ಜೇನುಗೂಡು: ಚಿಕ್ಕಮಗಳೂರಿನ ಹಸಿರು ಸಿರಿಯಯಲ್ಲೂ ಶಶಾಂಕ್-ದಿಯಾ ಜಗಳ ನಡೆಯುತ್ತಾ?
ದಿಯಾ ಎಂದರೆ ನಡುಕೋಟೆ ಮನೆಯವರಿಗೆ ಮುದ್ದು ಜಾಸ್ತಿ. ಆಕೆ ಮಾಡುವ ತುಂಟಾಟ, ಮಗುವಿನಂತ ಮನಸ್ಸಿಗೆ ಎಲ್ಲರೂ ಸೋತು ಹೋಗಿದ್ದಾರೆ. ಆಕೆಯ ಮುಗ್ಧತೆಗೆ ಮನೆ ಮಂದಿ ಆಗಾಗ ನಸು ನಗುತ್ತಾರೆ. ಆದರೆ ಈಗ ನಡುಕೋಟೆ ಮನೆಗೆ ದಿಯಾ ಭಾಗ್ಯದ ಲಕ್ಷ್ಮೀ ಆಗಿದ್ದಾಳೆ. ಆಕೆ ಬಂದಿದ್ದರಿಂದಲೇ ಬೆಟ್ಟದಂತ ಕಷ್ಟ ಮಂಜಿನಂತೆ ಕರಗಿ ಹೋಗಿದೆ. ಇದೆ ಖುಷಿಯಲ್ಲಿ ದಿಯಾ ಕೇಳಿದ ಆಸೆಯನ್ನು ಈಡೇರಿಸಿದ್ದಾರೆ.
ದಿಯಾ ಮೊದಲೇ ಇಬ್ಬರ ನಡುವೆ ಬೆಳೆದಾಕೆ. ಪ್ರೀತಿ, ಖುಷಿ, ಎಂಜಾಯ್ಮೆಂಟ್ ಎಂಬುದನ್ನೆಲ್ಲಾ ತನ್ನ ಸ್ನೇಹಿತರಿಂದಲೇ ಪಡೆದು ಅಭ್ಯಾಸ. ದಿಯಾಗೆ ಹಣದ ಬೆಲೆ ಗೊತ್ತಿಲ್ಲ. ನೀರು ಖರ್ಚು ಮಾಡಿದ್ದಂತೆ ಖರ್ಚು ಮಾಡುವ ಕಾರಣಕ್ಕೆ ಸ್ನೇಹಿತರು ಸ್ವಲ್ಪ ಹೆಚ್ಚಾಗಿಯೇ ಇದ್ದಾರೆ. ಎಲ್ಲಿಯೇ ಹೋದರು ಬಾಯ್ ಫ್ರೆಂಡ್ ಜೊತೆ ಹೋಗುತ್ತಿದ್ದ ದಿಯಾ ಇದೀಗ ನಡುಕೋಟೆ ಮನೆಯವರ ಜೊತೆ ಹೋಗಿದ್ದಾಳೆ.

ದಿಯಾ ಬಾಯ್ ಫ್ರೆಂಡ್ ಬದಲಾಯಿದ ಡಾಕ್ಟರ್
ದಿಯಾಗೆ ಮನೆಯಲ್ಲಿ ಹೆಚ್ಚು ಕೂರುವುದು ಅಷ್ಟಾಗಿ ಅಭ್ಯಾಸವಿಲ್ಲ. ಹೀಗಾಗಿ ಆಗಾಗ ಊರು ಸುತ್ತುತ್ತಾ ಇರುತ್ತಾಳೆ. ಇದಕ್ಕೆ ಅವರ ತಂದೆಯ ಅಭ್ಯಂತರವೇನೂ ಇಲ್ಲ. ಆದರೆ ಈಗ ಖಂಡಿತ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕೆ ಕಾರಣ ದಿಯಾಳ ಮದುವೆ ಫಿಕ್ಸ್ ಆಗಿರುವುದು. ಅದಕ್ಕೆಂದೆ ಇದೀಗ ದಿಯಾಳ ಬಾಯ್ ಫ್ರೆಂಡನ್ನು ಬದಲಾಯಿಸಿದ್ದಾರೆ. ಇನ್ಮುಂದೆ ಕ್ರಿಶ್ ಅನ್ನು ದಿಯಾ ಬಾಯ್ ಫ್ರೆಂಡ್ ಎನ್ನುವ ಹಾಗಿಲ್ಲ. ಹೀಗಾಗಿ ಮದುವೆಯಾಗುವ ಹುಡುಗ ಶಶಾಂಕ್, ದಿಯಾಳ ಬಾಯ್‌ಫ್ರೆಂಡ್ ಆಗಿ ಬದಲಾಗಿದ್ದಾನೆ. ಶಶಾಂಕ್ ಈ ವಿಚಾರಕ್ಕೆ ಒಳಗೊಳಗೆ ಖುಷಿ ಪಟ್ಟಿದ್ದಾನೆ. ದಿಯಾ ಎಷ್ಟೆ ಜಗಳವಾಡಿದರು ಮನಸ್ಸಲ್ಲಿ ಓಕೆ ಎನ್ನುತ್ತಿದ್ದಾಳೆ.

ನಡುಕೋಟೆ ಮನೆಯ ಪಯಣ ಸಕಲೇಶಪುರದ ಕಡೆಗೆ
ದಿಯಾಳ ಖುಷಿಗೆ ನಡುಕೋಟೆ ಮನೆಯವರೆಲ್ಲಾ ಸಾಥ್ ನೀಡಿದ್ದಾರೆ. ದಿಯಾಳ ಖುಷಿಗಾಗಿ ಸಕಲೇಶಪುರದ ಜೇನುಗುಡ್ಡಕ್ಕೆ ಭೇಟಿ ನೀಡಿದ್ದಾರೆ. ಇಬ್ಬರ ನಡುವಲ್ಲಿ ಪ್ರೀತಿ ಮೂಡಿಸಲು ಕುಟುಂಬಸ್ಥರೇ ಸರ್ಕಸ್ ಮಾಡುತ್ತಿದ್ದಾರೆ. ಅದಕ್ಕೆಂದೇ ಎಲ್ಲರೂ ಜೋಡಿ ಮೇಲೆ ಹೊರಟಿದ್ದಾರೆ. ಪ್ರಾಂಚಿ ಎಂದರೆ ದಿಯಾಗೆ ಅಚ್ಚುಮೆಚ್ಚಾದರೂ ಆಕೆಯನ್ನು ಮನೆಯಲ್ಲಿಯೇ ಬಿಟ್ಟು ಆರು ಜನ ಜೋಡಿ ಮೇಲೆ ಹೊರಟಿದ್ದಾರೆ. ಬರೀ ಕೋಳಿ ಜಗಳವಾಡುವ ಶಶಾಂಕ್ ದಿಯಾ ನಡುವೆ ಪ್ರೀತಿ ಹುಟ್ಟಿಸಲೇಬೇಕೆಂದು ಹಠ ತೊಟ್ಟವರಂತೆ ಕಾಣುತ್ತಿದ್ದಾರೆ. ಇದಕ್ಕೆ ಅಚ್ಚ ಹಸಿರಿನ ಸಿರಿಯನ್ನು ಹುಡುಕಿದ್ದಾರೆ.

ಶಶಾಂಕ್ ಬಗ್ಗೆ ದಿಯಾಳಿಗೂ ಇದೆ ಪ್ರೀತಿ
ದಿಯಾ ತನ್ನ ಮನಸ್ಸಲ್ಲಿರುವ ಆಸೆಯನ್ನು ಎಲ್ಲಿಯೂ ವ್ಯಕ್ತಪಡಿಸುತ್ತಿಲ್ಲ. ಆದರೆ ಶಶಾಂಕ್ ಕಂಡರೆ ಎಷ್ಟು ಜಗಳವಾಡುತ್ತಾಳೋ ಅಷ್ಟೇ ಆಕರ್ಷಣೆಗೊಳಗಾಗುತ್ತಿದ್ದಾಳೆ. ಅವನ ಕಾಳಜಿ ಕಂಡಾಗ ಮೂಕ ವಿಸ್ಮಿತಳಾಗುತ್ತಿದ್ದಾಳೆ. ಟ್ರಿಪ್ ಗೆ ಅಂತ ಹೊರಟಾಗ ಶಶಾಂಕ್ ಆಫೀಸ್ ಗೆ ಹೋಗಿದ್ದಾನೆ ಎಂದಾಗಲೆ ಆಕೆಯ ಮನಸ್ಸು ಬೇಸರ ಮಾಡಿಕೊಂಡಿತ್ತು. ಆತ ಜೊತೆಯಲ್ಲಿ ಬರಲೇಬೇಕೆಂದು ಮನಸ್ಸು ಹಾತೊರೆಯುತ್ತಿತ್ತು. ಪ್ರೀತಿಯನ್ನು ಯಾವತ್ತಿಗೂ ಮುಚ್ಚಿಡುವುದಕ್ಕೆ ಆಗುವುದಿಲ್ಲ. ದಿಯಾ ಕೂಡ ಏನೇ ಸುಳ್ಳು ಹೇಳಿದರು ಆಕೆಗೆ ಪ್ರೀತಿ ಹುಟ್ಟಿರುವುದು ಆಗಾಗಾ ಗೊತ್ತಾಗುತ್ತಲೆ ಇರುತ್ತದೆ. ಶಶಾಂಕ್‌ಗೂ ಅಷ್ಟೆ ದಿಯಾ ಎಂದರೆ ಖುಷಿ. ಆಕೆಯ ಮುಗ್ಧತೆಗೆ ಮಾರು ಹೋಗಿದ್ದಾನೆ. ಆಕೆ ಮನಸ್ಸಲ್ಲೊಂದು, ಬಾಯಲ್ಲೊಂದು ಮಾತಾಡುವವಳಲ್ಲ ಎಂಬುದು ಅರಿವಾಗಿದೆ. ದಿಯಾಳ ಇನೋಸೆನ್ಸ್ ನೆನೆದು ನಗುತ್ತಿರುತ್ತಾನೆ.

ಶಶಾಂಕ್ ಮುಂದೆಯೇ ನಡೆಯುತ್ತಾ ಯುದ್ಧ?
ಮಾಯಾಳಿಗೆ ಶಶಾಂಕ್ ಮೇಲೆ ಪ್ರೀತಿ ಹುಟ್ಟಿದೆ. ಆದರೆ ಅದನ್ನು ಹೇಳಿಕೊಳ್ಳುವ ಮುನ್ನವೇ ದಿಯಾ ಜೊತೆ ಶಶಾಂಕ್ ಮದುವೆ ಫಿಕ್ಸ್ ಆಗಿದೆ. ಇದನ್ನು ಮಾಯಾಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಜೊತೆಗೆ ದಿಯಾ ತನ್ನ ಸ್ವಂತ ಮಾವನ ಮಗಳು. ಹೀಗಾಗಿ ಇನ್ನಷ್ಟು ಕೋಪಗೊಂಡಿದ್ದಾಳೆ. ದಿಯಾಳ ಅಪ್ಪನ ಶ್ರೀಮಂತಿಕೆಯಿಂದಲೇ ನನಗೆ ತಾಯಿಯ ಪ್ರೀತಿ ಕಡಿಮೆಯಾಗಿದ್ದು ಎಂದು ಆಗಾಗ ಉಚ್ಛರಿಸುತ್ತಿರುತ್ತಾಳೆ. ದಿಯಾಳ ಜೊತೆಗೆ ಮದುವೆ ಫಿಕ್ಸ್ ಆಗಿದ್ದರೂ, ಹೇಗಾದರೂ ಮಾಡಿ ಶಶಾಂಕ್‌ನ ಇಂಪ್ರೆಸ್ ಮಾಡುವುದಕ್ಕೆ ಟ್ರೈ ಮಾಡ್ತಿದ್ದಾಳೆ. ಆದರೆ ಅಲ್ಲಿಗೇನೆ ದಿಯಾ ಬಂದಿದ್ದಾಳೆ. ಶಶಾಂಕ್‌ನ ಟ್ರಿಪ್‌ಗೆ ಒತ್ತಾಯಿಸಿ ಕರೆದೊಯ್ದಿದ್ದಾಳೆ. ಇದು ಮಾಯಳನ್ನು ಮತ್ತಷ್ಟು ಕೆರಳಿ ಕೆಂಡ ಮಾಡಿದೆ.


Click it and Unblock the Notifications











