ಜೇನುಗೂಡು: ಶಶಾಂಕ್‌ಗೆ ಉರಿಸಲು ದಿಯಾಳ ಮಾಸ್ಟರ್ ಫ್ಲ್ಯಾನ್ : ಸಕಲೇಶಪುರಕ್ಕೆ ಬಂದೇ ಬಿಟ್ಟ ಕ್ರಿಶ್

By ಎಸ್ ಸುಮಂತ್

'ಜೇನುಗೂಡು' ಯಾವಾಗಲೂ ಜೇನುಗೂಡಿನಂತೆಯೇ ಇರಬೇಕು. ಆಗ ನೋಡುವುದಕ್ಕೂ ಖುಷಿಯಾಗಿರುತ್ತದೆ. ಯಾರಾದರೂ ಕಲ್ಲು ಹೊಡೆದರೆ ಜೇನುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿಡುತ್ತವೆ. ದಿಯಾ ಬಾಳಲ್ಲೂ ಇದೀಗ ಅದೇ ನಡೆಯುತ್ತದೆ. ದಿಯಾ ಶಶಾಂಕ್‌ಗೋಸ್ಕರ ಮನೆ ಮಂದಿಯೆಲ್ಲಾ ಬೆಂಬಲ ನೀಡುತ್ತಿದ್ದಾರೆ. ಅವರಿಬ್ಬರ ನಡುವೆ ಪ್ರೀತಿ ಚಿಗುರಲಿ ಎಂದು ಪರಿತಪಿಸುತ್ತಿದ್ದಾರೆ. ಆದರೆ ಮಾಯಾ ಅವರಿಬ್ಬರ ನಡುವೆ ಬಂದು ನೆಮ್ಮದಿಯನ್ನೇ ಹಾಳು ಮಾಡುತ್ತಿದ್ದಾಳೆ.

ದಿಯಾಗೆ ನಡುಕೋಟೆ ಮನೆಯವರ ಜೊತೆ ಇರುವುದೆಂದರೆ ಇನ್ನಿಲ್ಲದ ಖುಷಿ. ನಡುಕೋಟೆ ಮನೆಯ ಮಂದಿ ಜೊತೆಗಿದ್ದರೆ ಸಾಕು ಯಾವ ಕ್ರಿಶ್ ಬೇಡ, ಯಾವ ಫ್ರೆಂಡ್ಸ್ ಬೇಡ ಅಂತಿದ್ದಳು. ಆದರೆ ಮಾಯಾ ಎಂಬ ಬಿರುಗಾಳಿ ಬಂದು ಒಕ್ಕರಿಸಿ, ಅಲ್ಲೋಲ ಕಲ್ಲೋಲ ಮಾಡುತ್ತಿದೆ.

 ಅನಾರೋಗ್ಯದ ನೆಪ ಹೇಳಿ ವಾಪಾಸ್ ಹೋಗಲಿಲ್ಲ ಮಾಯಾ

ಅನಾರೋಗ್ಯದ ನೆಪ ಹೇಳಿ ವಾಪಾಸ್ ಹೋಗಲಿಲ್ಲ ಮಾಯಾ

ಮಾಯಾ ನಡುಕೋಟೆ ಮನೆಗೆ ಹೋಗಿ ಶಶಾಂಕ್ ಅಂಡ್ ಗ್ಯಾಂಗ್ ಇರುವ ಸ್ಥಳ ತಿಳಿದುಕೊಂಡು ಬಂದಳು. ಬಂದವಳು ಸುಮ್ಮನೆ ಹೇಗಿರುತ್ತಾಳೆ ಸೀದಾ ಸಾದಾ ಸಕಲೇಶಪುರಕ್ಕೆ ಪ್ರಯಾಣ ಬೆಳೆಸಿದಳು. ಬೆಟ್ಟದ ಮೇಲಿಂದ ನಲಿ ನಲಿದು ಬರುತ್ತಿದ್ದ ಕುಕ್ಕಿ ಗ್ಯಾಂಗ್‌ಗೆ ಎದುರಾದಳು. ಒಂದು ಕ್ಷಣ ಎಲ್ಲರಿಗೂ ಶಾಕ್. ಆಮೇಲೆ ಕೆಲಸದ ಮೇಲೆ ಬಂದಿರುವುದು ಎಂದು ಗೊತ್ತಾದ ಮೇಲೆ ಸುಮ್ಮನೆ ಹೋಂ ಸ್ಟೇ ಕಡೆ ನಡೆದರು. ಅಲ್ಲಿಗೆ ಮಾಯಾಳ ಚಾಪ್ಟರ್ ಮುಗಿಯಲಿಲ್ಲ. ಹೋ ಸ್ಟೇಗೆ ಬಂದ ಮೇಲೆ ಊಟ ಮಾಡಿಸಿ, ಎಸಿ ಬಸ್ ಹತ್ತಿಸಿ ಬಿಡೋಣಾ ಎಂಬ ಕುಕ್ಕಿ ಫ್ಲ್ಯಾನ್ ತಲೆಕೆಳಗಾಗುವಂತೆ ಮಾಡಿದಳು ಮಾಯಾ. ಕಾಲು ಉಳುಕಿದೆ ಎಂಬ ನಾಟಕವಾಡಿದಳು.

 ಶಶಾಂಕ್ ಯಾಕೆ ದಿಯಾ ಪರ ನಿಲ್ಲುತ್ತಿಲ್ಲ

ಶಶಾಂಕ್ ಯಾಕೆ ದಿಯಾ ಪರ ನಿಲ್ಲುತ್ತಿಲ್ಲ

ಮಾಯಾ ಕಾಲು ಉಳುಕಿದೆ ಎಂಬ ನೆಪ ಹೇಳಿ ಅಲ್ಲಿಯೇ ಉಳಿದುಕೊಳ್ಳುವ ಫ್ಲ್ಯಾನ್ ಮಾಡುತ್ತಿದ್ದಾಳೆ. ನಡೆಯೋದಕ್ಕೆ ಆಗಲ್ಲ ಎಂದಾಗ ಶಶಾಂಕ್ ಎತ್ತಿಕೊಂಡು ಹೋಗಿದ್ದಾನೆ. ಇದು ದಿಯಾಗೆ ಸಹಜವಾಗಿಯೇ ಮನಸ್ಸಿಗೆ ಬೇಸರ ತರಿಸಿದೆ. ಬಳಿಕ ರೂಮಿನಲ್ಲಿ ಕಾಲು ನೋವಿನ ನಾಟಕ ಹೆಚ್ಚಾಗಿಯೇ ಶುರುವಾಗಿದೆ. ದಿಯಾ ಮುಲಾಮ್ ತಂದು ನಾನೇ ಹಚ್ಚುತ್ತೇನೆ ಎಂದಾಗಲೂ, ಮಾಯಾ ಗದರಿದ್ದಾಳೆ, ವಿರೋಧಿಸಿದ್ದಾಳೆ. ಈ ಸಮಯದಲ್ಲಿ ಶಶಾಂಕ್ ಕೂಡ ಮಾಯಾ ಪರವೇ ಮಾತನಾಡಿದ್ದಾನೆ. ಇದು ದಿಯಾಳಿಗೆ ಮತ್ತಷ್ಟು ನೋವು ತರಿಸಿದೆ. ಆ ಮುಗ್ಧತೆಯಿಂದಲೇ ನಾನು ಬಂದಿದ್ದೇ ತಪ್ಪಾ ಎಂದು ಕೇಳಿದ ಆ ಕ್ಷಣ ನೋಡುಗರಿಗೆ ಖಂಡಿತವಾಗಿಯೂ ಶಶಾಂಕ್ ಮೇಲೆ ಕೋಪ ತರಿಸದೆ ಇರುವುದಿಲ್ಲ.

 ಕ್ರಿಶ್ ಬಂದ ಮೇಲೆ ಶಶಾಂಕ್ ಗೆ ಕೋಪ ಬರುತ್ತಾ?

ಕ್ರಿಶ್ ಬಂದ ಮೇಲೆ ಶಶಾಂಕ್ ಗೆ ಕೋಪ ಬರುತ್ತಾ?

ಮಾಯಾ ಬಂದಿರುವುದು ಶಶಾಂಕ್‌ನ ಇಂಪ್ರೆಸ್ ಮಾಡುವುದಕ್ಕೆ. ಹಾಗೇ ದಿಯಾಳ ನೆಮ್ಮದಿ ಹಾಳು ಮಾಡುವುದಕ್ಕೆ. ಆದರೆ ಶಶಾಂಕ್ ಇಲ್ಲಿ ದಿಯಾ ಪರ ನಿಂತಿಲ್ಲ ಎಂಬುದೇ ಬೇಸರ. ಇದೇ ಕೋಪ ದಿಯಾಳಿಗೆ ಕ್ರಿಶ್ ನೆನಪು ಮಾಡಿದೆ. ಶಶಾಂಕ್ ಉರಿಸುವುದಕ್ಕೆಂದೆ ದಿಯಾ ತನ್ನ ಗ್ಯಾಂಗ್ ಕರೆಸಿದ್ದಾಳೆ. ಕ್ರಿಶ್‌ನನ್ನು ಬೆಳ್ಳಂಬೆಳಗ್ಗೆ ಕರೆಸಿ, ಎಲ್ಲರಿಗೂ ಶಾಕ್ ಕೊಟ್ಟಿದ್ದಾಳೆ. ಕ್ರಿಶ್ ಬಂದಾಕ್ಷಣ ದಿಯಾ ಫುಲ್ ಖುಷಿಯಾಗಿದ್ದಾಳೆ. ಇದನ್ನು ನೋಡಿ ಶಶಾಂಕ್ ಶಾಕ್ ಆಗಿದ್ದಾನೆ. ದಿಯಾ ಕ್ರಿಶ್‌ಗೆ ಎಲ್ಲರನ್ನು ಪರಿಚಯ ಮಾಡಿಕೊಡುವಾಗ, ಶಶಾಂಕ್ ಅವನನ್ನು ನೋಡಿ ಗೊತ್ತು ಮಿಸ್ಟರ್ ಆ್ಯಟಿಟ್ಯೂಡ್ ಅನ್ನೋದಾ. ಇದು ಕ್ರಿಶ್‌ ಕೋಪ ನೆತ್ತಿಗೇರುವಂತೆ ಮಾಡಿದೆ.

 ದಿಯಾ ಐಡಿಯಾ ವರ್ಕ್ ಔಟ್ ಆಗುತ್ತಾ..?

ದಿಯಾ ಐಡಿಯಾ ವರ್ಕ್ ಔಟ್ ಆಗುತ್ತಾ..?

ದಿಯಾ ಎಷ್ಟು ಮುಗ್ಧಳು ಎಂಬುದು ಶಶಾಂಕ್‌ಗೆ ಹೊಸದಾಗಿ ಹೇಳುವ ಅಗತ್ಯವಿಲ್ಲ. ಆಕೆಯ ಮುಗ್ಧತೆಗೆ ಶಶಾಂಕ್ ಕೂಡ ಸಾಕಷ್ಟು ಬಾರಿ ಮನಸೋತಿದ್ದಾನೆ. ಆದರೆ ಮಾಯಾಳಿಂದ ದಿಯಾಳ ಮನಸ್ಸಿಗೆ ನೋವು ಮಾಡುವ ಕೆಲಸವನ್ನೇ ಮಾಡುತ್ತಿದ್ದಾನೆ. ಆಕೆಯನ್ನು ಒಲೈಸಿಕೊಳ್ಳುವುದಕ್ಕಿಂತ ಮಾಯಾಳ ಬೆಂಬಲಕ್ಕೆ ನಿಲ್ಲುವುದು ಹೆಚ್ಚಾಗಿದೆ. ಅವರಿಬ್ಬರ ಕಿತ್ತಾಟ ನೋಡುವ ಪ್ರೇಕ್ಷಕರಿಗೆ ದಿಯಾಳಿಗೆ ಹರ್ಟ್ ಮಾಡಿದರೆ ಇಷ್ಟವಾಗುವುದಿಲ್ಲ. ಹೀಗಾಗಿ ದಿಯಾ ಕ್ರಿಶ್‌ನ ಕರೆಸಿರುವ ಫ್ಲ್ಯಾನ್‌ಗೆ ಬಹುಪರಾಕ್ ಹಾಕಿದ್ದಾರೆ. ಈಗಲಾದರು ಶಶಾಂಕ್ ತನ್ನ ತಪ್ಪು ತಿದ್ದಿಕೊಳ್ಳುತ್ತಾನಾ ನೋಡಬೇಕು. ಕ್ರಿಶ್‌ನಿಂದ ಅವನ ಮನಸ್ಸಿಗೆ ನೋವಾಗಿದೆ ಎಂಬುದಾದರೆ ಮಾಯಾಳಿಂದ ದಿಯಾ ಮನಸ್ಸಿಗೆ ನೋವಾಗುತ್ತಿದೆ ಎಂಬುದನ್ನು ತಿಳಿಯಬೇಕು ಅಲ್ಲವಾ.

More from Filmibeat

English summary
Star Suvarna Serial Jenugudu Written Update On May 18th Episode. Here Is The details Diya Boyfriend Krish Came to Sakaleshapura.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X