ಜೇನುಗೂಡು: ಸಂಬಂಧಗಳ ಸಂಭ್ರಮದ ಮೆರವಣಿಗೆ ʻಜೇನುಗೂಡಿʼಗೆ 50 ನೇ ಸಂಚಿಕೆ!

By ಎಸ್ ಸುಮಂತ್

ವಾಟ್.. ಏನು ಜೋಕ್ ಮಾಡುತ್ತಿದ್ದೀರಾ..? 'ಜೇನುಗೂಡು' ಧಾರಾವಾಹಿಗೆ ಬರೀ 50 ಸಂಚಿಕೆ ಅಷ್ಟೇ ಆಗಿರುವುದಾ ಎಂಬ ಪ್ರಶ್ನೆ ಮೂಡುವುದರಲ್ಲಿ ಅನುಮಾನವೂ ಇಲ್ಲ. ಶಾಕ್ ಆಗುವುದರಲ್ಲಿ ಆಶ್ಚರ್ಯವೂ ಏನಿಲ್ಲ. ಯಾಕೆಂದರೆ ಧಾರಾವಾಹಿ ಎಷ್ಟೋ ತಿಂಗಳುಗಳಿಂದ ನಾವೂ ನೋಡುತ್ತಿದ್ದೆವೋ ಎಂದೆನಿಸಿದೆ. ಈ ಧಾರಾವಾಹಿ ಶುರುವಾಗಿ ಇನ್ನು ಬರೀ 50 ಸಂಚಿಕೆ ಆಗಿದೆಯಷ್ಟೆ. ಆದರೆ ಇಲ್ಲಿವರೆಗೂ ಕಥೆ ನಡೆದು ಬಂದ ರೀತಿ ಪ್ರೇಕ್ಷಕರನ್ನು ಹಾಗೆಯೇ ಹಿಡಿದಿಟ್ಟುಕೊಂಡಿದೆ.

ಪ್ರತಿ ದಿನ ರಾತ್ರಿ 10 ಗಂಟೆಗೆ ಸ್ಟಾರ್ ಸುವರ್ಣದಲ್ಲಿ 'ಜೇನುಗೂಡು' ಧಾರಾವಾಹಿ ಮೂಡಿ ಬರುತ್ತಿದೆ. ಸಂಬಂಧಗಳಿಗೆ ಹೇಗೆಲ್ಲಾ ಮಹತ್ವ ಕೊಡಬೇಕು? ತುಂಬು ಕುಟುಂಬದಲ್ಲಿ ಇರುವ ಪ್ರೀತಿ, ಬೆಂಬಲ, ಸಿಂಗಲ್ ಫ್ಯಾಮಿಲಿಯಲ್ಲಿ ಇರುವ ಕೊರತೆ ಎಲ್ಲವನ್ನೂ ಅಚ್ಚುಕಟ್ಟಾಗಿ ತೋರಿಸುತ್ತಾ ಬಂದಿದೆ. ಅದರಲ್ಲೂ ಉತ್ತರ ಕರ್ನಾಟಕದ ಅಚ್ಚುಕಟ್ಟು ಭಾಷೆಯಿದೆಯಲ್ಲ ಎಲ್ಲರಿಗೂ ಸಿಕ್ಕಾಪಟ್ಟೆ ಇಷ್ಟವಾಗಿ ಬಿಟ್ಟಿದೆ.

'ಜೇನುಗೂಡು' ಧಾರಾವಾಹಿ ಆರಂಭಕ್ಕೂ ಮುನ್ನ ಇಡೀ ತಂಡ ಕ್ಯಾಮರಾ ಮುಂದೆ ಬಂದಿತ್ತು. ಪಾತ್ರಗಳ ಬಗ್ಗೆ ಕಥೆಯ ಬಗ್ಗೆ ಮಾಹಿತಿಯನ್ನು ನೀಡಿತ್ತು. ಅಲ್ಲಿಂದ ಇಲ್ಲಿವರೆಗೂ 'ಜೇನುಗೂಡು' ಧಾರಾವಾಹಿ ನಿರಂತರವಾಗಿ ನಡೆದು ಬಂದಿದೆ. ಪ್ರತಿ ದಿನ ಕಿರುತೆರೆ ವೀಕ್ಷಕರಿಗೆ ಮಸ್ತ್ ಮನರಂಜನೆ ನೀಡುತ್ತಿದೆ. ವೀಕ್ಷಕರೂ ಅಷ್ಟೇ ಈ ಫ್ಯಾಮಿಲಿ ಡ್ರಾಮ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿರುತ್ತಾರೆ.

'ಜೇನುಗೂಡು' ಧಾರಾವಾಹಿಯ ಪ್ರಿಮಿಯರ್ ಶೋ

'ಜೇನುಗೂಡು' ಧಾರಾವಾಹಿಯ ಪ್ರಿಮಿಯರ್ ಶೋ

ಅಂದು ಫೆಬ್ರವರಿ 21. 'ಜೇನುಗೂಡು' ಧಾರಾವಾಹಿಯ ಪ್ರಿಮಿಯರ್ ಶೋ ಅರೆಂಜ್ ಮಾಡಲಾಗಿತ್ತು. ಸಿನಿಮಾವಾದರೆ ಎರಡೂವರೆ ಗಂಟೆ ತೋರಿಸಿ ಅಭಿಪ್ರಾಯ ತಿಳಿಯಬಹುದಾಗಿತ್ತು. ಆದರೆ ಧಾರಾವಾಹಿಯನ್ನು ಹೇಗೆ ತೋರಿಸುತ್ತಾರೆ ಎಂಬ ಅನುಮಾನವೂ ಎಲ್ಲರಲ್ಲೂ ಇತ್ತು. ಕ್ಯೂರಿಯಾಸಿಟಿ ಇದ್ದವರೆಲ್ಲಾ 'ಜೇನುಗೂಡು' ಪ್ರಿಮಿಯರ್ ಶೋಗೂ ಹೋಗಿದ್ದರು. ಅವರ ನಿರೀಕ್ಷೆ ಮೀರಿ ಅಲ್ಲಿನ ಚಿತ್ರಣಗಳು ಕಂಡಿದ್ದವು. 'ಜೇನುಗೂಡು ಸೀರಿಯಲ್ ಝಲಕ್ ನೋಡಿ ಮೆಚ್ಚಿಕೊಂಡು ಹೊರಗೆ ಬಂದವರೆ ಹೆಚ್ಚಾಗಿದ್ದರು. ಅದ್ಭುತವಾಗಿ ಅಂದು ಜೇನುಗೂಡಿನ ಅನಾವರಣವಾಗಿತ್ತು.

'ಜೇನುಗೂಡು' ಧಾರಾವಾಹಿಗೆ ಪ್ರೇಕ್ಷಕರ ಫಿದಾ

'ಜೇನುಗೂಡು' ಧಾರಾವಾಹಿಗೆ ಪ್ರೇಕ್ಷಕರ ಫಿದಾ

ಕೆಲವೊಂದು ಧಾರಾವಾಹಿಗಳು ಮೊದ ಮೊದಲಿಗೆ ಸೆಳೆಯುವುದು ಕಷ್ಟ. ಇನ್ನು ಕೆಲವೊಂದು ಧಾರಾವಾಹಿಗಳು ಆರಂಭದಲ್ಲಿ ಸೆಳೆದರೂ ಆಮೇಲೆ ನೋಡಿಸಿಕೊಳ್ಳುವುದಿಲ್ಲ. ಆಸಕ್ತಿ ಕಳೆದುಕೊಂಡು ಬಿಡುತ್ತವೆ. ಆದರೆ 'ಜೇನುಗೂಡು' ಆರಂಭವಾದಾಗಿನಿಂದ ಪ್ರೇಕ್ಷಕರನ್ನು ಹೆಚ್ಚಿಸಿಕೊಂಡೆ ಬರುತ್ತಿದೆ. 50 ಎಪಿಸೋಡ್‌ಗಳನ್ನು ಪೂರೈಸಿದೆಯಾ ಎಂಬ ಆಶ್ಚರ್ಯ ನೋಡುಗರ ಮನದಲ್ಲೂ ಕಾಡುತ್ತಿದೆ. ಅಷ್ಟು ಅಚ್ಚುಕಟ್ಟಾಗಿ ಕಥೆಯನ್ನು ಎಲ್ಲಿಯೂ ಬೋರ್ ಹೊಡೆಸದೆ, ಹೆಣೆದುಕೊಂಡು ಬಂದಿದ್ದಾರೆ ನಿರ್ದೇಶಕ ಅನಿಲ್ ಕೋರಮಂಗಲ.

50 ಸಂಚಿಕೆ ಪೂರೈಸಿದ ಧಾರಾವಾಹಿಯಲ್ಲಿ ಏನೆಲ್ಲಾ ಇದೆ?

50 ಸಂಚಿಕೆ ಪೂರೈಸಿದ ಧಾರಾವಾಹಿಯಲ್ಲಿ ಏನೆಲ್ಲಾ ಇದೆ?

ಸದ್ಯ ಸ್ಟಾರ್ ಸುವರ್ಣದ 'ಜೇನುಗೂಡು 50 ಸಂಚಿಕೆಯನ್ನು ಪೂರೈಸಿದೆ. ಈ ಐವತ್ತು ದಿನದಲ್ಲಿ ಒಂದು ದಿನವೂ ನಕ್ಕಿಲ್ಲ ಎಂಬುದಿಲ್ಲ. ಅದರಲ್ಲೂ ನಡುಕೋಟೆ ಕುಟುಂಬವನ್ನು ನೋಡುತ್ತಿದ್ದರೆ ಎಲ್ಲರ ಮನಸ್ಸಿಗೂ ಖುಷಿ. ಆ ಕುಟುಂಬದಲ್ಲಿ ಎಲ್ಲವೂ ಇದೆ. ಪ್ರತಿಯೊಬ್ಬರು ಕಲಿಯಬೇಕಾದ ಪಾಠವಿದೆ. ಅತ್ತೆ ಸೊಸೆಯನ್ನು ಹೇಗೆ ಸ್ವೀಕರಿಸಬೇಕು, ತುಂಬು ಕುಟುಂಬಕ್ಕೆ ಬಂದ ಸೊಸೆ ಜವಾಬ್ದಾರಿ ಏನು? ಮನೆಯ ಹಿರಿಯ ಮನುಷ್ಯ ಸಂಸಾರ ನಿಭಾಯಿಸಲು ಏನು ಮಾಡಬೇಕು? ಕುಟುಂಬ ಸಮೇತ ಮನೆಯಲ್ಲಿದ್ದಾಗ ಹೇಗೆಲ್ಲಾ ಸಂತೋಷವಾಗಿರಬಹುದು? ಮೊಬೈಲ್ ಯುಗದಲ್ಲಿ ಅದನ್ನೂ ಮೀರಿದ ಸಂತೋಷವನ್ನು ಹೇಗೆಲ್ಲಾ ಕಂಡು ಹಿಡಿದುಕೊಳ್ಳಬಹುದು? ಅಬ್ಬಬ್ಬಾ ಒಂದಾ ಎರಡಾ? ಸಾಕಷ್ಟು ಒಳ್ಳೆಯದ್ದನ್ನೇ 'ಜೇನುಗೂಡು' ನೀಡಿದೆ. ನಡುಕೋಟೆ ಕುಟುಂಬವನ್ನು ನೋಡಿದಾಗ ಕಂಡಿತಾ ಇಂಥದ್ದೊಂದು ಕುಟುಂಬ ಸಿಗಬಾರದಾ ಎಂದು ಬಯಸಿದವರು ಇದ್ದೇ ಇರುತ್ತಾರೆ.

ಡಾಕ್ಟರ್ ಪರಿಚಯ, ದಿಯಾ ಎಂಟ್ರಿ ಯಾವಾಗ?

ಡಾಕ್ಟರ್ ಪರಿಚಯ, ದಿಯಾ ಎಂಟ್ರಿ ಯಾವಾಗ?

ಸದ್ಯ ಇಡೀ ಧಾರಾವಾಹಿ ಸಖತ್ ಮನರಂಜನೆ ನೀಡುತ್ತಿರುವುದು ದಿಯಾ ಮತ್ತು ಶಶಾಂಕ್ ಮೇಲೆ. ಅವರಿಬ್ಬರ ಮದುವೆ ಬೇರೆ ಫಿಕ್ಸ್ ಆಗಿದೆ. ಹಾವು ಮುಂಗುಸಿಯಂತೆ ಯಾವಾಗಲೂ ಕಿತ್ತಾಡುತ್ತಿರುತ್ತಾರೆ. ಇದೇ ಪ್ರೇಕ್ಷಕರಿಗೆ ಮನರಂಜನೆ ನೀಡಿದೆ. ಮನೆ ಮಗಳು ಸುಮಿ ಕಷ್ಟದಲ್ಲಿದ್ದಾಗ ಸಹಾಯ ಮಾಡಿದ ಸಮಯದಿಂದ ಡಾಕ್ಟರ್ ನಡುಕೋಟೆ ಮನೆಗೆ ಹತ್ತಿರವಾಗಿ ಬಿಟ್ಟಿದ್ದಾರೆ. ಈಗ ಮಗಳನ್ನು ಸೊಸೆ ಮಾಡಲು ಹೊರಟಿದ್ದಾರೆ. ಸದ್ಯ ಆ ಸಂಭ್ರಮ ನೋಡಲು, ಮದುವೆ ಶಾಸ್ತ್ರಗಳನ್ನು ಎಂಜಾಯ್ ಮಾಡಲು 'ಜೇನುಗೂಡು' ಕುಟುಂಬದ ಜೊತೆಗೆ ಸ್ಟಾರ್ ಸುವರ್ಣ ಪ್ರೇಕ್ಷಕರ ಬಳಗ ಕೂಡ ಕಾಯುತ್ತಿದ್ದಾರೆ.

More from Filmibeat

English summary
Star Suvarna Serial Jenugoodu Written Update On 50th Episode. Here is the details about 50th Episode Celebration of Jenugudu Serial Team.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X