Jenugoodu Serial: ಜೇನುಗೂಡಿನಲ್ಲಿ ಮೂಲಂಗಿ ಮಾದವ್ವನಿಗೂ, ಏಲಿಯನ್‌ಗೂ ಮದುವೆ ಫ್ಲ್ಯಾನ್: ಟ್ವಿಸ್ಟ್ ಏನು?

By S Sumanth

ಅದು ತುಂಬಿದ ಕುಟುಂಬ.. ಶಶಾಂಕ್ ಕುಟುಂಬದ ಸದಸ್ಯರ ಮುದ್ದಿನ ಮಗ.. ಆದರೆ, ದಿಯಾ ಆ ಎಲ್ಲಾ ಸಂಬಂಧಗಳ ಅನುಭವವೇ ಇಲ್ಲದೆ ಬೆಳೆದಾಕೆ. ಆಕೆಗೂ ಈ ಸಂಬಂಧಗಳ ಬೆಲೆ ಗೊತ್ತಾಗಬೇಕೆಂಬುದೇ ಡಾಕ್ಟರ್ ಕನಸು. ಈ ಎಲ್ಲಾ ಗೊಂದಲಗಳ ನಡುವೆ ಸಾಗುತ್ತಿರುವುದೇ ಸ್ಟಾರ್ ಸುವರ್ಣದ 'ಜೇನುಗೂಡು'.

ಸದ್ಯ ಸ್ಟಾರ್ ಸುವರ್ಣದಲ್ಲಿ ಮೂಡಿ ಬರುತ್ತಿರುವ 'ಜೇನುಗೂಡು' ಧಾರಾವಾಹಿ ಎಲ್ಲರ ಗಮನ ಸೆಳೆದಿದೆ. ಪಕ್ಕಾ ಉತ್ತರ ಕರ್ನಾಟಕದ ಭಾಷೆಯಲ್ಲಿ ಕಿರುತೆರೆ ವೀಕ್ಷಕರಿಗೆ ಕಿಕ್ ಕೊಡುತ್ತಿರುವ ಸೀರಿಯಲ್ ಕೇಳುವುದಕ್ಕೂ ಚಲೋ ಅನ್ನಿಸ್ಲಿಕ್ಕತ್ತದಾ. 'ಗಟ್ಟಿಮೇಳ' ಧಾರಾವಾಹಿ ನಿರ್ದೇಶಕ ಕೋರಮಂಗಲ ಅನಿಲ್ ಈ ಧಾರಾವಾಹಿಯನ್ನು ನಿರ್ದೇಶನ ಮಾಡುತ್ತಿದ್ದಾರೆ.

ಜೇನುಗೂಡು ಧಾರಾವಾಹಿಯಲ್ಲಿ ಏನ್ ನಡೀತಿದೆ?

ಜೇನುಗೂಡು ಧಾರಾವಾಹಿಯಲ್ಲಿ ಏನ್ ನಡೀತಿದೆ?

ಡಾಕ್ಟರ್ ಕುಟುಂಬ ಹಾಗೂ ನಡುಕೋಟೆ ಕುಟುಂಬದ ನಡುವೆ ಒಂದು ಉತ್ತಮ ಬಾಂಧವ್ಯ ಬೆಳೆದಿದೆ. ನಡುಕೋಟೆ ಕುಟುಂಬ ತುಂಬು ಕುಟುಂಬ. ಸಂಪ್ರದಾಯ, ಹಬ್ಬ-ಆಚರಣೆ ಹೀಗೆ ಎಲ್ಲದರಲ್ಲೂ ಒಟ್ಟಾಗಿ ಸೇರಿ ಆಚರಣೆ ಮಾಡುತ್ತಾರೆ. ಈ ಕುಟುಂಬ ಡಾಕ್ಟರ್ ಫ್ಯಾಮಿಲಿಗೂ ತುಂಬಾ ಇಷ್ಟವಾಗಿದೆ. ಹೀಗಾಗಿ ದಿಯಾಳನ್ನು ಆ ಕುಟುಂಬದವರ ಜೊತೆ ಬೆರೆಯಲು ಬಿಟ್ಟಿದ್ದಾರೆ. ನಡುಕೋಟೆ ಕುಟುಂಬದವರಿಗೂ ದಿಯಾ ಅಂದ್ರೆ ಪ್ರೀತಿ. ಯಾರ ಪ್ರೀತಿಯೂ ಗೊತ್ತಿಲ್ಲದೆ ಬೆಳೆದ ಹುಡುಗಿ ಅಂತ ಮಮಕಾರ ತೋರಿಸುತ್ತಿದ್ದಾರೆ. ಹಾಗೇ ಆಕೆಗೆ ಎಲ್ಲವನ್ನು ತಿಳಿ ಹೇಳಿ ಕೊಡುತ್ತಿದ್ದಾರೆ. ಸದ್ಯ ದಿಯಾ ಬರ್ತ್ ಡೇ ಪಾರ್ಟಿಯಲ್ಲೂ ಎರಡು ಕುಟುಂಬಸ್ಥರು ಭಾಗಿಯಾಗಿ ಸಂತಸ ವಿನಿಮಯ ಮಾಡಿಕೊಂಡಿದ್ದರು.

ಜೇನುಗೂಡಿನಲ್ಲಿ ಏನಿದು ಬಿರುಗಾಳಿ?

ಜೇನುಗೂಡಿನಲ್ಲಿ ಏನಿದು ಬಿರುಗಾಳಿ?

ಈ ಎರಡು ಕುಟುಂಬದ ಮಧ್ಯೆ ಒಂದು ಬಿರುಗಾಳಿ ಇದೆ. ಅದೇ ಮನೆಯವರ ಮನಸ್ಸಲ್ಲಿ ಮದುವೆ ಮಾಡಬೇಕು ಅಂತ ಇದೆ. ಆದರೆ ಇಬ್ಬರೂ ಹಾವು ಮುಂಗಸಿಗಳ ಹಾಗೇ ಆಡ್ತಿದ್ದಾರೆ. ಇಲ್ಲಿ ದಿಯಾ ಮತ್ತು ಶಶಾಂಕ್ ಯಾವಾಗಲೂ ಹಾವು ಮುಂಗಸಿಯಂತೆ ಜಗಳ ಆಡುತ್ತಾ ಇರುತ್ತಾರೆ. ಒಬ್ಬರಿಗೊಬ್ಬರನ್ನ ಕಂಡರೇ ಆಗೋದೆ ಇಲ್ಲ. ಹೇ ಮೂಲಂಗಿ ಮಾದವ್ವ ಅಂತ ಶಶಾಂಕ್ ಜಗಳಕ್ಕೆ ನಿಂತ್ರೆ, ಏ ಏಲಿಯನ್ ಅಂತ ದಿಯಾ ಜಗಳಕ್ಕೆ ನಿಲ್ಲುತ್ತಾಳೆ. ಈ ಮಧ್ಯೆ ಕುಕ್ಕಿ ಇವರಿಬ್ಬರ ಮಧ್ಯೆ ಪ್ರೀತಿ ಬೆಸೆಯಲು ಪ್ರಯತ್ನಿಸುತ್ತಾ ಇದ್ಧಾನೆ.

ಪಾರ್ಟಿಯಲ್ಲಿ ನಡೆದಿದ್ದೇನು?

ಪಾರ್ಟಿಯಲ್ಲಿ ನಡೆದಿದ್ದೇನು?

ಇಬ್ಬರು ಒಂದಾಗಬೇಕು ಅನ್ನೋದು ಮನೆಯವರ ಆಸೆ ಕೂಡ. ಬರ್ತ್ ಡೇ ಪಾರ್ಟಿಯಲ್ಲಿ ಶಶಾಂಕ್ ದಿಯಾಗಾಗಿ ಹಾಡು ಬೇರೆ ಹಾಡಿದ್ದಾನೆ. ಇದು ದಿಯಾಗೆ ಇಂಪ್ರೆಸ್ ಆಗಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಮನೆಯವರಿಗೆ ಮಾತ್ರ ಸಿಕ್ಕಾಪಟ್ಟೆ ಇಂಪ್ರೆಸ್ ಆಗಿದೆ. ಇದೇ ಕಾರಣಕ್ಕೆ ಇಬ್ಬರು ಒಂದಾದರೆ ಹೇಗೆ ಅನ್ನೋದನ್ನು ಕುಟುಂಬಸ್ಥರು ಯೋಚನೆ ಮಾಡುತ್ತಿದ್ದಾರೆ.

ಜೇನುಗೂಡಿನಲ್ಲಿ ಯಾಕೀ ಅಲ್ಲೋಲ ಕಲ್ಲೋಲ?

ಜೇನುಗೂಡಿನಲ್ಲಿ ಯಾಕೀ ಅಲ್ಲೋಲ ಕಲ್ಲೋಲ?

ಕುಟುಂಬಸ್ಥರ ಆಸೆಗೆ ದಿಯಾ- ಶಶಾಂಕ್ ಒಪ್ಪಬೇಕಲ್ಲ. ನೋ ವೇ ಚಾನ್ಸೇ ಇಲ್ಲ. ನಡುಕೋಟೆ ಮನೆಯಲ್ಲಿ ನಿಂಗೆ ದಿಯಾಳೊಂದಿಗೆ ಮದುವೆ ಮಾಡಬೇಕು ಅಂದ್ಕೊಂಡಿದ್ದೀವಿ ಅಂದಿದ್ದೇ ತಡ, ಶಶಾಂಕ್ ರೊಚ್ಚಿಗೆದ್ದಿದ್ದಾನೆ. ಮದುವೆಯಾಗದೆ ಸನ್ಯಾಸಿಯಾಗಿ ಬೇಕಾದರೆ ಇರ್ತಿನಿ. ಆದರೆ, ಆ ಮೂಲಂಗಿ ಮಾದವ್ವನನ್ನ ಮಾತ್ರ ಮದುವೆಯಾಗಲ್ಲ ಅಂತಿದ್ದಾನೆ. ಹಾಗೆ ದಿಯಾನ ಕೇಳ್ಬೇಕಾ? ಶಶಾಂಕ್ ನೆರಳು ಕಂಡರೆ ಆಗೋದಿಲ್ಲ ದಿಯಾಗೆ. ಹೀಗಿರುವಾಗ ಲೈಫ್ ಲಾಂಗ್ ಅವನ ಜೊತೆ ಇರುವುದಕ್ಕೆ ಒಪ್ಪಿಕೊಳ್ಳುತ್ತಾಳಾ?. ನೋ ವೇ ಇಲ್ಲೂ ಚಾನ್ಸೇ ಇಲ್ಲ. ನಾನು ಆ ಏಲಿಯನ್ ಅನ್ನು ಮದುವೆ ಆಗೋದಾ, ಸಾಧ್ಯವೇ ಇಲ್ಲ ಅಂತ ದಿಯಾ ಹೇಳ್ತಿದ್ದಾಳೆ. ಆದರೆ ಮನೆಯವರ ಕನಸು ಆ ಇಬ್ಬರನ್ನು ಒಂದು ಮಾಡಬೇಕೆಂಬುದೇ ಆಗಿದೆ.

ಹಾವು ಮುಂಗಸಿಯಂತಿರೋ ಈ ಇಬ್ಬರನ್ನ ಒಂದು ಮಾಡೋದಕ್ಕೆ ಹೇಗೆ ಸಾಧ್ಯ ಅನ್ನೋದು ಜೇನುಗೂಡು ಪ್ರೇಕ್ಷಕರ ಪ್ರಶ್ನೆ. ಒಂದು ವೇಳೆ ಇಬ್ಬರು ಒಂದಾದರೆ. 'ಜೇನುಗೂಡು'ನಲ್ಲಿ ವಾತಾವರಣ ಹೇಗಿರುತ್ತೆ? ಅನ್ನೋದು ಪ್ರಶ್ನೆಯಾಗಿ ಕಾಡುತ್ತಿದೆ.

More from Filmibeat

English summary
Star Suvarna serial Jenugoodu Written Update on March 18th episode. Here is the details about Nadukote and doctor family planning for Dia and Shashank marriage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X