Jenugoodu: ಶಶಾಂಕನ ಹೆಂಡತಿ ದಿಯಾಗೆ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಡಿಮ್ಯಾಂಡ್ ಕಣಪ್ಪೋ..!

By ಎಸ್ ಸುಮಂತ್
Star suvarna serial Jenugoodu Written Update on public opinion

ಜೇನುಗೂಡು ಧಾರಾವಾಹಿ ಹಲವು ಕಾರಣಗಳಿಗೆ ತುಂಬಾ ಪ್ರಾಮುಖ್ಯತೆಯನ್ನು ವಹಿಸುತ್ತದೆ. ಕೂಡು ಕುಟುಂಬ, ತುಂಬು ಕುಟುಂಬ ಎಂಬ ಮಾತನ್ನು ಪ್ರಸಕ್ತ ಪೀಳಿಗೆಯಲ್ಲಿ ಕೇಳಿದ್ದೇವೆಯೇ ವಿನಃ ತೀರಾ ಹತ್ತಿರದಿಂದ ನೋಡಿಲ್ಲ. ಅವಿಭಕ್ತ ಕುಟುಂಬವಿರಲಿ ಸದ್ಯದ ಸ್ಥಿತಿಯಲ್ಲಿ ಅಪ್ಪ, ಅಮ್ಮ, ಗಂಡ - ಹೆಂಡತಿ, ಎರಡು ಮಕ್ಕಳಿರುವ ಕುಟುಂಬ ಕಾಣಿಸುವುದೇ ಅಪರೂಪ. ಪ್ರೈವೆಸಿ ಎಂಬ ಕಾರಣ ಮನೆಯಲ್ಲಿ ಗಂಡ - ಹೆಂಡತಿ ಇಬ್ವರೇ ಇರುವಂತೆ ಮಾಡಿದೆ.

ಆದ್ರೆ ಜೇನುಗೂಡು ಧಾರಾವಾಹಿ ಬಂದಾಗಿನಿಂದ ಕುಟುಂಬ ಎಂದರೇನು..? ಕುಟುಂಬದಲ್ಲಿ ಯಾರೆಲ್ಲಾ ಇರಬೇಕು ಎಂಬುದನ್ನು ತೋರಿಸಿಕೊಟ್ಟಿದೆ. ಅದರಲ್ಲೂ ಕುಟುಂಬದಲ್ಲಿ ಹೆಚ್ಚೆಚ್ಚು ಜನರಿದ್ದರೆ, ಯಾವ ಸಮಸ್ಯೆಯೂ ಬಾರದಂತೆ ನೋಡಿಕೊಳ್ಳುತ್ತಾರೆ ಎಂಬುದು ಪ್ರೂವ್ ಆಗಿದೆ. ಸ್ವಾರ್ಥದ ಪ್ರಪಂಚದಲ್ಲಿ ಮನೆಯವರು ಕಷ್ಟಕ್ಕೆ ಸಿಲುಕಿದರೆ ಕೂಡು ಕುಟುಂಬದಲ್ಲಿರುವವರು ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಹೇಳಿಕೊಟ್ಟಿದೆ.

ದಿಯಾ ಮತ್ತು ಶಶಾಂಕ್ ಈಗ ಗಂಡ - ಹೆಂಡತಿಯರಾಗಿ ಉಳಿದಿಲ್ಲ. ಬದಲಿಗೆ ಪ್ರೇಮಿಗಳಾಗಿ ಓಡಾಡುತ್ತಿದ್ದಾರೆ. ಗಂಡ ಹೆಂಡತಿಯ ರೀತಿ ಇದ್ದಷ್ಟು ಇಬ್ಬರ ನಡುವೆ ಪ್ರೀತಿಗಿಂತ ಬೇಡದೆ ಇರುವ ವಿಚಾರಕ್ಕೇನೆ ಜಗಳಗಳು ನಡೆಯುತ್ತಿವೆ. ಅದಕ್ಕೆನೆ ದಿಯಾ ಸೂಪರ್ ಪ್ಲ್ಯಾನ್ ಮಾಡಿದ್ದು, ಈಗ ಪ್ರೇಮಿಗಳಾಗಿ ಇರೋಣಾ ಎಂದು ಹೇಳಿದ್ದಾಳೆ. ಇದಕ್ಕೆ ಶಶಾಂಕ್ ಕೂಡ ಒಪ್ಪಿದ್ದು, ಮನೆಯವರ ಕಣ್ಣು ತಪ್ಪಿಸಿ, ಪಾರ್ಕ್, ಪಾನಿಪುರಿ ಅಂತ ಕದ್ದು ಮುಚ್ಚಿ ಎಂಜಾಯ್ ಮಾಡುತ್ತಿದ್ದಾರೆ.

ಶಶಾಂಕ್ ಕೋಪಿಷ್ಠ. ದಿಯಾಳ ಮೇಲೆ ಯಾವಾಗಲೂ ಕೋಪವನ್ನು ತೋರಿಸುತ್ತಲೇ ಇರುತ್ತಾನೆ‌. ಇಬ್ಬರಿಗೂ ಇಷ್ಟವಿಲ್ಲದೆ ಇದ್ದರೂ ಮನೆಯವರ ಸಂತೋಷಕ್ಕಾಗಿ ಇಬ್ಬರು ಮದುವೆಯಾಗಿದ್ದಾರೆ. ಹೀಗಾಗಿ ಇಬ್ಬರ ನಡುವೆ ಆಗಾಗ ಜಗಳಗಳು ಆಗುತ್ತಲೇ ಇರುತ್ತವೆ. ದಿಯಾ‌ಳಿಗೆ ಅಂದು ಶಶಾಂಕ್, ನೀನೊಂದು ಮಿಸ್ಟೇಕ್ ಎಂದುಬಿಟ್ಟ. ಅಂದು ಮನೆ ಬಿಟ್ಟು ಬಂದ ದಿಯಾ, ಶಶಾಂಕ್ ಸಮಾಧಾನ ಮಾಡಿದರೂ ಅಸ್ತು ಎ‌ನ್ನುತ್ತಿಲ್ಲ, ಕ್ಷಮೆ ಕೇಳಿದರೂ ಒಲ್ಲೆ ಎನ್ನುತ್ತಿಲ್ಲ. ಹೇಗಾದರೂ ಮಾಡಿ ಆಕೆಯನ್ನು ಮನೆಗೆ ಕರೆದುಕೊಂಡು ಹೋಗುವ ಕಾತುರದಲ್ಲಿದ್ದಾನೆ. ಆದ್ರೆ ದಿಯಾಗೆ ಗಂಡ ಹೆಂಡತಿಯಾಗಿರುವುದಕ್ಕಿಂತ ಹೀಗೆ ಪ್ರೇಮಿಗಳಾಗಿಯೇ ಇದ್ದು ಬಿಡೋಣಾ ಎಂಬ ಅಭಿಪ್ರಾಯ ಮೂಡಿದೆ.

ಸ್ವಚ್ಛಂದವಾದ ಮನಸ್ಸಿರುವವರಿಗೆ ಯಾವುದೇ ಪ್ರಾಬ್ಲಮ್ಸ್ ಆದ್ರೂ ಅದನ್ನು ಪರಿಹರಿಸುವ ರೀತಿ ಸುಲಭ. ಅವರ ಮಾತುಗಳೆ ಆ ಸಮಸ್ಯೆಗೆ ಪರಿಹಾರವಿದ್ದಂತೆ. ದಿಯಾಳ ಬಗ್ಗೆ ನಡುಕೋಟೆ ಮನೆಯಲ್ಲಿರುವ ಅಭಿಪ್ರಾಯವೂ ಅದೇ. ಯಾವುದೇ ಸಮಸ್ಯೆ ಇರಲಿ ದಿಯಾ ಇದ್ದರೆ ಸಾಕು ಎಂಬ ಭಾವನೆ. ದಿಯಾ ಬುದ್ಧಿವಂತೆ ಅಲ್ಲ, ದಿಯಾ ಡಿಗ್ರಿ ಕೂಡ ಫೇಲ್ ಬಟ್ ಮನಸ್ಸು ಅಪ್ಪಟ. ಅವಳ ಮುಗ್ಧತೆಗೆ ಮಾರು ಹೋಗದವರೇ ಇಲ್ಲ. ಹೀಗಾಗಿ ದಿಯಾ ಅಂದ್ರೆ ಎಲ್ಲರಿಗೂ ಇಷ್ಟ. ನಡುಕೋಟೆ ಮನೆಯಲ್ಲಿ ದಿಯಾ ಇಲ್ಲಂದ್ರೆ ನಗುವೆ ಮಾಯವಾಗಿರುತ್ತೆ.

ಸ್ಟಾರ್ ಸುವರ್ಣ ಆಗಾಗ ತಮ್ಮ ಬಳಗದವರ ಸುಖ - ದುಃಖ, ನಗು - ಅಳು ಎಲ್ಲವನ್ನು ಪ್ರೇಕ್ಷಕರೆದುರು ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ನಗುವಿನ ಬಗೆಗೊಂದು ಪೋಸ್ಟರ್ ಅಂಟಿಸಿದೆ. ನಾಲ್ಕು ನಟಿಮಣಿಯರು ಅಂದ್ರೆ ಕೃತಿ, ದಿಯಾ, ಗಿರಿಜಾ, ರಾಗ‌ ಈ ನಾಲ್ವರು ಈಗ ಬಹಳ ಮುಖ್ಯವಾದ ನಟಿಮಣಿಯರು. ಹೊಸ ಪೋಸ್ಟರ್ ನಲ್ಲಿ ಯಾರ ನಗು ನಿಮ್ಮ ಮುಖದಲ್ಲಿ ನಗು ತರಿಸುತ್ತೆ..? ಎಂಬ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ 90% ಜನ ದಿಯಾಳ ಹೆಸರನ್ನೇ ಸೂಚಿಸಿದ್ದಾರೆ. ದಿಯಾ ನಕ್ಕರೆ ಎಲ್ಲರ ಮುಖದಲ್ಲೂ ನಗು ಮೂಡುವುದು ಕನ್ಫರ್ಮ್ ಆಗಿದೆ.

More from Filmibeat

English summary
Star suvarna serial Jenugoodu Written Update on public opinion
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X