Jenugudu Serial: 500 ಎಪಿಸೋಡ್ ಪೂರೈಸಿದ 'ಜೇನುಗೂಡು' ಧಾರಾವಾಹಿ.. ಶೀಘ್ರದಲ್ಲೇ ವಿದಾಯ!
ಹೌದು, ಇಂದು ಚಾನೆಲ್‌ಗಳ ನಡುವೆ ಕಾಂಪಿಟೇಶನ್ ಹೆಚ್ಚಾಗಿದ್ದು ಧಾರಾವಾಹಿ ಮೇಲೆ ಧಾರಾವಾಹಿ ಹೊಸ ಹೊಸ ಕಥೆಯನ್ನು ಇಟ್ಟುಕೊಂಡು ಹೊರ ಬರುತ್ತಿರುವುದು ಸರ್ವೇಸಾಮಾನ್ಯ ಎಂಬಂತಾಗಿದೆ. ಆದರೂ ಒಳ್ಳೆ ಕಥೆ ಉಳ್ಳ ಧಾರವಾಹಿಗಳು ಹೆಚ್ಚು ದಿನ ಓಡುವುದು ನಮಗೆಲ್ಲರಿಗೂ ತಿಳಿದೇ ಇದೆ. ಇದೀಗ 'ಜೇನುಗೂಡು' ಎಂಬ ಧಾರಾವಾಹಿ 500 ಎಪಿಸೋಡ್‌ಗಳನ್ನು ಮುಗಿಸಿದ್ದು ಧಾರಾವಾಹಿ ತಂಡ ಈ ಬಗ್ಗೆ ಸಂಭ್ರಮವನ್ನು ಆಚರಿಸಿದೆ.
ಶಶಾಂಕ್ ಹಾಗೂ ದಿಯಾ ಎಂಬ ಎರಡು ಪಾತ್ರಗಳ ಸುತ್ತ ಸುತ್ತುವ ಈ ಕಥೆ ಇದೀಗ ಕನ್ನಡ ಕಿರುತೆರೆಯಲ್ಲಿ ಬಹಳಷ್ಟು ಪಾಪ್ಯುಲರ್ ಧಾರಾವಾಹಿಗಳಲ್ಲಿ ಒಂದಾಗಿದೆ. ಇತ್ತೀಚೆಗಷ್ಟೇ ಈ ಧಾರಾವಾಹಿಯ ನಾಯಕ ನಟಿ ನಿತ್ಯ ಗೌಡ ಧಾರಾವಾಹಿಯನ್ನು ಅರ್ಧಕ್ಕೆ ಬಿಟ್ಟು ಹೋಗಿದ್ದು ಹೆಚ್ಚು ಸುದ್ದಿ ಮಾಡಿತು. ಆದರೆ, ಅವರ ಪಾತ್ರವನ್ನು ಅಮೃತಾ ಮೂರ್ತಿ ಅವರು ಇದೀಗ ಅಚ್ಚು ಕಟ್ಟಾಗಿ ನಡೆಸುತ್ತಾ ಬಂದಿದ್ದಾರೆ.

ಅಲ್ಲದೆ, ಧಾರಾವಾಹಿ ಒಂದು ವಿಶೇಷವಾದ ಥೀಮ್ ಅನ್ನು ಹೊಂದಿದ್ದು, ಕೂಡು ಕುಟುಂಬದ ಸುಖ ದುಃಖವನ್ನು ಚೆನ್ನಾಗಿ ತೋರಿಸಿಕೊಟ್ಟು ಕಿರುತೆರೆ ವೀಕ್ಷಕರ ಮನಸೆಳೆದಿದೆ. ದೂರವಿರಬೇಕೆಂದು ಬಯಸಿದರೂ ಕಾರಣಾಂತರಗಳಿಂದ ಇನ್ನು ಹತ್ತಿರವಾಗುತ್ತಿರುವ ಶಶಾಂಕ್ ಹಾಗೂ ದಿಯಾ ಕಥೆ ಇದಾಗಿದ್ದು ವೀಕ್ಷಕರಿಗಂತೂ ಬಹಳ ಖುಷಿ ಕೊಟ್ಟಿದೆ.
ಇನ್ನು ಧಾರಾವಾಹಿ 500 ಎಪಿಸೋಡ್‌ಗಳನ್ನು ತಲುಪಿರುವುದರ ಬಗ್ಗೆ ಖುಷಿಯಿಂದ ಮಾತನಾಡಿರುವ ಧಾರಾವಾಹಿಯ ನಾಯಕಿ ಅಮೃತಾ ಮೂರ್ತಿ "ಎಲ್ಲವೂ ಮ್ಯಾಜಿಕ್ ನಂತೆ ಚೆನ್ನಾಗಿ ನಡೆಯುತ್ತಾ ಇದೆ. ನನಗೆ ಇದರ ಬಗ್ಗೆ ಬಹಳ ಖುಷಿ ಇದೆ. ಕೇವಲ ಮೂರು ದಿನಗಳೊಳಗೆ ನನಗೆ ಈ ಪಾತ್ರ ಸಿಕ್ಕಿತ್ತು. 'ಜೊತೆ ಜೊತೆಯಲಿ' ಧಾರಾವಾಹಿ ಮುಗಿಸಿದ ನಂತರ ಮುಂದೇನೆಂದು ಯೋಚಿಸುತ್ತಿದ್ದ ನನಗೆ ಈ ಧಾರಾವಾಹಿ ಸಿಕ್ಕಿದ್ದು ತುಂಬಾನೇ ಖುಷಿ ಇದೆ. ಇಡೀ ಧಾರಾವಾಹಿ ತಂಡ ತುಂಬಾ ಫ್ರೆಂಡ್ಲಿ ಆಗಿರುವುದರಿಂದ ನನಗೆ ಈ ಎಲ್ಲಾ ವಾತಾವರಣ ತುಂಬಾ ಖುಷಿ ಕೊಟ್ಟಿದೆ. ಈ 500 ಎಪಿಸೋಡ್‌ಗಳು ತಲುಪಿರುವ ಯಶಸ್ಸು ಇಡೀ ಧಾರಾವಾಹಿ ತಂಡಕ್ಕೆ ಸೇರಬೇಕು. ಈ ಯಶಸ್ಸಿಗೆ ವೀಕ್ಷಕರು ಹಾಗೂ ಅವರ ಪ್ರೀತಿ ಕಾರಣ" ಎಂದಿದ್ದಾರೆ.
ಇದರ ಜೊತೆಗೆ ಇಷ್ಟು ದಿನಗಳ ಕಾಲ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದ 'ಜೇನುಗೂಡು' ಧಾರಾವಾಹಿಯು ಶೀಘ್ರದಲ್ಲಿ ತನ್ನ ಪ್ರಸಾರವನ್ನು ಕೂಡಾ ನಿಲ್ಲಿಸಲಿದೆ. ಧಾರಾವಾಹಿಯ ಕೊನೆಯ ಸಂಚಿಕೆಗಳು ಇದೀಗ ಪ್ರಸಾರವಾಗುತ್ತಿದ್ದು ಆದಷ್ಟು ಬೇಗ 'ಜೇನುಗೂಡು' ತನ್ನ ಪಯಣವನ್ನು ಕೊನೆಗೊಳಿಸಲಿದೆ. ಉತ್ತರ ಕರ್ನಾಟಕ ಭಾಗ ಮಂದಿಗೆ ಈ ಧಾರಾವಾಹಿ ಇಷ್ಟ ಆಗಿತ್ತು. ಆದ್ರೀಗ ಕೊನೆಗೊಳ್ಳುತ್ತಿರುವುದು ಬೇಸರ ತರಿಸಿದೆ.


Click it and Unblock the Notifications











