ವರಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ ಬರುತ್ತಿದ್ದಾಳೆ 'ಕನ್ನಡ ಮೀಡಿಯಂ ಕಾವೇರಿ'
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸಂಗೀತದ ಮೇಲೆ ಹೆಚ್ಚು ಗಮನ ಕೊಟ್ಟು 'ನಮ್ಮ ಲಚ್ಚಿ' ಧಾರಾವಾಹಿ ಆರಂಭಿಸಲಾಗಿದೆ. ಇದರ ಜೊತೆಗೆ ಕಿವಿ ಕೇಳದವರ ಪರಿಸ್ಥಿತಿಯನ್ನು ತೋರಿಸಲು ಮತ್ತೊಂದು ಧಾರಾವಾಹಿಯನ್ನು ಪ್ರಾರಂಭಿಸಲಾಗಿದೆ.
ಇದೀಗ ಕನ್ನಡ ಭಾಷೆಯ ಮೇಲೆ ಕಥೆಯೊಂದು ಶುರುವಾಗಲಿದೆ. ಭಾಷೆ, ಸಂಗೀತಾ, ಅಂಗವೈಕಲ್ಯ ಹೀಗೆ ಹಲವು ವಿಚಾರಗಳ ಆಧಾರದ ಮೇಲೆ ಧಾರಾವಾಹಿಯ ಕತೆಗಳು ಮೂಡಿ ಬರುತ್ತಿವೆ.

ಕಿರುತೆರೆ ವಾಹಿನಿಗಳಲ್ಲಿ ಹೊಸ ಧಾರಾವಾಹಿಗಳು ಬರುತ್ತಲೇ ಇರುತ್ತವೆ. ಈಗಾಗಲೇ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ 'ರೇಣುಕಾ ಯಲ್ಲಮ್ಮ', 'ನಮ್ಮ ಲಚ್ಚಿ', 'ರಾಣಿ', 'ನಾಗರಪಂಚಮಿ' ಅಂತಹ ಧಾರಾವಾಹಿಗಳು ಯಶಸ್ವಿಯಾಗಿ ಪ್ರಸಾರವಾಗುತ್ತಿವೆ.
'ಕಾವೇರಿ ಕನ್ನಡ ಮೀಡಿಯಂ'
ಇದೀಗ ಮತ್ತೆರಡು ಧಾರಾವಾಹಿಯ ಪ್ರೋಮೋ ರಿಲೀಸ್ ಆಗಿದೆ. ಇದರಲ್ಲಿ ಒಂದು ಧಾರಾವಾಹಿ 'ಅವನು ಮತ್ತೆ ಶ್ರಾವಣಿ' ಮತ್ತೊಂದು 'ಕಾವೇರಿ ಕನ್ನಡ ಮೀಡಿಯಂ'. ಹೆಸರೇ ಹೇಳುವಂತೆ ಕನ್ನಡ ಭಾಷೆ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ್ದಾಗಿದೆ. ಮೊದಲ ಪ್ರೋಮೋದಲ್ಲಿ ಕಾಲೇಜಿನಲ್ಲಿ ಶಿಕ್ಷಕ ಮೊದಲ ದಿನ ವಿದ್ಯಾರ್ಥಿಗಳನ್ನು ಮಾತನಾಡಿಸುತ್ತಾರೆ. ಅದರಲ್ಲಿ ಒಬ್ಬ ಬ್ಯಾಂಕ್‌ನಲ್ಲಿ ಲೋನ್ ಪಡೆಯಲು ವಿದ್ಯಾಹರ್ತೆ ಪಡೆಯಲು ಬಂದಿದ್ದರೆ, ಹೆಣ್ಣು ಮಗಳೊಬ್ಬಳು ನಾನು ಓದಿರುವ ಓದು, ನಾನು ನಂಬಿರುವ ಭಾಷೆ, ಯಾವತ್ತೂ ನನ್ನ ಕೈ ಬಿಡಲ್ಲ ಎಂದು ನಂಬಿರುವವಳು.

ಹಬ್ಬಕ್ಕೆ ಬರುತ್ತಿದ್ದಾಳೆ ಕಾವೇರಿ
ಧಾರಾವಾಹಿ ಪ್ರೋಮೋವನ್ನು ಕಳೆದ ಎರಡು ತಿಂಗಳ ಹಿಂದೆಯೇ ಪ್ರಸಾರ ಮಾಡಲಾಗಿತ್ತು. ಆದರೆ ಈಗ ಪ್ರೋಮೋ ಜೊತೆಗೆ ಧಾರಾವಾಹಿಯ ಪ್ರಸಾರದ ಸಮಯವನ್ನು ಕೂಡ ತಿಳಿಸಲಾಗಿದೆ. ಇನ್ನೊಂದು ವಾರದಲ್ಲಿ 'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿ ಪ್ರಸಾರ ಕಾಣಲಿದೆ. ವರಮಹಾಲಕ್ಷ್ಮೀ ಹಬ್ಬ ಮಾರನೆಯ ದಿನ ಅಂದರೆ, ಆಗಸ್ಟ್ 28 ರಂದು ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ. ಮೊದಲ ಪ್ರೋಮೋ ನೋಡಿದಾಗಲೇ ಸಂಜೆ 7.30ರ ಸ್ಲಾಟ್‌ಗೆ ಇರಲಿ ಎಂದು ವೀಕ್ಷಕರು ಬೇಡಿಕೆ ಕೂಡ ಸ್ಟಾರ್ ಸುವರ್ಣ ವಾಹಿನಿ ಪೂರೈಸಿದೆ.
ನಾಯಕಿ ಪಾತ್ರದಲ್ಲಿ ಗಟ್ಟಿಮೇಳ ಅಧಿತಿ
ಹಿಂದಿನ ಪ್ರೋಮೋದಲ್ಲಿ ತೋರಿಸಿದ್ದ ನಾಯಕಿ ಪಾತ್ರಧಾರಿ ಬದಲಾಗಿದ್ದು, ಈಗ ರೀಶೂಟ್ ಮಾಡಲಾಗಿದೆ. ಸದ್ಯ 'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿಗೆ ನಾಯಕಿ ಆಗಿ ಪ್ರಿಯಾ ಜೆ ಆಚಾರ್ ಎಂಟ್ರಿ ಕೊಟ್ಟಿದ್ದಾರೆ. ಪ್ರಿಯಾ ಟಿಕ್ ಟಾಕ್ ಸ್ಟಾರ್. 'ಗಟ್ಟಿಮೇಳ' ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ಅಧಿತಿ ಪಾತ್ರದಲ್ಲಿ ಪ್ರಿಯಾ ಕಾಣಿಸಿಕೊಂಡಿದ್ದು, ಈಗ 'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇನ್ನು ಪ್ರಿಯಾತೆಲುಗಿನ 'ಆನಂದರಾಗಂ' ಧಾರಾವಾಹಿಗೂ ಬಣ್ಣ ಹಚ್ಚಿದ್ದಾರೆ. ಕೆಲ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದು, 'ಧಮಾಕ' ಚಿತ್ರದಲ್ಲಿ ನಟಿಸಿದ್ದಾರೆ.
ಕನ್ನಡಕ್ಕಾಗಿ ಹೋರಾಡುವ ನಾಯಕಿ
ಇನ್ನು 2ನೇ ಪ್ರೋಮೋದಲ್ಲಿ ಕನ್ನಡದ ಉಳಿವಿಗಾಗಿ, ಕನ್ನಡ ಶಾಲೆಗಳ ಉಳುವಿಗಾಗಿ ಶಿಕ್ಷಕಿಯ ಹೋರಾಟದ ಕಥೆ. ಕನ್ನಡ ಶಾಲೆಗಳು ಉಳಿಯಬೇಕೆಂದರೆ ಬೇರೆಯವರ ಷರತ್ತುಗಳಿಗೆ ತಲೆ ಬಾಗಲೇಬೇಕಾದ ಪರಿಸ್ಥಿತಿ ಆ ಶಿಕ್ಷಕಿಗೆ. ಆಂಗ್ಲ ಮಾಧ್ಯಮದ ಶಾಲೆಯ ಹಾವಳಿಯ ಮುಂದೆ ತಮ್ಮ ಕನ್ನಡ ಶಾಲೆ ಉಳಿವಿಕೆಗಾಗಿ ಹೇಗೆ ಹೋರಾಡುವುದನ್ನು ತೋರಿಸಲಾಗಿದೆ. 'ಬಾಂಗ್ಲಾ ಮೀಡಿಯಂ' ಎಂಬ ಧಾರಾವಾಹಿಯ ರಿಮೇಕ್ ಎಂದು ಹೇಳಲಾಗಿದೆ.


Click it and Unblock the Notifications











