Katheyondu Shuruvagide: ವರ್ಣಿಕಾಳ ಬ್ಲಾಕ್ ಮೇಲ್ ಗೆ ಹೆದರಿ ಮತ್ತೆ ಯಾಮಾರಿಸಿದ ಸಾಮ್ರಾಟ್!

By ಎಸ್ ಸುಮಂತ್

ಯುವರಾಜ್ ನನ್ನು ಮದುವೆಯಾಗಬೇಕಿದ್ದ ವರ್ಣಿಕಾಳನ್ನು ಹಾಗೋ ಹೀಗೋ ಯಾಮಾರಿಸಿ, ಪ್ರೀತಿಯ ನಾಟಕವಾಡಿ ಸಾಮ್ರಾಟ್ ಮದುವೆ ಮನೆಯಿಂದ ಓಡಿಸಿಕೊಂಡು ಹೋಗಿದ್ದಾನೆ. ಮನೆಯವರಿಗೆ ಯಾರಿಗೂ ಗೊತ್ತಾಗದ ರೀತಿಯಲ್ಲಿ, ಯಾರ ಕೈಗೂ ಸಿಗದಂತೆ ವರ್ಣಿಕಾಳನ್ನು ಬಚ್ಚಿಟ್ಟಿದ್ದಾನೆ. ಆದ್ರೆ ವರ್ಣಿಕಾಗೆ ಸಾಮ್ರಾಟ್ ಸುಳ್ಳು ಹೇಳಿದ್ದರ ಪರಿಣಾಮ, ಅವನನ್ನು ಹುಡುಕಿಕೊಂಡು ಬಂದಿದ್ದ ವರ್ಣಿಕಾಗೆ ಸಾಮ್ರಾಟ್ ಮತ್ತೆ ಯಾಮಾರಿಸಿದ್ದಾನೆ.

ಕೃತಿ ಮತ್ತು ಯುವರಾಜ್ ರಿಸೆಪ್ಶನ್ ಗ್ರ್ಯಾಂಡ್ ಆಗಿ ನಡೆಯುತ್ತಿದ್ದನ್ನು ನೋಡಿ ವರ್ಣಿಕಾಗೆ ಸಹಿಸುವುದಕ್ಕೆ ಆಗುತ್ತಿಲ್ಲ. ವೇಷ ಮರೆಸಿಕೊಂಡು ಬಂದು ಅದನ್ನೆಲ್ಲಾ ನೋಡಿ ಹೊಟ್ಟೆ ಉರಿದುಕೊಳ್ಳುತ್ತಿದ್ದಾಳೆ. ಕೃತಿಯನ್ನು ಯುವ ಅಷ್ಟು ಸುಲಭವಾಗಿ ಒಪ್ಪಿಕೊಂಡು ಬಿಟ್ಟಳಲಲ್ಲ ಅಂತ ಮನಸ್ಸಲ್ಲಿಯೇ ಪ್ರಶ್ನೆ ಕೇಳಿಕೊಳ್ಳುತ್ತಿದ್ದಾಳೆ.

ವರ್ಣಿಕಾಳನ್ನು ಬಚಾವ್ ಮಾಡಿದ ಸಾಮ್ರಾಟ್..!

ವರ್ಣಿಕಾಳನ್ನು ಬಚಾವ್ ಮಾಡಿದ ಸಾಮ್ರಾಟ್..!

ವರ್ಣಿಕಾಗೆ ಸಾಮ್ರಾಟ್ ಸುಳ್ಳು ಹೇಳಿ ರಿಸೆಪ್ಶನ್ ಗೆ ಬಂದಿದ್ದು ಗೊತ್ತಾಗಿತ್ತು. ಹೀಗಾಗಿ ಊಟ ಸಪ್ಲೈ ಮಾಡುವ ರೀತಿಯಲ್ಲಿ ವರ್ಣಿಕಾ ವೇಷ ಮರೆಸಿಕೊಂಡು ಬಹದ್ದೂರ್ ಮನೆಗೆ ಬಂದಿದ್ದಳು. ಆದ್ರೆ ಜ್ಯೂಸ್ ಕೊಡುವಾಗ ಕೃತಿಗೆ ಡಿಕ್ಕಿ ಹೊಡೆದಿದ್ದಳು. ಕೃತಿಗೆ ಅವಳನ್ನು ಎಲ್ಲೋ ನೋಡಿದ ರೀತಿ ಫೀಲ್ ಆಗಿತ್ತು. ಹೀಗಾಗಿ ಮುಖ ತೋರಿಸಿ ಎಂದು ಬಲವಂತ ಮಾಡುತ್ತಿದ್ದಾಗಲೇ ಸಾಮ್ರಾಟ್ ಬಂದು ಕಾಪಾಡಿದ್ದ. ಅವಳನ್ನು ನೋಡುವಂತದ್ದು ಮುಖ್ಯವಲ್ಲ. ನೀವೂ ಕಾರ್ಯಕ್ರಮದತ್ತ ನೋಡಿ ಎಂದಿದ್ದ. ಇದೇ ಸಮಯದಲ್ಲಿ ಯುವರಾಜ್ ಕೂಡ ವರ್ಣಿಕಾಳ ಮೇಲೆ ಕೆಂಡಾಮಂಡಲನಾಗಿದ್ದ. ಇವಳನ್ನು ಫಸ್ಟ್ ಟೈಮ್ ನೋಡಿದಾಗಲೇ ಎಷ್ಟು ಅನ್ ಪ್ರೊಫೆಷನ್ ಅನ್ನೋದು ಗೊತ್ತಾಗಿತ್ತು. ಇವಳನ್ನು ಮೊದಲು ಆಚೆ ಹಾಕಬೇಕು ಎಂದೆಲ್ಲಾ ಮಾತನಾಡುವಾಗ ಅಜ್ಜಿ ಬಂದು ಎಲ್ಲದನ್ನು ತಿಳಿ ಮಾಡಿದ್ದರು.

ಸಾಮ್ರಾಟ್‌ಗೆ ಬೆದರಿಕೆ ಹಾಕಿದ ವರ್ಣಿಕಾ..!

ಸಾಮ್ರಾಟ್‌ಗೆ ಬೆದರಿಕೆ ಹಾಕಿದ ವರ್ಣಿಕಾ..!

ಬಹದ್ದೂರ್ ಮನೆಯಲ್ಲಿ ಯುವರಾಜ್ ಹಾಗೂ ಕೃತಿಯ ರಿಸೆಪ್ಶನ್ ನಡೆಯುತ್ತಿದೆ. ಆದ್ರೆ ಕೃತಿ ಹಾಗೂ ಯುವರಾಜ್ ಜೊತೆಗೆ ಒಂದಷ್ಟು ಮಾಹಿತಿ ಪಡೆಯುವುದಕ್ಕಾಗಿ ಪೊಲೀಸರು ಮನೆಗೆ ಬಂದಿದ್ದರು. ಇದನ್ನು ಸಾಮ್ರಾಟ್ ಹಾಗೂ ವರ್ಣಿಕಾ ಇಬ್ಬರು ನೋಡಿದ್ದರು. ವಿಚಾರ ಗೊತ್ತಾದ ಮೇಲೆ ವರ್ಣಿಕಾ, ಸಾಮ್ರಾಟ್ ಗೆ ಬ್ಲಾಕ್ ಮೇಲ್ ಮಾಆಡಲು ಪ್ರಾರಂಭಿಸಿದಳು. ನೀನೆ ಮನೆಯವರಿಗೆ ವಿಷಯ ತಿಳಿಸದೆ ಹೋದರೆ, ಮದುವೆ ಮನೆಯಿಂದ ಓಡಿಸಿಕೊಂಡು ಹೋಗಿದ್ದೆ ನೀನೆ ಅಂತ, ಪೊಲೀಸರಿಗೆ ನಾನೇ ಹೇಳುತ್ತೀನಿ ಎಂದಾಗ ಸಾಮ್ರಾಟ್ ಫುಲ್ ಹೆದರಿದ.

ವರ್ಣಿಕಾಗೆ ಮತ್ತೆ ಮೋಸ ಮಾಡಲು ಹೊರಟ ಸಾಮ್ರಾಟ್

ವರ್ಣಿಕಾಗೆ ಮತ್ತೆ ಮೋಸ ಮಾಡಲು ಹೊರಟ ಸಾಮ್ರಾಟ್

ವರ್ಣಿಕಾ ಅದ್ಯಾವಾಗ ಪೊಲೀಸರು ನನ್ನ ಹುಡುಕುವಷ್ಟರಲ್ಲಿ ನಾನೇ ಅವರ ಮುಂದೆ ಹೋಗಿ ಎಲ್ಲಾ ಸತ್ಯವನ್ನು ಹೇಳಿ ಬಿಡುತ್ತೀನಿ ಅಂತ ಹೇಳಿದಳೋ, ಸಾಮ್ರಾಟ್ ತುಂಬಾನೇ ಹೆದರಿದ. ಈ ರೀತಿಯಾದರೆ ತಾನು ಅಂದುಕೊಂಡ ಎಲ್ಲಾ ಪ್ಲ್ಯಾನ್ ಫೇಲ್ ಆಗುತ್ತೆ, ಮನೆಯವರೆಲ್ಲರ ಮುಂದೆ ವಿಲನ್ ಆಗ್ತೀನಿ ಅಂತ ತಿಳಿದವನು ಮತ್ತೆ ನೈಸ್ ಮಾಡುವುದಕ್ಕೆ ಹೋಗಿದ್ದಾನೆ. ನಮ್ಮ ಮದುವೆ ಕೂಡ ಇಷ್ಟೇ ದೊಡ್ಡ ಮಟ್ಟಕ್ಕೆ ಗ್ರ್ಯಾಂಡ್ ಆಗಿ ಮಾಡಿಕೊಳ್ಳೋಣಾ ಅದಕ್ಕೆ ಈಗಾಗಲೇ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದೀನಿ ಅಂತ ಹೇಳಿ, ವರ್ಣಿಕಾಳನ್ನು ಅಲ್ಲಿಂದ ಕಳುಹಿಸಿದ್ದಾನೆ.

ಕೃತಿ ಹೇಗೆ ಸಂಭಾಳಿಸುತ್ತಾಳೆ..?

ಕೃತಿ ಹೇಗೆ ಸಂಭಾಳಿಸುತ್ತಾಳೆ..?

ವರ್ಣಿಕಾಳನ್ನು ಹುಡುಕಿಕೊಡುವಂತೆ ಪೊಲೀಸರಿಗೆ ದೂರು ನೀಡು ಅಂತ ಹೇಳಿದ್ದೇ ಮಾತಂಗಿ. ಆದ್ರೆ ಈಗಾಗಲೇ ಮಾತಂಗಿಯ ಮೇಲೆ ಕೃತಿ ಮನೆಯವರಿಗೆ ಹೇಳಿ ಆಗಿದೆ. ಈಗ ಮನೆಗೆ ಪೊಲೀಸರು ಬಂದಿದ್ದು, ವರ್ಣೀಕಾಳನ್ನು ಹುಡುಕುವುದಕ್ಕೆ ಕೃತಿ ದೂರು ಕೊಟ್ಟಿದ್ದಾಳೆ ಎಂದ ಕೂಡಲೇ ಮನೆಯವರೆಲ್ಲಾ ಕೆಂಡಾಮಂಡಲರಾಗಿದ್ದಾರೆ. ಎಲ್ಲರೂ ಮುಗಿಬಿದ್ದವರಂತೆ ಪ್ರಶ್ನಿಸುತ್ತಿದ್ದಾರೆ. ಅತ್ತ ಮಾತಂಗಿ ಹೆಸರನ್ನು ಮತ್ತೆ ಹೇಳುವುದಕ್ಕೂ ಆಗದೆ ಉತ್ತರವನ್ನು ಕೊಡುವುದಕ್ಕೂ ಆಗದೆ ಸುಮ್ಮನೆ ನಿಂತು ಬಿಟ್ಟಿದ್ದಾಳೆ ಕೃತಿ.

More from Filmibeat

English summary
Star suvarna serial Katheyondu shuruvagide Written Update on February 9th episode. Here is the details about Samrat mindwash varnika again.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X