Marali Manasagide Serial: ಅಬ್ಬಬ್ಬಾ.. ಕಡೆಗೂ ಸ್ಪಂದನಾ ವಿಕ್ಕಿ ನಡುವೆ ಚಮತ್ಕಾರ ನಡೆದೇ ಬಿಟ್ಟಿದೆ!
'ಮರಳಿ ಮನಸಾಗಿದೆ' ಧಾರಾವಾಹಿ ಕೆಲವೊಂದು ವಿಚಾರಕ್ಕೆ ಮನೆ ವೀಕ್ಷಕರ ಮನಸ್ಸನ್ನು ಗೆದ್ದಿದೆ. ಎಷ್ಟೋ ಸಲ ಸ್ಪಂದನಾಳನ್ನು ನೋಡಿದಾಗೆಲ್ಲಾ ಇಂಥದ್ದೆ ಕ್ಯಾರೆಕ್ಟರ್ ನನ್ನ ಮಗಳಿಗೂ ಇದೆ ಅಲ್ವಾ ಅಂತ ಅದೆಷ್ಟೋ ತಾಯಂದಿರಿಗೆ ಅನ್ನಿಸಿದೆ. ಹಾಗೇ ವೈಷ್ಣು ನೋಡಿದಾಗಲೂ ಇಂಥದ್ದೊಂದು ಕ್ರಿಮಿ ನಮ್ಮ ಸುತ್ತ ಮುತ್ತಲೂ ಇದೆ ಅಲ್ವಾ ಎನಿಸಿದೆ. ಹೀಗೆ ಆ ಧಾರಾವಾಹಿಯಲ್ಲಿ ಬರುವ ಒಂದೊಂದು ಪಾತ್ರವು ಒಬ್ಬೊಬ್ಬರನ್ನು ಸೆಳೆಯುತ್ತಿದೆ. ಹೀಗಾಗಿ ದಿನೇ ದಿನೇ ಚಂದನ್ ಹಾಗೂ ದಿವ್ಯಾ ಮೇಲೆ ಮರಳಿ ಮನಸಾಗುತ್ತಲೇ ಇದೆ.
ಇಷ್ಟೆಲ್ಲಾ ಖುಷಿಯ ನಡುವೆ 'ಮರಳಿ ಮನಸಾಗಿದೆ' ಧಾರಾವಾಹಿಯಲ್ಲಿ ಒಂದಷ್ಟು ಟ್ವಿಸ್ಟ್ ಅಂಡ್ ಟರ್ನಿಂಗ್ ಪಾಯಿಂಟ್‌ಗಳು ಹುಟ್ಟಿಕೊಳ್ಳುತ್ತಿವೆ. ಸ್ಪಂದನಾ ಮನೆಯಲ್ಲಿರುವ ಕೆಲವರ ಕುತಂತ್ರಕ್ಕೆ ಸಿಲುಕಿ ಮನೆ ಬಿಟ್ಟು ಹೋಗಿದ್ದಳು. ಆದರೆ ಎಲ್ಲವೂ ಸರಿಯಾಗಿದೆ ಎಂಬ ಸುಳಿವು ಸಿಗುತ್ತಿದೆ. ಸದ್ಯ ಈಗೇನು ಆಗಿದೆ? ಮುಂದೇನು ಆಗುತ್ತಿದೆ? ಎಂಬುದನ್ನು ಓದಿ.

ಮನೆ ಬಿಟ್ಟು ಹೋಗಿದ್ದ ಸ್ಪಂದನಾ ಮನೆಗೆ ಬಂದಿದ್ಯಾಕೆ..?
ವೈಷ್ಣುಗೆ ತನ್ನ ಗಂಡ ಸತ್ತಿದ್ದಾನೆ ಎಂಬ ನೋವಿಗಿಂತ ಹೆಚ್ಚಾಗಿ ಸ್ಪಂದನಾ ತನ್ನ ಗಂಡನ ಜೊತೆಯಲ್ಲಿ ನಗುತಾ ನಗುತಾ ಇರುವುದನ್ನು ಸಹಿಸುತ್ತಿಲ್ಲ. ನನಗಿಲ್ಲದ ಸುಖ, ಶಾಂತಿ ಅವಳಿಗೆ ಸಿಗುವುದು ಕಿಂಚ್ಚಿತ್ತು ಇಷ್ಟವಾಗುತ್ತಿಲ್ಲ. ಇದಕ್ಕಾಗಿಯೇ ಗಂಡ ಹೆಂಡತಿ ನಡುವೆ ತಂದು ಹಾಕಿದ್ದಾಳೆ. ಮೊದಲೇ ಯಾರಾದರೂ ಅಧಿಕಾರ ಚಲಾಯಿಸಿದರೆ ಸಹಿಸಲಾರದ ಸ್ಪಂದನಾ, ವಿಕ್ರಾಂತ್ ಒಂದು ಮಾತು ಜೋರಾಗಿ ಆಡಿದ್ದೆ ತಡ ಮನೆ ಬಿಟ್ಟು ಹೊರಟೆ ಬಿಟ್ಟಳು. ಸ್ಪಂದನಾಳನ್ನು ಕಡೆಗೂ ತಡೆಯುವುದಕ್ಕೂ ಸಾಧ್ಯವಾಗಲೇ ಇಲ್ಲ. ಆದರೆ ಸ್ಪಂದನಾಳನ್ನು ಮನವೊಲಿಸಿ ವಿಕ್ರಾಂತ್ ಮನೆಗೆ ಕರೆದುಕೊಂಡು ಬಂದಿದ್ದಾನೆ.

ಸುಳಿವು ನೀಡದೆ ಹೋಗಿದ್ದ ಸ್ಪಂದನಾಳ ಸುಳಿವು ಸಿಕ್ಕಿದ್ದೇಗೆ?
ಸ್ಪಂದನಾ ತಂದೆ ತಾಯಿ ಕಳೆದುಕೊಂಡಿರುವ ಹೆಣ್ಣು ಮಗಳು. ತಂದೆಗೆ ಕೊಟ್ಟ ಮಾತಿನಿಂದಾಗಿ ವಿಕ್ರಾಂತ್ ಅವಳನ್ನು ಮದುವೆಯಾಗಿದ್ದ. ಆದರೆ ಆಕೆ ಮನೆಬಿಟ್ಟು ಹೊರಟು ನಿಂತಾಗ ಎಲ್ಲಿ ಹೋಗುತ್ತಾಳೆ ಎಂಬುದು ಗೊತ್ತಿರಲಿಲ್ಲ. ತಡೆಯುವುದಕ್ಕೆ ಅಡ್ಡಿಯಾದ ಸ್ವಾಭಿಮಾನದಿಂದ ಹಾಗೆಯೇ ಬಿಟ್ಟುಕೊಟ್ಟು ನಿಂತುಬಿಟ್ಟ. ಸ್ಪಂದನಾ ಹೊರಟೇ ಬಿಟ್ಟಳು. ಈ ಮಧ್ಯೆ ಸ್ಪಂದನಾಳ ಮೊಬೈಲ್‌ಗೆ ವಿಕ್ಕಿ ಜಿಪಿಎಸ್ ಅಳವಡಿಸಿದ್ದ, ಅವಳು ಎಲ್ಲಿ ಹೋಗುತ್ತಾಳೆ ಎಂಬುದನ್ನು ನೋಡಲು ಫ್ರೆಂಡ್ ಅನ್ನು ಕೂಡ ಹಿಂದೆ ಬಿಟ್ಟಿದ್ದ. ಆಕೆ ದೇವಸ್ಥಾನಕ್ಕೆ ಹೋಗಿದ್ದು, ಪ್ರೊಫೆಸರ್ ಮನೆಯಲ್ಲಿ ಉಳಿದುಕೊಂಡಿದ್ದು, ಎಲ್ಲವೂ ತಿಳಿದು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದ.

ಹೆಂಡ್ತಿ ಮೇಲೆ ಉಕ್ಕಿತು ಪ್ರೀತಿ
ಮನೆ ಬಿಟ್ಟು ಹೋದ ಸ್ಪಂದನಾಳನ್ನು ಮರಳಿ ಮನೆಗೆ ಕರೆತರಲು ವಿಕ್ರಾಂತ್ ಸಾಹಸ ಪಟ್ಟಿದ್ದಾನೆ. ದೇವಸ್ಥಾನಕ್ಕೆ ಹೋಗಿ ಮತ್ತೆ ಮನೆಗೆ ಬಾ ಎಂದಾಗ ಗಂಡ ಹೆಂಡತಿ ಸಂಬಂಧ ಮುಗಿದಿದೆ ಎಂದು ಖಡಕ್ ಆಗಿಯೇ ಹೇಳಿದ್ದಳು. ಹಾಗೋ ಹೀಗೋ ಮನಸ್ಸನ್ನು ಕರಗಿಸಿದ ವಿಕ್ಕಿಗೆ ಮತ್ತೊಂದು ಸವಾಲು ಎದುರಾಗಿತ್ತು. ಸ್ಪಂದನಾ ಒಂದಷ್ಟು ಕಂಡೀಷನ್‌ಗಳನ್ನು ಹಾಕಿಯೇ ಮನೆಗೆ ಬಂದಿದ್ದಾಳೆ. ಮನೆಗೆ ಬಂದ ಸ್ಪಂದನಾಳಿಗೆ ವಿಕ್ರಾಂತ್ ಸಂಪೂರ್ಣವಾಗಿ ಸೇವೆ ಮಾಡೋದಕ್ಕೆ ಶುರು ಮಾಡಿದ್ದಾನೆ. ತನ್ನ ಕೈಯಾರೇ ಕಾಫಿಯನ್ನು ಮಾಡಿ ಹೆಂಡತಿಗೆ ತಂದು ಕೊಟ್ಟಿದ್ದಾನೆ. ಹೆಂಡತಿಯ ಒದ್ದೆ ತಲೆಗೂದಲನ್ನು ತಾನೇ ಒರೆಸುತ್ತಿದ್ದಾನೆ. ಕಾಫಿ ತಣ್ಣಗಾಗುತ್ತೆ ಕುಡಿ ಅಂದರೂ, ಇಲ್ಲ ನಿಂಗೆ ಶೀತ ಆಗುತ್ತೆ ಅಂತ ತಲೆಗೂದಲನ್ನು ಒರೆಸುತ್ತಿದ್ದಾನೆ.

ವಿಕ್ರಾಂತ್ ಮೇಲೆ ಪ್ರೀತಿ ಉಕ್ಕಿ ಬಂತು
ಅಷ್ಟೇ ಅಲ್ಲ ತಾನು ಮೊದಲಬಾರಿಗೆ ಹೆಂಡತಿಗಾಗಿ ಮಾಡಿದ ಟೀ ಹೇಗಿದೆ ಅನ್ನೋದನ್ನು ತಿಳಿದುಕೊಳ್ಳುವ ಕುತೂಹಲ. ಅದಕ್ಕಾಗಿಯೇ ಟೀ ಹೇಗಿದೆ ಸ್ಪಂದನಾ ಅಂತ ಕೇಳಿದ್ರೆ ಸ್ಪಂದನಾ ಕೂಡ ಸ್ಪೆಷಲ್ ಆಗಿಯೇ ಉತ್ತರ ಕೊಟ್ಟಿದ್ದಾಳೆ. ಸ್ಲೋ ಮೋಷನ್ ನಲ್ಲಿ ಓಡಿ ಬಂದು ಒಂದು ಸಿಹಿಯಾದ ಮುತ್ತನ್ನೀಡಿ ಟೀ ಹೀಗಿದೆ ಎಂದಿದ್ದಾಳೆ. ಸದ್ಯ ಎಲ್ಲಾ ಪಾಸಿಟಿವ್ ಆಗಿದ್ದು, ಮುಂದೆ ಯಾವ ರೂಪ ಪಡೆದುಕೊಳ್ಳುತ್ತೆ ಅನ್ನೋದನ್ನು ನೋಡಬೇಕಿದೆ.


Click it and Unblock the Notifications











