'ಮನಸ್ಸೆಲ್ಲಾ ನೀನೆ' ಧಾರಾವಾಹಿ 'ದಿ ಎಂಡ್': ಅಂತಹದ್ದೇನು ಕಾರಣ?

By ಅನಿತಾ ಬನಾರಿ

ಹೆಚ್ಚಿದ ಸ್ಪರ್ಧೆಯ ನಡುವೆ ಟಿಆರ್‌ಪಿ ಕಡಿಮೆಯಾಗುತ್ತಿದೆ ಎಂಬ ಕಾರಣ ಕೊಟ್ಟುಕೊಂಡು ಇತ್ತೀಚಿಗೆ ಬಹಳಷ್ಟು ಕನ್ನಡ ಧಾರವಾಹಿಗಳು ಕೊನೆ ಕಾಣುತ್ತಿವೆ. ಕನ್ನಡ ಕಿರುತೆರೆಯ ಪಾಪ್ಯುಲರ್ ಧಾರಾವಾಹಿ 'ಕನ್ನಡತಿ' ಮುಕ್ತಾಯಗೊಂಡ ಬಳಿಕ ಹಲವು ಧಾರಾವಾಹಿಗಳನ್ನು ನಿಲ್ಲಿಸಲಾಗಿತ್ತು.

ಇದರಲ್ಲಿ ಜನಪ್ರಿಯ ಧಾರಾವಾಹಿಗಳಾದ 'ನಾಗಿಣಿ 2', 'ಮರಳಿ ಮನಸಾಗಿದೆ', ಈಗ 'ಜೊತೆ ಜೊತೆಯಲಿ' ಧಾರಾವಾಹಿ ಕೂಡ ಕೊನೆಗೊಳ್ಳಲಿದೆ. ಈ ಬೆನ್ನಲ್ಲೇ ಮತ್ತೊಂದು ಈ ಸಾಲಿಗೆ ಸೇರಲಿದೆ ಅದುವೇ 'ಮನಸೆಲ್ಲಾ ನೀನೆ'.

Star Suvarna Serial Manassella Neene ended due to low TRP Ratings

ಹೌದು! 'ಮನಸೆಲ್ಲಾ ನೀನೆ' ಧಾರಾವಾಹಿ ಸುಖಾಂತ್ಯ ಕಾಣುವ ಮೂಲಕ ಮುಕ್ತಾಯಗೊಂಡಿದ್ದು 722 ಎಪಿಸೋಡ್ ದಿ ಎಂಡ್ ಎಂದಿದೆ. ಈ ಧಾರಾವಾಹಿಯ ಅಭಿಮಾನಿಗಳು ಕೊನೆಗೊಂಡಿದ್ದಕ್ಕೆ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ. ಆದರೆ ಒಳ್ಳೆಯ ರೀತಿಯ ಅಂತ್ಯ ಕೊಟ್ಟಿದ್ದು ಸಮಾಧಾನವನ್ನೂ ತಂದಿದೆ.

'ಮನಸ್ಸೆಲ್ಲಾ ನೀನೆ' ಧಾರಾವಾಹಿ ಮುಕ್ತಾಯವಾಗುವುದಕ್ಕೆ ಕಾರಣ ಎಂಬುದು ತುಸು ಬೇಸರದ ಸಂಗತಿ. ಇದಕ್ಕೆ ಕಾರಣ ಕಡಿಮೆ ಟಿಆರ್‌ಪಿ ಎಂದು ಹೇಳಲಾಗುತ್ತಿದೆ. ಅಲ್ಲದೆ 722 ಎಪಿಸೋಡ್‌ಗಳ ಬಳಿಕ ಕಥೆಯನ್ನು ಮುಂದುವರೆಸಲು ಸಾಧ್ಯವಾಗುತ್ತಿರಲಿಲ್ಲ. ಈ ಕಾರಣಕ್ಕೆ ಧಾರಾವಾಹಿಯನ್ನು ನಿಲ್ಲಿಸಲಾಗಿದೆ ಎನ್ನಲಾಗಿದೆ.

Star Suvarna Serial Manassella Neene ended due to low TRP Ratings

ಪ್ರಿಯಾಂಕ ಚಿಂಚೋಳಿ ಹಾಗೂ ಸುಜಿತ್ ಹೆಗಡೆ 'ಮನಸ್ಸೆಲ್ಲಾ ನೀನೆ' ಧಾರಾವಾಹಿಯ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಧಾರಾವಾಹಿ ದಾಂಪತ್ಯದ ಒಳ್ಳೆಯ ಸಂದೇಶವನ್ನು ಸಾರುತ್ತಿತ್ತು. ಈ ಎರಡು ನಟರು ತಮ್ಮ ತಮ್ಮ ಪಾತ್ರಗಳಿಗೆ ಚೆನ್ನಾಗಿ ಜೀವ ತುಂಬುವ ಕೆಲಸವನ್ನೂ ಮಾಡಿದ್ದರು. ಇವರಿಬ್ಬರ ಕೆಮಿಸ್ಟ್ರಿಯಂತೂ ಪರದೆಯ ಮೇಲೆ ಅದ್ಭುತವಾಗಿ ಮೂಡಿ ಬರುತ್ತಿತ್ತು.

2020 ರ ಡಿಸೆಂಬರ್ 7ರಂದು, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಆರಂಭವಾದ 'ಮನಸೆಲ್ಲಾ ನೀನೆ ' ಧಾರಾವಾಹಿಯಲ್ಲಿ ಮೊದಲಿಗೆ ರಶ್ಮಿ ಪ್ರಭಾಕರ್, ರಾಗಾ ಅನ್ನೋ ಪಾತ್ರವನ್ನು ಮಾಡುತ್ತಿದ್ದರು. ನಂತರದಲ್ಲಿ ಪ್ರಿಯಾಂಕ ಚಿಂಚೋಳಿ ಆ ಪಾತ್ರದಲ್ಲಿ ಕಾಣಿಸಿಕೊಂಡರು. ಹಾಗೇ ನಾಯಕನ ಪಾತ್ರದಲ್ಲಿ ಸುಜಿತ್ ಹೆಗಡೆಯವರು ಧಾರವಾಹಿಯುದ್ದಕ್ಕೂ ಮುಂದುವರೆದಿದ್ದರು.

ಆದಿತ್ಯ ಹಾಗೂ ರಾಗಾ ಎಂಬ ದಂಪತಿಯ ನಡುವಿನ ಪ್ರೀತಿಯನ್ನು ಅದ್ಭುತವಾಗಿ ಕಟ್ಟಿಕೊಡುವ ಪ್ರಯತ್ನವನ್ನು ಮಾಡುತ್ತಿತ್ತು. ವೀಕ್ಷಕರೊಂದಿಗೂ ಧಾರಾವಾಹಿ ಒಳ್ಳೆಯ ಭಾವನಾತ್ಮಕ ಸಂಬಂಧ ಬೆಳೆಸುವಲ್ಲಿ ಯಶಸ್ವಿಯಾಗಿತ್ತು.

ಇದೀಗ ಕಥೆಯ ಕೊನೆಯಲ್ಲಿ ಕೌಸಲ್ಯಾ, ಅಶ್ವಿನಿಯನ್ನು ತನ್ನ ಮಗಳು ಎಂದು ಒಪ್ಪಿಕೊಳ್ಳುವ ಮೂಲಕ ಆದಿಯ ಕುಟುಂಬಕ್ಕೆ ಸಂತೋಷವಂನ್ನುಟು ಮಾಡುತ್ತದೆ. ಈ ರೀತಿಯಲ್ಲಿ ಹ್ಯಾಪಿ ಎಂಡಿಂಗ್ ಕೊಟ್ಟು ಧಾರಾವಾಹಿಗೆ ಅಂತ್ಯ ಹಾಡಲಾಗಿದೆ.

ಈ ಧಾರಾವಾಹಿ ತಂಡ ಇದಕ್ಕೂ ಮೊದಲು 'ಮನಸಾರೆ' ಅನ್ನೋ ಧಾರಾವಾಹಿಯನ್ನು ಹೊರತರುವಲ್ಲಿ ಯಶಸ್ವಿಯಾಗಿತ್ತು. ಇನ್ನು 'ಮನಸ್ಸೆಲ್ಲಾ ನೀನೆ' ಧಾರಾವಾಹಿಯನ್ನು ಮುಗಿಸಿದ ಬಳಿಕ ತಂಡದ ಮುಂದಿನ ಯೋಜನೆ ಏನು ಅನ್ನೋದು ಸದ್ಯಕ್ಕೆ ರಹಸ್ಯವಾಗಿಯೇ ಇದೆ.

More from Filmibeat

English summary
Star Suvarna Serial Manassella Neene ended due to low TRP Ratings, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X