ಜೇನುಗೂಡು: ದಿಯಾ ತನ್ನ ಬಾಯ್ ಫ್ರೆಂಡ್ ಜೊತೆ ಟ್ರಿಪ್ ಹೋಗಲು ಒಪ್ಪುತ್ತಾನಾ ಶಶಾಂಕ್?
ನಡುಕೋಟೆ ಮನೆಗೆ ಕವಿದಿದ್ದ ಕತ್ತಲು ಸರಿದು ಮತ್ತೆ ಬೆಳಕು ಚೆಲ್ಲಿದೆ. ನಗುವಿನ ಸರದಾರ ಕುಕ್ಕಿಯ ಎಲ್ಲಾ ಸಮಸ್ಯೆ ಪರಿಹಾರವಾಗಿದೆ. ತಾನೊಬ್ಬ ಕಳ್ಳ ಅಲ್ಲ ಎಂಬುದು ಬಹಳ ಬೇಗ ಪ್ರೂವ್ ಆಗಿದೆ. ಇದೇ ಖುಷಿಯಲ್ಲಿ ನಡುಕೋಟೆ ಕುಟುಂಬ ಕುಣಿದು ಕುಪ್ಪಳಿಸಿದೆ. ಇದಕ್ಕೆಲ್ಲಾ ಕಾರಣ ಒನ್ ಅಂಡ್ ಓನ್ಲಿ ದಿಯಾ. ಮನೆಯವರಿಗೆ ಸೊಸೆ ಮೇಲೆ ಮತ್ತಷ್ಟು ಪ್ರೀತಿ ಮೂಡಿದೆ. ಸೊಸೆಗೆ ಧನ್ಯವಾದವನ್ನೂ ತಿಳಿಸಿದ್ದಾರೆ. ಇಷ್ಟೆಲ್ಲಾ ಆದರೂ ದಿಯಾ ಶಶಾಂಕ್ ನಡುವಿನ ಕೋಳಿ ಜಗಳ ಮಾತ್ರ ನಿಲ್ಲಲ್ಲ.
'ಜೇನುಗೂಡು' ಧಾರಾವಾಹಿ ಕೇವಲ ಧಾರಾವಾಹಿಯಾಗಿ ಉಳಿದಿಲ್ಲ. ಇದೊಂದು ಸಾಮಾಜಿಕ ಸಂದೇಶ, ಸಂಬಂಧಗಳ ಬೆಲೆ, ಜೀವನದ ಮೌಲ್ಯ, ಹಿರಿಯರು, ಕಿರಿಯರು, ಕೂಡು ಕುಟುಂಬ ಹೀಗೆ ಅನೇಕ ವಿಚಾರಗಳನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತಿದೆ. ಜಗತ್ತು ಅದೆಷ್ಟು ಸ್ವಾರ್ಥದಿಂದ ಕೂಡಿದೆ. ಪ್ರತಿಯೊಬ್ಬರಿಗೂ ತಮ್ಮವರು ಯಾರು, ಕಷ್ಟ ಕಾಲದಲ್ಲಿ ನಿಲ್ಲುವವರು ಯಾರು, ಸಂಬಂಧಿಕರ ಪ್ರೀತಿ ಎಂಥದ್ದು, ಒಡ ಹುಟ್ಟಿದವರ ಬೆಂಬಲ ಎಲ್ಲಿಯ ತನಕ ಇದೆಲ್ಲವೂ ಅರ್ಥವಾಗಿರುತ್ತದೆ. ಆದರೆ ಇದೆಲ್ಲವನ್ನೂ ಮೀರಿ, ಕುಟುಂಬ, ಸ್ನೇಹ ಅಂದರೆ ಹೇಗೆ ಇರಬೇಕು ಎಂದು ತೋರಿಸುತ್ತಿರುವ ಧಾರಾವಾಹಿ 'ಜೇನುಗೂಡು'.

ಕೂಡು ಕುಟುಂಬದಿಂದ ಎಷ್ಟೆಲ್ಲಾ ಉಪಯೋಗ?
ತುಂಬು ಕುಟುಂಬದಲ್ಲಿ ವಾಸಿಸುವ ಕಾಲ ಕಳೆದು ಹೋಗಿ ಬಹಳ ವರ್ಷಗಳೆ ಕಳೆದು ಹೋಯಿತು. ಈಗ ಏನಿದ್ದರು, ನಾವಿಬ್ಬರು ನಮಗಿಬ್ಬರಿ ಎಂಬ ಜೀವನಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ಸ್ವಾತಂತ್ರ್ಯ, ಎಂಜಾಯ್‌ಮೆಂಟ್ ಅಂತೆಲ್ಲಾ ಯೋಚನೆ ಮಾಡಿ ಕುಟುಂಬಸ್ಥರ ಜೊತೆಗಿನ ಖುಷಿಯನ್ನೇ ಮರೆತು ಬದುಕುತ್ತಿದ್ದಾರೆ. ಎಲ್ಲರೂ ಒಟ್ಟಿಗೆ ಇದ್ದಾಗ ಒಬ್ಬರಿಗೆ ಸಮಸ್ಯೆ ಬಂದರು ಆ ಸಮಸ್ಯೆ ಮನೆಯ ಎಲ್ಲಾ ಮಂದಿಯದ್ದು ಅಂತ ಧಾರಾವಾಹಿಯಲ್ಲಿ ತೋರಿಸಲಾಗಿದೆ. ನಿಜ ಜೀವನದಲ್ಲಿ ಸ್ವಂತದವರು ಆಗುವುದಿಲ್ಲ. ಇನ್ನು ಈ ರೀತಿಯ ಕಷ್ಟಕ್ಕೆ ಹೆಗಲು ಕೊಡಲು ಸಾಧ್ಯವಾ ಎಂಬ ಪ್ರಶ್ನೆ ಮೂಡದೆ ಇರುವುದಿಲ್ಲ. ಈ ಹಿಂದೆ ಅಜ್ಜ ಅಜ್ಜಿಯರ ಕಾಲದಲ್ಲಿ ಇದೇ ರೀತಿಯ ಒಗ್ಗಟ್ಟು ಇತ್ತು. ಎಲ್ಲರೂ ದುಡಿಮೆ, ಸ್ವಂತ ಜೀವನ ಎನ್ನುತ್ತಾ ಸಂಬಂಧಗಳಿಂದ ದೂರವಾಗಿ, ಸಂಬಂಧದ ಮೌಲ್ಯಗಳ ಜೊತೆಗೆ ಸಹಾಯದ ಮನೋಭಾವವು ದೂರಾಗಿ ಬಿಟ್ಟಿದೆ. ನಾವೂ ನಮ್ಮ ಜೀವನ ಎಂಬ ಸ್ವಾರ್ಥದ ಜನರ ಜೀವನದ ನಡುವೆ ಸಂಬಂಧಗಳಿಗೆ ಬೆಲೆ ಕೊಟ್ಟಾಗ ಆಗುವ ಲಾಭದ ಬಗ್ಗೆ 'ಜೇನುಗೂಡು' ಅತ್ಯದ್ಭುತವಾಗಿ ತೋರಿಸಿದ್ದಾರೆ.

ದಿಯಾ ಬಾಯ್ ಫ್ರೆಂಡ್ ಬಗ್ಗೆ ಶಶಾಂಕ್‌ಗೆ ಹೊಟ್ಟೆಕಿಚ್ಚು
ದಿಯಾಳ ಸಹಾಯಕ್ಕೆ ಶಶಾಂಕ್ ಕರಗಿ ಹೋಗಿದ್ದಾನೆ. ದಿಯಾಳನ್ನು ತನ್ನ ರೂಮಿಗೆ ಕರೆಸಿ ಥ್ಯಾಂಕ್ಸ್ ಹೇಳಿದ್ದಾನೆ. ಆದರೆ ದಿಯಾ ಧನ್ಯವಾದಕ್ಕಿಂತ ಬೇರೆ ಸಹಾಯ ಬಯಸಿದ್ದಾಳೆ. ಅದು ಅಂತಿಂಥ ಸಹಾಯ ಅಲ್ಲ. ಮದುವೆಯಾಗುವ ಹುಡುಗನ ಬಳಿಯೇ ತನ್ನ ಬಾಯ್ ಫ್ರೆಂಡ್ ಬಗ್ಗೆ ಹೇಳುತ್ತಿದ್ದಾಳೆ. ಇದು ಶಶಾಂಕ್‌ಗೆ ಒಂದು ಕಡೆ ಹೊಟ್ಟೆ ಕಿಚ್ಚು ತರಿಸಿದೆ. ನನ್ನ ಬಾಯ್ ಫ್ರೆಂಡ್ ಜೊತೆ ಟ್ರಿಪ್ ಹೋಗುವುದಕ್ಕೆ ಅಪ್ಪನ ಹತ್ತಿರ ಅನುಮತಿ ಕೊಡಿಸು ಎಂದು ಕೇಳಿದ್ದೆ ತಡ ಶಶಾಂಕ್ ಶಾಕ್ ಆಗಿದ್ದಾನೆ. ಅಷ್ಟೇ ಅಲ್ಲ ನೀನು ನನ್ನ ಫ್ಯೂಚರ್ ಹೆಂಡತಿಯಾಗುವವಳು ಅಂತ ತನ್ನಲ್ಲಿ ಮೂಡಿರುವ ಹೊಟ್ಟೆಕಿಚ್ಚನ್ನು ಹೊರಹಾಕಿದ್ದಾನೆ.

ದಿಯಾಳಿಂದ ಪ್ರೀತಿ ಬಯಸುತ್ತಿದ್ದಾನಾ ಶಶಾಂಕ್?
ಮದುವೆ ನಿಂತು ಹೋಯಿತಲ್ಲ ಎಂಬ ಖುಷಿ ದಿಯಾ ಮತ್ತು ಶಶಾಂಕ್ ಇಬ್ಬರಲ್ಲೂ ಇತ್ತು. ಈ ಖುಷಿಗೆ ದಿಯಾ ತನ್ನೆಲ್ಲಾ ಫ್ರೆಂಡ್ಸ್ ಜೊತೆ ಹಿಲ್ ಸ್ಟೇಷನ್ ಕಡೆ ಟ್ರಿಪ್ ಹೋಗಲು ಫ್ಲ್ಯಾನ್ ಮಾಡಿದ್ದಾಳೆ. ಅದರಲ್ಲಿ ಆಕೆಯ ಬಾಯ್ ಫ್ರೆಂಡ್ ಕ್ರಿಶ್ ಕೂಡ ಇದ್ದಾನೆ. ನಾನು, ನನ್ನ ಫ್ರೆಂಡ್ಸ್, ನನ್ನ ಬಾಯ್‌ಫ್ರೆಂಡ್ ಕ್ರಿಶ್ ಟ್ರಿಪ್ ಹೋಗಬೇಕು ಎಂದಾಗ ಶಶಾಂಕ್ ಅಕ್ಷರಶಃ ಬೇಸರ ಮಾಡಿಕೊಂಡಿದ್ದಾನೆ. ಹೌದು, ನಿನ್ನ ಮನಸ್ಸಲ್ಲಿ ನಿಮ್ಮ ಪಪ್ಪಾ, ಅತ್ತೆ, ಫ್ರೆಂಡ್ಸ್, ಬಾಯ್‌ಫ್ರೆಂಡ್‌ಗೆ ಸ್ಥಾನ ಇದೆ. ಆದರೆ ನನಗೆ ಯಾವ ಸ್ಥಾನವೂ ಇಲ್ಲ ಅಲ್ವಾ ಅಂತ ಬೇಸರ ಮಾಡಿಕೊಂಡಿದ್ದಾನೆ. ಆದರೆ ಇದು ಕ್ಷಣ ಮಾತ್ರ. ಬಳಿಕ ಇಬ್ಬರು ಮತ್ತೆ ಕಿತ್ತಾಡಲು ಶುರು ಮಾಡಿದ್ದಾರೆ. ಈ ಕಿತ್ತಾಟವೇ ಇಬ್ಬರ ಪ್ರೀತಿಯನ್ನು ಮರೆಮಾಚುತ್ತಿದೆ.
ಬಾಯ್‌ಫ್ರೆಂಡ್ ಜೊತೆ ದಿಯಾ ಟ್ರಿಪ್
ಅಂತು ಇಂತು ಎಲ್ಲಾ ಸಮಸ್ಯೆಗಳು ಬಗೆಹರಿದಿದೆ. ನಡುಕೋಟೆ ಮನೆಯಲ್ಲಿ ಸಂತಸ ಮನೆ ಮಾಡಿದೆ. ಕಷ್ಟ ಕಾಲದಲ್ಲಿ ಡಾಕ್ಟರ್ ಕೊಟ್ಟ ಹಣವನ್ನು ಅಷ್ಟೇ ಸಲೀಸಾಗಿ ವಾಪಾಸ್ಸು ಮಾಡಿದ್ದಾರೆ. ಆದರೆ, ದಿಯಾಳ ಮನವಿ ಇನ್ನು ಪೂರೈಸಿಲ್ಲ. ದಿಯಾ ಮನೆಯ ಮುಂದೆಲ್ಲ ಶಶಾಂಕ್‌ನನ್ನು ಕಾಡಿಸುತ್ತಿದ್ದಾಳೆ. ಟ್ರಿಪ್ ಹೋಗಲು ಒಪ್ಪಿಸು ಅಂತ. ಆದರೆ ಇದು ದಿಯಾಗೆ ಉಲ್ಟಾ ಕೂಡ ಆಗುವ ಸಾಧ್ಯತೆ ಇದೆ. ಶಶಾಂಕ್ ಧೈರ್ಯವಾಗಿ ಹೇಳಿಯೇ ಬಿಟ್ಟಿದ್ದಾನೆ. ದಿಯಾ ಆಕಿ ಬಾಯ್‌ಫ್ರೆಂಡ್ ಜೋಡಿ ಟ್ರಿಪ್ ಹೋಗಬೇಕಂತೆ ಅಂತ. ಮದುವೆಯಾಗುತ್ತಿರುವ ಹುಡುಗಿ. ಬಾಯ್ ಫ್ರೆಂಡ್ ಕ್ರಿಶ್ ಜೊತೆ ಟ್ರಿಪ್ ಹೋಗುವ ಕನಸು ಉಲ್ಟಾ ಹೊಡೆದು ಮನೆ ಮಂದಿಯೆಲ್ಲಾ ಶಶಾಂಕ್‌ನನ್ನೇ ಬಾಯ್‌ಫ್ರೆಂಡ್ ರೀತಿ ಮಾಡಿ ಟ್ರಿಪ್‌ಗೆ ಕಳುಹಿಸುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿವೆ.


Click it and Unblock the Notifications











