Lakshmi tiffin room: ಲಕ್ಷ್ಮೀ ಟಿಫನ್ ರೂಮ್ ಮುಕ್ತಾಯ : ಬರೀ ಇದೇ ಆಯ್ತು ಎಂದ ವೀಕ್ಷಕರು..!
ಹಳೇ ಟೈಟಲ್‌ನಲ್ಲಿ ಮತ್ತೆ ಹೊಸ ಸೀರಿಯಲ್ ಕೊಡುವುದು ಹೊಸದೇನು ಅಲ್ಲ. ಈಗಾಗಲೇ ಜೀ ಕನ್ನಡದಲ್ಲೂ ಹಳೇ ಧಾರಾವಾಹಿಯ ಹೆಸರಿನಲ್ಲಿ ಹೊಸ ಧಾರಾವಾಹಿಗಳು ಎಲ್ಲರ ಗಮನ ಸೆಳೆಯುತ್ತಿವೆ. ಅದೇ ಥರ ಸ್ಟಾರ್ ಸುವರ್ಣದಲ್ಲೂ 'ಲಕ್ಷ್ಮೀ ಟಿಫಿನ್ ರೂಮ್' ಎಂಬ ಧಾರಾವಾಹಿ ಈ ಹಿಂದೆ ಲಾಂಚ್ ಆಗಿತ್ತು. ಅದು ಅಣ್ಣತಮ್ಮಂದಿರ ಧಾರಾವಾಹಿಯಾಗಿತ್ತು. ಸ್ವಲ್ಪ ಜೇಷ್ಠ ಸಿನಿಮಾವನ್ನು ನೆನಪು ಮಾಡುತ್ತಿತ್ತು. ಇದೀಗ ಅದೆ ಹೆಸರಿನಲ್ಲಿ ಸ್ಟಾರ್ ಸುವರ್ಣದಲ್ಲಿ ಧಾರಾವಾಹಿ ಬರ್ತಾ ಇದೆ.
ಲಕ್ಷ್ಮೀ ಟಿಫನ್ ರೂಮ್ ಧಾರಾವಾಹಿ ಸಂಪ್ರದಾಯಸ್ಥ, ಕೂಡು ಕುಟುಂಬದ ಧಾರಾವಾಹಿಯಾಗಿದೆ. ಅಜ್ಜಯ್ಯನೇ ಎಲ್ಲಾ. ಅಜ್ಜಯ್ಯನ ಮಾತು ಮೀರುವಂತೆಯೇ ಇಲ್ಲ. ಮನೆಯ ಹಿರಿಯ ಸದಸ್ಯ ಅವರು. ಲಕ್ಷ್ಮೀ ಹಾಗೂ ಸ್ಕಂದನ ಮೇಲೆಯೇ ಕಥೆ ಸಾಗುತ್ತಿದೆ. ಆದರೆ ಈಗ ಇದ್ದಕ್ಕಿದ್ದ ಹಾಗೇ ಧಾರಾವಾಹಿ ಮುಕ್ತಾಯವಾಗುತ್ತಿದೆ.

ಮುಕ್ತಾಯದ ಸಂಚಿಕೆಗಳು ಪ್ರಸಾರ
ಸ್ಟಾರ್ ಸುವರ್ಣ ಧಾರಾವಾಹಿಯಲ್ಲಿ ಲಕ್ಷ್ಮೀ ಟಿಫನ್ ರೂಂ ಧಾರಾವಾಹಿ ಶುರುವಾಗಿತ್ತು. ಆರಂಭದಲ್ಲಿ ಅದ್ಭುತವಾಗಿ ಲಾಂಚ್ ಆಗಿತ್ತು. ಆದರೆ ಈಗ ಸದ್ಯಕ್ಕೆ ಕೊನೆಯ ಸಂಚಿಕೆಗಳನ್ನು ಪ್ರಸಾರ ಮಾಡುತ್ತಿದೆ. ಅಜ್ಜಯ್ಯನ ಮನಸ್ಸು ಬದಲಾಗಬೇಕಿದೆ. ಸ್ಕಂದ ಐದು ಲಕ್ಷ ಹಣವನ್ನು ಲಕ್ಷ್ಮೀ ಮನೆಯವರಿಗೆ ಸಹಾಯವಾಗಿ ನೀಡಿದ್ದ. ಇದು ಅಜ್ಜಯ್ಯನಿಗೆ ತಿಳಿದು ಕೆಂಡಾಮಂಡಲರಾಗಿದ್ದಾರೆ. ಜೊತೆಗೆ ಲಕ್ಷ್ಮೀ ಮೊದಲೇ ಗೊತ್ತಿದ್ದರೂ ಹೇಳದೆ ನಾಟಕವಾಡಿದ್ದಾನೆಂದು ಅಜ್ಜಯ್ಯ ಕೋಪ ಮಾಡಿಕೊಂಡಿದ್ದಾರೆ. ಇದು ಕೊನೆಯ ಸಂಚಿಕೆಯಾಗಿದ್ದಾವೆ.
ಒಳ್ಳೆಯ ರೆಸ್ಪಾನ್ಸ್ ಪಡೆದಿದ್ದ ಧಾರಾವಾಹಿ
ಈ ಧಾರಾವಾಹಿ ಕೂಡು ಕುಟುಂಬದ ಧಾರಾವಾಹಿಯಾಗಿದೆ. ಮನೆಯ ಹೆಣ್ಣು ಮಕ್ಕಳು ಸಂಪ್ರದಾಯವನ್ನು ಹೆಚ್ಚು ಪಾಲನೆ ಮಾಡಬೇಕು. ಒಂದಿಡಿ ಕುಟುಂಬದ ಕಥೆ ಇದಾಗಿದೆ. ಹೀಗಾಗಿ ಧಾರಾವಾಹಿ ಆರಂಭವಾದಾಗಿನಿಂದ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿತ್ತು. ಹೀಗಾಗಿ ಧಾರಾವಾಹಿ ಸ್ಟಾಪ್ ಆಗಿದ್ದಕ್ಕೆ ಪ್ರೇಕ್ಷಕರು ಬೇಸರ ವ್ಯಕ್ತಿಗಳು ಪಡಿಸಿದ್ದಾರೆ. ಈ ಧಾರಾವಾಹಿ ಸ್ಟಾಪ್ ಮಾಡಬಾರದಿತ್ತು ಅಂತ ಒಬ್ಬರು ಅಂದ್ರೆ, ಸ್ಟಾರ್ ಸುವರ್ಣದಲ್ಲಿ ಬರೀ ಹೀಗೆ ಆಗುತ್ತ. ಈ ಬಂದ ರಾಜಿ, ರಾಣಿ, ರುಕ್ಕು ಧಾರಾವಾಹಿಯೂ ಹೀಗೆ ಅರ್ಧದಲ್ಲೇ ನಿಲ್ಲಿಸಿತ್ತು ಎಂದು ಕಮೆಂಟ್ ಹಾಕಿದ್ದಾರೆ.

ಸುನೇತ್ರಾ ಪಂಡಿತ್ ಬೇಸರ
ಸುನೇತ್ರಾ ಪಂಡಿತ್ ಕೂಡ ಈ ಕೂಡು ಕುಟುಂಬದ ಧಾರಾವಾಹಿಯಲ್ಲಿ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಧಾರಾವಾಹಿ ಮುಗಿಯುತ್ತಿರುವುದಕ್ಕೆ ಸುನೇತ್ರಾ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಹಾಕಿದ್ದಾರೆ. ಎಲ್ಲಾ ಕಲಾವಿದರಿಗೂ ಹಾಗೇ ಅಲ್ಲವೆ ತಾವೂ ಅಭಿನಯಿಸುತ್ತಿದ್ದ ಧಾರಾವಾಹಿ, ಸಿನಿಮಾಗಳು ನಿಂತು ಹೋದರೆ ಅವರಿಗೂ ಬೇಸರ.
ಸುಂದ್ರಿಗೆ ಸಮಾಧಾನ ಮಾಡಿದ ಫ್ಯಾನ್ಸ್
ಸುನೇತ್ರಾ ಪಂಡಿತ್ ಅವರಿಗೆ ಅಭಿಮಾನಿ ಬಳಗವಿದೆ. ಹೀಗಾಗಿ ಕಮೆಂಟ್ ಸೆಕ್ಷನ್‌ನಲ್ಲಿಯೇ ಸಮಾಧಾನ ಮಾಡುತ್ತಿದ್ದಾರೆ. ಸುಂದ್ರಿ ಮೇಡಂ ನೀವೂ ಬೇಸರ ಮಾಡಿಕೊಳ್ಳಬೇಡಿ. ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ನೀವೂ ಚೆನ್ನಾಗಿ ಅಭಿನಯಿಸ್ತಾ ಇದ್ದೀರ. ಸುಂದ್ರಿ ಪಾತ್ರ ಎಲ್ಲರಿಗೂ ಇಷ್ಟ. ಬೇಸರ ಮಾಡಿಕೊಳ್ಳಬೇಡಿ ಅಂತ ಸಮಾಧಾನ ಮಾಡಿದ್ದಾರೆ. ಆದರೆ ಲಕ್ಷ್ಮೀ ಟಿಫನ್ ರೂಮ್ ಧಾರಾವಾಹಿಗೂ ಒಳ್ಳೆ ನೋಡುಗರ ಬಳಗವಿತ್ತು. ಆದರೆ ಇದ್ದಕ್ಕಿದ್ದ ಹಾಗೇ ಯಾಕೆ ನಿಲ್ಲಿಸ್ತಾ ಇರೋದು ತಿಳಿತಿಲ್ಲ. ಕೆಲವೊಮ್ಮೆ ಟಿಆರ್ಪಿ ಬಾರದೆ ಹೋದಾಗಲು ಸ್ಟಾರ್ ಸುವರ್ಣ ಧಾರಾವಾಹಿಯನ್ನು ಸ್ಟಾಪ್ ಮಾಡುತ್ತೆ.


Click it and Unblock the Notifications











