ಜೇನುಗೂಡು: ಶಶಾಂಕ್ ಮನೆಯವರಿಗೆ ಆಸರೆಯಾಗುತ್ತಾಳಾ ದಿಯಾ..?
ಮದುವೆಯ ಸಂಭ್ರಮವಿದ್ದ ನಡುಕೋಟೆ ಮನೆಯಲ್ಲೀಗ ಸಮಸ್ಯೆ ಗುಡಾಣವೇ ತೆರೆದುಕೊಂಡಿದೆ. ಅದರಿಂದ ಹೊರಗೆ ಬರಲು ಯಾವ ಮಾರ್ಗವೂ ಕಾಣುತ್ತಿಲ್ಲ. ಮನೆಯವರೆಲ್ಲಾ ಸೇರಿ ತಮಗಾಗಿ ಕೂಡಿಟ್ಟ ಹಣವನ್ನು ಹೊಂದಿಸಿದರೂ, ಅಷ್ಟು ಹಣವನ್ನು ಸೇರಿಸಲು ಆಗುತ್ತಿಲ್ಲ. ಮದುವೆಗಾಗಿ ಎತ್ತಿಟ್ಟುಕೊಂಡಿದ್ದ ಹಣವನ್ನು ಶಶಾಂಕ್ ಸಮಸ್ಯೆ ಬಗೆಹರಿಸುವುದಕ್ಕೆ ಹಾಕಿದ್ದಾನೆ. ಇದಕ್ಕಾಗಿ ತನ್ನ ಮದುವೆಯನ್ನೇ ಕ್ಯಾನ್ಸಲ್ ಮಾಡಿಕೊಂಡಿದ್ದಾನೆ.
ಕುಕ್ಕಿ ಮಾತಿಗೆ ಮುನ್ನ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೋಗುತ್ತಿರುವುದನ್ನು ಕಂಡು ಮನೆಯವರು ಗಾಬರಿಯಾಗಿದ್ದಾರೆ. ಮನೆಯಲ್ಲಿರುವ ಒಡವೆಗಳನ್ನು ಮಾರಿಯಾದರು ಸಮಸ್ಯೆ ಬಗೆಹರಿಸುವುದಕ್ಕೆ ಸಿದ್ಧರಾಗಿದ್ದಾರೆ. ಆದರೆ ಮನೆಯಲ್ಲಿ ಇಂಥ ಪರಿಸ್ಥಿತಿ ಇರುವಾಗ ಸೊಸೆಯನ್ನು ತರುವುದು ಸರಿ ಬರುವುದಿಲ್ಲ ಎಂಬ ಕಾರಣಕ್ಕೆ ಶಶಾಂಕ್ ಮದುವೆ ರದ್ದು ಮಾಡಿಕೊಂಡಿದ್ದಾನೆ. ಈ ವಿಚಾರವನ್ನು ಶಶಾಂಕ್ ತಂದೆ ದಿಯಾ ತಂದೆಗೆ ತಿಳಿಸಿದ್ದಾಗಿದೆ.

ದಿಯಾನನ್ನೇ ತಪ್ಪಿತಸ್ಥಳನ್ನಾಗಿಸಿದ ಶ್ರೀಧರ್
ಶಶಾಂಕ್ ಮನೆಯವರು ಮದುವೆಯನ್ನು ರದ್ದು ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದೆ ತಡ, ಡಾ.ಶ್ರೀಧರ್‌ಗೆ ಸಹಿಸಿಕೊಳ್ಳುವುದಕ್ಕೆ ಆಗಲಿಲ್ಲ. ಇದು ದಿಯಾನೇ ಏನೋ ಮಾಡಿರುವ ಎಡವಟ್ಟಿನಿಂದ ಹೀಗೆ ಆಗಿದೆ ಎಂದೆ ಭಾವಿಸಿದ್ದರು. ಆದರೆ ಅದ್ಯಾವುದೂ ಆಗಿಲ್ಲ. ಇತ್ತ ಶ್ರೀಧರ್ ಹಾಗೂ ಅತ್ತೆಗೂ ತುಂಬಾನೇ ಭಯ ಆಗಿದೆ. ಈಗಾಗಲೇ ಆಮಂತ್ರಣ ಪತ್ರಿಕೆಯನ್ನು ಹಂಚಿಕೆ ಮಾಡಲಾಗಿದೆ. ಆದರೆ ಈಗ ಈ ರೀತಿ ಹೇಳಿದರೆ ಹೇಗೆ ಎಂಬ ಆತಂಕ ಶುರುವಾಗಿದೆ. ಆದರೆ, ಶಶಾಂಕ್ ತಂದೆ ಮನಸ್ಸಲ್ಲಿದ್ದ ಬೇಸರ, ಧ್ವನಿಯಲ್ಲಿದ್ದ ಆತಂಕ ಎರಡರಿಂದಲೂ ಯಾವುದೋ ಸಮಸ್ಯೆ ಅಂತು ಇಲ್ಲಿ ಇದೆ ಎಂಬ ಅನುಮಾನ ಶ್ರೀಧರ್‌ಗೆ ಗೊತ್ತಾಗಿದೆ. ಕೋಪದಲ್ಲಿ ಮಗಳನ್ನು ಬೈದು ಹೊರ ಹಾಕಿದ್ದಾರೆ.

ಮದುವೆ ಕ್ಯಾನ್ಸಲ್ ಆದ ಖುಷಿಯಲ್ಲಿ ದಿಯಾ
ರೋಗಿ ಬಯಸಿದ್ದು ಹಾಲು ಅನ್ನ ವೈದ್ಯರು ಹೇಳಿದ್ದು ಹಾಲು ಅನ್ನ ಎಂಬ ಮಾತೊಂದಿದೆ. ಬಯಸಿದ್ದೆ ಸಿಕ್ಕರೆ ಸ್ವರ್ಗಕ್ಕೆ ಮೂರೇಗೇಣು ಅಂತಾರಲ್ಲ ಆ ರೀತಿ. ಇಲ್ಲಿ ದಿಯಾಗೂ ಶಶಾಂಕ್ ಇಬ್ಬರಿಗೂ ಇಷ್ಟವಿರಲಿಲ್ಲ. ಮನೆಯವರ ಮಾತಿಗಾಗಿ ಇಬ್ಬರು ಒಪ್ಪಿಗೆ ನೀಡಿದ್ದರು. ಆದರೆ ಒಂದಲ್ಲ ಒಂದು ಕಾರಣಕ್ಕೆ ಮದುವೆ ಮುರಿದು ಬಿದ್ದರೆ ಸಾಕು ಎಂದೇ ಬೇಡಿಕೊಳ್ಳುತ್ತಿದ್ದರು. ಇದೀಗ ಕುಕ್ಕಿಗೆ ಸಮಸ್ಯೆ ಬಂದ ಕಾರಣ ಶಶಾಂಕ್‌ಗೆ ಮದುವೆ ಮುರಿದುಕೊಳ್ಳುವುದು ಅನಿವಾರ್ಯವಾಗಿದೆ. ಹೀಗಾಗಿ ಮದುವೆ ರದ್ದು ಪಡಿಸಿಕೊಂಡಿದ್ದಾನೆ. ಈ ವಿಚಾರಕ್ಕೆ ತಂದೆ ಬೈದಿದ್ದಕ್ಕೂ ಕಿಂಚಿತ್ತೂ ಬೇಸರ ಪಟ್ಟುಕೊಳ್ಳದೆ ದಿಯಾ ಫುಲ್ ಹ್ಯಾಪಿಯಾಗಿದ್ದಾಳೆ. ಶಶಾಂಕ್‌ಗೆ ಕರೆ ಮಾಡಿ ಲವ್ ಯೂ ಹೇಳಿದ್ದಾಳೆ. ಈ ಮುಗ್ಧತೆ ಕಂಡು ಶಶಾಂಕ್ ಶಾಕ್ ಆಗಿದ್ದಾನೆ.

ಜಗಳದ ಮಧ್ಯೆ ಪ್ರೀತಿಯನ್ನೇ ಮರೆತು ದಿಯಾ-ಶಶಾಂಕ್
ಇತ್ತೀಚೆಗೆ ಈ ಇಬ್ಬರ ನಡುವೆ ಆಗಾಗ ಕಣ್ಣು ಕಣ್ಣು ಕಲೆತಾಗ ಎಂಬ ಸೀನ್‌ಗಳು ಕಾಣ ಸಿಗುತ್ತಿದ್ದವು. ಮನೆಯವರ ಒತ್ತಾಯಕ್ಕೆ ಒಪ್ಪಿಗೆ ಸಿಕ್ಕಿದ್ದರು ಸಹ ಇತ್ತೀಚೆಗೆ ದಿಯಾ ಮತ್ತು ಶಶಾಂಕ್ ನಡುವೆ ಪ್ರೀತಿಯಂತು ಚಿಗುರಿತ್ತು. ಶಶಾಂಕ್‌ನನ್ನು ನೋಡಬೇಕು ಅಂತ ದಿಯಾಗೂ ಆಗಾಗ ಅನ್ನಿಸುತ್ತಿತ್ತು. ಅಷ್ಟೇ ಅಲ್ಲ ದಿಯಾಗೆ ಹುಷಾರಿಲ್ಲ ಎಂದು ಗೊತ್ತಾದ ಕೂಡಲೇ ಮನಸ್ಸು ಚಡಪಡಿಸುತ್ತಿತ್ತು. ಆದರೆ ಇಬ್ಬರ ನಡುವಿನ ಜಗಳ ಇದೀಗ ಚಿಗುರುತ್ತಿದ್ದ ಪ್ರೀತಿಯನ್ನೇ ಚಿವುಟಲೂ ಹೊರಟಿದ್ದಾರೆ. ದಿಯಾಗೆ ಆ ಫೀಲ್ ಅರ್ಥವೇ ಆಗಿಲ್ಲ. ಶಶಾಂಕ್ ಮದುವೆ ಕ್ಯಾನ್ಸಲ್ ಮಾಡಿಕೊಂಡ ಕೂಡಲೇ ತುಂಬಾ ಖುಷಿಯಾಗಿದ್ದಾಳೆ.

ಕುಕ್ಕಿ ಸಮಸ್ಯೆಗೆ ದಿಯಾ ಬಳಿ ಇದೆಯಾ ಉಪಾಯ..?
ಮದುವೆಯನ್ನೇನೋ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ. ಆದರೆ ಅದಕ್ಕೆ ನಿಜವಾದ ಕಾರಣ ತಿಳಿದುಕೊಳ್ಳದೆ ಹೋದರೆ ಡಾಕ್ಟರ್ ಮನಸ್ಸು ತಡೆಯುವುದಕ್ಕೂ ಆಗಲ್ಲ. ಅದರ ಜೊತೆಗೆ ಈ ಅಪವಾದ ದಿಯಾ ಮೇಲೆ ಬಂದಿದೆ. ಮುಂದೆ ಬೀಗರು ಆಗುವವರು ಹೀಗೆ ಇದ್ದಕ್ಕಿದ್ದ ಹಾಗೇ ಮದುವೆ ಬೇಡ ಎಂದರೆ ಹೇಗೆ ಎಂಬ ಆತಂಕದಿಂದ ಡಾ.ಶ್ರೀಧರ್ ಮಗಳನ್ನು ಕರೆದುಕೊಂಡು ನಡುಕೋಟೆ ಮನೆಗೆ ಬಂದಿದ್ದಾರೆ. ಅಲ್ಲಿ ಮನೆ ಮಂದಿಯೆಲ್ಲಾ ಗಾಬರಿಯಾಗಿದ್ದಾರೆ. ದಿಯಾ ಈ ಸಮಸ್ಯೆ ತಿಳಿದುಕೊಳ್ಳಲು ಯತ್ನಿಸಿದ್ದಾಳೆ. ಆಗ ಶಶಾಂಕ್ ಬಳಿ ಖಾಸಗಿಯಾಗಿ ಮಾತನಾಡಿ, ಕುಕ್ಕಿಯ ಸಮಸ್ಯೆ ತಿಳಿದುಕೊಂಡಿದ್ದಾಳೆ. ಒಂದಲ್ಲ ಎರಡಲ್ಲ 57 ಲಕ್ಷದ ಸಮಸ್ಯೆ ಗೊತ್ತಾಗಿದೆ. ದಿಯಾಗೆ ಶಶಾಂಕ್ ಇಷ್ಟವಿಲ್ಲದೆ ಇರಬಹುದು, ಆದರೆ ಕುಕ್ಕಿ ಸೇರಿದಂತೆ ಮನೆಯವರೆಂದರೆ ಅಚ್ಚುಮೆಚ್ಚು. ಹೀಗಾಗಿ ಕುಕ್ಕಿಯ ಸಮಸ್ಯೆಗೆ ಅವರ ತಂದೆಯಿಂದ ಪರಿಹಾರ ಕೊಡಿಸಲು ಯೋಜನೆ ಹಾಕುತ್ತಿದ್ದಾಳೆ.


Click it and Unblock the Notifications











