ಜೇನುಗೂಡು: ಸಕಲೇಶಪುರಕ್ಕೂ ಮಾಯಾ ಎಂಟ್ರಿ, ದಿಯಾ ಬಾಳಿಗೆ ಮುಳ್ಳಾಗುತ್ತಾಳಾ ಅತ್ತೆ ಮಗಳು?
ಮಾಯಾ ಮತ್ತು ದಿಯಾ ಎದುರು ಬದುರಾದರೆ ಅಲ್ಲಿ ಯುದ್ಧವೇ ಶುರುವಾಗುತ್ತದೆ. ಮಾಯಾ ಸಣ್ಣ ಸಣ್ಣ ವಿಚಾರಕ್ಕೂ ವ್ಯಂಗ್ಯ ಮಾಡಿ ಮಾತನಾಡುತ್ತಾಳೆ. ದಿಯಾ ವಿಚಾರ ಎಂದರೆ ಮನಸ್ಸಿಗೆ ನೋವಾಗುವಂತೆ, ಹಗುರವಾಗಿಯೇ ಮಾತನಾಡುತ್ತಾಳೆ. ಇದರಿಂದ ದಿಯಾ ಕೋಪ ನೆತ್ತಿಗೇರಿ, ಜಗಳ ವಿಕೋಪಕ್ಕೆ ಏರುತ್ತದೆ. ಮಾಯಾಳ ನಡವಳಿಕೆಯಿಂದ ದಿಯಾ ಹಾಗೂ ನಡುಕೋಟೆ ಕುಟುಂಬಕ್ಕೂ ಬೇಸರ ತರಿಸಿದೆ.
ಈಗಾಗಲೇ ನಡುಕೋಟೆ ಕುಟುಂಬದ ದಿಯಾ ಹಿತೈಶಿಗಳು ಮಾಯಾಗೆ ವಾರ್ನ್ ಮಾಡಿದ್ದಾರೆ. ನೀನು ಅಸಿಸ್ಟೆಂಟ್ ಇದ್ದೀಯಾ, ಸೋ ಅಸಿಸ್ಟೆಂಟ್ ಆಗಿನೇ ಇರು. ನಿನ್ನ ಸೀನಿಯರ್ ಪರ್ಸನಲ್ ಲೈಫ್‌ನಲ್ಲಿ ಮೂಗು ತೂರಿಸಬೇಡ ಎಂದಿದ್ದಾರೆ. ಆದರೆ, ಮಾಯಾ ಇವುಗಳನ್ನೆಲ್ಲಾ ಹೇಗೆ ಬಿಡಲು ಸಾಧ್ಯ? ದಿಯಾಳಿಂದ ಬಿಡಿಸಿ, ಶಶಾಂಕ್ ಒಲವನ್ನು ತನ್ನ ಕಡೆ ಸೆಳೆದುಕೊಳ್ಳುವಲ್ಲಿ ನಾನಾ ತರದ ಯತ್ನಗಳು ನಡೆಯುತ್ತಿದೆಯಲ್ಲ. ಅದರ ಒಂದು ಭಾಗವೇ ಈಗ ಖುಷಿಯಾಗಿರುವ ಫ್ಯಾಮಿಲಿ ಮಧ್ಯೆ ಬಂದು ನಿಂತಿದ್ದಾಳೆ.

ಬಚ್ಚಿಟ್ಟುಕೊಂಡು ಶಶಾಂಕ್‌ನ ಕಾಡಿಸಿದ ದಿಯಾ
ದಿಯಾ ಮತ್ತು ಶಶಾಂಕ್ ನಡುವೆ ಪ್ರೀತಿ ಹುಟ್ಟಿಸಬೇಕೆಂಬ ಕಾರಣಕ್ಕೆ ನಡುಕೋಟೆಯ ಲವ್ ಬರ್ಡ್ಸ್ ಗಳು ಸಕಲೇಶಪುರದತ್ತ ಪಯಣ ಬೆಳೆಸಿದ್ದಾರೆ. ಟ್ರಕ್ಕಿಂಗ್ ನೆಪದಲ್ಲಿ ದಿಯಾ ಶಶಾಂಕ್ ಒಂದು ಮಾಡುವ ಉದ್ದೇಶದಿಂದ ಬೆಟ್ಟದ ಕಣಿವೆಯಲ್ಲಿ ಒಬ್ಬೊಬ್ಬರು ಒಂದೊಂದು ನೆಪ ಹೇಳಿದ್ದಾರೆ. ಅಂತೂ, ಕುಕ್ಕಿ ಪ್ಲ್ಯಾನ್ ಫಲಿಸಿದ್ದು, ದಿಯಾ ಮತ್ತು ಶಶಾಂಕ್ ಇಬ್ಬರೇ ಬೆಟ್ಟ ತುದಿಯತ್ತ ಜೊತೆಯಾಗಿ ಹೊರಟಿದ್ದಾರೆ. ಆದರೆ ದಿಯಾಳಿಗೆ ಕಾಡಿಸುವುದು, ಚೇಡಿಸುವುದು ಎಂದರೆ ಮನರಂಜನೆ. ಅದು ಯಾವಾಗಲೂ ಸಿಡುಕು ಮೂತಿಯಲ್ಲಿಯೇ ಇರುವ ಶಶಾಂಕ್ ಆದರೂ ಓಕೆನೆ. ಅದಕ್ಕೆಂದೆ ಶಶಾಂಕ್ ಫೋನ್‌ನಲ್ಲಿ ಮಾತನಾಡುವಾಗ ದಿಯಾ ಬಚ್ಚಿಟ್ಟುಕೊಂಡಿದ್ದಳು. ದಿಯಾ ಕಾಣಿಸದೆ ಇದ್ದಿದ್ದಕ್ಕೆ ಶಶಾಂಕ್ ಪಟ್ಟ ಪಾಡು ಅಷ್ಟಿಷ್ಟಲ್ಲ. ಗಾಬರಿಯಿಂದ ಹುಡುಕುತ್ತಿದ್ದ ಶಶಾಂಕ್ ಸ್ಥಿತಿ ನೋಡಿ ಮಜಾ ತೆಗೆದುಕೊಳ್ಳುತ್ತಿದ್ದ ದಿಯಾ ಕಡೆಗೂ ಎದ್ದು ಬಂದು, ಬಿದ್ದು ಬಿದ್ದು ನಕ್ಕಳು.

ಸಕಲೇಶಪುರಕ್ಕೆ ಬಂದಳಲ್ಲ ಮಾಯಾ
ಇಡೀ ಫ್ಯಾಮಿಲಿ ಎಂಜಾಯ್ ಮೂಡಿನಲ್ಲಿದ್ದಾರೆ. ಆದರೆ ಅದನ್ನು ಒಂದು ಕ್ಷಣ ಹಾಳು ಮಾಡಲು ಅವಳೊಬ್ಬಳು ಸಾಕು. ಆಕೆಯೇ ಮಾಯಾ. ಇದೀಗ ಸಕಲೇಶಪುರಕ್ಕೂ ಮಾಯಾ ಬಂದಿದ್ದಾಳೆ. ಇದು ಎಲ್ಲರಿಗೂ ನಿಜಕ್ಕೂ ಶಾಕ್ ಆಗಿದೆ. ಆದರೆ ಯಾರು ಏನನ್ನು ಹೇಳುವ ಹಾಗಿಲ್ಲ. ಅದರಲ್ಲೂ ಬಂದ ಕೂಡಲೇ ದಿಯಾಗೆ ಟಾಂಗ್ ಕೊಡುತ್ತಿದ್ದಾಳೆ. ನಾನು ಬಂದಿದ್ದು ನಿನಗೆ ಡಿಸ್ಟರ್ಬ್ ಆಯ್ತಾ ದಿಯಾ ಅಂತಿದ್ದಾಳೆ. ದಿಯಾ ಎಷ್ಟು ಮುಗ್ಧಳೋ ಹಾಗೇ ಆಕೆಯ ತಂಟೆಗೆ ಬಂದರೆ ಚಳಿ ಜ್ವರವನ್ನು ಬಿಡಿಸುವ ಜಗಳಗಂಟಿ. ಹೀಗಾಗಿ ಮಾಯಾಗೆ ನಂಗ್ಯಾವ ತೊಂದರೆಯೂ ಇಲ್ಲ ಎಂದಿದ್ದಾಳೆ. ಮಾಯಾ ಎಂಟ್ರಿಯಿಂದ ಇನ್ನು ಒಂದು ದಿನ ಇದ್ದಂತೆ ಟ್ರಿಪ್‌ನ ಚಿತ್ರಣ ಕಂಪ್ಲೀಟ್ ಬದಲಾಗುವ ಸಾಧ್ಯತೆ ಇದೆ.

ಮಾಯಾಳಿಂದ ದಿಯಾ ಬದುಕಲ್ಲಿ ಅಲ್ಲೋಲ ಕಲ್ಲೋಲ
ಮಾಯಾಗೆ ದಿಯಾ ಮೇಲೆ ಹೇಳಿಕೊಳ್ಳಲಾಗದ ಕೋಪ. ಕಾರಣ ಆಕೆಯ ಶ್ರೀಮಂತಿಕೆ. ಡಾ.ಶ್ರೀಧರ್ ತನ್ನ ಶ್ರೀಮಂತಿಕೆಯ ದರ್ಪದಿಂದಲೇ ತನ್ನ ತಾಯಿಯನ್ನು ಕರೆದುಕೊಂಡು ಹೋದರು. ಹೀಗಾಗಿಯೇ ನನಗೆ ತಾಯಿ ಪ್ರೀತಿ ಸಿಗಲಿಲ್ಲ. ಆ ತಾಯಿ ಪ್ರೀತಿ ದಿಯಾಳಿಗೆ ಸಿಕ್ಕಿದೆ ಅನ್ನೋ ಆರೋಪ. ಇದೇ ಕಾರಣಕ್ಕೆ ದಿಯಾ ಕಂಡಲ್ಲೆಲ್ಲ ರೊಚ್ಚಿಗೆದ್ದು, ಬಾಯಿಗೆ ಬಂದ ಹಾಗೇ ಮಾತನಾಡುತ್ತಿರುತ್ತಾಳೆ. ಆಕೆಯ ವೈಯಕ್ತಿಕ ಜೀವನಕ್ಕೂ ಹಾನಿ ಮಾಡುತ್ತಿದ್ದಾಳೆ. ಅದರಲ್ಲೂ ತಾನೂ ಪ್ರೀತಿಸುತ್ತಿದ್ದ ಹುಡುಗನನ್ನು ದಿಯಾ ಮದುವೆಯಾಗುತ್ತಿದ್ದಾಳೆ ಎಂದಾಕ್ಷಣ ಮಾಯಾ ಮನಸ್ಸಲ್ಲಿ ಮತ್ತಷ್ಟು ಬೆಂಕಿ ಹೊತ್ತಿಕೊಂಡಿದೆ. ಅದಕ್ಕಾಗಿಯೇ ಇಬ್ಬರ ನಡುವೆ ಬಿರುಕು ಮೂಡಿಸಲು ಯತ್ನಿಸುತ್ತಿದ್ದಾಳೆ. ಸಮಯ ಸಿಕ್ಕಾಗಲೆಲ್ಲಾ ದಿಯಾ ಬಗ್ಗೆ ನೆಗೆಟಿವ್ ಮಾತುಗಳನ್ನೇ ಆಡುತ್ತಿರುತ್ತಾಳೆ.

ಮಾಯಾಳಾ ಬಲೆಗೆ ಶಶಾಂಕ್ ಬೀಳುತ್ತಾನಾ..?
ಮಾಯಾ ತನ್ನನ್ನು ಲವ್ ಮಾಡುತ್ತಿದ್ದಾಳೆಂಬ ಯಾವ ಅರಿವು ಶಶಾಂಕ್‌ಗೆ ಇಲ್ಲ. ದಿಯಾಳ ಜೊತೆ ಮನೆಯವರು ಮದುವೆ ಫಿಕ್ಸ್ ಮಾಡಿದ್ದಾರೆ. ಆಕೆಯೇ ಬಾಳ ಸಂಗಾತಿ ಅಂತ ಫಿಕ್ಸ್ ಆಗಿದ್ದಾನೆ. ಒಬ್ಬ ಅಸಿಸ್ಟೆಂಟ್ ಜೊತೆಗೆ ಹೇಗಿರಬೇಕೋ ಅದೇ ರೀತಿ ಮಾಯಾಳ ಜೊತೆಗೂ ಇದ್ದಾನೆ. ಆದರೆ ಮಾಯಾ, ಶಶಾಂಕ್‌ನ ಇಂಪ್ರೆಸ್ ಮಾಡುವ ಸಾಹಸಕ್ಕೆ ಕೈ ಹಾಕಿದ್ದಾನೆ. ಇಲ್ಲಿ ಶಶಾಂಕ್ ಕೊಂಚ ಎಡವಿದರು ಸುಂದರ ಸಂಬಂಧಗಳಿಗೆ ನೋವುಂಟಾಗುತ್ತದೆ. ಅದರಲ್ಲಿ ಮಾಯಾ ಯಾವಾಗಲೂ ದಿಯಾಳನ್ನು ಹೀಯಾಳಿಸಿದರೂ ಶಶಾಂಕ್ ಹೆಚ್ಚು ಸಪೋರ್ಟ್ ಮಾಡುತ್ತಿಲ್ಲ. ಇದು ದಿಯಾಳಿಗೂ ಬೇಸರ ತರಿಸಿದೆ. ಈಗ ಮಾಯಾ ತೀರಾ ವೈಯಕ್ತಿಕ ವಿಚಾರಗಳಿಗೆ, ಫ್ಯಾಮಿಲಿ ಒಟ್ಟಾಗಿರುವ ಜಾಗಕ್ಕೆ ಎಂಟ್ರಿ ಕೊಡುತ್ತಿದ್ದಾಳೆ. ಶಶಾಂಕ್ ಈಗಲೂ ಕಂಟ್ರೋಲ್ ಮಾಡದೆ ಹೋದರೆ ಈಗ ಸಣ್ಣದಾಗಿ ಇಬ್ಬರ ನಡುವೆ ಹೊತ್ತಿಕೊಳ್ಳುವ ಜಗಳ, ಆಮೇಲೆ ಜ್ವಾಲಾಮುಖಿಯಾಗಲು ಪರೋಕ್ಷವಾಗಿ ಶಶಾಂಕ್ ಕೂಡ ಕಾರಣಕರ್ತನಾಗುತ್ತಾನೆ.


Click it and Unblock the Notifications











