ಕಾವೇರಿ ಮುಂದೆಯೇ ತಬ್ಬಿಕೊಂಡ ವೃಂದಾ; ಬೆಸೆಯುತ್ತಿದೆ ಅಗಸ್ತ್ಯ-ವೃಂದಾ ಕಣ್ಸನ್ನೆ!
'ಕಾವೇರಿ ಕನ್ನಡ ಮೀಡಿಯಂ' ಆದರೂ ಸಹ, ಪ್ರಮೋದಾ ದೇವಿ ಆಯ್ಕೆಯಾಗಿದ್ದರಿಂದ ಅಗಸ್ತ್ಯ ಆ ಮನವಿಯನ್ನು ತಳ್ಳಿ ಹಾಕುವುದಕ್ಕೆ ಆಗಲಿಲ್ಲ. ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಕಾವೇರಿ ಹಾಗೂ ಅಗಸ್ತ್ಯನ ಮದುವೆಯೂ ನಡೆದು ಹೋಗಿದೆ. ಅಗಸ್ತ್ಯನ ಮನೆಯಲ್ಲಿಯೇ ಕಾವೇರಿ ಕೂಡ ಇದ್ದಾಳೆ. ಆದರೆ, ಮನೆಯಲ್ಲಿ ಯಾರಿಗೂ ಈ ವಿಚಾರ ಗೊತ್ತಿಲ್ಲ. ಅಗಸ್ತ್ಯ ಈ ಒಂದು ಕೋರಿಕೆಯನ್ನು ಕಾವೇರಿ ಕೂಡ ನೆರವೇರಿಸುತ್ತಿದ್ದಾಳೆ.
ಕಾವೇರಿಗೆ ಗಂಡ ಎಂದರೆ ಗೌರವ, ಪ್ರೀತಿ ಇದ್ದೆ ಇದೆ. ಕೆಲವೊಂದು ಸಲ ಅಗಸ್ತ್ಯ ಕೂಡ ಕಾವೇರಿಯ ಗುಣಕ್ಕೆ ವಾಲುತ್ತಾನೆ. ಆದರೆ ತಕ್ಷಣ ಆತನಲ್ಲಿರುವ ಅಹಂ ಎಚ್ಚರಿಸುತ್ತಿದೆ. ಹೀಗಾಗಿ ಕಾವೇರಿ ಮತ್ತು ಅಗಸ್ತ್ಯ ಇನ್ನು ಗಂಡ-ಹೆಂಡತಿ ಎಂಬುದನ್ನು ಒಪ್ಪಿಕೊಳ್ಳುತ್ತಿಲ್ಲ. ಮೊದಲೇ ಇಬ್ಬರ ನಡುವೆ ಕೋಲ್ಡ್ ವಾರ್ ನಡೆಯುತ್ತಿದ್ದರೆ, ಎಂಟ್ರಿ ಕೊಟ್ಟಿರುವ ವೃಂದಾ, ಕಾವೇರಿ ಮನಸ್ಸನ್ನು ಕಲಕುತ್ತಿದ್ದಾಳೆ.

ವೃಂದಾಳಿಂದ ಕಾವೇರಿ ಕೋಪ ಹೆಚ್ಚು
ಪ್ರಮೋದಾ ದೇವಿ ಮನೆಯಲ್ಲಿ ಅದ್ದೂರಿಯಾಗಿ ನಡೆಯುವಂತ ಮದುವೆ ಕಾರ್ಯವೊಂದು ಶುರುವಾಗಿದೆ. ಅನಿಕಾ ಮದುವೆಯ ತಯಾರಿ ನಡೆಯುತ್ತಿದೆ. ಹುಡುಗ ಅಮೆರಿಕಾದವನು. ಈಗಾಗಲೇ ಮನೆಯವರಿಗೆಲ್ಲಾ ಒಪ್ಪಿಗೆಯೂ ಆಗಿದೆ. ಅಣ್ಣನ ಜೊತೆಗೆ ಪ್ರಮೋದಾ ದೇವಿ ಮನೆಗೆ ಆಗಾಗ ಬರುತ್ತಿರುವುದು ವೃಂದಾ. ಅನಿಕಾಳ ನಾದಿನಿ. ಈ ನಾದಿನಿಯಿಂದಾಗಿನೇ ಕಾವೇರಿಗೆ ಕೋಪ ಹೆಚ್ಚಾಗುತ್ತಿದೆ.
ಕಾವೇರಿ ಮುಂದೆಯೇ ತಬ್ಬಿಕೊಂಡ ವೃಂದಾ
ಮನೆಯಲ್ಲಿ ಕಾವೇರಿ ಹಾಗೂ ಅಗಸ್ತ್ಯ ಮದುವೆ ಆಗಿರುವುದು ಯಾರಿಗೂ ಗೊತ್ತಿಲ್ಲ. ಇದೇ ಕೆಲವೊಂದು ಅವಮಾನಗಳಿಗೆ ಕಾರಣವಾಗಿದೆ. ವೃಂದಾ ಮನೆಗೆ ಬಂದಾಗಲೇ ಕಾವೇರಿಯನ್ನು ಕಂಡು ಮನೆ ಕೆಲಸದವಳು ಎಂದುಕೊಂಡಿದ್ದಾಳೆ. ಅಗಸ್ತ್ಯನ ಮುಂದೆಯೇ ಲಗೇಜು ಎತ್ತಿಕೊಂಡು ಬರುವುದಕ್ಕೂ ಹೇಳಿದ್ದಾಳೆ. ಈಗ ಸಿಕ್ಕ ಸಿಕ್ಕ ಕೂಡಲೇ ಅಗಸ್ತ್ಯನನ್ನು ತಬ್ಬಿಕೊಂಡು, ಕಾವೇರಿಗೆ ನೋವು ಕೊಡುತ್ತಿದ್ದಾಳೆ. ಕಾವೇರಿಗೆ ಬೇಸರವಾಗಿದೆ ಎಂದೇ ತಿಳಿದ ಅಗಸ್ತ್ಯ, ಅಮೆರಿಕಾದಲ್ಲಿ ಇದೆಲ್ಲಾ ಕಾಮನ್ ಕಲ್ಚರ್ ಎಂದು ಸಮಾಧಾನ ಮಾಡಿದ್ದಾನೆ.

ಅಗಸ್ತ್ಯ ಮಾಡಿದ್ದೇನು?
ಕಾವೇರಿಯನ್ನು ತನ್ನ ಹೆಂಡತಿಯೆಂದು ಅಗಸ್ತ್ಯ ಒಪ್ಪಿಕೊಳ್ಳದೆ ಇದ್ದರು, ಅವಳ ಗೌರವವನ್ನು ಕಾಪಾಡುತ್ತಾನೆ. ವೃಂದಾ ತಬ್ಬಿಕೊಂಡಾಗ, ಕಾವೇರಿಯ ಮುಖದಲ್ಲಿ ಕೋಪ ಎದ್ದು ಕಾಣಿಸುತ್ತಾ ಇತ್ತು. ಅದನ್ನು ಗಮನಿಸಿದ ಅಗಸ್ತ್ಯ, ವೃಂದಾಳನ್ನು ತಬ್ಬಿಕೊಳ್ಳದೆ ಹಾಗೇ ಮಾತನಾಡಿದ. ಆದರೆ, ವೃಂದಾಳ ಮುಂದೆ ಕಾವೇರಿಯನ್ನು ಹೆಚ್ಚಿನ ಮಟ್ಟಿಗೆ ಸಪೋರ್ಟ್ ಮಾಡುವುದಕ್ಕೆ ಆಗದ ಪರಿಸ್ಥಿತಿ ಅವನದ್ದು.
ಕಾವೇರಿ ಹೋದ ಮೇಲೆ ಬೆಸೆಯುತ್ತಿದೆ ಕಣ್ಸನ್ನೆ
ಆದರೆ ಅಗಸ್ತ್ಯನ ಮನಸ್ಸು ಅದ್ಯಾಕೋ ವೃಂದಾಳ ಕಡೆಗೆ ವಾಲುತ್ತಿದೆ ಎಂದನ್ನಿಸಿದ್ದಂತು ಸತ್ಯ. ಕಾವೇರಿ ಹೋದ ಮೇಲೆ ವೃಂದಾಳ ಅಣ್ಣ ಕೂಡ ಕ್ಯಾಬಿನ್ ಒಳಗೆ ಬಂದ. ಇಬ್ಬರು ಬ್ಯುಸಿನೆಸ್ ಸ್ಟ್ರಾಟಜಿಗಳ ಬಗ್ಗೆ ಮಾತನಾಡುತ್ತಿದ್ದರು. ಅಗಸ್ತ್ಯ ಆರಂಭದಲ್ಲಿ ತನ್ನ ಭಾವ ಮಾಡುತ್ತಿದ್ದ ವರ್ಕ್ ನೀಡುತ್ತಿದ್ದ ವಿವರಣೆಯ ಕಡೆಗಷ್ಟೇ ಗಮನ ಕೊಟ್ಟಿದ್ದ. ಆದರೆ, ಹಿಂದೆಯಿಂದ ಒಂದೇ ಸಮನೆ ವೃಂದಾ ನೋಡುವುದಕ್ಕೆ ಶುರು ಮಾಡಿದಾಗ, ಅಕ್ಷರಶಃ ಅಗಸ್ತ್ಯ ಡಿಸ್ಟರ್ಬ್ ಆಗಿದ್ದ ಎಂಬುದಂತು ತಿಳೀತು. ಅಗಸ್ತ್ಯ ಕೂಡ ಒಂದೆರಡು ಬಾರಿ ವೃಂದಾಳ ಕಡೆಗೆ ದಿಟ್ಟಿಸಿ ನೋಡಿದ್ದಾನೆ. ಇನ್ನು ಒಂದೆರಡು ಬಾರಿ ಇದೇ ಥರ ದಿಟ್ಟಿಸಿ, ಕಣ್ಸನ್ನೆಯಲ್ಲಿಯೇ ಪಾಠಗಳು ಶುರುವಾದರೆ ವೃಂದಾ, ಕಾವೇರಿಯ ಸ್ಥಾನಕ್ಕೆ ಕುತ್ತು ತರುವುದರಲ್ಲಿ ಅನುಮಾನವೇ ಇಲ್ಲ.


Click it and Unblock the Notifications











