Marali Manasagide: 'ಮರಳಿ ಮನಸಾಗಿದೆ' ಸುಜಾತಮ್ಮನಿಗೆ ನಟನೆ ಅಷ್ಟೆ ಅಲ್ಲ, ಬಾಕ್ಸಿಂಗ್ ಕೂಡ ಬರುತ್ತೆ.!

By ಎಸ್ ಸುಮಂತ್

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬರುತ್ತಿರುವ 'ಮರಳಿ ಮನಸಾಗಿದೆ' ಧಾರಾವಾಹಿ ಸದ್ಯಕ್ಕಂತೂ ಎಲ್ಲರ ಕುತೂಹಲ ಕೆರಳಿಸಿದೆ. ಪ್ರೇಕ್ಷಕ ಮಹಾಪ್ರಭುಗಳಿಗೆ ಸ್ಪಂದನಾ ತುಂಬಾ ಇಷ್ಟ ಆಗುತ್ತಾರೆ. ಆದರೆ ಅದೇ ಮನೆಯಲ್ಲಿರುವ ಸಾಕಷ್ಟು ಮಂದಿಗೆ ಸ್ಪಂದನಾ ಕಾಡು ಕೋಳಿ, ಹಠಮಾರಿ, ಹೇಳಿದಂತೆ ಕೇಳಲ್ಲ ಅನ್ನೋ ಸಾಕಷ್ಟು ದೂರುಗಳು ಸಿಗುತ್ತವೆ. ವೈಶು ಮಾಡುವ ಎಲ್ಲಾ ಕಿತಾಪತಿ ಸ್ಪಂದನಾ‌ ವಿರುದ್ಧ ದ್ವೇಷವಾಗಿ ಕನ್ವರ್ಟ್ ಆದರೆ, ವೈಶೂ ಪರ ಸಿಂಪತಿ ಪಡೆದುಕೊಳ್ಳುತ್ತಿದೆ. ಮನೆಯವರೆಲ್ಲ ಒಂದಾದರೂ ಸೊಸೆಯ ಪರ ನಿಂತಿರೋದು ಮಾತ್ರ ವಿಕ್ರಾಂತ್ ಅಮ್ಮ ಸುಜಾತ.

ಸ್ಪಂದನಾ ತಂದೆ ತಾಯಿ ಇಲ್ಲದ ಮಗು. ಆಕೆಯನ್ನು ನಾವೇ ನೋಡಿಕೊಳ್ಳಬೇಕು. ಆಕೆ ಕೂಡ ಒಳ್ಳೆಯವಳೇ, ನೀವೂ ಸಮಾನವಾಗಿ ನೋಡಿಕೊಂಡರೆ ಬದಲಾಗುತ್ತಾಳೆ ಅನ್ನೋದು ಸುಜಾತಮ್ಮನ ವಾದ. ಸೀರಿಯಲ್‌ನಲ್ಲಂತೂ ಸಾಫ್ಟ್ ಕ್ಯಾರೆಕ್ಟರ್‌ನಲ್ಲಿ ರಂಜಿಸುವ ಸುಜಾತಮ್ಮ, ಅದೆಷ್ಟು ಇಷ್ಟವಾಗಿ ಬಿಡುತ್ತಾರೆ ಗೊತ್ತಾ? ಆದರೆ ತೆರೆ ಹಿಂದೆ ಅವರದ್ದು ನಾನಾ ಟ್ಯಾಲೆಂಟ್ ಇದೆ. ಅವರ ಸೋಶಿಯಲ್ ಮೀಡಿಯಾ ನೋಡಿದಾಗ ಈ ವಿಷಯ ಗೊತ್ತಾಗುತ್ತೆ.

ಹರಿಣಿಗೆ ಡಾನ್ಸ್ ಅಂದ್ರೆ ಅಚ್ಚುಮೆಚ್ಚು

ಹರಿಣಿಗೆ ಡಾನ್ಸ್ ಅಂದ್ರೆ ಅಚ್ಚುಮೆಚ್ಚು

ಸುಜಾತ ಅಲಿಯಾಸ್ ಹರಿಣಿ ಶ್ರೀಕಾಂತ್. ಈಗಾಗಲೇ ಸಾಕಷ್ಟು ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ಪೋಷಕ ನಟಿ‌ ಪಾತ್ರದಲ್ಲಿ ಎಲ್ಲರನ್ನು ಸೆಳೆದಿದ್ದಾರೆ. ಇದೀಗ 'ಮರಳಿ‌ ಮನಸಾಗಿದೆ' ಧಾರಾವಾಹಿಯಲ್ಲೂ ಅಷ್ಟೇ ಪಾಸಿಟಿವ್ ಕ್ಯಾರೆಕ್ಟರ್ ಪ್ಲೇ ಮಾಡುತ್ತಿದ್ದಾರೆ. ಮಗ ಸೊಸೆ ಜೀವನ ಚೆನ್ನಾಗಿರಬೇಕು ಅಂದರೆ ಅದು ಈ ಸುಜಾತಮ್ಮನಿಂದ ಮಾತ್ರ ಸಾಧ್ಯವಾಗುತ್ತೆ. ಅಷ್ಟರಮಟ್ಟಿಗೆ ಸೇತುವೆಯಾಗಿದ್ದಾರೆ. ಆದರೆ ಹರಿಣಿಯವರು ಅದೆಷ್ಟು ಬ್ಯೂಟಿಫುಲ್ ಅನ್ನೋದನ್ನು ನೀವೂ ನೋಡಬೇಕು ಅಂದರೆ ಒಮ್ಮೆ ಅವರ ಸೋಶಿಯಲ್ ಮೀಡಿಯಾಗೆ ಎಂಟ್ರಿ ಕೊಡಲೇಬೇಕಾಗುತ್ತದೆ.

ಶಿವನ ಸ್ತೋತ್ರಗಳಿಗೆ ಹೆಜ್ಜೆ ಹಾಕಿದ ನಟಿ

ನಟ-ನಟಿಯರಿಗೆ ನಟನೆ ಹೊರತಾಗಿ ಹಲವು ಟ್ಯಾಲೆಂಟ್ ಇರುತ್ತೆ. ಒಮ್ಮೊಮ್ಮೆ ಆ ಟ್ಯಾಲೆಂಟನ್ನು ಧಾರಾವಾಹಿಯಲ್ಲಿ ಬಳಸೋದಕ್ಕೆ ಸಾಧ್ಯವಾಗಿರುವುದಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಸೋಶಿಯಲ್ ಮೀಡಿಯಾ ಇದಕ್ಕೆಲ್ಲಾ ದೊಡ್ಡ ಫ್ಲಾಟ್ ಫಾರ್ಮಾ ಆಗಿದೆ. ಹರಿಣಿಯವರ ಒಂದೊಂದು ಡ್ಯಾನ್ಸ್ ಮನಮುಟ್ಟುವಂತಿದೆ. ಅವರ ಸೋಶಿಯಲ್ ಮೀಡಿಯಾ ನೋಡಿದಾಗಲೇ ಅವರಿಗೆ ಡ್ಯಾನ್ಸ್‌ನಲ್ಲಿ ಎಷ್ಟು ಆಸಕ್ತಿ ಇದೆ ಅನ್ನೋದು ಗೊತ್ತಾಗುತ್ತೆ. ಜೊತೆಗೆ ಅವರು ಡ್ಯಾನ್ಸ್‌ನಲ್ಲಿ ಪರಿಣಿತಿ ಕೂಡ ಹೊಂದಿದ್ದಾರೆ. ಅದರಲ್ಲೂ ಕೃಷ್ಣ ಮತ್ತು ಶಿವನ ಸ್ತೋತ್ರಗಳಿಗೆ ಹೆಚ್ಚು ಹೆಜ್ಜೆ ಹಾಕಿರೋದು ಕಾಣಬಹುದು. ಇದರಿಂದಾಗಿ ಅವರಿಗೆ ಯಾವ ದೇವರುಗಳು ಇಷ್ಟ ಎಂಬುದು ತಿಳಿದಂತಾಗಿದೆ.

ಕುಟುಂಬದ ಜೊತೆ ಸುತ್ತಾಡೋದು ಅಂದರೆ ಇಷ್ಟ

ಕುಟುಂಬದ ಜೊತೆ ಸುತ್ತಾಡೋದು ಅಂದರೆ ಇಷ್ಟ

ನಟ-ನಟಿಯರಿಗೆ ಸಮಯ ಸಿಗುವುದು ಕಡಿಮೆ. ಸಿಕ್ಕರೆ ಹೆಚ್ಚಾಗಿಯೇ ಸಿಗುತ್ತದೆ. ಬರೀ ಒಂದು ಧಾರಾವಾಹಿ ಮಾಡುವವರಿಗೆ ಹದಿನೈದು ದಿನ ಶೂಟಿಂಗ್ ಇದ್ದರೆ, ಇನ್ನು ಹದಿನೈದು ದಿನ ರಜೆ ಇರುತ್ತೆ. ಆದರೆ ಸಿನಿಮಾ, ಧಾರಾವಾಹಿ ಅಂತ ಎಲ್ಲಾ ಕಡೆ ಬ್ಯುಸಿ ಇರುವವರಿಗೆ ಸಮಯ ಸಿಗೋದು ಸ್ವಲ್ಪ ಕಷ್ಟವೇ. ಹರಿಣಿ ಶ್ರೀಕಾಂತ್ ಕೂಡ ಸಿಕ್ಕಾಪಟ್ಟೆ ಬ್ಯುಸಿ ಇರುವ ನಟಿ. ಆ ಬ್ಯುಸಿ ನಡುವೆಯೂ ಕುಟುಂಬದ ಜೊತೆ ಆಗಾಗ ಟ್ರಿಪ್ ಹಾಕುತ್ತಾ ಇರುತ್ತಾರೆ.

ಕುಟುಂಬ ಅಂದರೆ ಎಲ್ಲರಿಗೂ ಸಾಮಾನ್ಯವಾಗಿ ಪ್ರೀತಿ ಇದ್ದೆ ಇರುತ್ತೆ. ಸಾಕಷ್ಟು ಜನ ಸೆಲೆಬ್ರೆಟಿಗಳಿಗೆ ಫ್ಯಾಮಿಲಿ ಅನ್ನೋದೆ ಬಹು ಮುಖ್ಯವಾಗಿರುತ್ತದೆ. ಅದರಂತೆಯೇ ಹರಿಣಿ ಶ್ರೀಕಾಂತ್ ಅವರಿಗೆ ಕೂಡ. ಎಷ್ಟೇ ಬ್ಯುಸಿ ಇದ್ದರು ಆಗಾಗ ಬಿಡುವು ಮಾಡಿಕೊಂಡು ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಾರೆ. ಹಾಗೇ ಮೊನ್ನೆ ಮೊನ್ನೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿದ್ದ ಫೋಟೊ ಕೂಡ ಹಂಚಿಕೊಂಡಿದ್ದರು.

ಹರಿಣಿಗೆ ಬಾಕ್ಸಿಂಗ್ ಅಂದರೆ ಆಸಕ್ತಿ

ಹೆಣ್ಣು ಮಕ್ಕಳು ಯಾವುದರಲ್ಲಿ ಕಡಿಮೆ ಇದ್ದಾರೆ ಹೇಳಿ ನೋಡೋಣಾ. ಎಷ್ಟೇ ಬ್ಯುಸಿ ಇದ್ದರು ತಮಗಿಷ್ಟವಾದ ಕಲೆಯಲ್ಲೂ ತೊಡಗಿಸಿಕೊಳ್ಳುತ್ತಾರೆ‌. ಅದರಂತೆ ಹರಿಣಿ ಶ್ರೀಕಾಂತ್, ಡ್ಯಾನ್ಸ್, ಬಾಕ್ಸಿಂಗ್‌ನಲ್ಲೂ ಮಿಂಚುತ್ತಿದ್ದಾರೆ. ಎಲ್ಲರ ಜೊತೆ ನಿಂತು ಪ್ರಾಕ್ಟೀಸ್ ಮಾಡುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿದೆ. ಸಿಂಗಲ್ ಆಗಿ ಬಾಕ್ಸಿಂಗ್ ಮಾಡೋ ವಿಡಿಯೋ ನೋಡಿ ಕಿರುತೆರೆ ವೀಕ್ಷಕರು ಫಿದಾ ಆಗಿದ್ದಾರೆ.

More from Filmibeat

English summary
Star Suvarna serial Marali Manasagide actress Sujatha role and Lifestyle. Here is the details about Harini Shreekanth dance and her boxing interest
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X