ಅಕ್ಷತಾ ದೇಶಪಾಂಡೆ: ಅಬ್ಬಬ್ಬಾ.. ಮದುವೆಗೆ ರೆಡಿಯಾಗೋದು ಇಷ್ಟೋಂದು ಕಷ್ಟವೆ?

By ಎಸ್ ಸುಮಂತ್

ಹೆಣ್ಣು ಮಕ್ಕಳಿಗೆ ಮೇಕಪ್ ಮಾಡಿಕೊಳ್ಳುವುದು ಅಂದ್ರೆ ತುಂಬಾ ಖುಷಿಯ ವಿಚಾರ. ಇನ್ನು ಮದುವೆ ಅಂತ ಬಂದಾಗ ಸ್ಪೆಷಲ್ ಮೇಕಪ್ ಇರಲೇಬೇಕು. ಪ್ರತಿ ದಿನ ತಾವಾಗಿಯೇ ಮೇಕಪ್ ಮಾಡಿಕೊಂಡರು, ಸ್ಪೆಷಲ್ ದಿನಗಳಲ್ಲಿ ಮೇಕಪ್ ಆರ್ಟಿಸ್ಟ್ ಬೇಕಾಗಿಯೇ ಇರುತ್ತಾರೆ. ಇತ್ತಿಚೆಗೆ 'ಕಥೆಯೊಂದು ಶುರುವಾಗಿದೆ' ಧಾರಾವಾಹಿಯಲ್ಲಿ ಕೃತಿ ಮದುವೆಯಾಗಿದೆ.

ಕೃತಿ ಮದುವೆ ಮಂಟಪದಲ್ಲಿ ಅದೆಷ್ಟು ಬ್ಯೂಟಿಫುಲ್ ಆಗಿ ಕಾಣಿಸ್ತಾ ಇದ್ರು ಅಲ್ವಾ. ಆ ಮೇಕಪ್ ಯಾರು ಮಾಡಿದ್ದು..? ಆ ಮೇಕಪ್ ಮಾಡೋದಕ್ಕೆ ಎಷ್ಟೆಲ್ಲಾ ಸಮಯ ಆಯ್ತು..? ಅನ್ನೋ ಫುಲ್ ಡಿಟೈಲ್ ಇಲ್ಲಿದೆ. ಆ ಬ್ಯೂಟಿಯ ಹಿಂದಿರುವ ಸೀಕ್ರೇಟ್ ಏನು ಎಂಬುದನ್ನು ಸಹ ಕೃತಿ ಅಲಿಯಾಸ್ ಅಕ್ಷತಾ ದೇಶಪಾಂಡೆ ರಿವಿಲ್ ಮಾಡಿದ್ದಾರೆ.

ಮದು ಮಗಳ ಲುಕ್ ನಲ್ಲಿ ಬ್ಯೂಟಿಫುಲ್

ಮದು ಮಗಳ ಲುಕ್ ನಲ್ಲಿ ಬ್ಯೂಟಿಫುಲ್

ಅಕ್ಷತಾ ಮೂಲತಃ ಬೆಳಗಾವಿಯವರು. ನಟನೆಯ ಮೇಲಿನ ಆಸಕ್ತಿ ಇಲ್ಲಿಯ ತನಕ ಕರೆ ತಂದಿದೆ. ಸ್ಟಾರ್ ಸುವರ್ಣ ವಾಹಿನಿಯ 'ಕಥೆಯೊಂದು ಶುರುವಾಗಿದೆ' ಧಾರಾವಾಹಿಯಲ್ಲಿ ಲೀಡ್ ರೋಲ್ ನಲ್ಲಿಯೇ ಕಾಣಿಸಿಕೊಂಡಿದ್ದಾರೆ. ಸದ್ಯ ಬಹದ್ದೂರ್ ಮನೆ ಸೇರಿದ್ದು, ಯುವರಾಜನ ಹೆಂಡತಿಯಾಗಿದ್ದಾರೆ. ಮದುವೆಯಲ್ಲಿ ಅಕ್ಷತಾ ತುಂಬಾ ಬ್ಯೂಟಿಫುಲ್ ಆಗಿ ಕಾಣಿಸುತ್ತಾ ಇದ್ದರು. ಮದುಮಗಳ ಕಳೆ, ಕ್ಯಾಮೆರಾದಲ್ಲಿ ಎದ್ದು ಕಾಣುತ್ತಾ ಇತ್ತು. ಮರೂನ್ ಕಲರ್ ಬ್ಲೌಸ್ ಗೆ ಬಾದಾಮಿ ಮಿಕ್ಸ್ ಸೀರೆಯಲ್ಲಿ ಸೌಂದರ್ಯವತಿಯಂತೆ ಕಂಗೊಳಿಸಿದ್ದರು.

ಮೇಕಪ್ ಮಾಡುವಾಗ ಎಷ್ಟೆಲ್ಲಾ ಸಾಹಸ

ಮೇಕಪ್ ಮಾಡುವಾಗ ಎಷ್ಟೆಲ್ಲಾ ಸಾಹಸ

ಅಕ್ಷತಾ ದೇಶಪಾಂಡೆ ಸೋಷಿಯಲ್ ಮೀಡಿಯಾದಲ್ಲಿ ಸ್ವಲ್ಪ ಆಕ್ಟೀವ್ ಆಗಿದ್ದಾರೆ. ಸೀರಿಯಲ್ ಸೆಟ್ ನಲ್ಲಿ ಮಾಡುವ ತರಲೆ ತುಂಟಾಟಗಳನ್ನು, ಸ್ಪೆಷಲ್ ಮೂಮೆಂಟ್ ಅನ್ನು, ಗ್ಯಾಪ್ ನಲ್ಲಿ ಮಾಡುವ ರೀಲ್ಸ್ ಗಳನ್ನು ಹಾಕುತ್ತಾ ಇರುತ್ತಾರೆ. ಇದೀಗ ಅಂಥದ್ದೆ ಒಂದು ಸ್ಪೆಷಲ್ ವಿಡಿಯೋ ಹಾಕಿಕೊಂಡಿದ್ದಾರೆ. ಅದುವೆ ಯುವರಾಜನ ಹೆಂಡತಿಯಾಗುವುದಕ್ಕೂ ಮುನ್ನ ಮಾಡಿಸಿಕೊಂಡ ಮೇಕಪ್. ಈ ಮೇಕಪ್ ದೃಶ್ಯ ಅಂದು ಧಾರಾವಾಹಿಯಲ್ಲಿ ಸ್ವಲ್ಪಮಟ್ಟಿಗಾದರೂ ಕಂಡಿದ್ದರೆ ಅದ್ಭುತವಿರುತ್ತಾ ಇತ್ತು. ಆದ್ರೆ ಕೃತಿ ರೆಡಿಯಾಗಿ ನೇರವಾಗಿ ಮದುವೆ ಮಂಟಪಕ್ಕೆ ಬಂದಿದ್ದಳು. ಇದೀಗ ಆ ಮೇಕಪ್ ಹಿಂದೆ ಎಷ್ಟೆಲ್ಲಾ ಕಷ್ಟ ಇತ್ತು, ಏನೆಲ್ಲಾ ಮಾಡುದ್ರು ಎಂಬ ವಿಡಿಯೋ ಹಂಚಿಕೊಂಡಿದ್ದಾರೆ.

ಮೇಕಪ್ ಮ್ಯಾನ್ ಕೂಡ ಸುಸ್ತು

ಮೇಕಪ್ ಮ್ಯಾನ್ ಕೂಡ ಸುಸ್ತು

ಅಕ್ಷತಾ ಮೇಕಪ್ ನ ಮೊದಲಿನಿಂದ ಹಿಡಿದು ಕೊನೆಯವರೆಗೂ ವಿಡಿಯೋ ಮಾಡಿದ್ದಾರೆ. ಮೇಕಪ್ ರೂಮ್ ಗೆ ಬರುವುದರಿಂದ ವಿಡಿಯೋ ಶುರುವಾಗುತ್ತೆ. ಅದನ್ನ ಟೈಮ್ ಲೂಪ್ ನಲ್ಲಿ ಮಾಡಲಾಗಿದೆ. ಮೇಕಪ್ ಮಾಡುವಾಗ ಸುಮಾರು ಸಮಯವೇ ಆಗಿದೆ. ಟೈಮ್ ಲೂಪ್ ನಲ್ಲಿಯೇ ಅಷ್ಟೊಂದು ಸಮಯವಾಗಿದೆ ಎನ್ನುವಾಗ ಇನ್ನು ನಾರ್ಮಲ್ ಸಮಯದಲ್ಲಿ ಏನೆಲ್ಲಾ ಆಗಿರಬೇಡ. ಅದರಲ್ಲೂ ಮೇಕಪ್ ಮ್ಯಾನ್ ಮೇಕಪ್ ಮಾಡುವಾಗ, ಕೃತಿಗೆ ಒಂದೆ ಕಡೆ ಕೂರುವುದಕ್ಕೆ ಆಗಿಲ್ಲ. ಬದಲಿಗೆ ಎದ್ದು ಕೂತು, ಎದ್ದು ಕೂತು ಮಾಡಿದ್ದಾರೆ. ವಿಡಿಯೋ ನೋಡುವುದಕ್ಕೆ ಮಜಾವಾಗಿದೆ.

ಇಷ್ಟು ಅಂದದ ಡ್ರೆಸ್ ಎಲ್ಲಿಂದ ಬಂತು..?

ಇಷ್ಟು ಅಂದದ ಡ್ರೆಸ್ ಎಲ್ಲಿಂದ ಬಂತು..?

ಇನ್ನು ಕೃತಿ ಅಲಿಯಾಸ್ ಅಕ್ಷತಾ ದೇಶಪಾಂಡೆ ಮದುವೆಗಾಗಿ ಉಟ್ಟಿದ್ದ ಸೀರೆಗೆ ಮಹಿಳಾ ಮಣಿಗಳು ಫಿದಾ ಆಗಿದ್ದರು. ಬ್ಲೌಸ್ ಡಿಸೈನ್ ಗೆ ಕೂಡ ವಾವ್ ಎಂದಿದ್ದರು. ಈ ಸೀರೆಯನ್ನು ಆಯ್ಕೆ ಮಾಡಿದ್ದು..? ಬ್ಲೌಸ್ ಸ್ಟಿಚ್ ಮಾಡಿದ್ದು ಯಾರು ಎಂಬುದನ್ನು ಸ್ವತಃ ಅಕ್ಷತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದಾರೆ. ಗಾರಿಕ ಬೂಟಿಕ್ ನಿಂದ ಈ ಬ್ಲೌಸ್ ಕೃತಿಯ ಕೈ ಸೇರಿದೆ. ಇನ್ನು ಅದ್ಭುತವಾಗಿ ಮೇಕಪ್ ಮಾಡಿದ ಸುನೀಲ್ ಕುಮಾರ್ ಅವರಿಗೂ ಥ್ಯಾಂಕ್ಸ್ ಹೇಳಿದ್ದಾರೆ.

More from Filmibeat

English summary
Star suvarna serial Katheyondu shuruvagide Written Update on Kriti real life. Here is the details about Akshatha deshpande Share makeup video.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X