯಾ ಮತ್ತು ಶಶಾಂಕ ಎಲ್ಲಿರುತ್ತಾರೋ ಅಲ್ಲಿ ಜಗಳ ನಿಸ್ಸಂದೇಹವಿಲ್ಲದೆ ಶುರುವಾಗುತ್ತದೆ. ಯಾರು ಏನೇ ಹೇಳಿದರು ಕೋಳಿ ಜಗಳವನ್ನು ಮಾತ್ರ ಇಬ್ಬರು ಬಿಡುವುದಿಲ್ಲ. ಹಾಗೋ ಹೀಗೋ ಕುಕ್ಕಿ ಇದ್ದರೆ ಮಾತ್ರ ಅಲ್ಲಿ ಸಿಂಡ್ರೆಲಾ ಸರಿ ಆಗುವುದು. ಶಶಾಂಕ್ ಜೊತೆ ಫೋಟೋಗೆ ಪೋಸ್ ನೋಡುವುದಕ್ಕೆ ಸಾಧ್ಯವೇ ಇಲ್ಲ ಎಂದ ದಿಯಾ, ತನ್ನ ಮಮ್ಮಿ ಮೇಲಿನ ಕೋಪಕ್ಕೆ ಕಡೆಗೂ ಒಪ್ಪಿಕೊಂಡಳು. ಆದರೆ ಶಶಾಂಕ್ ನ ದೂರ ನಿಲ್ಲಿಸಿ ಫೋಟೋ ತೆಗೆಸಬೇಕು ಎಂಬ ಲೆಕ್ಕಚಾರದ ಮೇಲೆ. ಓಕೆ ಅಂತ ಒಪ್ಪಿದ್ದ ಗ್ಯಾಂಗ್ ಹೇಗೋ ಕ್ಯಾಮೆರಾ ಮುಂದಕ್ಕೆ ಕರೆ ತಂದಿತ್ತು. ಆದರೆ ಮತ್ತದೆ ರಾಗ ಯಪ್ಪಾ.. ಆ ಇಬ್ಬರನ್ನು ನಿಲ್ಲಿಸಿ ಒಂದು ಫೋಟೋ ಕೂಡ ತೆಗೆಸುವುದು ಒಂದು ಯುದ್ದವನ್ನು ಗೆದ್ದಂತೆಯೇ ಸರಿ. ಕಪ್ಪೆಗಳನ್ನು ತಕ್ಕಡಿಯಲ್ಲಿ ಹಾಕಿದರೆ ಹೇಗೆ ನಿಲ್ಲುವುದಿಲ್ಲವೋ ಹಾಗೇ ಈ ದಿಯಾ ಶಶಾಂಕ್ ಕೂಡ. ಒಂದು ಕಡೆ ನಿಲ್ಲಿ ಎಂದರೆ ನಿಲ್ಲುವುದಿಲ್ಲ.

  ಮನೆಯವರಿಗಾಗಿ ನಗುಮುಖ ತೋರಿದ ಶಶಾಂಕ್

  ಮನೆಯವರಿಗಾಗಿ ನಗುಮುಖ ತೋರಿದ ಶಶಾಂಕ್

  ಅಬ್ಬಬ್ಬಾ.. ಫೋಟೋಶೂಟ್ ಮಾಡಿಸಲೇಬೇಕೆಂದು ಕುಕ್ಕಿ ಗ್ಯಾಂಗ್ ಏನೋ ನಿರ್ಧಾರ ಮಾಡಿತು. ಆದರೆ ಇಬ್ಬರ ನಡುವಣ ನಗು ತರಿಸುವುದು ಅಷ್ಟು ಸುಲಭವಲ್ಲ. ಅಂಥದ್ರಲ್ಲಿ ರೋಮ್ಯಾಂಟಿಕ್ ಫೋಟೋ ಕ್ಲಿಕ್ಕಿಸೋದು ಅಂದ್ರೆ ಸುಲಭವಾ. ಆದರೆ ಕ್ಲಿಕ್ ಕುಮಾರನಿಂದ ಅದು ಸಾಧ್ಯವಿದೆ. ಮನೆಯವರೆಲ್ಲಾ ಮಾತನಾಡುವಾಗ ಮಾಯಾ ಎಂಬ ಪದ ದಿಯಾಗೆ ಆಗಲ್ಲ ಎಂಬುದು ಗೊತ್ತಾಯ್ತು. ಅದೇ ಕಾರಣವನ್ನು ಇಟ್ಟುಕೊಂಡ ಕ್ಲಿಕ್ ಕುಮಾರ, ತುಂಬಾ ಕ್ಲೋಸ್ ಆಗಿ ಫೋಟೋ ತೆಗೆಸಿಕೊಂಡು ಮಾಯಾಗೆ ಉರಿಸಬಹುದಲ್ಲವಾ ಎಂಬ ಐಡಿಯಾ ಕೊಟ್ಟಿದ್ದೆ, ದಿಯಾ ಖುಷಿ ಖುಷಿಯಲ್ಲಿಯೇ ಫೋಟೋಗೆ ಪೋಸ್ ಕೊಟ್ಟಳು. ಈಗ ಶಶಾಂಕ್ ಮುನಿಸಿನ ಸರದಿ. ಮತ್ತೆ ಕ್ಲಿಕ್ ಕುಮಾರ ಶಶಾಂಕನನ್ನ ಸಮಾಧಾನ ಮಾಡಿ, ನಿಮ್ಮ ಮನೆಯವರಿಗಾಗಿ ಪೋಸ್ ಕೊಡಪ್ಪ ಎಂದಾಗ ಒಪ್ಪಿದ. ಫೈನಲಿ ಉತ್ತರ ಕರ್ನಾಟಕದ ಡ್ರೆಸ್ ಕೋಡ್ ನಲ್ಲಿ ಇಬ್ಬರ ಫೋಟೋಗಳು ಕ್ಯೂಟ್ ಆಗಿ ಬಂದಿವೆ. ಮಾಯಾ ನೋಡದರಂತು ಕ್ಲಿಕ್ ಕುಮಾರ ಹೇಳಿದಂತೆ ಆಗೋದು ಪಕ್ಕಾ ಇದೆ.

  English summary
  Star suvarna serial Jenugoodu Written Update on June 24th episode. Here is the details on diya and shashank UK style photo shoot.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X