Katheyondu Shuruvagide: 200 ಸಂಚಿಕೆಗಳ ಸಂಭ್ರಮದಲ್ಲಿ ಕಥೆಯೊಂದು ಶುರುವಾಗಿದೆ.. ಕೃತಿ - ಯುವ ಪ್ರೀತಿಯ ಅಂಬಾರಿ

By ಎಸ್ ಸುಮಂತ್

ಸ್ಟಾರ್ ಸುವರ್ಣದಲ್ಲಿ 'ಕಥೆಯೊಂದು ಶುರುವಾಗಿದೆ' ಧಾರಾವಾಹಿ ಶುರುವಾದಾಗಿನಿಂದ ಎಲ್ಲರ ಸೆಳೆಯುತ್ತಿದೆ. ಒಂದು ರೀತಿಯ ವಿಭಿನ್ನ ಕಥೆ ಇದಾಗಿದೆ. ಸದ್ಯ 200 ಸಂಚಿಕೆಗಳನ್ನು ದಾಟಿದೆ. ಬಹದ್ದೂರ್ ಫ್ಯಾಮಿಲಿ ಹಾಗೂ ಪಂಡಿತ್ ಫ್ಯಾಮಿಲಿಯ ಖುಷಿ, ದುಃಖ ಎಲ್ಲವೂ ಧಾರಾವಾಹಿಯಲ್ಲಿ ಅನಾವರಣವಾಗಿದೆ.

ಒಂದು ಧಾರಾವಾಹಿ 200 ಸಂಖ್ಯೆಗಳನ್ನು ಪೂರೈಸುವುದು ಸುಲಭವಲ್ಲ. ಇತ್ತಿಚಿನ ದಿನಗಳಲ್ಲಿ ಮೆಗಾ ಧಾರಾವಾಹಿಗಳೇ ಹೆಚ್ಚಾಗಿದೆ. ಹೀಗಾಗಿ ಹೆಚ್ಚಿನ ದಿನಗಳ ಕಾಲ ಕಥೆ ಓಡುತ್ತದೆ. ಮೊದಲೇ ಪ್ಲ್ಯಾನ್ ಕೂಡ ಮಾಡಿಕೊಳ್ಳಲಾಗುತ್ತದೆ. ಅದರಲ್ಲೂ ಇತ್ತಿಚೆಗೆ ವರ್ಷಾನುಗಟ್ಟಲೆ ಧಾರಾವಾಹಿಗಳು ಓಡುತ್ತವೆ. ಅದರ ಸಾಲಿಗೆ ಈಗ ಕಥೆಯೊಂದು ಶುರುವಾಗಿದೆ ಧಾರಾವಾಹಿ ಸೇರುವ ಲಕ್ಷಣಗಳು ಕಾಣುತ್ತಿವೆ. ಈಗ ಸುಮಾರು 200 ಸಂಚಿಕೆಗಳನ್ನು ಪೂರೈಸಿದೆ.

Katheyondu Shuruvagide, 200 Episode

ಯುವ ಜಾಗಕ್ಕೆ ಬಂದ ಚಂದನ್

'ಕಥೆಯೊಂದು ಶುರುವಾಗಿದೆ' ಕೋರಮಂಗಲ ಅನಿಲ್ ನಿರ್ದೇಶನದಲ್ಲಿ ನಡೆಯುತ್ತಿದೆ. ಧಾರಾವಾಹಿ ಶುರುವಾದಾಗ ಯುವನ ಪಾತ್ರದಲ್ಲಿ ಬೇರೊಬ್ಬರು ಮಾಡುತ್ತಿದ್ದರು. ಬಳಿಕ ವೀಕ್ಷಕರ ಒತ್ತಾಯದ ಮೇರೆಗೆ ಪಾತ್ರ ಬದಲಾವಣೆಯಾಗಿತ್ತು. ಈಗ ಯುವನ ಪಾತ್ರದಲ್ಲಿ ಚಂದನ್ ಅಭಿನಯಿಸುತ್ತಿದ್ದಾರೆ. ಬಹದ್ದೂರ್ ಮನೆಯ ಮುದ್ದಿನ ಮಗನಾಗಿ ಚಂದನ್ ಕಾಣಿಸಿಕೊಂಡಿದ್ದಾರೆ. ಚಂದನ್ ಆ ಪಾತ್ರಕ್ಕೆ ಬಂದ ಮೇಲೆ ಸಾಕಷ್ಟು ಜನ ಅದ್ಭುತ ಎಂದಿದ್ದರು. ಆ ಬಹದ್ದೂರ್ ಮನೆಯ ಮನೆತನಕ್ಕೆ ಚಂದನ್ ಹೊಂದಿಕೆಯಾಗಿ ಬಿಟ್ಟಿದ್ದಾರೆ.‌

ಕೃತಿ ಕಂಡರೆ ಕೋಪಗೊಳ್ಳುತ್ತಿದ್ದ ಯುವ

'ಕಥೆಯೊಂದು ಶುರುವಾಗಿದೆ' ಧಾರಾವಾಹಿ ಮಿಡಲ್ ಕ್ಲಾಸ್ ಹಾಗೂ ಶ್ರೀಮಂತರ ಮನೆತನದ ಕಥೆಯಾಗಿದೆ. ಮೂವರು ಹೆಣ್ಣು ಮಕ್ಕಳಿರುವ ಬಡತನದ ಕುಟುಂಬದಲ್ಲಿ ಕೃತಿ ಎರಡನೇಯ ಮಗಳಾಗಿದ್ದಳು. ಅದೇನೋ ಕೃತಿ - ಯುವ ಎದುರಾದಾಗೆಲ್ಲ ಜಗಳ ಕಟ್ಟಿಟ್ಟ ಬುತ್ತಿ. ಆದರೆ, ಮುಂದೊಂದು ದಿನ ವಿಧಿ ಇವರನ್ನೇ ಜೋಡಿ ಮಾಡುತ್ತೆ ಎಂದುಕೊಂಡಿರಲಿಲ್ಲ. ಮದುವೆಯಾಗಬೇಕಿದ್ದ ವರ್ಣಿಕಾ ಮಾಡಿದ ಯಡವಟ್ಟಿನಿಂದ ದ್ವೇಷ ಮಾಡುತ್ತಿದ್ದ ಕೃತಿ-ಯುವ ಮದುವೆಯಾದರು. ಬಳಿಕ ವರ್ಣಿಕಾ ಕೂಡ ಬಹದ್ದೂರ್ ಮನೆಗೆ ಸೊಸೆಯಾಗಿ ಬಂದಿದ್ದಾಳೆ‌. ಒಂದೇ ಮನೆಯಲ್ಲಿ ಅಕ್ಕ ತಂಗಿ ಸೊಸೆಯಾಗಿದ್ದಾರೆ. ಆದರೆ ಒಬ್ಬಳು ಮನೆ ಮುರಿಯುವ, ಇನ್ನೊಬ್ಬಳು ಮನೆ ಉಳಿಸುವ ಸೊಸೆಯಾಗಿದ್ದಾಳೆ.

ಕೃತಿಗೆ ಜೊತೆಯಾಗಿ ನಿಂತ ಯುವ

ತವರು ಮನೆಯಲ್ಲಿ ತಂದೆಗೆ ವಯಸ್ಸಾಗಿದೆ. ತಂಗಿ ಇನ್ನು ಚಿಕ್ಕವಳು. ತಾನು ದುಡಿದು ಮನೆಯನ್ನು ನಡೆಸುತ್ತಿದ್ದಳು ಕೃತಿ. ಈಗ ಮದುವೆಯಾಗಿ ಬಂದ ಮೇಲೆ ಮನೆಗೆ ದುಡಿಯುವ ಕೈ ಕಡಿಮೆಯಾಗಿದೆ. ಹೀಗಾಗಿಯೇ ಪುಷ್ಪ ಆಟೋ ಓಡಿಸುತ್ತಿದ್ದಾಳೆ. ಯುವನಿಗೆ ಈಗೀಗ ಕೃತಿ ಮೇಲೆ ಕಾಳಜಿ. ಹೀಗಾಗಿ ಕೃತಿಯ ಸಹಾಯಕ್ಕೆ ಯಾವಾಗಲೂ ನಿಲ್ಲುತ್ತಾನೆ. ಈಗ ತವರು ಮನೆಗೂ ಕೃತಿಯೇ ಆಸರೆಯಾಗಿದ್ದಾಳೆ.

ಕೃತಿ-ಯುವ ನಡುವೆ ಲವ್ವು ಶುರು

ಕಥೆಯೊಂದು ಶುರುವಾಗಿದೆ ಧಾರಾವಾಹಿ ಮೊದಲಿಗೆ ಯಾವ ರೀತಿ ಶುರುವಾಗಿತ್ತೋ ಈಗ ಅದಕ್ಕೆ ಉಲ್ಟಾ ಆಗಿದೆ. ಅಂದ್ರೆ ಹಾವು ಮುಂಗಸಿಯಂತಿದ್ದ ಕೃತಿ- ಯುವ ಈಗ ಅಪ್ಪಟ ಪ್ರೇಮಿಗಳಾಗಿದ್ದಾರೆ. ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಯುವ ಅಂತು ಕೃತಿಗಾಗಿ ಏನಾದರೂ ಸಪ್ರೈಸ್‌ಗಳನ್ನು ನೀಡುತ್ತಲೇ ಇರುತ್ತಾನೆ. ಇತ್ತೀಚೆಗೆ ಬ್ಯೂಟಿಫುಲ್ ಆಗಿ ಹುಟ್ಟುಹಬ್ಬವನ್ನು ಮಾಡಿದ್ದಾನೆ. ಈಗ ಕೃತಿಯ ನೋವಿಗೆ ಸ್ಪಂದಿಸಿದ್ದಾನೆ. ಜೊತೆಯಾಗಿ ನಿಂತಿದ್ದಾನೆ. ಕೃತಿಯ ಪೆಂಟಿಂಗ್ ಹೊಗಳಿದ್ದಾನೆ. ಇಬ್ಬರು ಬೆಸ್ಟ್ ಫ್ರೆಂಡ್ ಎಂದಿದ್ದಾನೆ. ಇದು ಕೃತಿಗೆ ಮತ್ತಷ್ಟು ಬಲ ತುಂಬಿದೆ. ಯುವನ ಪ್ರೀತಿಯಲ್ಲಿ ಮೆಲ್ಲಗೆ ಬೀಳುತ್ತಿದ್ದಾಳೆ.

More from Filmibeat

English summary
Star Suvarna serial Katheyondu Shuruvagide completed 200 episodes. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X