ಜೇನುಗೂಡು: ದಿಯಾ ಶಶಾಂಕ್ ಮಧ್ಯೆ ಬಂದು ಹುಳಿ ಹಿಂಡುತ್ತಿರೊ ಮಾಯಾಗೆ ಖಡಕ್ ಉತ್ತರ ಸಿಗುತ್ತಾ?
ದಿಯಾ ಶಶಾಂಕ್ ನಡುವೆ ಮಾಯಾ ಬಂದು ಒಂದಷ್ಟು ನೆಮ್ಮದಿಯನ್ನೇ ಹಾಳು ಮಾಡುತ್ತಿದ್ದಾಳೆ. ಸಕಲೇಶಪುರಕ್ಕೆ ಎಂಜಾಯ್ ಮಾಡಲೆಂದು ಹೋದವರ ನಡುವೆ ಒಂದಷ್ಟು ಕಿರಿಕಿರಿಯಾಗುವಂತಹ ಸನ್ನಿವೇಶಗಳೇ ನಿರ್ಮಾಣವಾಗಿದೆ. ಒಂದು ಕಡೆ ಅದಕ್ಕೆ ಕಾರಣವಾದ ಮಾಯಾ, ಮತ್ತೊಂದು ಕಡೆ ಕ್ರಿಶ್. ಈ ಇಬ್ಬರ ಆಗಮನದಿಂದ ಕುಕ್ಕಿ ಗ್ಯಾಂಗ್ ಮೌನವಾಗಿದೆ. ಕ್ರಿಶ್ ಸ್ವಲ್ಪ ಅತಿಯಾಗಿಯೇ ಆಡಿದ ಕಾರಣ ಒಂದಷ್ಟು ಜಗಳಗಳು ನಡೆದಿದೆ. ಮಾತಿಗೆ ಮುಂಚೆ she is my girlfriend ಅನ್ನುತ್ತಾ ನಡುಕೋಟೆ ಮನೆಯವರ ಕೋಪ ಕೆರಳಿಸುತ್ತಿದ್ದ.
ದಿಯಾ ಮತ್ತು ಶಶಾಂಕ್ ಇಷ್ಟ ಇಲ್ಲದೆ, ಮನೆಯವರ ಒತ್ತಾಯಕ್ಕೆ ಮದುವೆಯಾಗುತ್ತಿದ್ದರು. ಒಬ್ಬರ ನಡುವೆ ಒಬ್ಬರಿಗೆ ಗೌರವ ಇದೆ. ಶಶಾಂಕ್ ಅದೆಷ್ಟೇ ಸಿಡುಕಿನಿಂದ ಮಾತನಾಡಿದರು ಕೂಡ ಆಕೆ ನನ್ನವಳು ಎಂಬ ಭಾವನೆ ಮನಸ್ಸಿನಲ್ಲಿದೆ. ಅವಳೇ ನನ್ನ ಹೆಂಡತಿ ಎಂದು ಫಿಕ್ಸ್ ಆಗಿದ್ದಾನೆ. ಅವ್ಳು ನಿಮಗೆ ಸರಿ ಹೋಗುವುದಿಲ್ಲ. ಒಳ್ಳೆ ಹುಡುಗಿ ಸಿಗುತ್ತಾಳೆ. ಪ್ರಯತ್ನ ಪಡಿ ಎಂದು ಮಾಯಾ ಹೇಳಿದಾಗ ಶಶಾಂಕ್ ಇದರ ಬಗ್ಗೆ ಚರ್ಚೆ ಬೇಡ ಎಂದು ಹೇಳಿ ಮುಂದೆ ಸರಿದಿದ್ದಾನೆ.

ಕ್ರಿಶ್ ಜೊತೆ ಡ್ಯುಯೆಟ್ ಹಾಡಿದ ದಿಯಾ
ರಾತ್ರಿ ಫೈಯರ್ ಪಾರ್ಟಿಯಲ್ಲಿ ದಿಯಾ ಡ್ಯಾನ್ಸ್ ಮಾಡಲು ಇಚ್ಛಿಸಿದ್ದು ಶಶಾಂಕ್ ಜೊತೆಗೇನೆ. ಆದರೆ ಆತ ಒಪ್ಪಲಿಲ್ಲ. ಒಂದು ಕಡೆ ಖುಷಿ ಹಾಳು ಮಾಡಲೆಂದೇ ಬಂದಿರುವ ಮಾಯಾಳಿಂದ ದಿಯಾ ಬೇಜಾರಾಗಿದ್ದಾಳೆ. ಹೀಗಾಗಿ ಕ್ರಿಶ್ ಕಾಲ್ ಮಾಡಿದ ಕ್ಷಣ ಏನನ್ನು ಯೋಚಿಸದೆ ಸಕಲೇಶಪುರಕ್ಕೆ ಕರೆದಳು. ರಾತ್ರಿ ಪಾರ್ಟಿಯಲ್ಲಿ ಸಖತ್ ಡ್ಯಾನ್ಸ್ ಮಾಡಿದರು. ಕ್ರಿಶ್ ಜೊತೆ ಕೈ ಹಿಡಿದು ದಿಯಾ ಕುಣಿಯುತ್ತಿದ್ದರೆ, ಅದನ್ನು ನೋಡಿದ ಶಶಾಂಕ್ ಮನಸ್ಸೊಳಗೆ ಬೆಂಕಿಯ ಬುಗ್ಗೆ ಜೋರಾಗಿಯೇ ಹೊತ್ತಿಕೊಂಡಿತ್ತು. ಆದರೂ ತಾಳ್ಮೆಯಿಂದ ನೋಡುತ್ತಿದ್ದರೆ ಮುಖದಲ್ಲಿ ಕೋಪ ತಾಂಡವವಾಡುತ್ತಿತ್ತು. ಅದನ್ನು ಕುಕ್ಕಿ ಬಳಿಯೂ ಹೋಗಿ ಹೇಳಿದ್ದ. ನೋಡು ನಡುಕೋಟೆ ಮನೆಯ ಸೊಸೆಯಾಗುವಾಕಿ ಈ ರೀತಿ ಕುಣಿಯುತ್ತಿದ್ದಾಳೆ ಅಂತ. ಆದರೆ ಆ ಕ್ಷಣದಲ್ಲಿ ಕುಕ್ಕಿ ಅಂಡ್ ಗ್ಯಾಂಗ್ ದಿಯಾಗೆ ಸಪೋರ್ಟ್ ಮಾಡಿದ್ದು.

ಶಶಾಂಕ್ ಫ್ಯಾಮಿಲಿ ಬಗ್ಗೆ ಹಗುರವಾಗಿ ಮಾತನಾಡಿದ ಕ್ರಿಶ್
ದಿಯಾಗೆ ಕುಕ್ಕಿ ಟೀಂ ಅಂದರೆ ಸಿಕ್ಕಾಪಟ್ಟೆ ಇಷ್ಟ. ಅವರ ಜೊತೆ ಶಶಾಂಕ್ ಕೂಡ ಇರಲೇಬೇಕು. ಜಗಳ ಆಡಿದರು ಅಲ್ಲೊಂದು ಮನಸ್ಸಿನ ಸಂತೋಷವಿರುತ್ತದೆ. ಫೈಯರ್ ಕ್ಯಾಂಪ್‌ನಲ್ಲಿ ಡ್ಯಾನ್ಸ್ ಮಾಡುವಾಗ ದಿಯಾ ಮಾದವಿ ಮತ್ತೆ ಕುಕ್ಕಿ ಹೆಂಡತಿಯನ್ನು ಡ್ಯಾನ್ಸ್‌ಗೆ ಕರೆದಳು. ಆದರೆ ಅವರು ಬರುವುದಕ್ಕೆ ಒಪ್ಪಲಿಲ್ಲ. ಬಲವಂತ ಮಾಡಿದಾಗ ಶಶಾಂಕ್ ರೇಗಿದ. ಅವರು ಬರಲ್ಲ ಎಂದರು ನೀನ್ಯಾಕೆ ಬಲವಂತ ಮಾಡುವುದು. ನಮ್ಮ ಸಂಸ್ಕಾರ ಇದಲ್ಲ ಎಂದಾಗ, ಸುಮ್ಮನೆ ಇರದ ಕ್ರಿಶ್ ಮಧ್ಯೆ ಬಾಯಿ ಹಾಕಿದ, ಈ ಮಿಡಲ್ ಕ್ಲಾಸ್ ಫ್ಯಾಮಿಲಿಯ ಜನಗಳ ಮನಸ್ಥಿತಿಯೇ ಹೀಗೆ ಎಂದು ಸ್ವಾಭಿಮಾನಕ್ಕೆ ಹೊಡೆದ. ಇದು ಕುಕ್ಕಿ ಗ್ಯಾಂಗ್‌ಗೂ ಬೇಸರ ತರಿಸಿತ್ತು.

ದಿಯಾ ಕುಡಿಯಲ್ಲ ಎಂಬ ನಂಬಿಕೆ ಸುಳ್ಳಾಗಲಿಲ್ಲ
ಕ್ರಿಶ್ ಮಾತಿಗೆ ಬೇಸರ ಮಾಡಿಕೊಂಡು ಕುಕ್ಕಿ ಗ್ಯಾಂಗ್ ಅಲ್ಲಿಂದ ಹೋಗಲು ಯತ್ನಿಸಿದರು. ಆದರೆ ಕುಕ್ಕಿಯ ಮುದ್ದಿನ ಸಿಂಡ್ರೆಲಾ ಹೋಗುವುದನ್ನು ತಡೆದಳು. ಬಳಿಕ ಕ್ರಿಶ್ ಡ್ರಿಂಕ್ಸ್ ತರಲು ಹೇಳಿದ. ಕುಕ್ಕಿಗೆ ದಿಯಾ ಮೇಲೆ ಅಪಾರ ನಂಬಿಕೆ. ದಿಯಾ ಕುಡಿಯಲ್ಲ ಎಂಬುದಾಗಿತ್ತು. ಆದರೆ ಶಶಾಂಕ್‌ಗೆ ಆ ನಂಬಿಕೆ ಇರಲಿಲ್ಲ. ಡ್ರಿಂಕ್ಸ್ ತಂದ ಮೇಲೆ ಕ್ರಿಶ್ ಅವಳಿಗೆ ಕುಡಿಸಲು ಟ್ರೈ ಮಾಡಿದ, ಆದರೆ ದಿಯಾ ಅದನ್ನು ರಿಜೆಕ್ಟ್ ಮಾಡಿದಳು. ಜ್ಯೂಸ್ ಆದರೂ ಕುಡಿ ಎಂದು ಬಲವಂತ ಮಾಡಿದಾಗ ಶಶಾಂಕ್ ಮಧ್ಯೆ ಪ್ರವೇಶಿಸಿದ. ಆಕೆ ಬೇಡ ಎಂದರು ಬಲವಂತ ಮಾಡುತ್ತಿಯಲ್ಲ ಎಂದಾಗ ಕ್ರಿಶ್ ನೀನ್ಯಾರು ಇದನ್ನು ಕೇಳುವುದಕ್ಕೆ. ಇದಕ್ಕೂ ನಿನಗೂ ಸಂಬಂಧವಿಲ್ಲ. ಮಧ್ಯೆ ಪ್ರವೇಶಿಬೇಡ ಎಂದಿದ್ದೇ ತಡ, ದಿಯಾ ತನ್ನೊಳಗಿದ್ದ ಕೋಪವನ್ನೆಲ್ಲಾ ಹೊರ ಹಾಕಿದಳು. ನೋಡು ಕ್ರಿಶ್ ಮಧ್ಯೆ ಬಂದಿರುವುದು ನೀನು. ಅವರೆಲ್ಲ ನನ್ನ ಗಂಡನ ಮನೆಯವರು. ಅವರಿಗೆ ಅವಮಾನ ಮಾಡಿದರೆ ಸರಿ ಇರುವುದಿಲ್ಲ ಎಂದಿದ್ದಾಳೆ. ಗಂಡನ ಮನೆಯವರು ಎಂದಾಕ್ಷಣಾ ನಡುಕೋಟೆ ಮನೆಯವರಿಗೆ ಇನ್ನಿಲ್ಲದ ಖುಷಿ ಸಿಕ್ಕಿದೆ. ಅಷ್ಟೇ ಅಲ್ಲ ಪ್ರಾಮಿಸ್ ನಾನು ಕುಡಿಯಲ್ಲ ಎಂದಾಗ, ಕುಕ್ಕಿ ಇಲ್ಲವ್ವ ನೀನು ಏನಂತ ನಮಗೆ ಗೊತ್ತು ಎಂದಿದ್ದಾನೆ.

ಮಾಯಾ ವರ್ತನೆಗೆ ತಿರುಗೇಟು ನೀಡುತ್ತಾನಾ ಶಶಾಂಕ್?
ಶಶಾಂಕ್ ದಿಯಾಳ ಮನಸ್ಸಿಗೆ ನೋವಾಗುತ್ತಾ ಇಲ್ಲವಾ ಎಂಬುದನ್ನು ಸಹ ಚಿಂತಿಸುವುದಿಲ್ಲ. ಮಾಯಾಳ ಪರವಾಗಿಯೇ ನಿಂತು ದಿಯಾಳಿಗೆ ನೋವು ಮಾಡಿದ್ದಾನೆ. ಈಗ ಪರಿಸ್ಥಿತಿ ಬೇರೆಯದ್ದೇ ಆಗಿದೆ. ಶಶಾಂಕ್ ದಿಯಾ ಪರ ಮಾತನಾಡಲೇಬೇಕಾಗಿದೆ. ಗಂಡನ ಮನೆಯವರು ಎಂದು ದಿಯಾ ಹೇಳಿದ್ದಕ್ಕೆ ಶಶಾಂಕ್ ಕೂಡ ಖುಷಿಯಾದ. ಅವರ ಖುಷಿ ನೋಡಿ ಕೋಪಗೊಂಡ ಮಾಯಾ ಡ್ರಿಂಕ್ಸ್ ಮಿಕ್ಸ್ ಆಗಿದ್ದ ಜ್ಯೂಸ್ ಕುಡಿದಳು. ಆಮೇಲೆ ಹಾಡುವುದಕ್ಕೆ ಶುರು ಮಾಡಿದಳು, ಡ್ಯಾನ್ಸ್ ಮಾಡಿದಳು. ರೂಮಿಗೆ ಕರೆದುಕೊಂಡು ಹೋಗಿ ಎನ್ನುತ್ತಾಳೆ ಮಾಯಾ. ಆದರೆ ಮುಗ್ಧ ಹುಡುಗಿ ದಿಯಾ ಕೋಪವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಮಾಯಾ ನಾನು ನಿನ್ನ ಕರೆದುಕೊಂಡು ಹೋಗುತ್ತೇನೆ ಎನ್ನುತ್ತಾಳೆ. ಇದಕ್ಕೆ ರೊಚ್ಚಿಗೆದ್ದ ಮಾಯಾ ಪಟಾರ್ ಪಟಾರ್ ಅಂತ ದಿಯಾಳ ಕೆನ್ನೆಗೆ ಬಾರಿಸಿಯೇ ಬಿಡಿತ್ತಾಳೆ. ಮಾಯಾಳ ಕೆಲಸದಿಂದ ದಿಯಾ ಪರ ಮಾತನಾಡಲೇಬೇಕಾಗಿದೆ ಶಶಾಂಕ್. ದಿಯಾ ಪರ ಶಶಾಂಕ್ ಮಾತನಾಡಿದರೆ ಇಲ್ಲಿಂದ ಅವರಿಬ್ಬರ ನಡುವೆ ಹೊಸ ಪ್ರೀತಿ ಚಿಗುರಬಹುದು.


Click it and Unblock the Notifications











