ಜೇನುಗೂಡು: ಕಳುವಾದ ಹಣವೇ ದಿಯಾ-ಶಶಾಂಕ್ ಮದುವೆಗೆ ಅಡ್ಡಿಯಾಗುತ್ತಾ..?
'ಜೇನುಗೂಡು' ಧಾರಾವಾಹಿಯಲ್ಲಿ ಮದುವೆಯ ಸಂಭ್ರಮ ಮನೆ ಮಾಡಿದೆ. ದಿಯಾ ಶಶಾಂಕ್ ಎಷ್ಟೇ ಜಗಳವಾಡಿದರೂ ಮನದ ಮೂಲೆಯಲ್ಲಿ ಹೊಸ ಆಸೆಯೊಂದು ಚಿಗುರೊಡೆಯುತ್ತಿದೆ. ಇಬ್ಬರ ಮನಸ್ಸಲ್ಲಿ ಈಗೀಗ ಹೊಸ ಪ್ರೀತಿ ಮೊಳೆಯುತ್ತಿದೆ. ಜಗಳದ ನಡುವೆ ಒಬ್ಬರ ಮೇಲೊಬ್ಬರು ಕೇರಿಂಗ್ ಮಾಡಲು ಶುರು ಮಾಡಿದ್ದಾರೆ. ಇಷ್ಟವಿಲ್ಲದೆ ನಡೆಯುತ್ತಿರುವ ಮದುವೆಯಾದರೂ ಮುಂದೊಂದು ದಿನ ಚೆನ್ನಾಗಿಯೇ ಇರುತ್ತಾರೆ ಎಂಬ ಭರವಸೆ ಇತ್ತು. ಆದರೆ ಅದ್ಯಾಕೋ ಅರ್ಧದಲ್ಲಿಯೇ ನಿಲ್ಲುವ ಲಕ್ಷಣಗಳು ಕಾಣಿಸುತ್ತಿದೆ.
ಎಲ್ಲರನ್ನು ನಕ್ಕು ನಗಿಸುತ್ತಿದ್ದ, ದಿಯಾ-ಶಶಾಂಕ್ ನಡುವೆ ಪ್ರೀತಿ ಚಿಗುರುವಂತೆ ಮಾಡಿದ್ದ ಕುಕ್ಕಿಯ ನಗು ಮಾಯವಾಗಿದೆ. ಟೆನ್ಶನ್‌ನಲ್ಲಿಯೇ ಸಮಯ ಕಳೆಯುತ್ತಿದ್ದಾನೆ. ನಗಿಸುವವನ ಮುಖದಲ್ಲಿ ನಗುವೇ ಮಾಯವಾಗಿ ದಾರಿ ಕಾಣದ ಹಾಗೆ ಆಗಿದೆ. ಇದು ನಡುಕೋಟೆ ಮನೆಯ ಸಂಭ್ರಮವನ್ನು ಕಿತ್ತುಕೊಂಡಿದೆ.

ಕುಕ್ಕಿ ರಕ್ಷಣೆಗೆ ಮನೆಯವರು ಸಹಾಯಕ್ಕೆ ನಿಲ್ಲುತ್ತಾರಾ?
ಒಂದಲ್ಲ ಎರಡಲ್ಲ 57 ಲಕ್ಷ ಹಣ ಕಳುವಾಗಿದೆ. ಅದು ಕುಕ್ಕಿಯ ಸುಪರ್ದಿನಲ್ಲಿದ್ದ ಹಣ. ಅದು ಗ್ರಾಹಕರ ಹಣವಾಗಿರುವ ಕಾರಣ ಇತ್ತ ಬ್ಯಾಂಕ್ ಮ್ಯಾನೇಜರ್ ಕೈನಲ್ಲಿ ಕೂಡ ಏನು ಮಾಡಲು ಸಾಧ್ಯವಾಗುತ್ತಿಲ್ಲ. ಬ್ಯಾಂಕ್ ಮ್ಯಾನೇಜರ್‌ಗೆ ಕುಕ್ಕಿಯ ಮೇಲೆ ಅಪಾರವಾದ ನಂಬಿಕೆ ಇದೆ. ಹೀಗಾಗಿಯೇ ಬಂದು ಸಮಸ್ಯೆ ಹೇಳಿದಾಗ ಬ್ಯಾಂಕ್‌ಗೆ ಎರಡು ದಿನ ರಜೆ ಘೋಷಿಸಲಾಗಿದೆ. ಅದರ ಜೊತೆಗೆ ಮ್ಯಾನೇಜರ್ ಮೇಲೆ ನಿಜವಾದ ಕಳ್ಳರ ಮೇಲೆ ಅನುಮಾನವೂ ಮೂಡಿದೆ. ಆದರೆ ನಿಜವಾದ ಕಳ್ಳನನ್ನು ಹಿಡಿಯಲು ಕುಕ್ಕಿ ಧೈರ್ಯ ಮಾಡಬೇಕಿದೆ. ಪೊಲೀಸರಿಗೆ ದೂರು ನೀಡಿದರೆ ಎಲ್ಲವೂ ಸರಿಯಾಗುತ್ತದೆ. ಆದರೆ ಪೊಲೀಸರೆಂದರೆ ದೂರ ಸರಿಯುವ, ತಪ್ಪನ್ನು ಮಾಡದೆ, ಬೇರೆಯವರಿಗೆ ಕೆಡುಕು ಬಯಸದೆ ಬದುಕುವ ಕುಟುಂಬದ ಹಿನ್ನೆಲೆ ಇರುವ ಕಾರಣ ಕುಕ್ಕಿ ಇದಕ್ಕೆಲ್ಲಾ ಹೆದರುತ್ತಿದ್ದಾನೆ. ಈ ಹೆದರಿಕೆಯೇ ಕುಕ್ಕಿಗೆ ಮುಳುವಾಗುತ್ತಾ ಎಂಬುದೇ ಮನೆಯವರ ಆತಂಕ.

ದಿಯಾ-ಶಶಾಂಕ್ ವಿಚಾರದಲ್ಲಿ ಪ್ರೇಕ್ಷಕರ ಊಹೆಯೇ ಬೇರೆ
ಮೊದಲೇ ಕಂಡ ಕಂಡಾಗ, ಸಿಕ್ಕಾಗೆಲ್ಲ ಜಗಳವಾಡುವ ದಿಯಾ ಶಶಾಂಕ್ ಮದುವೆಯಾದ ಮೇಲೆ ಖಂಡಿತ ದೂರಾಗುತ್ತಾರೆ ಎಂಬುದು ಎಲ್ಲರ ಚಿಂತನೆಯಾಗಿತ್ತು. ಆದರೆ ಅದ್ಯಾಕೋ ಮೊದಲೇ ಎಲ್ಲವೂ ಸರಿಯಾಗುತ್ತಿಲ್ಲ ಎಂಬುದನ್ನು ಸೂಚಿಸುತ್ತಿದೆ. ಮೊದ ಮೊದಲಿಗೆ ಹಾವು ಮುಂಗುಸಿಯಂತೆ ಆಡುತ್ತಿದ್ದವರು ಇದೀಗ ಕೊಂಚ ಕಡಿಮೆ ಮಾಡಿಕೊಂಡಿದ್ದಾರೆ. ಕೋಳಿ ಜಗಳಕ್ಕೆ ತಿರುಗಿದ್ದಾರೆ. ಇನ್ನೇನು ಮದುವೆಯಾಗಿ ಬಿಡುತ್ತಾರೆ ಎನ್ನುವಾಗಲೇ ಕುಕ್ಕಿಯ ಸಮಸ್ಯೆ ಇದೀಗ ಮದುವೆಯನ್ನೇ ಮರಿದುಕೊಳ್ಳುವ ಹಂತಕ್ಕೆ ಬಂದು ನಿಂತಿದೆ.

ಕುಕ್ಕಿ ಸಹಾಯಕ್ಕೆ ನಿಲ್ಲುತ್ತಾರಾ ದಿಯಾ ತಂದೆ ಶ್ರೀಧರ್?
ಶಶಾಂಕ್‌ಗೆ ಮನೆ ಮಂದಿ ಎಂದರೆ ಪಂಚಪ್ರಾಣ. ಅದಕ್ಕಾಗಿಯೇ ಅಮೆರಿಕದಲ್ಲಿ ಕೆಲಸದ ಆಫರ್ ಸಿಕ್ಕಿದರೂ ಕೂಡ ಮನೆ ಮಂದಿಯನ್ನು ಬಿಟ್ಟು ಹೋಗುವುದಕ್ಕೆ ಸಾಧ್ಯವಾಗದೆ ಅದನ್ನು ಕ್ಯಾನ್ಸಲ್ ಮಾಡಿಕೊಂಡು ಮನೆ ಮಂದಿಯ ಜೊತೆಗೆ ಉಳಿದು ಬಿಟ್ಟಿದ್ದಾನೆ. ಈಗ ಮನೆಯ ಮಗನಿಗೆ ದೊಡ್ಡ ಸಮಸ್ಯೆ ಎದುರಾಗಿದೆ. ಮೊದಲು ಅದನ್ನು ಬಗೆಹರಿಸುವ ಬದಲು ತನ್ನ ಸುಖ ನೋಡಿಕೊಳ್ಳುವ ಸ್ವಾರ್ಥಿಯಂತು ಆಗಿರಲ್ಲ. ಹೀಗಾಗಿಯೇ ಸದ್ಯಕ್ಕೆ ಮದುವೆ ಬೇಡ, ಆ ಬಳಿಕ ನೋಡೋಣವೆಂದು ದಿಯಾ ತಂದೆ ಶ್ರೀಧರ್‌ಗೆ ಹೇಳಲು ಹೊರಟಿದ್ದಾನೆ. ಕಡೆಗೂ ದಿಯಾ ತಂದೆಗೆ ಶಶಾಂಕ್ ಅಪ್ಪ ವಿಚಾರ ತಿಳಿಸಿದ್ದಾರೆ. ಆದರೆ ಕಾರಣ ಏನು ಎಂಬುದು ಇನ್ನು ತಿಳಿಸಿಲ್ಲ. ಈ ವಿಚಾರ ತಿಳಿದ ದಿಯಾ ತುಂಬಾ ಬೇಸರವಾಗಿದ್ದು ದಿಯಾ ತಂದೆ ಶ್ರೀಧರ್‌ಗೆ ಒಂದು ಕ್ಷಣ ದಿಗಿಲು ಬಡಿದಂತಾಗಿದೆ. ಆದರೆ ವಿಚಾರ ತಿಳಿದರೆ ಖಂಡಿತಾ ಅವರ ಸಹಾಯಕ್ಕೆ ನಿಲ್ಲುತ್ತಾರೆ. ಈ ಸಮಸ್ಯೆಯನ್ನು ಹೇಳುತ್ತಾರಾ ಇಲ್ಲವಾ ಎಂಬುದೇ ಅನುಮಾನ.

ದಾದಾನಿಗೆ ಕಳ್ಳತನ ವಿಚಾರ ಗೊತ್ತಾದರೆ ಏನು ಕಥೆ?
ದಾದಾ ಮನೆಯ ಹಿರಿ ಮಂದಿ. ಮನೆ ಮಕ್ಕಳೆಲ್ಲಾ ಎಷ್ಟೇ ದೊಡ್ಡ ಮಟ್ಟದ ಸಂಬಳ ತೆಗೆದುಕೊಂಡರು ಹಣಕ್ಕೆ ತುಂಬಾ ಮಹತ್ವ ಕೊಡುತ್ತಾರೆ. ಯಾಕೆಂದರೆ ಅವರ ಕಾಲದಲ್ಲಿ ಒಂದೊಂದು ರೂಪಾಯಿ ಕೂಡಿಸಿದ್ದಕ್ಕಾಗಿಯೇ ಇಂದು ಇಷ್ಟು ದೊಡ್ಡ ಮಟ್ಟದ ಬದುಕು ಬದುಕುತ್ತಿರುವುದು. ಒಂದೊಂದು ರೂಪಾಯಿಯನ್ನು ಲೆಕ್ಕ ಹಾಕಿ ಖರ್ಚು ಮಾಡುವ ದಾದನಿಗೆ 57 ಲಕ್ಷ ಕಟ್ಟಬೇಕು ಎಂಬುದು ಗೊತ್ತಾದರೆ ಸ್ಥಿತಿ ಬೇರೆಯದ್ದೇ ಆಗಿರುತ್ತೆ. ಈಗ ದಾದಾ ಹೆಂಡತಿ ತಲೆ ಸುತ್ತಿ ಬಿದ್ದಿದ್ದಾರೆ. ಆಮೇಲೆ ದಾದನಿಗೆ ಹಾರ್ಟ್ ನಿಂತರು ನಿಲ್ಲಬಹುದು. ಇದನ್ನು ಹೇಳದೆ ಮ್ಯಾನೇಜ್ ಮಾಡುವ ಫ್ಲ್ಯಾನ್ ಶಶಾಂಕ್ ಬಳಿ ಇದ್ದರು ಇರಬಹುದು. ಅಥವಾ ದಾದಾನಿಗೆ ಹಣಕ್ಕಿಂತ ಮನೆಯವರು ಕೂಡ ಮುಖ್ಯವೇ. ಸಮಸ್ಯೆ ದೊಡ್ಡದು ಎಂದು ಗೊತ್ತಾದರೆ ಹಣಕ್ಕಿಂತ ಮೊದಲು ಮನೆಯವರಿಗೆ ಪ್ರಾಮುಖ್ಯತೆ ನೀಡುಬಹುದು. ಇದು ಜೇನುಗೂಡಿನ ಮಹತ್ವ.


Click it and Unblock the Notifications











