Marali Manasagide: ʻಮರಳಿ ಮನಸಾಗಿದೆʼ ಸ್ಪಂದನಾ ಇಷ್ಟು ಚೆಂದ ಕಾಣುಲು ಕಾರಣ ಯಾರಿದ್ದಾರೆ?

By ಎಸ್ ಸುಮಂತ್

ಸ್ಟಾರ್ ಸುವರ್ಣದಲ್ಲಿ ಮೂಡಿ ಬರುತ್ತಿರುವ ಮರಳಿ ಮನಸಾಗಿದೆ ಧಾರಾವಾಹಿ ಸದ್ಯ ಎಲ್ಲರ ಅಚ್ಚುಮೆಚ್ಚುಗೆ ಪಡೆದಿದೆ. ವಿಕ್ರಾಂತ್ , ಸ್ಪಂದನಾ ಜೋಡಿ ಮಧ್ಯೆ ಈಗ ವೈಶು ಸಿಕ್ಕಾಪಟ್ಟೆ ದುಷ್ಮನ್ ಆಗಿ ನಿಂತಿದ್ದಾಳೆ. ಇದು ಪ್ರೇಕ್ಷಕರನ್ನು ಕೆರಳಿ ಕೆಂಡವನ್ನಾಗಿಸಿದೆ. ಆದರೂ ಏನೇ ಅಡ್ಡಿ ಆತಂಕಗಳು ಬರಲಿ, ಗಂಡ ಹೆಂಡತಿ ಸುಖವಾಗಿ ಸಂಸಾರ ಮಾಡುತ್ತಾರೆ ಎನ್ನುವಾಗಲೇ ಕೆಲವೊಂದು ವಿಘ್ನಗಳು ಎದುರಾಗುತ್ತಿವೆ.

ಸ್ಪಂದನಾ ಮತ್ತು ವಿಕ್ರಾಂತ್ ನಡುವೆ ಈಗೀಗ ಪ್ರೀತಿ ಚಿಗುರೊಡೆಯುತ್ತಿತ್ತು. ಅವರಿಬ್ಬರು ಪ್ರೀತಿಯಲ್ಲಿ ಒದ್ದಾಡುವುದೇ ನೋಡುವುದಕ್ಕೆ ಚೆಂದ ಎನ್ನಿಸುತ್ತಿತ್ತು. ಆದರೆ ಈ ವೈಶೂ ಆ ಎಲ್ಲಾ ನೆಮ್ಮದಿಯನ್ನು ಹಾಳು ಮಾಡಿದ್ದಾಳೆ. ತನ್ನ ಸುಖಕ್ಕೋಸ್ಕರ ಅವರಿಬ್ಬರನ್ನೂ ದೂರ ಮಾಡಲು ನಿಂತಿದ್ದಾಳೆ. ಏನೇ ಆಗಲಿ ಮತ್ತೆ ಆ ಜೋಡಿ ಒಂದಾಗಿ ಬಾಳಲಿ ಅನ್ನೋದು ಧಾರಾವಾಹಿ ಪ್ರಿಯರ ಹಾರೈಕೆಯಾಗಿದೆ.

ಲಂಗ-ದಾವಣಿಯಲ್ಲಿ ಕಣ್ಣು ಕುಕ್ಕಿದ ಸ್ಪಂದನಾ

ಲಂಗ-ದಾವಣಿಯಲ್ಲಿ ಕಣ್ಣು ಕುಕ್ಕಿದ ಸ್ಪಂದನಾ

ಸ್ಪಂದನಾ ಇದು 'ಮರಳಿ ಮನಸಾಗಿದೆ' ಧಾರಾವಾಹಿಯ ಪಾತ್ರದ ಹೆಸರು. ನೋಡೋಕೆ ಮುಗ್ಧೆ ಆದರೆ ತನಗಿಷ್ಟವಿಲ್ಲದ್ದನ್ನು ಮಾಡುವುದಕ್ಕೆ ಸುತಾರಾಂ ಒಪ್ಪಲ್ಲ. ಹಾಗೆ ತನ್ನ ಮೇಲೆ ಅಧಿಕಾರ ಚಲಾಯಿಸುವವರನ್ನು ಈಕೆಗೆ ಅರಗಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಅಂತಹ ಹಠಮಾರಿ ಹೆಣ್ಣು. ಆದರೆ ಈಕೆಯ ಲುಕ್ಕಿಗೆ ಅದೆಷ್ಟು ಜನ ಕ್ಲೀನ್ ಬೋಲ್ಡ್ ಆಗಿದ್ದಾರೆ ಅನ್ನೋದು ಮಾತ್ರ ಊಹೆಗೆ ನಿಲುಕದ್ದು.

ಸ್ಪಂದನಾ ಅಸಲಿ ಹೆಸರೇನು?

ಸ್ಪಂದನಾ ಅಸಲಿ ಹೆಸರೇನು?

ಈಕೆಯ ನಿಜವಾದ ಹೆಸರು ದಿವ್ಯಾ ವಾಗುಕರ್. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇಲ್ಲದೆ ಇದ್ದರೂ, ಆಗೊಂದು ಹೀಗೊಂದು ಅಂತ ಪೋಸ್ಟ್ ಹಾಕುತ್ತಾ ಇರುತ್ತಾರೆ. ಹಾಗಂತ ಫಾಲೋವರ್ಸ್ ಏನು ಕಡಿಮೆ ಇಲ್ಲ. 59 ಸಾವಿರ ಜನ ಈ ನಟಿಮಣಿಯನ್ನು ಫಾಲೋ ಮಾಡುತ್ತಿದ್ದಾರೆ. ದಿವ್ಯಾ ವಾಗುಕರ್ ಸೋಶಿಯಲ್ ಮೀಡಿಯಾ ಒಮ್ಮೆ ತೆಗೆದು ನೋಡಿದರೆ ಹೆಚ್ಚು ಟ್ರೆಡಿಷನಲ್ ಡ್ರೆಸ್‌ಗಳ ಫೋಟೊಗಳೇ ಕಣ್ಣಿಗೆ ಕಾಣಿಸುತ್ತೆ. ಅದರಲ್ಲಿ ಲಂಗ ದಾವಣಿ ಫೋಟೊದಲ್ಲಿ ಮುದ್ದು ಮುದ್ದಾಗಿ ಕಾಣಿಸುತ್ತಾರೆ.

ಮಧು ಮಗಳ ಡ್ರೆಸ್‌ನಲ್ಲಿ ದಿವ್ಯಾ ಮುದ್ದು ಮುದ್ದು

ಮಧು ಮಗಳ ಡ್ರೆಸ್‌ನಲ್ಲಿ ದಿವ್ಯಾ ಮುದ್ದು ಮುದ್ದು

ದಿವ್ಯಾ ವಾಗುಕರ್ ಸೀರೆಯಲ್ಲಿರುವ ಫೋಟೋಗಳನ್ನು ಹೆಚ್ಚಾಗಿ ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲೂ ಮಧುಮಗಳ ಲುಕ್‌ನಲ್ಲಿ ತುಂಬಾನೇ ಮುದ್ದು ಮುದ್ದಾಗಿ ಕಾಣುತ್ತಿದ್ದಾರೆ. ದಿವ್ಯಾ 'ಮರಳಿ ಮನಸಾಗಿದೆ' ಧಾರಾವಾಹಿಗೂ ಮುನ್ನ 'ಮಾಂಗಲ್ಯಂ ತಂತುನಾನೇನಾ' ಎಂಬ ಧಾರಾವಾಹಿಯಲ್ಲೂ ಕಾಣಿಸಿಕೊಂಡಿದ್ದರು. ಆ ಧಾರಾವಾಹಿಯಲ್ಲಿಯೂ ಹೆಚ್ಚು ಸಾಂಪ್ರಾದಾಯಿಕ ಉಡುಗೆಯಲ್ಲಿಯೇ ಕಾಣಿಸಿಕೊಂಡಿದ್ದರು. ಈಗ ಮತ್ತೆ ಅದೇ ಲುಕ್ ರಿಪೀಟ್ ಮಾಡಿದ್ದಾರೆ. ಹೊಸದಾಗಿ ಮದುವೆಯಾಗುವ ಹೆಣ್ಣು ಮಕ್ಕಳಿಗೆ ಅಥವಾ ಮದುವೆಯ ಫ್ಲ್ಯಾನ್ ಮಾಡುತ್ತಿರುವವರಿಗೂ ಈ ಲುಕ್ ಒಂದು ಸ್ಪೂರ್ತಿಯಿದ್ದಂತೆ.

ಶ್ವೇತಾ ಸುಧಿ ಕೈಚಳಕದಿಂದ ದಿವ್ಯಾ ಲುಕ್ ಚೇಂಜ್

ಶ್ವೇತಾ ಸುಧಿ ಕೈಚಳಕದಿಂದ ದಿವ್ಯಾ ಲುಕ್ ಚೇಂಜ್

ಹೆಣ್ಣು ಮಕ್ಕಳಿಗೆ ತುಂಬಾ ಸುಂದರವಾಗಿ ಕಾಣಬೇಕು ಅನ್ನೋ ಆಸೆ ಖಂಡಿತ ಇದ್ದೆ ಇರುತ್ತದೆ. ಮದುವೆ, ಸಮಾರಂಭಗಳಲ್ಲೆಲ್ಲಾ ತಮ್ಮ ಲುಕ್ ಚೆಂಜ್ ಮಾಡಿಕೊಳ್ಳಲು ನಾನಾ ಸ್ಟೈಲ್ ಮಾಡುತ್ತಾರೆ. ನಟಿಮಣಿಯರನ್ನು ಇದಕ್ಕಾಗಿ ಫಾಲೋ ಮಾಡುವುದು ಉಂಟು. ಆದರೆ ಅವರ ಹಿಂದೆ ಯಾರಿದ್ದಾರೆ ಅನ್ನೋದು ಮಾತ್ರ ತಿಳಿದುಕೊಳ್ಳುವುದಕ್ಕೆ ಹೋಗುವುದಿಲ್ಲ. ಈಗ ಆ ವಿಚಾರವನ್ನು ನಾವೂ ನಿಮಗೆ ಹೇಳುತ್ತೀವಿ.

ದಿವ್ಯಾ ಇಷ್ಟು ಸುಂದರವಾಗಿ ಕಾಣುವುದಕ್ಕೆ ಕಾರಣ ಶ್ವೇತಾ ಸುಧಿ ಎಂಬ ಮೇಕಪ್ ಆರ್ಟಿಸ್ಟ್. ಈ ಶ್ವೇತಾ ಸುಧಿ ಅವರು ದಿವ್ಯಾ ಅವರಿಗೆ ಮಾತ್ರ ಅಲ್ಲ 'ಹಿಟ್ಲರ್ ಕಲ್ಯಾಣ'ದ ಅಂತರ, ಪವಿತ್ರಾ ಸೇರಿದಂತೆ ಹಲವರಿಗೆ ಇಷ್ಟೇ ಸುಂದರವಾಗಿ ಕಾಣುವಂತ ಮೇಕಪ್ ಮಾಡಿದ್ದಾರೆ. ಅಷ್ಟೇ ಅಲ್ಲ ಶ್ವೇತಾ ಸುಧಿ ಬಳಿ ಜ್ಯುವೆಲ್ಲರಿ ಕಲೆಕ್ಷನ್ಸ್ ಕೂಡ ಹೆಚ್ಚಾಗಿದೆ. ದಿವ್ಯಾ ಔಟ್ ಲುಕ್ಕಿಗೆ ಇವರೂ ಕಾರಣಕರ್ತರೇ.

More from Filmibeat

English summary
Star suvarna serial Marali Manasagide actress Divaya Wagukar Outlook. Here is the details about Divaya wagukar Makeup.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X