Marali Manasagide Serial: 200 ಸಂಚಿಕೆ ಪೂರೈಸಿದ 'ಮರಳಿ ಮನಸಾಗಿದೆ' ಧಾರಾವಾಹಿ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಬರುತ್ತಿರುವ 'ಮರಳಿ ಮನಸಾಗಿದೆ' ಧಾರಾವಾಹಿಗೆ 200 ದಿನಗಳ ಸಂಭ್ರಮ. ಇಷ್ಟು ದಿನ ಯಶಸ್ವಿ ಪಯಣದಲ್ಲಿಯೇ ಸಾಗುತ್ತಿದೆ ಈ ಧಾರಾವಾಹಿ. ಇಷ್ಟು ದಿನಗಳಾದರೂ ಕಥೆ ಬೋರಿಂಗ್ ಅನಿಸುತ್ತಿಲ್ಲ. ಪ್ರೇಕ್ಷಕರಿಗೆ ಏನು ಬೇಕು ಅದನ್ನು ಸರಿಯಾದ ರೀತಿ, ಸರಿಯಾದ ಸಮಯಕ್ಕೆ ಒದಗಿಸಿ ಕೊಡುತ್ತಿದೆ ಮರಳಿ ಮನಸಾಗಿದೆ ಟೀಂ.
ಆಕ್ಚುಲಿ ಧಾರಾವಾಹಿಯಲ್ಲಿ ಟ್ವಿಸ್ಟ್ ಅಂಡ್ ಟರ್ನಿಂಗ್ ಪಾಯಿಂಟ್ ಈಗ ಶುರುವಾಗುತ್ತಿದೆ. ಮನೆಯಲ್ಲಿ ಸಾಕಷ್ಟು ಜಗಳದ ನಡುವೆ ಪ್ರೀತಿಯ ರಥವೂ ಸಾಗುತ್ತಿದೆ. 200 ಹಾದಿಯಲ್ಲಿರುವ ಧಾರಾವಾಹಿಯಲ್ಲಿ ಸೊಸೆಯಾಗಿ ಸ್ಪಂದನಾ ಸರಿಯಾದ ಹಾದಿ ಆಯ್ಕೆ ಮಾಡಿಕೊಂಡಿದ್ದಾರೆ. ಸೊಸೆಯನ್ನು ದ್ವೇಷ ಮಾಡುವವರ ಮುಂದೆಯೇ ಸೊಸೆ ಅಂದರೆ ಜವಬ್ದಾರಿ ಏನು ಎಂಬುದನ್ನು ಪ್ರೂವ್ ಮಾಡಿದ್ದಾಳೆ. ಇಡೀ ಟೀಂ 200ರ ಸಂಭ್ರಮದ ಯಶಸ್ಸಿನ ಪಯಣವನ್ನು ಸಂಭ್ರಮಿಸುತ್ತಿದ್ದಾರೆ.

ಮರಳಿ ಮಸನಾಗಿದೆ ಸಾಗಿ ಬಂದಿದ್ದು ಹೀಗೆ
ಕೆಲವೊಮ್ಮೆ ಧಾರಾವಾಹಿಗಳು ಮೊದ ಮೊದಲಿಗೆ ತುಂಬ ಆಸಕ್ತಿದಾಯ ಎನಿಸಿದರು ಆ ಬಳಿಕ ಬೋರ್ ಎನಿಸಿ ಬಿಡುತ್ತವೆ. ಆದರೆ 'ಮರಳಿ ಮನಸಾಗಿದೆ' ಪ್ರೇಕ್ಷಕರನ್ನು ಕೇಳಿದಾಗ ಇದು ಹಾಗಾಗಿಲ್ಲ ಅನ್ನೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಧಾರಾವಾಹಿ ಮೊದಲಿನಿಂದಲೂ ತನ್ನ ಪ್ರೇಕ್ಷಕರನ್ನು ಉತ್ತಮವಾಗಿಯೇ ಸೆಳೆದುಕೊಂಡು ಬಂದಿದೆ. ಕಥೆಯಲ್ಲಿ ಪ್ರತಿ ಹಂತದಲ್ಲೂ ಒಂದೊಂದು ರೀತಿಯ ಟರ್ನಿಂಗ್ ಪಾಯಿಂಟ್ ಗಳನ್ನು ಇರಿಸಿ, ಪ್ರೇಕ್ಷಕ ಕುತೂಹಲದಿಂದ ಇರುವಂತೆ ಮಾಡಲಾಗಿದೆ. ಈಗ 200 ಸಂಚಿಕೆಯಲ್ಲಿರುವ ಮರಳಿ ಮನಸಾಗಿದೆ ಧಾರಾವಾಹಿ ಈಗ ಮುಖ್ಯಘಟ್ಟದಲ್ಲಿ ಸಾಗುತ್ತಾ ಇದೆ. ಸೊಸೆಯಾಗಿ ಬಂದ ಸ್ಪಂದನಾಳನ್ನು ಮನೆಯವರೆಲ್ಲ ಒಪ್ಪಿಲ್ಲದೆ ಇದ್ದರು, ಗಂಡ, ಅತ್ತೆಯ ಮುದ್ದಿನ ಮಗಳಾಗಿ ಜೀವನ ಸಾಗಿಸುತ್ತಿದ್ದಾಳೆ.

ಸ್ಪಂದನಾ ಪರ ನಿಂತ ವಿಕ್ರಾಂತ್
ಇಷ್ಟು ದಿನ ಇಂಥ ದಿನಗಳು ಬಹಳ ಕಡಿಮೆ ಇತ್ತು. ವಿಕ್ರಾಂತ್ ಯಾವುದಕ್ಕೂ ಮಾತನಾಡುತ್ತಿರಲಿಲ್ಲ. ಮನೆಯವರಿಗೆ ಹೆಚ್ಚು ಬೆಲೆ ಕೊಡುವ ಉದ್ದೇಶದಿಂದಲೋ ಏನೋ ಅವರು ಏನೇ ತಪ್ಪು ಮಾಡಿದ್ದರು, ಅವರನ್ನು ಕ್ಷಮಿಸುತ್ತಾ ಸ್ಪಂದನಾಳ ಮೇಲೆಯೆ ಕೋಪಿಸಿಕೊಳ್ಳುತ್ತಿದ್ದ. ಆದರೆ ಈಗ ಕಾಲ ಬದಲಾಗಿದೆ, ಪ್ರೀತಿ ಹೆಚ್ಚಾಗಿದೆ. ವಿಕ್ರಾಂತ್ ಗೆ ಸ್ಪಂದನಾ ಮೇಲೆ ಪ್ರೀತಿ ಶುರುವಾಗಿದೆ. ಇದೇ ಕಾರಣಕ್ಕೆ ವಿಕ್ರಾಂತ್ ಕಂಪ್ಲೀಟ್ ಆಗಿ ಬದಲಾಗಿದ್ದಾನೆ. ಮನೆಯವರ ವಿರೋಧದ ನಡುವೆ ಸ್ಪಂದನಾ ಪರ ನಿಂತಿದ್ದಾನೆ. ಸ್ಪಂದನಾ ಮಾಡಿದ್ದು ತಪ್ಪು ಅಂತ ಮನೆಯವರು ವಾದ ಮಾಡಿದರೆ, ಇಲ್ಲ ಅದು ಸರಿ ಎಂದೇ ವಾದ ಮಾಡುತ್ತಿದ್ದಾನೆ.

ವಿಕ್ರಾಂತ್ ಬದಲಾಗಿದ್ದು ಹೇಗೆ..?
ವಿಕ್ರಾಂತ್ ಮೇಲೆ ಜವಾಬ್ದಾರಿಯೊಂದಿದೆ. ತಾನಿಷ್ಟ ಪಡುವ ಸರ್ ಮಗಳನ್ನೇ ಮದುವೆಯಾಗಿದ್ದಾನೆ. ಸ್ಪಂದನಾ ತಂದೆ ಸಾಯುವ ಮುನ್ನ ಮಗಳ ಜವಾಬ್ದಾರಿಯನ್ನು ವಿಕ್ರಾಂತ್ ವಹಿಸಿದ್ದರು. ಅದರಂತೆ ವಿಕ್ರಾಂತ್ ಮದುವೆಯಾದ. ಆದರೆ ಆ ಮನೆಯಲ್ಲಿ ಸ್ಪಂದನಾಳನ್ನು ಇಷ್ಟಪಡುವ ಜೀವ ಇದ್ದಿದ್ದು ಒಂದೇ ಅದು ವಿಕ್ರಾಂತ್ ಅಮ್ಮ. ವಿಕ್ರಾಂತ್ ಮನೆ, ಡ್ಯೂಟಿ ಅಂತ ಬ್ಯುಸಿ. ಇದರ ನಡುವೆ ಮನೆಯವರ ಕಿತಾಪತಿ ಕಂಡರು ಏನು ಮಾತನಾಡುವುದಕ್ಕೆ ಹೋಗುತ್ತಿರಲಿಲ್ಲ. ಇದು ಮನೆಯವರಿಗೆಲ್ಲಾ ಹೆಚ್ಚು ಅವಕಾಶ ಸಿಕ್ಕಿದಂತಾಗಿತ್ತು. ಆದರೆ ಇದಕ್ಕೆ ಬಗ್ಗದ ಸ್ಪಂದನಾ ಮನೆಯವರಿಗೆಲ್ಲಾ ವಾದಿಸಿ ಮನೆ ಬಿಟ್ಟು ನಡೆದಳು. ಇದು ವಿಕ್ರಾಂತ್ ನ ತುಂಬಾ ಕಾಡಿತ್ತು. ಹಾಗೋ ಹೀಗೋ ಸಮಾಧಾನ ಮಾಡಿ ಸ್ಪಂದನಾಳನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ. ಇಬ್ಬರ ನಡುವೆ ಪ್ರೀತಿ, ಪ್ರೇಮ, ಪ್ರಣಯ ಶುರುವಾಗಿದೆ.

ಸಾಹಿತ್ಯ ಬದುಕು ಸರಿ ಮಾಡ್ತಾಳಾ ಸ್ಪಂದನಾ
ಸ್ಪಂದನಾ ಪಕ್ಕಾ ಸ್ವಾಭಿಮಾನದ ಹೆಣ್ಣು. ಸೊಸೆಯಾಗಿ ಹೇಗೆಲ್ಲಾ ಮನೆ ನಿಭಾಯಿಸಬೇಕು ಅನ್ನೋದು ಅರಿತಿದ್ದಾಳೆ. ಅದಕ್ಕಾಗಿಯೇ ಖಾಲಿ ಕುಳಿತು ತಿನ್ನಲ್ಲ. ಬದಲಿಗೆ ಕೆಲಸ ಮಾಡಿಯೇ ತನ್ನ ಪಾಲಿನ ಊಟ ಮಾಡುತ್ತಾಳೆ. ಹಾಗೆ ಅತ್ತೆ ಮನೆಗೆ ಒಳ್ಳೆಯದ್ದನ್ನೆ ಬಯಸುವ ಸ್ಪಂದನಾ, ಸಾಹಿತ್ಯಳ ಜೀವನ ಸರಿ ಮಾಡಲು ಹೊರಟಿದ್ದಾಳೆ. ದೂರ ದೂರ ಆಗಿರುವ ಗಂಡ ಹೆಂಡತಿಯನ್ನು ಒಂದು ಮಾಡುತ್ತಿದ್ದಾಳೆ. ಆದರೆ ಇದು ಮನೆಯವರ ಕೆಂಗಣ್ಣಿಗೆ ಗುರಿಯಾಗಿದೆ. ಈ ವಿಚಾರದಲ್ಲಿ ವಿಕ್ರಾಂತ್ ಯಾವ ನಿರ್ಧಾರ ಮಾಡುತ್ತಾರೆ ಅನ್ನೋದೆ ಪ್ರಶ್ನೆಯಾಗಿ ಕಾಡುತ್ತಿದೆ.


Click it and Unblock the Notifications











