Jenugudu Serial: ಮಾಯಾ ಎಂಟ್ರಿಯಿಂದ ತಿರುವು ಪಡೆಯುತ್ತಾ ದಿಯಾ-ಶಶಾಂಕ್ ಮ್ಯಾರೇಜ್ ಸ್ಟೋರಿ?
'ಜೇನುಗೂಡು' ಧಾರಾವಾಹಿ ನೋಡುವಾಗ ಅದರಲ್ಲೂ ಡಾಕ್ಟರ್ ಫ್ಯಾಮಿಲಿ ಕಂಡಾಗ ನೋಡುಗರಿಗೆ ಒಂದು ಅನುಮಾನವಂತು ಮೂಡಿತ್ತು. ಸಾರಿಕಾ ಯಾಕೆ ಅಣ್ಣನ ಮನೆಯಲ್ಲಿದ್ದಾಳೆ. ದಿಯಾ ಮಮ್ಮಿ ಎಲ್ಲಿ? ಎಂಬಿತ್ಯಾದಿ ಪ್ರಶ್ನೆಗಳು ಸಹಜವಾಗಿಯೇ ತಲೆಗೆ ಎಂಟ್ರಿ ಕೊಟ್ಟಿದ್ದವು. ಓಕೆ ಏನೋ ಇರುತ್ತೆ ಬಿಡು ಅಂತ ಅಲ್ಲಿಗೆ ಫುಲ್ ಸ್ಟಾಪ್ ಇಟ್ಟು ಮುಂದಿನ ಎಪಿಸೋಡ್ ನೋಡುತ್ತಾ ಕುಳಿತಿದ್ದಾಗಿತ್ತು. ಆದರೆ ಆ ಎಲ್ಲಾ ಪ್ರಶ್ನೆಗಳಿಗೆ ಈಗ ಟ್ವಿಸ್ಟ್ ಸಿಕ್ಕಿದೆ. ಮುಂದೇನು ಎಂಬ ಕುತೂಹಲ ಮನೆ ಮಾಡಿದೆ.
Recommended Video

ಸಾರಿಕಾಗೆ ಮಗಳು ಇದ್ದಾಳೆ ಅನ್ನೋದು ಇತ್ತೀಚೆಗಷ್ಟೇ ತಿಳಿದಿದೆ. ಅದು ಶಶಾಂಕ್ ಸನ್ಮಾನದ ಕಾರ್ಯಕ್ರಮದಲ್ಲಿ ಮಗಳನ್ನು ನೋಡಿದ ಸಾರಿಕಾಗೆ ಇನ್ನಿಲ್ಲದ ಪ್ರೀತಿ, ಆನಂದ. ಆದರೆ ಮಾಯಾಗೆ ಇದ್ಯಾವುದು ಬೇಡವಾಗಿತ್ತು. ಹೆತ್ತ ತಾಯಿ ಎಂಬುದನ್ನು ನೋಡದೆ ಮನಸ್ಸಿಗೆ ಘಾಸಿ ಮಾಡಿ ದೂರ ಸರಿದೇ ಬಿಟ್ಟಳು. ಅಕ್ಷರಶಃ ಇಡೀ ಯೂನಿವರ್ಸಿಟಿ ಆವರಣ ಸಾರಿಕಾಳ ದುಃಖಕ್ಕೆ ಸಾಕ್ಷಿಯಾಗಿತ್ತು. ಅತ್ತೆಯನ್ನು ಸಮಾಧಾನ ಮಾಡಲಾಗದೆ ದಿಯಾ ಕಣ್ಣೀರು ಹಾಕುತ್ತಿದ್ದಳು.

ಮಾಯಾ ಎಂಟ್ರಿಯಿಂದ ಏನೆಲ್ಲಾ ಆಗುತ್ತೆ?
ಮೊದಲೇ ಹೇಳಿದಂತೆ ಸಾರಿಕಾಳ ಒಂಟಿತನದ ಬಗ್ಗೆ ಪ್ರಶ್ನೆಗಳು ಕಾಡುತ್ತಿದ್ದವು. 'ಜೇನುಗೂಡು' ಧಾರಾವಾಹಿ ಶುರುವಾದಾಗಿನಿಂದ ಬೋರ್ ಹೊಡೆಸದೆ ಸಾಗುತ್ತಲೇ ಇದೆ. ಸ್ಟೋರಿಯನ್ನು ಅದ್ಭುತವಾಗಿ ತೆಗೆದುಕೊಂಡು ಹೋಗಲಾಗುತ್ತಿದೆ. ಕೆಲವೊಂದು ಧಾರಾವಾಹಿಗಳಲ್ಲಿ ಮೊದಲಿಗೆ ಒಂದಷ್ಟು ಎಪಿಸೋಡ್ ಸಾಗುವ ರೀತಿ ಮೊದಲೇ ಬರೆದಿಡಲಾಗಿರುತ್ತೆ. ಮೆಗಾ ಧಾರಾವಾಹಿ ಆಗಿರುವ ಕಾರಣ ಒಮ್ಮೊಮ್ಮೆ ವೀಕ್ಷಕರು ಬಯಸಿದಂತೆಯೂ ಕಥೆಯಲ್ಲಿ ಬದಲಾವಣೆಗಳಾಗುತ್ತವೆ. ಪಾತ್ರಗಳು ಸೇರಿಕೊಳ್ಳುತ್ತಾ ಹೋಗುತ್ತದೆ. ಆದರೆ 'ಜೇನುಗೂಡು' ಧಾರಾವಾಹಿಯಲ್ಲಿ ಮೊದಲೇ ಬಯಸಿದ ಪಾತ್ರಗಳು ಈಗ ತೆರೆ ಮೇಲೆ ಕಾಣಿಸಲು ಶುರು ಮಾಡಿವೆ. ಅದು ಸರಿಯಾದ ಸಮಯಕ್ಕೆ ಮಾಯಾ ಎಂಟ್ರಿಯಾಗಿದೆ. ಪ್ರೇಕ್ಷಕರ ಮನಸ್ಸಲ್ಲಿ ಮೊದಲೇ ಹುಟ್ಟಿದ್ದ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಆದರೂ ಮುಂದೆ ಬೇರೆನೋ ಆಗುತ್ತೆ ಅನ್ನೋ ಕುತೂಹಲ ಮತ್ತಷ್ಟು ಹೆಚ್ಚಿಸಿದೆ.

ದಿಯಾಳ ಮುಗ್ಧತೆ ಕಂಡು ಸೋತ ಶಶಾಂಕ್
ದಿಯಾ ಅಮ್ಮನನ್ನು ನೋಡಿರದ ಮಗು. ಅತ್ತೆಯಿಂದಲೇ ಅಮ್ಮನ ಪ್ರೀತಿ ಕಂಡು ತೃಪ್ತಿ ಪಡುತ್ತಿರುವ ಮಗು. ಅತ್ತೆಗೆ ನೋವಾದರೆ ಕೊಂಚವೂ ಸಹಿಸುವುದಿಲ್ಲ. ಸಾರಿಕಾಳ ಮಗಳು ಮಾಯಾ, ಶಶಾಂಕ್ ಸನ್ಮಾನ ಕಾರ್ಯಕ್ರಮದಲ್ಲಿ ಪ್ರತ್ಯಕ್ಷ ಆಗಿದ್ದೆ ತಡ, ಹೆತ್ತ ಕರುಳಿಗೆ ತಡೆದುಕೊಳ್ಳಲು ಆಗದಂತಹ ನೋವು, ಹೇಗಾದರೂ ಮಾಡಿ ಮಗಳನ್ನು ಮಾತನಾಡಿಸಲು ಹೋದಾಗ ಹೆತ್ತ ತಾಯಿ ಅಂತಾನು ನೋಡದೆ ಅವಮಾನ ಮಾಡಿದಳು. ದಿಯಾಳ ಮುಗ್ಧತೆಗೂ ಕ್ಯಾರೆ ಎನ್ನದೆ ವರ್ತಿಸಿ ಮುಂದೆ ಸಾಗಿದಳು. ಈ ನೋವಿಗೆ ಸಾರಿಕಾ ಮನಸ್ಸು ಹೊಡೆದು ಅಳುವುದೊಂದೆ ಕಾಯಕ ಮಾಡಿಕೊಂಡಳು. ಅತ್ತೆ ಅಳುತ್ತಾ ಕುಳಿತಾಗ ದಿಯಾ ಮಾಡಿದ ಸಮಾಧಾನದಿಂದಲೇ ಗೊತ್ತಾಗುತ್ತಿತ್ತು. ಹೊರಗಡೆ ಎಷ್ಟೆ ಜಗಳಗಂಟಿಯಾಗಿದ್ದರು, ಮನೆಯವರ ವಿಚಾರದಲ್ಲಿ ಅದೆಷ್ಟು ಮುಗ್ಧಳು ಎಂಬುದು. ಅತ್ತೆ ಪ್ಲೀಸ್ ನೀವು ಅಳಬೇಡಿ. ನೀವೂ ನಗಬೇಕು ಅಂದರೆ ನಾನು ಏನು ಮಾಡಬೇಕು ಅಂತ ಹೇಳಿ ಅದನ್ನು ನಾನು ಮಾಡುತ್ತೇನೆ ಎಂದು ಗೋಗರೆಯುತ್ತಿದ್ದಳು. ಇದು ಶಶಾಂಕ್ ಕಣ್ಣಿಗೂ ಬಿದ್ದಿದೆ. ಮನೆಗೆ ಬಂದ ಮೇಲೂ ಆಕೆಯ ಮುಗ್ಧತೆಯನ್ನು ನೆನೆದು ಆಕೆಯನ್ನು ಅರ್ಥ ಮಾಡಿಕೊಳ್ಳಲು ಯತ್ನಿಸುತ್ತಿದ್ದಾನೆ.

ಮಾಯಾ ಹೇಳಿದ ಮಾತಿನಿಂದ ಶಶಾಂಕ್ ಬದಲಾಗುತ್ತಾನಾ?
ದಿಯಾ ಅದೆಷ್ಟು ಮುಗ್ಧಳು ಎಂಬುದು ವೀಕ್ಷಕರಿಗೂ ಗೊತ್ತಾಗಿದೆ. ಆಕೆಗೆ ಅತ್ತೆ ಅಳುವುದನ್ನು ನಿಲ್ಲಿಸಬೇಕು. ಮಾಯಾ ಬಂದು ಅತ್ತೆಯ ಬಳಿ ಕ್ಷಮೆ ಕೇಳಿ, ಅತ್ತೆ ಮೂಡನ್ನು ಸರಿ ಮಾಡಬೇಕು. ಇದು ಆಗುವುದು ಶಶಾಂಕ್‌ನಿಂದ ಎಂಬುದು ದಿಯಾಗೂ ಗೊತ್ತಾಗಿದೆ. ಹೀಗಾಗಿ ಶಶಾಂಕ್‌ಗೆ ಕರೆ ಮಾಡಿ ಮಾಯಾಳ ಬಳಿ ಕ್ಷಮೆ ಕೇಳಲು ಹೇಳಿದ್ದಾಳೆ. ದಿಯಾಗೆ ಬೇಸರ ಮಾಡುವುದು ಬೇಡ ಅಂತ ಮಾಯಾಳ ಬಳಿ ಶಶಾಂಕ್ ಮಾತನಾಡಲು ಹೋದಾಗ ದಿಯಾ ಮತ್ತು ಶಶಾಂಕ್ ನಡುವೆ ಲಗ್ನದ ಮಾತುಕತೆ ನಡೆದಿರುವುದು ಗೊತ್ತಾಗಿ ಶಾಕ್ ಆಗಿದೆ. ಆಗ ದಿಯಾ ಸರಿಯಿಲ್ಲ, ನಿಮಗೆ ಮ್ಯಾಚ್ ಆಗಲ್ಲ, ಇನ್ನು ಮದುವೆ ಆಗಿಲ್ಲ, ಸ್ವಲ್ಪ ಯೋಚನೆ ಮಾಡಿ ಅಂತ ಹುಳ ಬಿಟ್ಟು ಹೋಗಿದ್ದಾಳೆ.

ಶಶಾಂಕ್ ಮಾಯಾ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾನಾ..?
ಶಶಾಂಕ್ ಎಲ್ಲರೂ ಮೆಚ್ಚುವಂತಹ ಸೈಂಟಿಸ್ಟ್.. ಮಾಯಾ, ಶಶಾಂಕ್‌ಗೆ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಾಳೆ. ಈ ಮಧ್ಯೆ ಶಶಾಂಕ್ ಮೇಲೆ ಮಾಯಾಗೂ ಪ್ರೀತಿ ಚಿಗುರಿದೆ. ಆದರೆ ಏನಾದರೂ ಸಾಧಿಸಿ ತನ್ನ ಪ್ರೀತಿಯನ್ನು ಹೇಳಿಕೊಳ್ಳಬೇಕು ಎಂದುಕೊಂಡಿದ್ದ ಮಾಯಾಗೆ ಒಮ್ಮೆಲೆ ಶಾಕ್ ಆಗಿದೆ. ಶಶಾಂಕ್ ತನ್ನ ಮಾವನ ಮಗಳನ್ನೇ ಮದುವೆಯಾಗುತ್ತಿರುವ ವಿಚಾರ ಗೊತ್ತಾಗಿದೆ. ಆದರೆ, ಸಮಯ ಮೀರಿ ಹೋಗಿದೆ. ಮೊದಲೇ ಪ್ರೀತಿಯನ್ನು ಹೇಳಿಕೊಳ್ಳಬೇಕಿತ್ತು ಎಂದು ಮನಸ್ಸಲ್ಲೇ ಶಪಿಸುತ್ತಿದ್ದಾಳೆ. ಒಂದು ವೇಳೆ ಶಶಾಂಕ್‌ಗೆ ಎಲ್ಲಾ ಸತ್ಯ ಗೊತ್ತಾದರೆ ಹೇಗೆ ರಿಯಾಕ್ಟ್ ಮಾಡುತ್ತಾನೆ? ಮಾಯಾ ನಿಜವಾಗಲೂ ಪ್ರೀತಿ ಹೇಳಿಕೊಂಡರೆ ಕಥೆ ಎತ್ತ ಸಾಗುತ್ತೆ ಅನ್ನೋ ಪ್ರಶ್ನೆಯಂತು ಹುಟ್ಟುಹಾಕಿದೆ.


Click it and Unblock the Notifications











